ಸರಕಾರಿ ಯೋಜನೆಸುದ್ದಿಗಳು

ರೈತರ ಖಾತೆಗೆ ಮುಂಗಾರು ಬೆಳೆ ವಿಮೆ ಪರಿಹಾರ | ಕೃಷಿ ಸಚಿವರ ಸೂಚನೆ 2023 Khariff Crop Insurance Settlement

WhatsApp Group Join Now
Telegram Group Join Now

2023 Khariff Crop Insurance Settlement : ಕಳೆದ 2023-24ನೇ ಸಾಲಿನ ಮುಂಗಾರು ಬೆಳೆ ವಿಮೆ (Khariff Crop Insurance) ಪರಿಹಾರವನ್ನು ಶೀಘ್ರದಲ್ಲೇ ಇತ್ಯರ್ಥಪಡಿಸುವಂತೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯದ ಜಂಟಿ ಕೃಷಿ ನಿರ್ದೇಶಕರೊಂದಿಗೆ ಬರ ನಿರ್ವಹಣೆ ಕ್ರಮಗಳ ಕುರಿತು ವಿಡಿಯೋ ಸಂವಾದ ನಡೆಸಿದ ಅವರು ಅಧಿಕಾರಿಗಳಿಗೆ ಬೆಳೆ ವಿಮೆ ಪರಿಹಾರ ಇತ್ಯರ್ಥ ಮಾಡಲು ನಿರ್ದೇಶನ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಪೂರ್ವ ಮುಂಗಾರು ಉತ್ತಮವಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಈಗಾಗಲೆ ಎಲ್ಲ ಜಿಲ್ಲೆಗಳಿಗೂ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಲಾಗಿದೆ. ಮೇ, ಜೂನ್ ತಿಂಗಳಿಗೆ ಕೊರತೆ, ಹೆಚ್ಚುವರಿ ಬೇಡಿಕೆ ಇದ್ದಲ್ಲಿ ತಕ್ಷಣ ಕೃಷಿ ಆಯುಕ್ತರು, ನಿರ್ದೇಶಕರ ಗಮನಕ್ಕೆ ತರುವಂತೆ ಕೃಷಿ ಸಚಿವರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ರೈತರೇ ನಿಮ್ಮ ಜಮೀನು ಕಾಲುದಾರಿ, ಬಂಡಿದಾರಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… | ಜಮೀನು ದಾರಿ ಸರಕಾರದ ಆದೇಶವೇನು? Agriculture Land Way Revenue Maps Online

ಕಳೆದ ಹಂಗಾಮಿನಲ್ಲಿ ಮುಂಗಾರು ಮಳೆ ಕೊರತೆಯ ಸೂಚನೆ ಮೊದಲೇ ಸಿಕ್ಕಿದ್ದರಿಂದ ಹಾಗೂ ಸಂರಕ್ಷಣೆಯ ಕ್ರಮವಾಗಿ ಬೆಳೆವಿಮೆ ಪಾವತಿಸುವಂತೆ ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿರುವುದರಿಂದ ಬಹಳಷ್ಟು ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ (Weather Based Crop Insurance Scheme) ಬೆಳೆವಾರು ನಿಗದಿಪಡಿಸಿದ ವಿಮಾ ಮೊತ್ತವನ್ನು ರೈತರು ಶೇ.2ರಷ್ಟು (ತೋಟಗಾರಿಕೆ ಬೆಳೆಗಳಿಗೆ ಶೇ.5ರಷ್ಟು) ಮೊತ್ತವನ್ನು ಪಾವತಿಸಿದ್ದರು.

ಪ್ರಕೃತಿ ವಿಕೋಪಗಳಿಂದ ಬೆಳೆ ವಿಫಲವಾದ ಹಿನ್ನೆಲೆಯಲ್ಲಿ ರೈತರಿಗೆ ಆರ್ಥಿಕ ಬೆಂಬಲ ಒದಗಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮಪಾಲಿನ ನೆರವಿನ ಯೋಜನೆ ಇದಾಗಿದ್ದು; ನಿರೀಕ್ಷೆಯಂತೆಯೇ ಮಳೆ ಕೊರತೆಯಾಗಿ ಸಾಕಷ್ಟು ಬೆಳೆ ನಷ್ಟವಾಗಿದೆ. ಹೀಗಾಗಿ ರೈತರು ವಿಮಾ ಪರಿಹಾರಕ್ಕಾಗಿ ಕಾಯ್ದು ಕೂತಿದ್ದಾರೆ.

2023 Khariff Crop Insurance Settlement

ಇದನ್ನೂ ಓದಿ: PM – Surya Ghar Muft Bijli Jojana : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

ಈ ಯೋಜನೆಯಡಿ ತಮ್ಮ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಿದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹29,000 ಯಿಂದ ₹86,000 ವರೆಗೂ ಆಯಾ ಬೆಳೆಗೆ ತಕ್ಕಂತೆ ಬೆಳೆನಷ್ಟ ಪರಿಹಾರ ದೊರೆಯಲಿದೆ. ತೋಟಗಾರಿಕೆ ಬೆಳೆಗಳಿಗೆ ಇನ್ನೂ ಹೆಚ್ಚಿನ ಬೆಳೆ ಹಾನಿ ವಿಮಾ ಪರಿಹಾರ ಸಿಗುತ್ತದೆ. ಆದರೆ ಕೆಲವೇ ಕೆಲವು ಜಿಲ್ಲೆಗಳ ಹೊರತಾಗಿ ಇನ್ನೂ ಬಹುತೇಕ ಜಿಲ್ಲೆಗಳಲ್ಲಿ ಬೆಳೆ ವಿಮೆ ಪರಿಹಾರ ಇತ್ಯರ್ಥವಾಗಿಲ್ಲ.

2023-24ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆಗಳಿಗೆ ವಿಮೆ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ 27,637 ರೈತರಿಗೆ ಒಟ್ಟು 44,34,77,748 ರೂಪಾಯಿ ಬೆಳೆವಿಮೆ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಈಚೆಗೆ ತಿಳಿಸಿದ್ದಾರೆ. ಆದರೆ ರಾಜ್ಯದ ಇನ್ನೂ ಅನೇಕ ಜಿಲ್ಲೆಗಳ ರೈತರಿಗೆ ಬೆಳೆ ವಿಮೆ ಪರಿಹಾರ ಇತ್ಯರ್ಥವಾಗಬೇಕಿದೆ. ಈ ಹಿನ್ನಲೆಯಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Bara Parihara 2024 : ರೈತರ ಖಾತೆಗೆ ಬರ ಪರಿಹಾರದ ಹಣ ಜಮಾ ಆಗದೇ ಇರುವುದಕ್ಕೆ ಕಾರಣಗಳು ಇಲ್ಲಿವೆ…

WhatsApp Group Join Now
Telegram Group Join Now

Related Posts

error: Content is protected !!