Govt SchemesNews

8th Pay commission formation : 8ನೇ ವೇತನ ಆಯೋಗ ರಚನೆಗೆ ಕೇಂದ್ರ ಸಂಪುಟ ಅಸ್ತು

ಭರ್ಜರಿ ಏರಿಕೆಯಾಗಲಿದೆ ಸರ್ಕಾರಿ ನೌಕರರ ಸಂಬಳ

ಕಡೆಗೂ ವಿವಿಧ ಸರ್ಕಾರಿ ನೌಕರರ ಸಂಘಗಳ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿದಿದೆ. ಇಂದು (ಜನವರಿ 16) ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟವು 8ನೇ ವೇತನ ಆಯೋಗ (8th Pay commission) ರಚನೆ ಅಸ್ತು ಎಂದಿದ್ದು; ಕೇಂದ್ರ ಸಚಿವ ಡಾ. ಎ ವೈಷ್ಣವ್ ಮಾಧ್ಯಮಗಳಿಗೆ ಈ ಮಾಹಿತಿಯನ್ನು ತಿಳಿಸಿದ್ದಾರೆ.

WhatsApp Group Join Now
Telegram Group Join Now

7ನೇ ವೇತನ ಆಯೋಗವು 2014ರಲ್ಲಿ ರಚನೆಯಾಗಿದ್ದು; 2016ರ ಜನವರಿಯಿಂದ ಈ ವೇತನ ಆಯೋಗದ ಶಿಫಾರಸುಗಳು ಜಾರಿಯಲ್ಲಿವೆ. ಇದೀಗ 8ನೇ ವೇತನ ಆಯೋಗ ಜಾರಿಯಾದರೆ ನೌಕರರ ಸಂಬಳ ಗಮನಾರ್ಹವಾಗಿ ಏರಿಕೆಯಾಗಲಿದೆ.

ಇದನ್ನೂ ಓದಿ: Electric Auto Subsidy Scheme : ಆಟೋ ಖರೀದಿಗೆ 60,000 ರೂ. ಸಹಾಯಧನ

ವೇತನ ಆಯೋಗಕ್ಕೆ ಹೊಸ ವ್ಯವಸ್ಥೆ

ಕೇಂದ್ರದ ಪ್ರತೀ ವೇತನ ಆಯೋಗದ ಅವಧಿಯು 10 ವರ್ಷಗಳ ವರೆಗೆ ಇರುತ್ತದೆ. 11ನೇ ವರ್ಷ ತುಂಬುವುದರೊಳಗೇ 8ನೇ ವೇತನ ಆಯೋಗ ರಚನೆಯಾಗಿ ಅದರ ಶಿಫಾರಸುಗಳು ಸಿದ್ಧವಿರಬೇಕು. ಆ ಪ್ರಕಾರ ಒಂದೆರಡು ವರ್ಷದ ಹಿಂದೆಯೇ 8ನೇ ವೇತನ ಆಯೋಗ ರಚನೆಯಾಗಬೇಕಿತ್ತು.

ಕೇಂದ್ರ ಸರ್ಕಾರವು ವೇತನ ಆಯೋಗದ ಅವಧಿ ಮಿತಿಗೆ ಒಳಪಡುವ ಅಗತ್ಯವಿಲ್ಲ ಎಂದು ಹೇಳುತ್ತಲೇ ಬಂದಿತ್ತು. ಈಚೆಗೆ ವೇತನ ಪರಿಷ್ಕರಣೆಗೆ ಹೊಸ ವ್ಯವಸ್ಥೆ ರೂಪಿಸಲಿದೆ ಎಂಬ ಸುದ್ದಿ ಕೂಡ ದಟ್ಟವಾಗಿ ಹಬ್ಬಿತ್ತು. ಆದರೆ, ಇದೀಗ ಯಥಾಪ್ರಕಾರ ಹೊಸ ಆಯೋಗ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: Borewell permission : ಇನ್ಮುಂದೆ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಸುವಂತಿಲ್ಲ

8ನೇ ವೇತನ ಆಯೋಗ ಯಾವಾಗ ಜಾರಿಯಾಗಲಿದೆ?

2025ರ ಡಿಸೆಂಬರ್ 31ರ ವರೆಗೂ ಪ್ರಸ್ತುತ ಚಾಲ್ತಿಯಲ್ಲಿರುವ 7ನೇ ವೇತನ ಆಯೋಗದ ಶಿಫಾರಸುಗಳು ಇರುತ್ತದೆ. ಅಷ್ಟರೊಳಗೆ ಹೊಸ ವೇತನ ಆಯೋಗದ ವರದಿ ಸಿದ್ಧವಾಗಬೇಕು.

2026ರ ಜನವರಿಯಿಂದಲೇ ಹೊಸ ಆಯೋಗದ ಶಿಫಾರಸುಗಳು ಜಾರಿಯಾಗುತ್ತವಾ? ಅಥವಾ 2026ರ ಅಂತ್ಯದ ವರೆಗೂ 7ನೇ ವೇತನ ಆಯೋಗದ ಶಿಫಾರಸುಗಳೇ ಚಾಲನೆಯಲ್ಲಿರುತ್ತವಾ? ಎಂಬುವುದು ಇಷ್ಟರಲ್ಲಿಯೇ ತಿಳಿಯಲಿದೆ.

ಇದನ್ನೂ ಓದಿ: Multiple Bank Accounts : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ ದಂಡ ಬೀಳುತ್ತಾ?

ಸರ್ಕಾರಿ ನೌಕರರ ಸಂಬಳ ಭರ್ಜರಿ ಏರಿಕೆ

8ನೇ ವೇತನ ಆಯೋಗ ಸ್ಥಾಪನೆಯಾದರೆ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಗಮನಾರ್ಹ ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರಸ್ತುತ 7ನೇ ವೇತನ ಆಯೋಗದಲ್ಲಿರುವ 2.57 ಫಿಟ್ಮೆಂಟ್ ಫ್ಯಾಕ್ಟರ್ ಅನ್ನು 2.86ಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ. ಹಾಗೇನಾದರೂ ಆದರೆ ಸರ್ಕಾರಿ ನೌಕರರ ಕನಿಷ್ಠ ಸಂಬಳದಲ್ಲಿ ಬರೋಬ್ಬರಿ 186 ಪ್ರತಿಶತದಷ್ಟು ಏರಿಕೆ ಆಗಲಿದೆ.

ಪ್ರಸ್ತುತ 7ನೇ ವೇತನ ಆಯೋಗದಲ್ಲಿ 18,000 ರೂ. ಇರುವ ಕನಿಷ್ಠ ವೇತನವು ನಿರೀಕ್ಷೆಯಂತೆ ಫಿಟ್ಮೆಂಟ್ ಫ್ಯಾಕ್ಟರ್​ 2.86ಕ್ಕೆ ಹೆಚ್ಚಳವಾದರೆ ಕನಿಷ್ಠ ವೇತನವು ಬರೋಬ್ಬರಿ 51,480 ರೂ.ಗೆ ಏರಲಿದೆ. ಕನಿಷ್ಠ ಪಿಂಚಣಿ ಕೂಡ ಪ್ರಸ್ತುತ ಇರುವ 9,000 ರೂ.ನಿಂದ 25,740 ರೂ.ಗೆ ಹೆಚ್ಚಬಹುದು.

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!