ಅಕಾಲಿಕ ಮಳೆಯ ಜೊತೆಗೆ ರಾಜ್ಯದಲ್ಲಿ ಮೈ ಕೊರೆಯುವ ಚಳಿ ಆರಂಭವಾಗಿದ್ದು; ಶೀತ ಗಾಳಿ ಅಲೆ (Cold wave) ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಲವು ಜಿಲ್ಲೆಗಳಲ್ಲಿ 5ರಿಂದ 6 °C ಉಷ್ಣಾಂಶ ಇಳಿಕೆಯಾಗಲಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತವಾಗಿರುವುದರಿಂದ ರಾತ್ರಿ ವೇಳೆ ಮೈ ಕೊರೆಯುವ ಚಳಿ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ (karnataka state weather department) ನಿರ್ದೇಶಕ ಸಿ. ಎಸ್. ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಶೀತ ಅಲೆಗೆ ಕಾರಣವೇನು?
ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆಗಳೆರಡೂ ವಾಡಿಕೆಗಿಂತ ಹೆಚ್ಚು ಸುರಿದಿರುವುದು ಹಾಗೂ ಉತ್ತರದಿಂದ ದಕ್ಷಿಣದತ್ತ ‘ಮೂಡಗಾಳಿ’ ಬೀಸುತ್ತಿರುವುದು ಶೀತ ಅಲೆಗೆ ಪ್ರಮುಖ ಕಾರಣವಾಗಿದೆ.
ಇದರ ಜೊತೆಗೆ ಮಳೆ ಹೆಚ್ಚು ಸುರಿದಿರುವುದರಿಂದ ಭೂಮಿಯಲ್ಲಿ ತೇವಾಂಶವೂ ಅಧಿಕವಾಗಿದೆ. ಬಂಗಾಳಕೊಲ್ಲಿಯಲ್ಲಿ ಸೈಕ್ಲೋನ್ (Cyclone) ಉಂಟಾಗಿ ಮೋಡ ಕವಿದ ವಾತಾವರಣ ಉಂಟಾಗಿರುವುದು ಕೂಡ ಶೀತ ಅಲೆಗೆ ಕಾರಣವಾಗಿದೆ.
ಎಲ್ಲೆಲ್ಲಿ ಹೆಚ್ಚಿನ ಶೀತ ಇರಲಿದೆ?
ಬಿಸಿಲು ಅತ್ಯಂತ ಹೆಚ್ಚಿರುವ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ವಿಜಯಪುರದಲ್ಲಿ ಡಿಸೆಂಬರ್ 17ರಿಂದ 19ರ ವರೆಗೆ ತೀವ್ರ ಶೀತದ ಅಲೆಗಳು ಬೀಸಲಿದೆ. ಇದರಿಂದ ಈ ಜಿಲ್ಲೆಗಳಲ್ಲಿ ತಾಪಮಾನ 6ರಿಂದ 7 °C ದಾಖಲಾಗಲಿದ್ದು; ಇಲ್ಲಿ ಹವಾಮಾನ ಇಲಾಖೆ ‘ರೆಡ್ ಅರ್ಲಟ್’ ಕೊಟ್ಟಿದೆ.
ಅದೇ ರೀತಿ ಬಾಗಲಕೋಟೆ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಶೀತ ವಾತಾವರಣ ಉಂಟಾಗುವ ಮುನ್ಸೂಚನೆ ಇರುವುದರಿಂದ ಈ ಜಿಲ್ಲೆಗಳಿಗೂ ಕೂಡ ‘ಯೆಲ್ಲೋ ಅರ್ಲಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ 10 °C ಉಷ್ಣಾಂಶ ಇರಲಿದೆ.
ಇದನ್ನೂ ಓದಿ: ಕುರಿ ಸಾಕಾಣಿಕೆಗೆ ₹50,000 ಸಹಾಯಧನ | ಅರ್ಜಿ ಆಹ್ವಾನ Sheep Farming and Food Cart Scheme Subsidy
ಎಲ್ಲೆಲ್ಲಿ ಎಷ್ಟೆಷ್ಟು ಕನಿಷ್ಠ ತಾಪಮಾನ?
ನಿನ್ನೆ ಡಿಸೆಂಬರ್ 16ರಂದು ರಾಜ್ಯದ ಕೆಲವು ಆಯ್ದ ಜಿಲ್ಲೆಗಳಲ್ಲಿ ದಾಖಲಾದ ಕನಿಷ್ಠ ತಾಪಮಾನದ ವಿವರ ಈ ಕೆಳಗಿನಂತಿದೆ:
- ಬೀದರ್ 7.5 °C
- ವಿಜಯಪುರ 8.5 °C
- ಧಾರವಾಡ 11.8 °C
- ಬಾಗಲಕೋಟೆ 12 °C
- ರಾಯಚೂರು 12 °C
- ಗದಗ 12 °C
ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ವಾಡಿಕೆಗಿಂತ 2-3 °C ಉಷ್ಣಾಂಶ ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 25 ಮತ್ತು 15 °C ಇರಲಿದೆ.
Google pay instant loan: ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ
ಇದನ್ನೂ ಓದಿ: ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ
One Comment