Increase in KMF milk incentive to farmers : ಹೊಸ ವರ್ಷಕ್ಕೆ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹಧನ ಹೆಚ್ಚಳ
ನಿಮ್ಮ ಹಾಲಿನ ಪ್ರೋತ್ಸಾಹಧನ ವಿವರ ಮೊಬೈಲ್ನಲ್ಲೇ ಚೆಕ್ ಮಾಡಿ...
Increase in KMF milk incentive to farmers : ಹೈನುಗಾರಿಕೆಯಲ್ಲಿ (Dairy Farming) ತೊಡಗಿರುವ ರೈತರಿಗೆ ನಿಡಲಾಗುವ ಪ್ರೋತ್ಸಾಹಧನ ಹೊಸ ವರ್ಷದಲ್ಲಿ ಹೆಚ್ಚಳವಾಗಲಿದ್ದು ರಾಜ್ಯ ಸರ್ಕಾರ ರೈತರ ಹಿತ ಕಾಯಲು ಮುಂದಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ (KMF President S. Bhimanayka) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
5 ರೂ. ಪ್ರೋತ್ಸಾಹಧನ (Milk Incentive) ಹೆಚ್ಚಳ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೊರಿಗೇರಿ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಬಿಎಂಸಿ ಘಟಕ ಉದ್ಘಾಟಿಸಿ ಮಾತನಾಡಿದ ಕೆಎಂಎಫ್ ಅಧ್ಯಕ್ಷರು ‘ರಾಜ್ಯದ 15 ಒಕ್ಕೂಟಗಳಲ್ಲಿ ರೈತರಿಗೆ ಪ್ರೋತ್ಸಾಹಧನ ಇಳಿಸಲಾಗಿದೆ. ಸಿಎಂ ಶೀಘ್ರದಲ್ಲೇ ರಾಜ್ಯದ ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು, ಹಾಲು ಉತ್ಪಾದಕ ರೈತರ ಪರ ನಿರ್ಣಯ ಕೈಗೊಳ್ಳಲಿದ್ದಾರೆ; ಎಂದು ಹೇಳಿದ್ದಾರೆ.
ಹೈಗಾರಿಕೆಯಲ್ಲಿ ತೊಡಗಿರುವ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿ ಇರುವುದನ್ನು ಸಿಎಂ ಸಿದ್ದರಾಮಯ್ಯ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ಹಾಲು ಉತ್ಪಾದಕ ರೈತರಿಗೆ ಹಾಲಿನ ಪ್ರೋತ್ಸಾಹಧನವನ್ನು ಪ್ರತಿ ಲೀಟರ್ಗೆ ಕನಿಷ್ಠ 5 ರೂ. ಹೆಚ್ಚಿಸುವ ಸಿಹಿ ಸುದ್ದಿ ನೀಡಲಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು.
ಮೇಕೆ ಹೈನುಗಾರಿಕೆ ನಿತ್ಯವೂ ಹಣ ಗಳಿಕೆ Goat Dairy Farming
10 ವರ್ಷದಿಂದ ಏರಿಕೆಯಾಗದ ಪ್ರೋತ್ಸಾಹಧನ
2008-09ರಲ್ಲಿ ಅಂದಿನ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಪ್ರೋತ್ಸಾಹಧನ ನಿಗದಿ ಮಾಡಿದ್ದರು. ಇದು ವಿಶೇಷ ಕೊಡುಗೆಯಾಗಿದ್ದು; ಆ ನಂತರ 2013ರಲ್ಲಿ ಸಿದ್ಧರಾಮಯ್ಯ ಸರಕಾರ 2ರಿಂದ 4 ರೂಪಾಯಿಗೆ ಏರಿಕೆ ಮಾಡಿತು.
ಪ್ರಸ್ತುತ ಈ ಮೊತ್ತ ಇದೀಗ ಪ್ರತಿ ಲೀಟರ್ಗೆ 5 ರೂಪಾಯಿ ಇದೆ. ರಾಜ್ಯದಲ್ಲಿ 15 ಹಾಲು ಒಕ್ಕೂಟಗಳಿದ್ದು, 25 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು; ಈ ಸಂಘಗಳಿಗೆ ಹಾಲು ನೀಡುವ ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಹಾಲು ಉತ್ಪಾದಕರಿಗೆ ಹಾಲು ಒಕ್ಕೂಟಗಳು ವೈಜ್ಞಾನಿಕವಾಗಿ ಬೆಲೆ ನೀಡುತ್ತಿಲ್ಲ ಎಂಬ ಅಸಮಾಧಾನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈನೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ ಒಕ್ಕೂಟಗಳು ನೀಡುವ ಬೆಲೆಯ ಜೊತೆಗೆ ರಾಜ್ಯ ಸರ್ಕಾರ 5 ರೂಪಾಯಿ ಪ್ರೋತ್ಸಾಹಧನ ನೀಡುತ್ತಾ ಬರುತ್ತಿದೆ. ದುರಂತವೆAದರೆ, ಈ 5 ರೂಪಾಯಿ ಪ್ರೋತ್ಸಾಹಧನ ಕಳೆದ ಆರೇಳು ವರ್ಷಗಳಿಂದ ಕೊಂಚವೂ ಏರಿಕೆಯಾಗದೇ ಇದ್ದಷ್ಟೇ ಇದೆ.
Crop Insurance Karnataka Status Check : ಮೊಬೈಲ್ನಲ್ಲೇ ಚೆಕ್ ಮಾಡಿ ಬೆಳೆವಿಮೆ ಪರಿಹಾರ | ಇಲ್ಲಿದೆ ಸರಳ ವಿಧಾನ
ನಿಮ್ಮ ಹಾಲಿನ ಪ್ರೋತ್ಸಾಹಧನ ವಿವರ ಚೆಕ್ ಮಾಡಿ
ಈ ತನಕ ಎಷ್ಟು ಹಾಲಿನ ಪ್ರೋತ್ಸಾಹಧನ ಸಂದಾಯವಾಗಿದೆ ಎಂಬುವುದನ್ನು ರೈತರು ಮೊಬೈಲ್ನಲ್ಲಿಯೇ ಚೆಕ್ ಮಾಡಬಹುದು. ರಾಜ್ಯ ಸರಕಾರದ ಅಧಿಕೃತ ಕ್ಷೀರಸಿರಿ ಹಾಲಿನ ಪ್ರೋತ್ಸಾಹ ಧನ ನಿರ್ವಹಣಾ ವೆಬ್ಸೈಟ್’ನಲ್ಲಿ ಜಮಾ ವಿವರವನ್ನು ಪಡೆಯಬಹುದು.
ಅದಕ್ಕಾಗಿ ಮೊದಲು Milk Incentive status ಮೇಲೆ ಕ್ಲಿಕ್ ಮಾಡಿ. ಆಗ ರಾಜ್ಯ ಸರಕಾರದ ಅಧಿಕೃತ ಕ್ಷೀರಸಿರಿ (KMF Ksheerasiri) ಹಾಲಿನ ಪ್ರೋತ್ಸಾಹ ಧನ ನಿರ್ವಹಣಾ ವೆಬ್ಸೈಟ್ ಪುಟ ತೆರೆದುಕೊಳ್ಳುತ್ತದೆ.
ಅಲ್ಲಿ ನಿಮ್ಮ ನಿಮ್ಮ ನಂಬರ್ ನಮೂದಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಜಮಾ ಅಗಿರುವ ಹಾಲಿನ ಪ್ರೋತ್ಸಾಹ ಧನ ಸಂಪೂರ್ಣ ವಿವರ ತೋರಿಸುತ್ತದೆ.
2 Comments