AgricultureGovt Schemes

Horticulture Subsidy Schemes : ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು

ರೈತರೇ ಈ ಸಬ್ಸಿಡಿ ಸೌಲಭ್ಯಗಳನ್ನು ತಪ್ಪದೇ ಬಳಸಿಕೊಳ್ಳಿ...

ರೈತರ ಸುಸ್ಥಿತ ಆದಾಯ ಗಳಿಕೆಯಲ್ಲಿ ತೋಟಗಾರಿಕೆ ಬೆಳೆಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ತೋಟಗಾರಿಕೆ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಬೆಳೆಗಾರರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ. ಅವುಗಳ ಮಾಹಿತಿ ಇಲ್ಲಿದೆ…

ಹನಿ ನೀರಾವರಿ

WhatsApp Group Join Now
Telegram Group Join Now

ಹನಿ ನೀರಾವರಿ ಅಳವಡಿಕೆಗೆ ಪ್ರತಿ ಫಲಾನುಭವಿಗೆ ಗರಿಷ್ಟ 5 ಹೆಕ್ಟೇರ್ ಪ್ರದೇಶಕ್ಕೆ ಹಾಗೂ ತರಕಾರಿ ಮತ್ತು ವಾಣಿಜ್ಯ ಹೂವು ಬೆಳೆಗಳಿಗೆ ಗರಿಷ್ಟ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುತ್ತದೆ. ಮೊದಲ 2 ಹೆಕ್ಟೇರ್ ಪ್ರದೇಶಕ್ಕೆ ಇತರೆ ವರ್ಗದ ರೈತರಿಗೆ ಶೇ.75 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗ೦ಡ ರೈತರಿಗೆ ಶೇ.90ರಷ್ಟು ಮತ್ತು ನಂತರದ 3 ಹೆಕ್ಟೇರ್ ಪ್ರದೇಶಕ್ಕೆ ಎಲ್ಲಾ ವರ್ಗದ ರೈತರಿಗೆ ಶೇ.45ರ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: Increase in KMF milk incentive to farmers : ಹೊಸ ವರ್ಷಕ್ಕೆ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹಧನ ಹೆಚ್ಚಳ

ನರ್ಸರಿ ಸ್ಥಾಪನೆ

ಕನಿಷ್ಠ 2.5 ಎಕರೆ ಜಮೀನನ್ನು ಹೊಂದಿರುವ ರೈತರಿಗೆ ನರ್ಸರಿ ನಿರ್ಮಾಣಕ್ಕೆ ಅನುದಾನ ಸಿಗಲಿದೆ. ನರ್ಸರಿಗಳ ನಿರ್ಮಾಣಕ್ಕೆ ಅಗತ್ಯವಾದ ಸೌಕರ್ಯಗಳಿಗಾಗಿ ಮೂಲ ಶೇ.50ರಷ್ಟು ಪ್ರೋತ್ಸಾಹಧನವನ್ನು ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸರಕಾರ ಅನುದಾನ ಒದಗಿಸುತ್ತಿದೆ.

ಕೃಷಿ ಯಂತ್ರಗಳ ಖರೀದಿ

ಕೃಷಿಯಲ್ಲಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೋಟಗಾರಿಕಾ ಬೆಳೆಗಳಿಗೆ ಉಪಯೋಗಿಸುವ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಲಭ್ಯವಿದೆ. ಖರೀದಿಸುವ ಯಂತ್ರಗಳಿಗೆ ಅನುಗುಣವಾಗಿ ಶೇ. 40 ರಿಂದ 50 ರಷ್ಟು ಸಹಾಯಧನ ತೋಟಗಾರಿಕಾ ಇಲಾಖೆಯಡಿ ದೊರೆಯುತ್ತದೆ. ಒಂದು ಕುಟುಂಬದಲ್ಲಿ ಓರ್ವರಿಗೆ ಮಾತ್ರ ಈ ಸೌಲಭ್ಯ ಲಭ್ಯ.

ಅಡಿಕ ಒಣಗಿಸುವ ಸೋಲಾರ್ ಘಟಕ

ಪ್ರಕೃತಿದತ್ತವಾಗಿ ದೊರೆಯುವ ಸೂರ್ಯನ ಶಾಖವನ್ನು ಬಳಸಿಕೊಳ್ಳುವ ತಂತ್ರಜ್ಞಾನವಿದು. ಮಳೆಗಾಲದಲ್ಲಿ ಸೂಕ್ತ ತಾಪಮಾನದಲ್ಲಿ ಅಡಿಕೆ ಒಣಗಿಸಲು ಇದು ಸಹಕಾರಿಯಾಗಿದೆ. ದೊಡ್ಡ ಸೋಲಾರ್ ಘಟಕ (Solar Tunnel Dryer) ನಿರ್ಮಿಸುವುದಾದರೆ ಅದಕ್ಕೆ ದೊಡ್ಡ ಮೊತ್ತವು ಬೇಕಾಗುತ್ತದೆ. ಅದರಿಂದಾಗಿ ಒಂದಷ್ಟು ರೈತರು ತಯಾರಿಗೆ ಹಿಂದೇಟು ಹಾಕುತ್ತಾರೆ.

ಈ ಘಟಕ ತಯಾರಿಗೆ ತೋಟಗಾರಿಕಾ ಇಲಾಖೆ ಅನುದಾನವನ್ನು ನೀಡುತ್ತಿದೆ. ಸರಕಾರವು ಕೃಷಿಕರನ್ನು ಪ್ರೋತ್ಸಾಹಿಸಲು 1000 ಕೆ.ಜಿ. ಸಾಮರ್ಥ್ಯದ ಘಟಕ ಅಳವಡಿಕೆಗೆ ಶೇ. 40ರಷ್ಟು, ಗರಿಷ್ಠ 2.28 ಲಕ್ಷ ರೂಪಾಯಿ ಸಹಾಯಧನವನ್ನು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ನೀಡುತ್ತಿದೆ. ಸರಕಾರದ ಅನುದಾನ ದೊರೆಯಬೇಕಾದರೆ ಕೃಷಿಕರು ಕನಿಷ್ಠ 2.5 ಎಕರೆ ಜಮೀನು ಹೊಂದಿರಬೇಕು.

ಇದನ್ನೂ ಓದಿ: Horticulture and Nursery Free Training : ವಾಣಿಜ್ಯ ತೋಟಗಾರಿಕೆ ಮತ್ತು ತರಕಾರಿ ನರ್ಸರಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಶೀತಲೀಕೃತ ಘಟಕಗಳು

ಕೊಲ್ಲೋತ್ತರ ನಿರ್ವಹಣೆ ತೋಟಗಾರಿಕಾ ಬೆಳೆಗಳಲ್ಲಿ ದೊಡ್ಡ ಸವಾಲಿನ ಕೆಲಸ. ಇದಕ್ಕೆ ಶೀತಲೀಕೃತ ಘಟಕಗಳಿದ್ದರೆ ಉತ್ತಮ. ತೋಟಗಾರಿಕಾ ಬೆಳೆಗಳು ಬಹುಬೇಗ ಹಾಳಾಗುವ ಕಾರಣ ತೀತಲೀಕೃತ ಘಟಕಗಳಲ್ಲಿ ಬೆಳೆಗಳನ್ನು ಸಂಗ್ರಹಿಸಿಟ್ಟು ಮಾರುಟ್ಟೆಯಲ್ಲಿ ಉತ್ತಮ ದರ ಇರುವಾಗ ಮಾರಾಟ ಮಾಡಬಹುದಾಗಿದೆ. ಶೀತಲೀಕೃತ ಘಟಕ ನಿರ್ಮಾಣಕ್ಕೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶೇ. 25 ರಿಂದ 50 ರಷ್ಟು ಸಹಾಯಧನ ಲಭ್ಯವಿದೆ.

ಪ್ಯಾಕ್ ಹೌಸ್ ಸ್ಥಾಪನೆ

ಹಲವಾರು ಹೋಟಗಾರಿಕಾ ಬೆಳೆಗಳನ್ನು ಬೆಳೆಯುವ ಜೊತೆಗೆ ಅವುಗಳ ಕೊಯ್ಲೋತ್ತರ ನಷ್ಟವನ್ನು ಕಡಿಮೆ ಮಾಡುವ ಕುರಿತು ಹೆಚ್ಚಿನ ಗಮನಹರಿಸಬೇಕಾಗಿದೆ. ತೋಟಗಾರಿಕಾ ಬೆಳೆಗಳಾದ ಹಣ್ಣು-ಹಂಪಲು, ತರಕಾರಿಗಳ ಪ್ಯಾಕಿಂಗ್ ಸೌಕರ್ಯಗಳಿಗಾಗಿ, ಸಾಗಾಣಿಕೆ ಪೂರ್ವ ಯೋಗ್ಯ ವಾತಾವರಣ ನಿರ್ಮಿಸಿಕೊಂಡು 9 ಮೀಟರ್ ಹಾಗೂ 6 ಮೀಟರ್ ಉದ್ದ, ಅಗಲವನ್ನು ಹೊಂದಿರುವ ಕಟ್ಟಡವನ್ನು ನೀರಿನ ಲಭ್ಯತೆ ಹಾಗೂ ಸಾಗಾಟ ಯೋಗ್ಯ ಸಾಮಗ್ರಿಗಳೊಂದಿಗೆ ನಿರ್ಮಿಸಿದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 2 ಲಕ್ಷ ರೂಪಾಯಿವರೆಗೆ ಸಹಾಯಧನ ದೊರೆಯುತ್ತದೆ. ಘಟಕ ರಚಿಸಲು ಆಸಕ್ತರು ಕನಿಷ್ಠ ಒಂದು ಎಕರೆ ಜಮೀನನ್ನು ಹೊಂದಿರಬೇಕು.

ಪಾಲಿಹೌಸ್ ನಿರ್ಮಾಣ

ಪಾಲಿಮನೆಯ ಮೂಲಕ ಯಾವುದೇ ಋತುಗಳಲ್ಲೂ ತರಕಾರಿ, ಪುಷ್ಪ ಕೃಷಿ, ಹಣ್ಣುಗಳನ್ನು ಬೆಳೆಯಬಹುದಾಗಿದೆ. ಆದರೆ ಪಾಲಿಮನೆ ತಯಾರಿಗೆ ಸಾಕಷ್ಟು ಖರ್ಚು ತಗಲುತ್ತದೆ. ಪಾಲಿಮನೆ ಕೃಷಿಯ ಅನುಕೂಲತೆಗಳನ್ನು ಗಮನಿಸಿದ ಇಲಾಖೆ ಘಟಕ ನಿರ್ಮಿಸಲು ಆಸಕ್ತಿ ತೋರುವ ಕೃಷಿಕರಿಗೆ ಶೇ. 50ರ ದರದಲ್ಲಿ ಅವರು ಬಳಸುವ ವಸ್ತುಗಳ ಆಧಾರದಲ್ಲಿ ವಿಸ್ತೀರ್ಣಕ್ಕನುಗುಣವಾಗಿ ಸಹಾಯಧನವನ್ನು ನೀಡುತ್ತಿದೆ. ಇದಲ್ಲದೇ ಸದರಿ ಘಟಕದೊಳಗೆ ಬೆಳೆಯುವ ತರಕಾರಿ ಮತ್ತು ಹೂವಿನ ಬೆಳೆಗಳಿಗೂ ಕೂಡಾ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನವನ್ನು ನೀಡುತ್ತಿದೆ.

ಇದನ್ನೂ ಓದಿ: PM-Surya Ghar Muft Bijli Jojana : ಮನೆಗೆ ಸೋಲಾರ್ ಕರೆಂಟ್ ಪಡೆಯಲು ₹78,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ…

ರೈತ ಉತ್ಪಾದಕ ಸಂಸ್ಥೆಗಳಿಗೆ ನೆರವು

ಸಮಾನ ಮನಸ್ಕ ಕೃಷಿಕರನ್ನು ಒಗ್ಗೂಡಿಸಿ ‘ರೈತ ಉತ್ಪಾದಕ ಸಂಸ್ಥೆ’ಗಳನ್ನು ಆರಂಭಿಸಲು ಸರಕಾರ ಸಹಾಯ ಮಾಡುತ್ತಿದೆ. ‘ಅಮೃತ ರೈತ ಉತ್ಪಾದಕ ಸಂಸ್ಥೆ ರಚನೆ’ ಯೋಜನೆಯಡಿ ರಾಜ್ಯ ಸರಕಾರ ಹಾಗೂ ‘ರೈತ ಉತ್ಪಾದಕ ಸಂಸ್ಥೆ ರಚನೆ’ ಯೋಜನೆಯಡಿ ಕೇಂದ್ರ ಸರಕಾರ ಅರ್ಥಿಕ ನೆರವನ್ನು ನೀಡುತ್ತದೆ.

ಜೇನು ಕೃಷಿಗೆ ಸಹಾಯ

ಜೇನು ಪೆಟ್ಟಿಗೆಯನ್ನು ನಿಮ್ಮ ಜಮೀನಿನಲ್ಲಿ ಸ್ಥಾಪಿಸಲು ಜಿಲ್ಲಾ ವಲಯ ಹಾಗೂ ರಾಜ್ಯ ವಲಯ ಯೋಜನೆಗಳಡಿ ಶೇ. 75 ರಷ್ಟು ಸಹಾಯಧನವನ್ನು ನೀಡುತ್ತದೆ. ಕೇಂದ್ರ ಸರಕಾರ ಕೂಡಾ ಶೇ. 40ರ ಸಹಾಯಧನವನ್ನು ಒದಗಿಸುತ್ತದೆ.

…ಈ ಮೇಲಿನ ಯೋಜನೆಗಳಲ್ಲದೆ ಈ ಕೆಳಕಂಡ ಅನೇಕ ರೀತಿಯ ಸಹಾಯಧನ ತೋಟಗಾರಿಕೆ ಇಲಾಖೆಯಿಂದ ಲಭ್ಯವಿದೆ:

  • ಅಡಕೆ ಸಸಿ ನೆಡಲು ಗುಂಡಿ ರಚನೆ
  • ರಬ್ಬರ್ ಪ್ಲ್ಲಾಂಟ್, ತೆಂಗು ನಾಟಿ
  • ಔಷಧ ಸಿಂಪಡಿಸುವ ಸಂಪ್
  • ನೀರಾವರಿಗೆ ಬಳಸುವ ಪಂಪ್
  • ಟಾರ್ಪಲ್, ಕಟಾವು ಯಂತ್ರ ಖರೀದಿಗೆ ಸಹಾಯಧನ
  • ತೆಂಗಿನಲ್ಲಿ ಪಕ್ಷಿ, ಕೀಟ, ಆಲಿಕಲ್ಲು ನಿರೋಧಕ ಬಲೆ
  • ಜೈವಿಕ ನಿಯಂತ್ರಕಗಳ ಉತ್ಪಾದನಾ ಪ್ರಯೋಗಾಲಯ
  • ಸಮುದಾಯ ನೀರು ಸಂಗ್ರಹಣಾ ಘಟಕ
  • ವೈಯಕ್ತಿಕ ನೀರು ಸಂಗ್ರಹಣಾ ಘಟಕ
  • ಸಮಗ್ರ ಪೋಷಕಾಂಶ ನಿರ್ವಹಣೆ
  • ಸಮಗ್ರ ರೋಗ/ಕೀಟ ನಿಯಂತ್ರಣ
  • ಪ್ಲಾಸ್ಟಿಕ್ ಹೊದಿಕೆ, ಸಸ್ಯಾಗಾರಗಳ ಸ್ಥಾಪನೆ
  • ಈರುಳ್ಳಿ ಶೇಖರಣಾ ಘಟಕ
  • ಪ್ರಾಥಮಿಕ ಸಂಸ್ಕರಣಾ ಘಟಕ
  • ಶೀತಲ ವಾಹನ, ಹಣ್ಣು ಮಾಗಿಸುವ ಘಟಕ
  • ಬೀಜ ಸಂಸ್ಕರಣೆಯ ಮೂಲಸೌಕರ್ಯ ಅಭಿವೃದ್ಧಿ
  • ಅಂಗಾ೦ಶ ಕೃಷಿ ಪ್ರಯೋಗ ಶಾಲೆ
  • ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
  • ಪರಂಪರಾಗತ ಕೃಷಿ ವಿಕಾಸ ಯೋಜನೆ
  • ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ

ಋತುಮಾನಕ್ಕೆ ಅನುಗುಣವಾಗಿ, ಕಾಲಕಾಲಕ್ಕೆ ಪ್ರತಿಯೊಂದು ಯೋಜನೆಗೆ ಸಂಬ೦ಧಿಸಿದ೦ತೆ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಈ ಸಹಾಯಧನ ರಾಜ್ಯದ ಎಲ್ಲ ವರ್ಗದ ರೈತರಿಗೂ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ.

ಇದನ್ನೂ ಓದಿ: PM-Surya Ghar Muft Bijli Jojana : ಮನೆಗೆ ಸೋಲಾರ್ ಕರೆಂಟ್ ಪಡೆಯಲು ₹78,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!