ಕೋ-ಅಪರೇಟಿವ್ ಬ್ಯಾಂಕ್’ನಲ್ಲಿ (Co-operative Central Bank) ಖಾಲಿ ಇರುವ ಖಾಲಿ ಇರುವ 32 ಕಿರಿಯ ಸಹಾಯಕರ (Junior Assistant Post) ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದ್ದು; ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ (Kodagu District Co-operative Central Bank Limited Madikeri) ಸೇವೆ ಸಲ್ಲಿಸ ಬಯಸುವ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು
ವಿದ್ಯಾರ್ಹತೆ ವಿವರ
ಕಿರಿಯ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.55 ಅಥವಾ ಅದಕ್ಕಿಂತ ಹೆಚ್ಚು ಅಂಕ ತೇರ್ಗಡೆಯಾಗಿರಬೇಕು. ವಾಣಿಜ್ಯ ಪದವಿಯಾಗಿದ್ದರೆ ಕನಿಷ್ಠ ಶೇ.50 ಅಂಕಗಳೊAದಿಗೆ ತೇರ್ಗಡೆಯಾಗಿರಬೇಕು.
ಡಿಪ್ಲೊಮಾ ಇನ್ ಕೋ ಅಪರೇಟಿವ್ ಮ್ಯಾನೇಜ್’ಮೆಂಟ್ ಮತ್ತು ಸ್ನಾತಕೋತ್ತರ ಪದವೀಧರರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರ ಜೊತೆಗೆ ಕನಿಷ್ಠ 6 ತಿಂಗಳ ಡಿಪ್ಲೊಮಾ ಇನ್ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ಸ್ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿರಬೇಕು.
18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: ವಾಟ್ಸಾಪ್ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್ಗೆ ‘ಹಾಯ್’ ಅಂತ ಕಳಿಸಿ..
ಮಾಸಿಕ ವೇತನ ಮತ್ತು ಶುಲ್ಕವೆಷ್ಟು?
ಕೊಡಗು ಜಿಲ್ಲಾ ಸಹಕಾರಿ ಬ್ಯಾಂಕ್ ಕಿರಿಯ ಸಹಾಯಕರು ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ 30,350 ರಿಂದ 58,250 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ವೇತನದ ಜೊತೆಗೆ ಇತರ ಸೌಲಭ್ಯಗಳು ಅನ್ವಯವಾಗುತ್ತವೆ.
ಅರ್ಜಿ ಸಲ್ಲಿಸುವ ಎಸ್ಸಿ/ಎಸ್ಟಿ, ಪ್ರವರ್ಗ-1, ಮಹಿಳೆಯರು ಹಾಗೂ ವಿಶೇಷಚೇತನ ಅಭ್ಯರ್ಥಿಗಳಿಗೆ 1,250 ರೂ. ಶುಲ್ಕ ಪಾವತಿಸಬೇಕು. ಉಳಿದ ಎಲ್ಲಾ ವರ್ಗದವರು 1,750 ರೂ. ಶುಲ್ಕ ಪಾವತಿಸಲು ಸೂಚಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯುತ್ತದೆ. 200 ಅಂಕಗಳ ಲಿಖಿತ ಪರೀಕ್ಷೆಯಿದ್ದು ಕನ್ನಡ ಭಾಷೆ, ಸಾಮಾನ್ಯ ಇಂಗ್ಲಿಷ್ ಭಾಷೆ, ಸಾಮಾನ್ಯ ಜ್ಞಾನ, ಸಹಕಾರಿ ವಿಷಯ, ಭಾರತ ಸಂವಿಧಾನ, ಸಹಕಾರಿ ಸಂಘದ ಉದ್ದೇಶ, ಕಾರ್ಯಚಟುವಟಿಕೆಗಳ ಕುರಿತಾದ ಪ್ರಶ್ನೆಗಳಿರುತ್ತವೆ.
ಅರ್ಜಿ ಸಲ್ಲಿಕೆಯ ಕೊನೇ ದಿನ: 16-01-2024
ಅಧಿಸೂಚನೆ : ಡೌನ್ ಲೋಡ್
ಆನ್ಲೈನ್ ಅರ್ಜಿ: Apply ಮಾಡಿ
ಇದನ್ನೂ ಓದಿ: ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ
3 Comments