AgricultureNews

Livestock, Poultry and Fisheries Expo 2025 : ಜಾನುವಾರು, ಕೋಳಿ, ಮೀನುಗಾರಿಕೆ ಮೇಳ 2025

ಉಪಯುಕ್ತ ಮಾಹಿತಿಯ ಪಶುಪಾಲನಾ ಬೃಹತ್ ಮೇಳ

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್‌ನ (Karnataka Veterinary, Animal and Fisheries University) ಆವರಣದಲ್ಲಿ ಬೃಹತ್ ‘ಜಾನುವಾರು, ಕುಕ್ಕುಟ ಮತ್ತು ಮತ್ಸ್ಯಮೇಳ – 2025’ ಅನ್ನು ಆಯೋಜಿಸಲಾಗಿದೆ.

WhatsApp Group Join Now
Telegram Group Join Now

ಇದೇ 2025ರ ಜನವರಿ 17ರಿಂದ 19ರ ವರೆಗೆ ಮೂರು ದಿನಗಳ ಕಾಲ ‘ಗ್ರಾಮೀಣ ಸಮೃದ್ಧಿ ಮತ್ತು ಜೀವನೋಪಾಯ ಭದ್ರತೆಗಾಗಿ ಪಶುಪಾಲನೆ ಮತ್ತು ಮೀನುಗಾರಿಕೆ’ ಎಂಬ ದ್ಯೇಯವಾಕ್ಯದೊಂದಿಗೆ ಸದರಿ ಮೇಳವು ಬೀದರ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ: Line 883 Onion : ಎಕರೆಗೆ 325 ಕ್ವಿಂಟಾಲ್ ಇಳುವರಿ ಕೊಡುವ ಹೊಸ ತಳಿ ಇರುಳ್ಳಿ

ಮೇಳದ ವಿಶೇಷ ಆಕರ್ಷಣೆಗಳು

ಮೇಳದಲ್ಲಿ ರೈತರಿಗೆ ವಿವಿಧ ತಳಿ ಹಸು, ಎಮ್ಮೆ, ಎತ್ತು, ಕೋಳಿ ಹಾಗೂ ಮೀನು ಸಾಕಾಣಿಕೆಗೆ ಸಂಬAಧಿಸಿದ ಮಾಹಿತಿ ಸಿಗಲಿದೆ. ಈ ಕೆಳಕಂಡ ಜಾನುವಾರು, ಕೋಳಿ, ಮೀನು ಸಾಕಾಣಿಕೆ, ಮಾರಾಟ, ಸ್ಪರ್ಧೆ, ಪ್ರಾತಕ್ಷಿಕೆಗಳು ನಡೆಯಲಿವೆ.

  • ಜಾನುವಾರು ಮತ್ತು ಮೀನುಗಾರಿಕೆ ತಳಿಗಳ ಪ್ರದರ್ಶನ
  • ವೈಜ್ಞಾನಿಕ ಜಾನುವಾರು ಮತ್ತು ಮೀನು ಸಾಕಾಣಿಕೆ ಪದ್ಧತಿಗಳು
  • ಸಣ್ಣ ಮತ್ತು ಮುದ್ದು ಪ್ರಾಣಿಗಳ ಪ್ರದರ್ಶನ
  • ಜಾನುವಾರು ಮತ್ತು ಮೀನಿನ ಸ್ಪರ್ಧೆಗಳು
  • ಶ್ರೇಷ್ಠ ರೈತ / ರೈತ ಮಹಿಳೆ ಪ್ರಶಸ್ತಿಗಳು
  • ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳು
  • ಜಲಚರಗಳ ಪ್ರದರ್ಶನ
  • ಅಲಂಕಾರಿಕ ಮೀನು ಪ್ರದರ್ಶನ
  • ಮೀನು ಸಾಕಣೆ ಮತ್ತು ಆಹಾರದ ತಂತ್ರಜ್ಞಾನಗಳು
  • ಸಮಗ್ರ ಜಲಚರ ಸಾಕಣೆಯ ಪದ್ಧತಿಗಳು
  • ಜಲಚರ ಸಾಕಣೆ ತಂತ್ರಜ್ಞಾನ ಮತ್ತು ಉಪಕರಣಗಳು
  • ಮೀನುಗಾರಿಕೆಯಲ್ಲಿ ಸುಸ್ಥಿರತೆ
  • ಮೌಲ್ಯವರ್ಧಿತ ಹಾಲು ಮತ್ತು ಮಾಂಸದ ಉತ್ಪನ್ನಗಳು
  • ಜಾನುವಾರು ಮತ್ತು ಮೀನು ಆಧಾರಿತ ತಿನಿಸುಗಳು

ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು

  • ಸಮಗ್ರ ಕೃಷಿ ಪದ್ಧತಿಗಳು
  • ಸಾವಯುವ ಕೃಷಿ ಮತ್ತು ಜೈವಿಕ ಗೊಬ್ಬರಗಳು
  • ಸುಧಾರಿತ ಮೇವಿನ ಬೀಜಗಳು/ ಕಾಂಡದ ತುಂಡುಗಳು
  • ಮೇವಿನ ಸಂಸ್ಕರಣೆ, ಸಂರಕ್ಷಣೆ ತಂತ್ರಜ್ಞಾನಗಳು
  • ಬರ ನಿರೋಧಕ ಮೇವು
  • ಹವಾಮಾನ ಸ್ಥಿತಿಸ್ಥಾಪಕ ಮೇವು
  • ಮೇವು ಪ್ರದರ್ಶನ / ಪ್ರಾತ್ಯಕ್ಷಿಕೆ
  • ವೈಜ್ಞಾನಿಕ ಆಹಾರ ಪದ್ಧತಿಗಳು
  • ಸರ್ಕಾರದ ಯೋಜನೆಗಳು ಮತ್ತು ಜಾಗೃತಿ
  • ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು
  • ರೈತರು ಮತ್ತು ವಿಜ್ಞಾನಿಗಳ ಸಂವಾದ
  • ರೈತನಿ೦ದ ರೈತರಿಗಾಗಿ ಚರ್ಚಾಗೋಷ್ಠಿ
  • ರೋಗ ನಿರ್ಣಯ, ಔಷಧಿಗಳು ಮತ್ತು ಲಸಿಕೆಗಳು
  • ಹಣಕಾಸು ಮತ್ತು ಬ್ಯಾಕಿಂಗ್ ಸೇವೆಗಳು
  • ಜಾನುವಾರು, ಕೋಳಿ ಹಾಗೂ ಮೀನುಗಾರಿಕೆ ಪುಸ್ತಕಗಳು
Livestock, Poultry and Fisheries Expo 2025

ಎಲ್ಲರಿಗೂ ಉಚಿತ ಪ್ರವೇಶ

‘ಜಾನುವಾರು, ಕುಕ್ಕುಟ ಮತ್ತು ಮತ್ಸ್ಯಮೇಳ – 2025’ಕ್ಕೆ ಸರ್ವರಿಗೂ ಉಚಿತ ಪ್ರವೇಶವಿದ್ದು; ಆಸಕ್ತ ರೈತರು ಬೀದರ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸದರಿ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಮಳಿಗೆಯನ್ನು ಕಾಯ್ದಿರಿಸಲು, ಜಾಹೀರಾತು, ಪ್ರಾಯೋಜಕತ್ವ ಇನ್ನಿತರ ಮಾಹಿತಿಗಾಗಿ 9449661149, 9663912777, 9606038309 ನಂಬರ್‌ಗಳನ್ನು ಸಂಪರ್ಕಿಸಬಹುದಾಗಿದೆ.

ರೈತರಿಗೆ ₹5 ಲಕ್ಷದ ವರೆಗೆ ಬಡ್ಡಿ ಇಲ್ಲದ ಬೆಳೆಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ… Zero Interest Crop Loan

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!