News

HMPV New Virus : ಹೊಸ ವೈರಸ್ ಎಷ್ಟು ಡೇಂಜರಸ್?

ಈ ವೈರಾಣು ಯಾರಿಗೆಲ್ಲ ಅಪಾಯಕಾರಿ | ಆರೋಗ್ಯ ಇಲಾಖೆಯ ಮಾರ್ಗಸೂಚಿಗಳೇನು?

ಈಗ್ಗೆ ಹದಿನಾಲ್ಕು ವರ್ಷಗಳ ಹಿಂದೆ ಗುರುತಿಸಲ್ಪಟ್ಟಿದ್ದ ನೆಗಡಿ ವೈರಾಣುವೊಂದು ಈಗ ಭಾರೀ ಸದ್ದು ಮಾಡುತ್ತಿದೆ. ದಿನಕ್ಕೊಂದು ಕ್ಷಣಕ್ಕೊಂದು ಗಾಳಿಸುದ್ದಿ, ಊಹಾಪೋಹಗಳು ಬಿತ್ತರವಾಗತೊಡಗಿವೆ. ಕೋರೊನಾ ಹೊಡೆತದಿಂದ ಜರ್ಜರಿತರಾಗಿದ್ದ ಜನ ‘ಮತ್ತೇನು ಬಂತಪ್ಪಾ ಗಂಡಾ೦ತರ’ ಅಂತ ತತ್ತರಿಸುತ್ತಿದ್ದಾರೆ.

WhatsApp Group Join Now
Telegram Group Join Now

ಹೌದು, ಕೋವಿಡ್-19 (Covid-19) ಸಾಂಕ್ರಾಮಿಕದ ಸಾವು-ನೋವಿನ ಸಂಕಟ ಮಾಸುವ ಮುನ್ನವೇ ಮತ್ತೊಂದು ಸಾಂಕ್ರಾಮಿಕದ ಗದ್ದಲವೆದ್ದಿದೆ. ಹೂಮನ್ ಮೆಟಾನ್ಯೂಮೋ ವೈರಸ್ (Human Metapneumo Virus – HMPV) ಎಂಬ ವೈರಸ್ ಕಳವಳ ಮೂಡಿಸಿದ್ದು; ಚೀನಾದಲ್ಲಿ ಆಸ್ಪತ್ರೆಗಳು ಕಿಕ್ಕಿರಿದಿವೆಯಂತೆ, ಸ್ಮಶಾನಗಳಲ್ಲಿ ರಾಶಿರಾಶಿ ಹೆಣಗಳಂತೆ. ಭಾರತದಲ್ಲಿ ಮತ್ತೆ ಲಾಕ್‌ಡೌನ್ ಅಂತೆ, ಈ ಸೋಂಕಿಗೆ ಔಷಧಿ ಇಲ್ವಂತೆ… ಎಂಬಿತ್ಯಾದಿ ಅಂತೆ-ಕ೦ತೆಗಳು ಹರಿದಾಡುತ್ತಿವೆ.

ಇದನ್ನೂ ಓದಿ: Cold wave forecast in Karnataka : ಮುಂದಿನ ಒಂದು ವಾರ ಭಾರೀ ಚಳಿ

ಏನಿದು HMPV ವೈರಸ್?

ಹೂಮನ್ ಮೆಟಾನ್ಯೂಮೋ ವೈರಸ್ ಒಂದು ವಿದೇಶಿ ವೈರಸ್. ಇದು ನ್ಯುಮೊವಿರಿಡೆ ಕುಟುಂಬದ ಮೆಟಾ ನ್ಯೂಮೋ ವೈರಸ್ ಪಂಗಡಕ್ಕೆ ಸೇರಿದ್ದು; ಕಳೆದ 2001ರಲ್ಲಿ ಡೆನ್ಮಾರ್ಕ್’ನ ಸಂಶೋಧಕರು ಮೊದಲ ಬಾರಿಗೆ ಈ ವೈರಸ್ ಗುರುತಿಸಿದ್ದರು. ಇದು ಕಳೆದ 6 ದಶಕದಿಂದ ಪ್ರಪಂಚದಾದ್ಯ೦ತ ವಿವಿಧೆಡೆ ಇದನ್ನು ಗುರುತಿಸಲಾಗಿದೆ.

ಇದೀಗ ಈ ವೈರಸ್ ಮತ್ತೆ ಸದ್ದು ಮಾಡುತ್ತಿದ್ದು; ಚಳಿಗಾಲದ ನೆಗಡಿ, ಶೀತ, ಕೆಮ್ಮು, ಜ್ವರದಂತಹ ಸಾಮಾನ್ಯ ರೋಗ ಲಕ್ಷಣಗಳಿಗೂ ಮತ್ತು ಸದರಿ ಎಚ್‌ಎಂಪಿವಿ ವೈರಸ್’ನ ರೋಗ ಲಕ್ಷಣಗಳಿಗೂ ಹೋಲಿಕೆ ಇರುವುದರಿಂದ ಸಹಜವಾಗಿಯೇ ಎಲ್ಲರಲ್ಲೂ ಭಯ ಮನೆ ಮಾಡಿದೆ.

ಇದನ್ನೂ ಓದಿ: MGNREGA Karnataka : ಸಣ್ಣ ರೈತರಿಗೆ ₹5 ಲಕ್ಷ ನರೇಗಾ ಸಹಾಯಧನ

ಬೆಂಗಳೂರಲ್ಲಿ ಶಿಶುಗಳಿಗೆ ಸೋಂಕು

ಕರ್ನಾಟಕದಲ್ಲಿ ಎರಡು ಎಚ್‌ಎಂಪಿವಿ ಪ್ರಕರಣ ಪತ್ತೆಯಾಗಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research -ICMR) ಹೇಳಿದೆ. ಬ್ರಾಂಕೋನ್ಯೂಮೋನಿಯಾ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಗೆ ಪ್ರತ್ಯೇಕವಾಗಿ ದಾಖಲಾಗಿದ್ದ 3 ತಿಂಗಳ ಹೆಣ್ಣು ಹಾಗೂ 8 ತಿಂಗಳ ಗಂಡು ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ಆದರೆ, ಈ ಮಕ್ಕಳು ಯಾವುದೇ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿಲ್ಲ. ಹೀಗಾಗಿ ಸೋಂಕು ಚೀನಾ ಅಥವಾ ಬೇರೆಡೆಯಿಂದ ಹರಡಿಲ್ಲ ಎನ್ನುವುದನ್ನು ಪುಷ್ಟಿಕರಿಸಿದೆ.

HMPV ಸೋಂಕಿನ ಲಕ್ಷಣಗಳು

ಎಚ್‌ಎಂಪಿವಿ ಸೋಂಕಿತರಲ್ಲಿ ಜ್ವರ, ಕೆಮ್ಮು, ಮೂಗು ಕಟ್ಟಿಕೊಳ್ಳುವುದು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಸೋಂಕು 3-6 ದಿನಗಳ ವರೆಗೆ ಇರುತ್ತದೆ. ತೀವ್ರಗೊಂಡರೆ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾ ಉಂಟಾಗುತ್ತದೆ.

ಸೋ೦ಕಿತರು ಕೆಮ್ಮಿದಾಗ, ಸೀನಿದಾಗ, ಸೋಂಕಿತರ ಜತೆ ಸಂಪರ್ಕಕ್ಕೆ ಬಂದಾಗ, ಕೈ ಕುಲುಕಿದಾಗ, ಸೋಂಕಿತರ ಮೂಗು, ಕಣ್ಣು, ಬಾಯಿ ಮುಟ್ಟಿದಾಗ ವೈರಾಣುಗಳು ಹರಡುತ್ತವೆ.

ಇದನ್ನೂ ಓದಿ: New facilities for Govt employees : ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಭರ್ಜರಿ ಸೌಲಭ್ಯಗಳು

ಆರೋಗ್ಯ ಇಲಾಖೆ ಮಾರ್ಗಸೂಚಿಗಳೇನು?

ಸೋಂಕಿನ ಕುರಿತು ಗಾಬರಿಯಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕೆಳಕಂಡ ಮಾರ್ಗಸೂಚಿ ಪ್ರಕಟಿಸಿದೆ:

  • ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರದಿಂದ ಮುಚ್ಚಿಕೊಳ್ಳಿ
  • ಆಗಾಗ ಕೈಗಳನ್ನು ಸೋಪು ಅಥವಾ ಸ್ಯಾನಿಟೈಜರ್‌ನಿಂದ ತೊಳೆದುಕೊಳ್ಳಿ
  • ಜ್ವರ, ಕೆಮ್ಮು ಅಥವಾ ಸೀನು ಇದ್ದಲ್ಲಿ ಸಾರ್ವಜನಿಕ ಪ್ರದೇಶಗಳಿಂದ ದೂರವಿರಿ
  • ಸೋಂಕು ಹರಡುವುದನ್ನು ತಡೆಯಲು ಹೊರಗಿನಿಂದ ಗಾಳಿಯಾಡುವ ವ್ಯವಸ್ಥೆ ಇರಲಿ
  • ಆರೋಗ್ಯ ಸಮಸ್ಯೆಯಿದ್ದರೆ ಮನೆಯಲ್ಲಿಯೇ ಇದ್ದು ಜನಸಂಪರ್ಕ ಕಡಿಮೆ ಮಾಡಿ
  • ಹೇರಳವಾಗಿ ನೀರು ಕುಡಿದು ಪೌಷ್ಠಿಕ ಆಹಾರ ಸೇವಿಸಿ

ಈ ವೈರಾಣು ಯಾರಿಗೆಲ್ಲ ಅಪಾಯಕಾರಿ?

ಸಣ್ಣ ಮಕ್ಕಳು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಸೋಂಕು ಬೇಗ ಹರಡುತ್ತದೆ ಎನ್ನುವುದು ಗಂಭೀರ ವಿಚಾರ. ಈಗ ಬೆಂಗಳೂರಿನಲ್ಲೂ ಎರಡು ಶಿಶುಗಳಿಗೆ HMPV ಪತ್ತೆಯಾಗಿರುವುದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮಾಡಿದೆ.

ಈ ಹೊಸ ವೈರಾಣುವಿನ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ನವಜಾತ ಶಿಶುಗಳು, ಚಿಕ್ಕ ಮಕ್ಕಳು, ಹಿರಿಯ ನಾಗರಿಕರು, ಉಸಿರಾಟ ಸಮಸ್ಯೆ ಹೊಂದಿರುವವರು, ಹೃದಯ ಸಮಸ್ಯೆ ಹೊಂದಿರುವವರು, ರೋಗನಿರೋಧಕ ಶಕ್ತಿ ಸಮಸ್ಯೆ ಹೊಂದಿರುವವರು ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸುವುದು ಕ್ಷೇಮಕರ.

ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!