Sheep-Goat Farming Schemes : ಕುರಿ-ಮೇಕೆ ಸಾಕಾಣಿಕೆ ಸಬ್ಸಿಡಿ ಯೋಜನೆಗಳು
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಧನ ಸೌಲಭ್ಯಗಳು
ಕುರಿ ಸಾಕಣೆಗಾಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ಸಿಗುವ ಸಬ್ಸಿಡಿ ಸೌಲಭ್ಯಗಳೇನು? ಅವುಗಳನ್ನು ಪಡೆಯುವುದ ಹೇಗೆ? ಯಾರೆಲ್ಲ ಅರ್ಹರು? ಇಲ್ಲಿದೆ ಸಂಪೂರ್ಣ ಮಾಹಿತಿ…
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತದ (Karnataka Sheep and Wool Development Corporation- KSWDCL) ವತಿಯಿಂದ ರಾಜ್ಯ ಸರಕಾರವು ಕುರಿ-ಮೇಕೆ ಸಾಕಾಣಿಕೆಯನ್ನು ಉತ್ತೇಜಿಸಲು ಹಲವು ಸಹಾಯಧನ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ಕುರಿದೊಡ್ಡಿ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ
ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ ಸೌಕರ್ಯದ ಜೊತೆಗೆ ಕುರಿ ದೊಡ್ಡಿ ನಿರ್ಮಿಸಲು 5 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ. ಜೊತೆಗೆ ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ ಅವಲಂಬಿತ ಕುಟುಂಬದವರನ್ನು ಆರ್ಥಿಕ ಸಂಕಷ್ಟದಿ೦ದ ಪಾರು ಮಾಡಲು ಕುರಿಗಾಹಿಗಳಿಗೆ 5 ಲಕ್ಷ ರೂಪಾಯಿ ವಿಮಾ ಸೌಲಭ್ಯ.
ಇದನ್ನೂ ಓದಿ: Loan Information : ಸಾಲ ಪಡೆಯುವ ಮುನ್ನ ಈ ಮಾಹಿತಿ ತಿಳಿದಿರಿ
ಕುರಿ-ಮೇಕೆ ಆಕಸ್ಮಿಕ ಸಾವಿಗೆ ಅನುಗ್ರಹ ನೆರವು
ಆರು ತಿಂಗಳು ಮೇಲ್ಪಟ್ಟ ಕುರಿ ಮತ್ತು ಮೇಕೆಗಳು ಆಕಸ್ಮಿಕವಾಗಿಯೋ ಅಥವಾ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದಿದಲ್ಲಿ ಮಾಲೀಕರಿಗೆ ‘ಅನುಗ್ರಹ’ ಯೋಜನೆಯಡಿ ಪರಿಹಾರ ಸಿಗಲಿದೆ.
ಇಂತಹ ಪ್ರಕರಣಗಳಲ್ಲಿ ಕುರಿ-ಮೇಕೆಗೆ 5,000 ರೂಪಾಯಿ ಪರಿಹಾರ ಧನ ನೀಡಲಾಗುತ್ತದೆ. 3-6 ತಿಂಗಳ ವಯಸ್ಸಿನ ಕುರಿ-ಮೇಕೆಗಳಿಗೆ 3,500 ರೂಪಾಯಿ ಪರಿಹಾರ ಧನವನ್ನು ನೀಡಲಾಗುತ್ತದೆ.
ಉಚಿತ ಕುರಿ ಸಾಕಾಣಿಕೆ ವೈಜ್ಞಾನಿಕ ತರಬೇತಿ
ನೋಂದಾಯಿತ ಕುರಿ ಸೊಸೈಟಿಯ ಎಲ್ಲಾ ಸದಸ್ಯರಿಗೆ ಕುರಿ ಸಾಕಾಣಿಕೆ ವೈಜ್ಞಾನಿಕ ತರಬೇತಿ ಮತ್ತು ಕುರಿಗಳಿಗೆ ನಿಗಮದಿಂದ ಉಚಿತವಾಗಿ ಜಂತುನಾಶಕ ಔಷಧಿ ವಿತರಿಸಲಾಗುತ್ತದೆ.
ಕುರಿ ತಳಿ ಅಭಿವೃದ್ಧಿ ಯೋಜನೆ ಅನುಸಾರ ಮಿಶ್ರತಳಿ ಟಗರುಗಳನ್ನು ಲಭ್ಯತೆಯ ಮೇರೆಗೆ ಸಹಾಯಧನ ಮತ್ತು ಆಧುನಿಕ ಕುರಿ ತೂಕದ ಯಂತ್ರಗಳನ್ನು ಅವಶ್ಯಕತೆ ಮೇರೆಗೆ ನಿಗಮದಿಂದ ವಿತರಣೆ ಮಾಡಲಾಗುತ್ತದೆ.
ಇದನ್ನೂ ಓದಿ: MGNREGA Karnataka : ಸಣ್ಣ ರೈತರಿಗೆ ₹5 ಲಕ್ಷ ನರೇಗಾ ಸಹಾಯಧನ
10+1 ಕುರಿ-ಮೇಕೆ ಸಾಕಾಣಿಕೆ ಸಹಾಯಧನ
ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ/ ಪರಿಶಿಷ್ಟ ಜಾತಿ (6+1) ಕುರಿ-ಮೇಕೆ ಘಟಕ ವಿತರಣೆ ಹಾಗೂ ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ 10+1 ಕುರಿ-ಮೇಕೆ ಸಾಕಾಣಿಕೆ ಸಹಾಯಧನ ನೀಡಲಾಗುತ್ತದೆ.
ಇನ್ನು ವಲಸೆ ಕುರಿಗಾಗರಿಗೆ ಸಂಚಾರಿ ಟೆಂಟ್, ಸೋಲಾರ್ ಟಾರ್ಚ್, ರಬ್ಬರ್ ಪ್ಲೂರ್ ಮ್ಯಾಟ್ ಮತ್ತು ರೇನ್ ಕೋಟ್ ಸೇರಿದಂತೆ ಪರಿಕರಗಳ ಕಿಟ್‌ಗಳ ವಿತರಣೆ ಮಾಡಲಾಲಾಗುತ್ತದೆ.
‘ಅಮೃತ ಸ್ವಾಭಿಮಾನಿ’ ಯೋಜನೆ
ಈಚೆಗೆ ಕುರಿ ಸಾಕಾಣಿಕೆದಾರರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು 2023-24ನೇ ಸಾಲಿನಿಂದ ‘ಅಮೃತ ಸ್ವಾಭಿಮಾನಿ ಯೋಜನೆ’ಯಡಿ 20+1 ಕುರಿ/ಮೇಕೆ ಘಟಕಗಳ ಸ್ಥಾಪನೆಗೆ ಪ್ರತಿ ಫಲಾನುಭವಿಗೆ 1.75 ಲಕ್ಷ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಕುರಿ ಸೊಸೈಟಿಯಲ್ಲಿ ಸದಸ್ಯರಾದ ಅರ್ಹರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಸದರಿ ಯೋಜನೆಯಡಿ 1.75 ಲಕ್ಷ ರೂ. ಘಟಕ ವೆಚ್ಚದ ಪೈಕಿ ಶೇ.50ರಷ್ಟನ್ನು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಸಾಲವಾಗಿ ನೀಡಲಾಗುತ್ತದೆ. ಶೇ.25ರಷ್ಟು ರಾಜ್ಯ ಸರ್ಕಾರದಿಂದ ಸಹಾಯಧನವಾಗಿ ಸಿಗಲಿದೆ. ಇನ್ನುಳಿದ ಶೇ.25 ಫಲಾನುಭವಿಗಳ ವಂತಿಗೆಯ ಮೂಲಕ ಅನುಷ್ಠಾನ ಮಾಡಲಾಗುತ್ತದೆ.
ಇದನ್ನೂ ಓದಿ: Ration Card Correction Karnataka : ರೇಷನ್ ಕಾರ್ಡ್ ತಿದ್ದುಪಡಿ
ಈ ಯೋಜನೆಗಳಿಗೆ ಯಾರೆಲ್ಲ ಅರ್ಹರು?
ರಾಜ್ಯಾದ್ಯಂತ ಕುರಿ-ಮೇಕೆ ಸಾಕಾಣಿಕೆದಾರರಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸಲು ನಿಗಮದ ವತಿಯಿಂದ ‘ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ’ಗಳನ್ನು (Sheep and Wool Producers Cooperative Society) ಸ್ಥಾಪಿಸಲಾಗಿದೆ.
ಹೋಬಳಿ ಮಟ್ಟದಲ್ಲಿ ತಲಾ 15,000 ಕುರಿ-ಮೇಕೆಗಳಿಗೆ ಒಂದು ಸಹಕಾರ ಸಂಘದ೦ತೆ ರಾಜ್ಯದಲ್ಲಿ ಒಟ್ಟು 625 ಸಹಕಾರ ಸಂಘಗಳು ಅಸ್ತಿತ್ವದಲ್ಲಿವೆ. ಈ ಸಹಕಾರ ಸಂಘಗಳೇ ನಿಗಮದ ಕೇಂದ್ರ ಬಿಂದುವಾಗಿದ್ದು; ನಿಗಮದ ಪ್ರತಿ ಕಾರ್ಯಕ್ರಮಗಳನ್ನು ಇವುಗಳ ಮೂಲಕ ವಿತರಿಸಲಾಗುತ್ತಿದೆ.
ಮೇಲ್ಕಾಣಿಸಿದ ಈ ಎಲ್ಲ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳು ಮುಖ್ಯವಾಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು.
ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಅನುದಾನ ಲಭ್ಯತೆಗೆ ಅನುಗುಣವಾಗಿ ಈ ಯೋಜನೆಗಳ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಆಗ ಅರ್ಹ ಫಲಾನುಭವಿಗಳು ಆಯಾ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
ಕುರಿ ನಿಗಮದ ಜಿಲ್ಲಾ ಸಹಾಯಕ ನಿರ್ದೇಶಕರ ಸಂಪರ್ಕಕ್ಕೆ ಇಲ್ಲಿ ಕ್ಲಿಕ್ ಮಾಡಿ…
ಇದನ್ನೂ ಓದಿ: ನಿಮ್ಮ ಜಮೀನು ಕಾಲುದಾರಿ ನಕ್ಷೆಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ…
One Comment