LIC BIMA SAKHI Scheme : SSLC ಪಾಸಾದ ಮಹಿಳೆಯರಿಗೆ LIC ಬಿಮಾ ಸಖಿ ಉದ್ಯೋಗ
ಒಂದೇ ತಿಂಗಳಲ್ಲಿ 50 ಸಾವಿರ ಮಹಿಳೆಯರ ನೋಂದಣಿ
ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದ LICಯ ‘ಬಿಮಾ ಸಖಿ ಯೋಜನೆ’ಗೆ (LIC BIMA SAKHI) ಒಂದೇ ತಿಂಗಳಲ್ಲಿ ಬರೋಬ್ಬರಿ 52,511 ಜನ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಎಸ್ಎಸ್ಎಲ್ಸಿ ಪಾಸಾದ ಮಹಿಳೆಯರಿಗೆ ಇದೊಂದು ಸದಾವಕಾಶವಾಗಿದ್ದು; ಬಿಮಾ ಸಖಿಯರಾಗುವ ಮಹಿಳೆಯರಿಗೆ ಸರ್ಕಾರದ ಗೌರವಧನದ ಜೊತೆಗೆ ಎಲ್ಐಸಿ ಕಮೀಷನ್ ಕೂಡ ಸಿಗಲಿದೆ.
ಗ್ರಾಮ ಪಂಚಾಯಿತಿಗೊಬ್ಬ ಬಿಮಾ ಸಖಿ
ಜನವರಿ 8ರಂದು ಎಲ್ಐಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಾರ್ಥ ಮೊಹಂತಿ ಅವರು ಈ ಬಗ್ಗೆ ಮಾಹಿತಿ ನಿಢಿದ್ದು; ಒಟ್ಟು ನೋಂದಣಿಯಾದ 52,511 ಬಿಮಾ ಸಖಿಯರ ಪೈಕಿ 27,511 ಜನಕ್ಕೆ ನೇಮಕಾತಿ ಪತ್ರ ವಿತರಿಸಲಾಗಿದೆ. 14,583 ಬಿಮಾ ಸಖಿಯರು ಈಗಾಗಲೇ ಎಲ್ಐಸಿ ಉತ್ಪನ್ನ ಸೇವೆಗಳ ಮಾರಾಟ ಪ್ರಾರಂಭಿಸಿದ್ದಾರೆ.
‘ಒAದು ವರ್ಷದ ಅವಧಿಯಲ್ಲಿ ದೇಶದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕನಿಷ್ಠ ಒಬ್ಬ ವಿಮಾ ಸಖಿ ಇರಬೇಕು ಎಂಬುದು ನಮ್ಮ ಗುರಿಯಾಗಿದ್ದು; ಇವರಿಗೆ ಕಮಿಷನ್ ಹಣದ ಜತೆಗೆ ಮೂರು ವರ್ಷಗಳ ಕಾಲ ಮಾಸಿಕ ಸ್ಟೆಪೆಂಡ್ (ಶಿಷ್ಯವೇತನ) ನೀಡಲಾಗುತ್ತದೆ’ ಎಂದು ಸಿದ್ದಾರ್ಥ ಮೊಹಂತಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Canara Bank Recruitment 2025 : ಕೆನರಾ ಬ್ಯಾಂಕ್ನಲ್ಲಿ ಉದ್ಯೋಗಾವಕಾಶ
ಏನಿದು ‘ಬಿಮಾ ಸಖಿ’ ಯೋಜನೆ?
ಮಹಿಳಾ ಸಬಲೀಕರಣದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅನುಷ್ಟಾನಗೊಳಿಸಿದ ವಿಶಿಷ್ಟ ಯೋಜನೆ ಇದು. ಈ ಯೋಜನೆಯಡಿ ಬಿಮಾ ಸಖಿಯರು ಸರ್ಕಾರದಿಂದ ಮೂರು ವರ್ಷ ತರಬೇತಿ ಪಡೆದ ಬಳಿಕ ಭಾರತೀಯ ಜೀವ ವಿಮಾ ನಿಗಮಕ್ಕೆ ಖಾಯಂ ಏಜೆಂಟ್ ಆಗಿ ಕಾರ್ಯನಿರ್ವಹಿಸಬಹುದು.
ಬಿಮಾ ಸಖಿಯರಾಗಲು 18ರಿಂದ 70 ವರ್ಷದ ವರೆಗಿನ ಮಹಿಳೆಯರು ಅರ್ಹರಾಗಿದ್ದು; ಕನಿಷ್ಠ 10ನೇ ಕ್ಲಾಸ್ ಪಾಸಾದವರಿಗೆ ಏಜೆಂಟ್ ಆಗುವ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಪದವಿ ಪಡೆದ ಬಿಮಾ ಸಖಿಗಳು ಎಲ್ಐಸಿಯಲ್ಲಿ ಡೆವಲಪ್ಮೆಂಟ್ ಆಫೀಸರ್’ಗಳಾಗಿ ಕೂಡ ಕಾರ್ಯ ನಿರ್ವಹಿಸಬಹುದು.
ಇದನ್ನೂ ಓದಿ: Loan Information : ಸಾಲ ಪಡೆಯುವ ಮುನ್ನ ಈ ಮಾಹಿತಿ ತಿಳಿದಿರಿ
ಸರ್ಕಾರದ ಗೌರವಧನ ಎಷ್ಟು ಸಿಗಲಿದೆ?
ಮೂರು ವರ್ಷಗಳ ತರಬೇತಿ ಅವಧಿಯಲ್ಲಿ ಕೇಂದ್ರ ಸರ್ಕಾರವು ‘ಬಿಮಾ ಸಖಿ’ ಯೋಜನೆಯಡಿ ತರಬೇತಿ ಪಡೆಯುವ ಮಹಿಳೆಯರಿಗೆ ಸ್ಟೈಪೆಂಡ್ ನೀಡಲಿದೆ. ಮಾಸಿಕ ಭತ್ಯೆ ಈ ಕೆಳಗಿನಂತಿದೆ:
- ಮೊದಲ ವರ್ಷ : 7,000 ರು.,
- ಎರಡನೇ ವರ್ಷ : 6,000 ರು.,
- ಮೂರನೇ ವರ್ಷ : 5,000 ರು.,
1ನೇ ವರ್ಷದಲ್ಲಿ ಹೇಳಿಕೊಡಲಾಗುವ ಪಾಲಿಸಿಗಳಲ್ಲಿ ಶೇಕಡಾ 65ಕ್ಕೂ ಹೆಚ್ಚು ಭಾಗವನ್ನು ಬಿಮಾ ಸಖಿಯರು ಕಲಿತಿದ್ದರೆ 2ನೇ ವರ್ಷದಲ್ಲಿ ಸ್ಟೈಪೆಂಡ್ ಸಿಗುತ್ತದೆ. ಅದೇ ರೀತಿ 2ನೇ ಮತ್ತು 3ನೇ ವರ್ಷದಲ್ಲಿ ಕೂಡ ಈ ನಿಯಮ ಅನ್ವಯವಾಗುತ್ತದೆ.
ಮೂರೂ ವರ್ಷಗಳನ್ನು ತರಬೇತಿ ಪಡೆದು ಸಂಸ್ಥೆ ನಿಗದಿಪಡಿಸಿದಷ್ಟು ಪಾಲಿಸಿಗಳನ್ನು ಮಾರಾಟ ಮಾಡಿದ ಮಹಿಳೆಯರಿಗೆ ಈಗ ಎಲ್ಐಸಿ ಏಜೆಂಟ್’ಗಳಿಗೆ ಲಭ್ಯವಾಗುವ ಕಮೀಷನ್ ಜೊತೆಗೆ ಇತರ ಸೌಲಭ್ಯಗಳು ಕೂಡ ಅನ್ವಯವಾಗುತ್ತವೆ.
ಇದನ್ನೂ ಓದಿ: NHM Recruitment 2025 : ಆರೋಗ್ಯ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಹೇಗೆ?
ಈ ಲೇಖನದ ಕೊನೆಯಲ್ಲಿ ನೀಡಲಾದ licindia ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಲಿಂಕ್ ಕ್ಲಿಕ್ ಮಾಡಿದರೆ LIC’s BIMA SAKHI ವೆಬ್ ಪುಟದಲ್ಲಿ lead application for lic’s bima sakhi scheme ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಲಾದ ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ, ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಬಿಮಾ ಸಖಿ ಅರ್ಜಿ ಲಿಂಕ್ : Apply ಮಾಡಿ
One Comment