JobsNews

AIIMS Recruitment 2025 : ಏಮ್ಸ್’ನಲ್ಲಿ 4,597 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಎಸ್ಸೆಸ್ಸೆಲ್ಸಿಯಿಂದ ಪದವಿ ತನಕ ಎಲ್ಲ ವಿದ್ಯಾರ್ಹತೆಗೂ ಉದ್ಯೋಗ

ರಾಜ್ಯದ ಇಎಸ್‌ಐ ಆಸ್ಪತ್ರೆ (ಕರ್ನಾಟಕದ ಕಾರ್ಮಿಕ ರಾಜ್ಯ ವಿಮಾ ಸಂಸ್ಥೆಯ ಆಸ್ಪತ್ರೆ) ಸೇರಿದಂತೆ ದೇಶಾದ್ಯಂತ 21 ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳು (All India Institute Of Medical Science- AIIMS), ಎರಡು ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ಇತರೆಡೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಎಮ್ಸ್ನ ಪರೀಕ್ಷಾ ವಿಭಾಗವು ‘ಸಾಮಾನ್ಯ ನೇಮಕಾತಿ ಪರೀಕ್ಷೆ’ (Common Recruitment Test – CRE) ನಡೆಸಲಿದೆ.

WhatsApp Group Join Now
Telegram Group Join Now

ಒಟ್ಟು 28 ಸಂಸ್ಥೆಗಳಲ್ಲಿ 4,597 ಹುದ್ದೆಗಳು ಲಭ್ಯವಿದ್ದು; ಇದಕ್ಕಾಗಿ ಆಯ್ಕೆ ಪ್ರಕ್ರಿಯೆ, ಪರೀಕ್ಷೆಯ ವಿವರಗಳನ್ನು ಒಳಗೊಂಡ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಒಟ್ಟು 66 ಬಗೆಯ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ನರ್ಸಿಂಗ್ ಸೇರಿದಂತೆ ಎಲ್ಲಾ ರೀತಿಯ ವಿದ್ಯಾರ್ಹತೆಗೂ ಉದ್ಯೋಗಾವಕಾಶವಿದೆ.

ಇದನ್ನೂ ಓದಿ: LIC BIMA SAKHI Scheme : SSLC ಪಾಸಾದ ಮಹಿಳೆಯರಿಗೆ LIC ಬಿಮಾ ಸಖಿ ಉದ್ಯೋಗ

ಎಸ್‌ಎಸ್‌ಎಸ್‌ಸಿ, ಪಿಯುಸಿ ವಿದ್ಯಾರ್ಹತೆ ಹುದ್ದೆಗಳು

ನರ್ಸಿಂಗ್ ಆಫೀಸರ್, ಅಸಿಸ್ಟೆಂಟ್ ಡಯಟಿಷಯನ್, ಸಹಾಯಕ ಆಡಳಿತಾಧಿಕಾರಿ, ಅಸಿಸ್ಟೆಂಟ್ ಇಂಜನಿಯರ್, ಆಡಿಯೋಮೀಟರ್ ಟೆಕ್ನಿಷಿಯನ್, ಡ್ರಾಫ್ಟ್ಮನ್, ಜೂನಿಯರ್ ಆಕೌಂಟ್ ಆಫೀಸರ್.. ಸೇರಿದಂತೆ ಅನೇಕ ಹುದ್ದೆಗಳಿಗೆ ನೇಮಕ ನಡೆಯಲಿದೆ. ಎಸ್‌ಎಸ್‌ಎಸ್‌ಸಿ, ಪಿಯುಸಿ ವಿದ್ಯಾರ್ಹತೆ ಹುದ್ದೆಗಳ ವಿವರ ಈ ಕೆಳಗಿನಂತಿದೆ:

  • ಡೇಟಾ ಎಂಟ್ರಿ ಆಪರೇಟರ್
  • ಎಲೆಕ್ಟ್ರಿಷಿಯನ್
  • ಲ್ಯಾಬ್ ಅಟೆಂಡೆ೦ಟ್
  • ಎ೦ಟಿಎಸ್, ಡ್ರೆಸರ್, ಲಿಫ್ಟ್ ಅಪರೇಟರ್
  • ಟೆಲಿಫೋನ್ ಆಪರೇಟರ್
  • ಫೈರ್ ಟೆಕ್ನಿಷಿಯನ್
  • ಡ್ರೈವರ್
  • ಅಸಿಸ್ಟೆಂಟ್ ವಾರ್ಡನ್ (ಹೌಸ್ ಕೀಪರ್)
  • ಟೇಲರ್
  • ಪ್ಲಂಬರ್
  • ವರ್ಕ್’ಶಾಪ್ ಅಸಿಸ್‌ಸ್ಟೆಂಟ್
  • ಮೆಕಾನಿಕಲ್ ಆಪರೇಟರ್ ಕಮ್ ಕಂಪೋಸಿಟರ್

ಇದನ್ನೂ ಓದಿ: Canara Bank Recruitment 2025 : ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ

ಶೈಕ್ಷಣಿಕ ಅರ್ಹತೆ

ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ವಿವಿಧ ಡಿಪ್ಲೊಮಾ, ಪದವಿ, ಬಿಎಸ್‌ಸಿ ನರ್ಸಿಂಗ್, ಸ್ನಾತಕೋತ್ತರ ಪದವಿ ಸೇರಿದಂತೆ ಎಲ್ಲ ಬಗೆಯ ವಿದ್ಯಾರ್ಹತೆ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ ವಿವರ

ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಆಯಾ ಹುದ್ದೆಗಳಿಗೆ ತಕ್ಕಂತೆ ಗರಿಷ್ಠ 25, 30, 35 ವರ್ಷ ಹಾಗೂ ಏಮ್ಸ್ ಉದ್ಯೋಗಿಗಳಾಗಿದ್ದಲ್ಲಿ 40 ವರ್ಷದ ವರೆಗೂ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಅದಕ್ಕೆ ಅನುಗುಣವಾಗಿ ವಯೋಮಿತಿ ಸಡಿಲಿಕೆಯೂ ಅನ್ವಯವಾಗಲಿದೆ.

ಇದನ್ನೂ ಓದಿ: NHM Recruitment 2025 : ಆರೋಗ್ಯ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ

ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 3,000 ರೂ. ಎಸ್‌ಸಿ/ಎಸ್‌ಟಿ, ಇಡಬ್ಲುಎಸ್ ಅಭ್ಯರ್ಥಿಗಳಿಗೆ 2,400 ರೂ. ಪರೀಕ್ಷಾ ಶಿಲಕ್ವನ್ನು ನಿಗದಿಪಡಿಸಲಾಗಿದೆ.

ಪರೀಕ್ಷೆ ಮತ್ತು ಪರೀಕ್ಷಾ ಕೇಂದ್ರಗಳು

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. 10, 12ನೇ ತರಗತಿ ವಿದ್ಯಾರ್ಹತೆಯ ಹುದ್ದೆಗಳಿಗೆ ಇಂಗ್ಲಿಷ್, ಹಿಂದಿಯಲ್ಲಿ, ಪದವಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆಗೆ ಇಂಗ್ಲಿಷ್‌ನಲ್ಲಿ ಪ್ರಶ್ನೆಗಳು ಇರಲಿವೆ.

ಎಲ್ಲ ಪ್ರಮುಖ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಅಭ್ಯರ್ಥಿಗಳ ಸಂಖ್ಯೆ ಆಧರಿಸಿ ಪರೀಕ್ಷಾ ಕೇಂದ್ರ ಬದಲಾಗಬಹುದು. ಪರೀಕ್ಷೆಗೂ ಹತ್ತು ದಿನ ಮುಂಚೆ ಈ ಕುರಿತು ಪ್ರಕಟಣೆ ನೀಡಲಾಗುತ್ತದೆ. ಪರೀಕ್ಷೆಗೆ 7 ದಿನಕ್ಕೆ ಮುನ್ನ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: Loan Information : ಸಾಲ ಪಡೆಯುವ ಮುನ್ನ ಈ ಮಾಹಿತಿ ತಿಳಿದಿರಿ

ನೇಮಕಾತಿ ಪ್ರಕ್ರಿಯೆ

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಕೌಶಲ್ಯ ಪರೀಕ್ಷೆ (ನಿರ್ದಿಷ್ಟ ಹುದ್ದೆಗೆ) ಹಾಗೂ ದಾಖಲೆ ಪರಿಶೀಲನೆ (DV) ನಡೆಸುವ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೇ ದಿನಾಂಕ : 31-01-2025
  • ಅರ್ಜಿಯ ಸ್ಥಿತಿಗತಿ ಘೋಷಣೆ : 11-02-2025
  • ಅರ್ಜಿ ತಿದ್ದುಪಡಿ ಅವಕಾಶ : ಫೆಬ್ರವರಿ 12-14, 2025
  • ಪರೀಕ್ಷಾ ದಿನಾಂಕ : ಫೆಬ್ರವರಿ 26-28, 2025

ಅಧಿಸೂಚನೆ : Download
ಅರ್ಜಿ ಲಿಂಕ್ : Apply Now

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!