AgricultureNews

Free Dairy and Poultry Training : ಹೈನುಗಾರಿಕೆ, ಕೋಳಿ ಸಾಕಾಣಿಕೆ ಉಚಿತ ತರಬೇತಿ

ಊಟ ವಸತಿಯೊಂದಿಗೆ ಸಂಪೂರ್ಣ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹೈನುಗಾರಿಕೆ ಹಾಗೂ ಹುಲಕೋಟಿಯ ಆರ್‌ಸೆಟಿ (ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಕೋಳಿ ಸಾಕಾಣಿಕೆಯ ಉಚಿತ ತರಬೇತಿಗೆ ಗ್ರಾಮೀಣ ಭಾಗದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೈನುಗಾರಿಕೆ ತರಬೇತಿ

WhatsApp Group Join Now
Telegram Group Join Now

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ರುಡ್‌ಸೆಟ್ ಸಂಸ್ಥೆಯು ವಿಜಯಪುರದಲ್ಲಿ 20-01-2025 ರಿಂದ 29-01-2025ರ ವರೆಗೆ ಉಚಿತ ಹೈನುಗಾರಿಕೆ ಉದ್ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಸದರಿ ಹೈನುಗಾರಿಕೆ ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ದಿನಕ್ಕೆ 10 ಗಂಟೆಗಳ ಕಾಲ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ತರಬೇತಿ ಪಡೆದು ತಾವು ತಮ್ಮ ಸ್ವಂತ ಉದ್ಯೋಗ ನಡೆಸಲು ಅನುಕೂಲ. ತರಬೇತಿ ಪಡೆದ ನಂತರ ಶಿಬಿರಾರ್ಥಿಗಳಿಗೆ ಸಂಸ್ಥೆಯ ಮತ್ತು ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಮಾಣಪತ್ರ ನೀಡಲಾಗುವುದು.

ಇದನ್ನೂ ಓದಿ: Borewell permission : ಇನ್ಮುಂದೆ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಸುವಂತಿಲ್ಲ

ತರಬೇತಿ ಸೇರಲು ಅರ್ಹತೆಗಳು

ಅಭ್ಯರ್ಥಿಯು ಗ್ರಾಮೀಣ ಪ್ರದೇಶವರಾಗಿದ್ದು ಬಿಪಿಎಲ್ / ಅಂತ್ಯೋದಯ / ಪಿಹೆಚ್‌ಹೆಚ್ ರೇಷನ್ ಕಾರ್ಡ ಅಥವಾ ನರೇಗಾ ಜಾಬ್ ಕಾರ್ಡ ಹೊಂದಿರಬೇಕು.

ತರಬೇತಿ ಸೇರುವ ಅಭ್ಯರ್ಥಿಗಳು 19 ರಿಂದ 45 ವಯೋಮಿತಿ ಒಳಗಿರಬೇಕು. ತರಬೇತಿ ಸೇರುವವರು ಕೆಳಗೆ ನೀಡಿರುವ ದೂರವಾಣಿಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ನೋಂದಣಿಗೆ ಸಂಪರ್ಕಿಸಿ : 9739511914, 9731065632, 7483987824, 9480078829, 9845490323

ಇದನ್ನೂ ಓದಿ: PM-Kisan FID : ಪಿಎಂ ಕಿಸಾನ್ ಯೋಜನೆ ಕೇಂದ್ರ ಕೃಷಿ ಇಲಾಖೆ ಹೊಸ ನಿಯಮ

ಕೋಳಿ ಸಾಕಾಣಿಕೆ ತರಬೇತಿ

ಗದಗ ಹುಲಕೋಟಿಯ ಆರ್‌ಸೆಟಿ (ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹುಲಕೋಟಿ ಗದಗ) ಸಂಸ್ಥೆಯಲ್ಲಿ ಉಚಿತ ಊಟ-ವಸತಿಯೊದಿಗೆ ಕೋಳಿ ಸಾಕಾಣಿಕೆ ತರಬೇತಿ ಜನವರಿ 20ರಿಂದ ಆರಂಭವಾಗಲಿದೆ.

ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು, ಸ್ವ ಸಹಾಯ ಗುಂಪಿನವರು ಮತ್ತು ಸಾಮಾನ್ಯ ಯಾವುದೇ 19 ರಿಂದ 44ರ ವಯಸ್ಸಿನೊಳಗಿನ ಗ್ರಾಮೀಣ ಭಾಗದ ಜನ ಅರ್ಜಿ ಸಲ್ಲಿಸಬಹುದು.

ತರಬೇತಿ ಪಡೆದವರಿಗೆ ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ ಕೊಡಲಾಗುವುದು, ಬ್ಯಾಂಕ್ ಹಣಕಾಸಿನ ನೆರವಿಗೆ ಕ್ರಮವಹಿಸುವುದು, ತರಬೇತಿ ಪಡೆಯಲು ಇಚ್ಚಿಸುವವರು ಮೊದಲು ಅರ್ಜಿ ಸಲ್ಲಿಸಬೇಕು ಮತ್ತು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದವರಾಗಿರಬೇಕು.

ಇದನ್ನೂ ಓದಿ: PKCC Loan : ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿ ಲೋನ್

ಬಿಪಿಎಲ್ ರೇಶನ್ ಕಾರ್ಡ್, ಅಂತ್ಯೋದಯ, ಎಎವೈ, ಪಿಎಚ್‌ಎಚ್, ಆದ್ಯತಾ ಕುಟುಂಬ ರೇಶನ್ ಕಾರ್ಡ್ ಅಥವಾ ನರೇಗಾ ಜಾಬ್ ಕಾರ್ಡ್ ಇವುಗಳಲ್ಲಿ ಯಾವುದಾದರು ಒಂದನ್ನು ಹೊಂದಿರಬೇಕು.

ಎಸ್‌ಬಿಐ ಆರ್‌ಸೆಟಿ ಹುಲಕೋಟಿ ಗದಗ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ತುಂಬಿ ನಿರ್ದೇಶಕರು ಆರ್‌ಸೆಟಿ ಸಂಸ್ಥೆ ಹುಲಕೋಟಿ ಗದಗ, ಕೃಷಿ ವಿಜ್ಞಾನ ಕೇಂದ್ರ ಆವರಣ, ಹುಲಕೋಟಿ ಗದಗ ಇವರಿಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮೊ : 9480880201

ಇದನ್ನೂ ಓದಿ: Livestock, Poultry and Fisheries Expo 2025 : ಜಾನುವಾರು, ಕೋಳಿ, ಮೀನುಗಾರಿಕೆ ಮೇಳ 2025

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!