Electric Auto Subsidy Scheme : ಆಟೋ ಖರೀದಿಗೆ 60,000 ರೂ. ಸಹಾಯಧನ
ಕರ್ನಾಟಕ ಸಾರಿಗೆ ಇಲಾಖೆ ಹೊಸ ಯೋಜನೆ
ವಾಯು ಮಾಲಿನ್ಯ ತಡೆಗಟ್ಟುವುದರ ಜೊತೆಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಮೈಲೇಜ್ ನೀಡುವಂತಹ ವಿದ್ಯುತ್ ಚಾಲಿತ (Electric Vehicles) ವಾಹನಗಳ ಖರೀದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಎಲೆಕ್ಟ್ರಿಕ್ ಬೈಕ್, ಕಾರು, ಆಟೋ, ಬಸ್ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು; ಇದಕ್ಕೆ ಸಹಾಯಧನ ಕೂಡ ನೀಡಲಾಗುತ್ತಿದೆ.
ಇದೀಗ ಪರಿಣಾಮಕಾರಿಯಾಗಿ ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸಾರಿಗೆ ಇಲಾಖೆಯು ಇವಿ ಆಟೋ ರಿಕ್ಷಾ (EV Auto Rickshaw) ಖರೀದಿಗೆ ಬರೋಬ್ಬರಿ 60,000 ರೂ. ಪ್ರೋತ್ಸಾಹಧನ ನೀಡುವ ಹೊಸ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ.
ಇದನ್ನೂ ಓದಿ: Bagar Hukum land : ಬಗರ್ ಹುಕುಂ ನಿಯಮ ಸಡಿಲಿಕೆ
ಯಾವೆಲ್ಲ ಆಟೊಗಳಿಗೆ ಪ್ರೋತ್ಸಾಹಧನ?
ಹಳೆಯ ಆಟೋಗಳನ್ನು ಗುಜರಿಗೆ ಹಾಕಿ ಹೊಸ ವಿದ್ಯುತ್ ಚಾಲಿತ (ಇವಿ) ಆಟೊ ಖರೀದಿಸುವವರಿಗೆ ಹಾಗೂ ಆಟೊಗಳ ಎಂಜಿನ್‌ಗಳನ್ನು ಇವಿಗೆ ಬದಲಾಯಿಸುವವರಿಗೆ 60,000 ರೂ. ಪ್ರೋತ್ಸಾಹಧನ ಸಿಗಲಿದೆ.
ವಾಯುಮಾಲಿನ್ಯ ನಿಯಂತ್ರಿಸುವ ಕ್ರಿಯಾ ಯೋಜನೆ ತಯಾರಿಸಲು ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ. ಆಟೊ ಚಾಲಕ ಮಾಲೀಕರ ಅಭಿಪ್ರಾಯದೊಂದಿಗೆ, ಇವಿ ಆಟೊ ಖರೀದಿಗೆ ಪ್ರೋತ್ಸಾಹಧನ ನೀಡುವ ಪ್ರಸ್ತಾವವನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಇದನ್ನೂ ಓದಿ: Borewell permission : ಇನ್ಮುಂದೆ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಸುವಂತಿಲ್ಲ
ಎರಡು ಸ್ಟೋಕ್ ಆಟೋಗಳು ಬಂದ್
ಹಳೆಯ ಎರಡು ಸ್ಟ್ರೋಕ್ ಆಟೊ ರಿಕ್ಷಾಗಳು ಉಗುಳುವ ಹೊಗೆಯೊಂದಿಗೆ ಆಯಿಲ್ ಮಿಶ್ರಣವಾಗುವುದರಿಂದ ಅತ್ಯಧಿಕ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗುತ್ತಿದೆ. ಎರಡು ಸ್ಟ್ರೋಕ್ ಆಟೊಗಳ ನೋಂದಣಿ ನಿಂತು ಎರಡು ದಶಕ ಕಳೆದಿದ್ದರೂ ಈಗಲೂ ಇಂತಹ ಆಟೊಗಳನ್ನು ಓಡಿಸಲಾಗುತ್ತಿದೆ.
ರಾಜಧಾನಿ ಬೆಂಗಳೂರಿನ ಅಂಕಿ-ಅ೦ಶಗಳನ್ನೇ ನೋಡುವುದಾದರೆ, ಇಲ್ಲಿರುವ ಒಟ್ಟು 2.55 ಲಕ್ಷ ಆಟೋಗಳ ಪೈಕಿ ಬರೋಬ್ಬರಿ 10,000 ಹೆಚ್ಚು ಎರಡು ಸ್ಟೊçÃಕ್ ಆಟೋಗಳು ಓಡಾಡುತ್ತಿವೆ. ಇವುಗಳಿಂದಾಗು ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಸಹಾಯಧನ ಯೋಜನೆಯನ್ನು ರೂಪಿಸಲಾಗುತ್ತಿದೆ.
ಇದನ್ನೂ ಓದಿ: LIC BIMA SAKHI Scheme : SSLC ಪಾಸಾದ ಮಹಿಳೆಯರಿಗೆ LIC ಬಿಮಾ ಸಖಿ ಉದ್ಯೋಗ
ಕಡಿಮೆ ವೆಚ್ಚದಲ್ಲಿ ಹೆಚ್ಚು ಮೈಲೇಜ್
ಇವಿ ಆಟೋ ಕಡಿಮೆ ವೆಚ್ಚದಲ್ಲಿ ಹೆಚ್ಚು ಮೈಲೇಜ್ ನೀಡುವುದರಿಂದ ಇದು ಆಟೋ ಮಾಲೀಕರಿಗೆ ಸಹಕಾರಿಯೇ ಆಗಿದೆ. ಪೆಟ್ರೊಲ್ ಎಂಜಿನ್ ಆಟೊಗಳ ಮೈಲೇಜ್‌ಗೂ ಇವಿ ಆಟೋಗಳ ಮೈಲೇಜ್‌ಗೂ ಶೇ.20ರಷ್ಟು ಉಳಿತಾಯವಿದೆ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.
ಉದಾಹರಣೆಗೆ 200 ರೂ. ಪೆಟ್ರೊಲ್’ನಲ್ಲಿ ಸಿಗುವ ಮೈಲೇಜ್ ಅನ್ನು ಇವಿ ಆಟೋಗಳು ಕೇವಲ 30-40 ರೂ. ವೆಚ್ಚದಲ್ಲಿ ನೀಡುತ್ತವೆ. ಇದರಿಂದ ಆಟೋ ನಂಬಿ ಬದುಕುವವರಿಗೆ ಬಹಳಷ್ಟು ಉಳಿತಾಯವಾಗಲಿದೆ.
ದುಬಾರಿ ವೆಚ್ಚಕ್ಕೆ ಸಹಾಯಧನದ ನೆರವು
ಗಮನಾರ್ಹವೆಂದರೆ ಪೆಟ್ರೊಲ್ ಎಂಜಿನ್ ಆಟೊಗಳಿಗಿಂತ ಇವಿ ಆಟೊಗಳ ಬೆಲೆ ಸುಮಾರು 1 ಲಕ್ಷ ಹೆಚ್ಚಿಗೆ ಇರುತ್ತದೆ. ಇವಿ ಆಟೊಗಳಿಗೆ 3.50 ಲಕ್ಷದಿಂದ 3.80 ಲಕ್ಷದ ವರೆಗೆ ಬೆಲೆ ಇದ್ದು; ಇದು ದುಬಾರಿ ಎಂಬ ಭಾವನೆ ಬಹಳಷ್ಟು ಆಟೋ ಚಾಲಕರು, ಮಾಲಿಕರಲ್ಲಿದೆ.
ಇವಿ ಆಟೋ ಖರೀದಿಗೆ ತಗುಲುವ ಹೆಚ್ಚುವರಿ 1 ಲಕ್ಷ ರೂ.ಗೆ 60,000 ರೂ. ಸರ್ಕಾರದ ಪ್ರೋತ್ಸಾಹಧನದ ಮೂಲಕ ಸಿಗುತ್ತದೆ. ಇವಿ ಆಟೋ ನಿರ್ವಹಣೆ ವೆಚ್ಚ ಬಹಳ ಕಡಿಮೆ ಇರುವುದರಿಂದ ಉಳಿಕೆ 40,000 ರೂ. ಕೆಲವೇ ತಿಂಗಳಲ್ಲಿ ಸರಿದೂಗಿ, ಆನಂತರ ಹೆಚ್ಚಿನ ಲಾಭವಾಗುತ್ತದೆ ಎನ್ನುವುದು ಸಾರಿಗೆ ಅಧಿಕಾರಿಗಳ ಅಭಿಪ್ರಾಯ.
ಸದ್ಯ ಬೆಂಗಳೂರು ನಗರವನ್ನು ಕೇಂದ್ರೀಕರಿಸಿಕೊ೦ಡು ಸದರಿ ಸಹಾಯಧನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇಷ್ಟರಲ್ಲಿಯೇ ಸಾರಿಗೆ ಇಲಾಖೆ ಯೋಜನೆಯ ಪ್ರಸ್ತಾವವನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಲಿದೆ.
ಇದನ್ನೂ ಓದಿ: MGNREGA Karnataka : ಸಣ್ಣ ರೈತರಿಗೆ ₹5 ಲಕ್ಷ ನರೇಗಾ ಸಹಾಯಧನ
One Comment