JobsNews

UCO Bank Recruitment 2025 : ಯುಕೋ ಬ್ಯಾಂಕ್ ನೇಮಕಾತಿ

ಪದವೀಧರರಿಂದ ಅರ್ಜಿ ಆಹ್ವಾನ | 250 ಹುದ್ದೆಗಳು

ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ (UCO – ಯುಕೋ) ಕರ್ನಾಟಕ ಸೇರಿದಂತೆ ದೇಶಾದ್ಯಂತ 11 ರಾಜ್ಯಗಳಲ್ಲಿ ಲೋಕಲ್ ಬ್ಯಾಂಕ್ ಆಫೀಸರ್ (Local Bank Officer -LBO) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

WhatsApp Group Join Now
Telegram Group Join Now

ಒಟ್ಟು 250 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇವುಗಳಲ್ಲಿ 35 ಹುದ್ದೆಗಳು ಕನ್ನಡಿಗರಿಗೆ ಮೀಸಲಾಗಿವೆ. ಉಳಿದ ಹುದ್ದೆಗಳಿಗೂ ಆಯಾ ರಾಜ್ಯಗಳ ಭಾಷಾ ನಿಯಮ ಅನ್ವಯವಾಗಲಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: 8th Pay commission formation : 8ನೇ ವೇತನ ಆಯೋಗ ರಚನೆಗೆ ಕೇಂದ್ರ ಸಂಪುಟ ಅಸ್ತು

ವಿದ್ಯಾರ್ಹತೆ ವಿವರ

ಲೋಕಲ್ ಬ್ಯಾಂಕ್ ಆಫೀಸರ್ (ಎಲ್‌ಬಿಒ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವೀಧರರಾಗಿರಬೇಕು. ನೋಂದಣಿಗೆ ಆರಂಭದ ದಿನವಾದ ಜನವರಿ 1ರೊಳಗೆ ಈ ವಿದ್ಯಾರ್ಹತೆಯನ್ನು ಪಡೆದಿದ್ದು, ಆನ್‌ಲೈನ್ ನೋಂದಣಿ ವೇಳೆ ಅಂಕಗಳನ್ನು ದಾಖಲು ಮಾಡಬೇಕಿರುತ್ತದೆ.

ವಯೋಮಿತಿ

2025ರ ಜನವರಿ 1ಕ್ಕೆ ಅನ್ವಯವಾಗುವಂತೆ ಕನಿಷ್ಠ 20 ಹಾಗೂ ಗರಿಷ್ಠ 30 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಮೀಸಲಾತಿಯನ್ವಯ ಕನಿಷ್ಠ-10 ವರ್ಷದ ವರೆಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಇದನ್ನೂ ಓದಿ: Supreme Court Recruitment 2025 : ಸುಪ್ರೀಂ ಕೋರ್ಟ್ 90 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ವೇತನ ಶ್ರೇಣಿ

ಈ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ 48,480 ರಿಂದ 85,920 ರೂ. ವೇತನ ನಿಗದಿಪಡಿಸಲಾಗಿದೆ. ಇದರ ಜೊತೆಗೆ ವಿಶೇಷ ಭತ್ಯೆ, ತುಟ್ಟಿ ಭತ್ಯೆ, ಮನೆ ಬಾಡಿಗೆ, ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ ಇತರ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ.

ಅರ್ಜಿ ಶುಲ್ಕವೆಷ್ಟು?

ಎಸ್‌ಸಿ/ಎಸ್‌ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 175 ರೂ., ಸಾಮಾನ್ಯ/ಒಬಿಸಿ/ ಆರ್ಥಿಕ ಹಿಂದುಳಿದ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಫೆಬ್ರವರಿ 5 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

ಪರೀಕ್ಷಾ ಕೇಂದ್ರಗಳು

ಅಭ್ಯರ್ಥಿಗಳು ಆಯಾ ರಾಜ್ಯದ ಭಾಷೆಯಲ್ಲಿ ಪ್ರಾವೀಣ್ಯತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. 10, 12ನೇ ತರಗತಿಯಲ್ಲಿ ಆಯಾ ರಾಜ್ಯದ ಭಾಷೆಯಲ್ಲಿ ವ್ಯಾಸಂಗ ಮಾಡಿದ್ದರೆ ಪರೀಕ್ಷೆಯಿಂದ ವಿನಾಯ್ತಿ ಇರಲಿದೆ.

ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು ರಾಜಧಾನಿ ಬೆಂಗಳೂರು, ಮಂಗಳೂರು, ಮೈಸೂರು, ಕಲಬುರಗಿ, ಶಿವಮೊಗ್ಗ, ಬೆಳಗಾವಿ, ದಾವಣಗೆರೆ, ಧಾರವಾಡ/ ಹುಬ್ಬಳ್ಳಿಯಲ್ಲಿ ಇರಲಿವೆ.

ಇದನ್ನೂ ಓದಿ: Multiple Bank Accounts : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ ದಂಡ ಬೀಳುತ್ತಾ?

ಆಯ್ಕೆ ಪ್ರಕ್ರಿಯೆ ಹೇಗೆ?

ಆನ್‌ಲೈನ್ ಪರೀಕ್ಷೆ, ಭಾಷಾ ಪ್ರಾವೀಣ್ಯತೆ, ವೈಯಕ್ತಿಕ ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆನ್‌ಲೈನ್ ಪರೀಕ್ಷೆಯನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತದೆ. ಒಟ್ಟು 155 ಪ್ರಶ್ನೆಗಳಿಗೆ 200 ಅಂಕಗಳಿದ್ದು, 180 ನಿಮಿಷಗಳಲ್ಲಿ ಉತ್ತರಿಸಬೇಕಿದೆ. ತಪ್ಪಾದ ಉತ್ತರಕ್ಕೆ 1/4 ಅಂಕ ಕಳೆಯಲಾಗುತ್ತದೆ.

ಅರ್ಜಿ ಸಲ್ಲಿಕೆ ಕೊನೆಯ ದಿನ : 05-02-2025

ಅಧಿಸೂಚನೆ : Download
ಅರ್ಜಿ ಸಲ್ಲಿಕೆ ಲಿಂಕ್ : Apply Now

ಇದನ್ನೂ ಓದಿ: LIC BIMA SAKHI Scheme : SSLC ಪಾಸಾದ ಮಹಿಳೆಯರಿಗೆ LIC ಬಿಮಾ ಸಖಿ ಉದ್ಯೋಗ

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!