FinanceNews

LIC Kanyadan Policy : ಈ ಯೋಜನೆಯಡಿ ಸಿಗಲಿದೆ ಹೆಣ್ಮಕ್ಕಳ ಮದುವೆಗೆ 31 ಲಕ್ಷ ರೂಪಾಯಿ

ಎಲ್‌ಐಸಿ ಯಿಂದ ಹೆಣ್ಣು ಮಕ್ಕಳ ಮದುವೆ ಮತ್ತು ಶಿಕ್ಷಣ ಖರ್ಚುಗಳಿಗಾಗಿ ವಿಶೇಷ ಯೋಜನೆ

ಭಾರತೀಯ ಜೀವವಿಮಾ ನಿಗಮವು (Life Insurance Corporation of India -LIC) ಹೆಣ್ಣು ಮಕ್ಕಳ ಮದುವೆ ಮತ್ತು ಶಿಕ್ಷಣ ಖರ್ಚುಗಳಿಗಾಗಿಯೆ ವಿಶೇಷ ಹೂಡಿಕೆ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ನಿಮ್ಮ ಹೆಣ್ಣು ಮಗಳ ಮದುವೆ ಮತ್ತು ಶಿಕ್ಷಣ ಖರ್ಚಿಗೆ 31 ಲಕ್ಷ ರೂಪಾಯಿ ವರೆಗೆ ಮೊತ್ತವನ್ನು ಪಡೆಯಬಹುದಾಗಿದ್ದು, ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಹೆತ್ತವರ ಸಂಕಷ್ಟ ದೂರ ಮಾಡುವ ‘ಕನ್ಯಾದಾನ’

WhatsApp Group Join Now
Telegram Group Join Now

ಇಂದು ಮದುವೆ ಅತ್ಯಂತ ಪ್ರತಿಷ್ಠೆಯ ಸಂಕೇತವಾಗಿದೆ. ಅಂತೆಯೇ ಅದು ಅತೀ ಹೆಚ್ಚು ‘ಹಣ’ ಬೇಡುವ ಕಾರ್ಯವೂ ಹೌದು. ಅದರಲ್ಲೂ ಹೆಣ್ಮಕ್ಕಳ ಮದುವೆ ಎಂದರೆ ಹಣದ ಹೊಳೆ ಹರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಕಾರಣಕ್ಕೆ ಹೆಣ್ಣು ಮಕ್ಕಳ ಮದುವೆಗಾಗಿ ಸಾಲಶೂಲ ಮಾಡಿ, ಜೀವನ ಪರ್ಯಂತ ಪರದಾಡುವವರ ಸಂಖ್ಯೆ ದೊಡ್ಡದಿದೆ. ಹೆಣ್ಣು ಹೆತ್ತ ಪಾಲಕರು ಜಾಣ್ಮೆಯಿಂದ ಹೂಡಿಕೆ ಮಾಡಿದರೆ ಈ ಸವಾಲಿನ ಕೆಲಸವನ್ನು ಸರಳವಾಗಿ ನಿಭಾಯಿಸಬಹುದು.

ಅಸಲಿಗೆ, ಭವಿಷ್ಯಕ್ಕೆ ಸರಿಯಾದ ಯೋಜನೆಯನ್ನು ಮಾಡದೇ ಇರುವುದರಿಂದಲೇ ಮಗಳ ಮದುವೆ ಮತ್ತು ಶಿಕ್ಷಣದ ಖರ್ಚು ದೊಡ್ಡ ಸವಾಲಾಗಿ ಪರಿಣಮಿಸುವುದುಂಟು. ಇಂತಹ ಸಮಯದಲ್ಲಿ ಹಣಕಾಸಿನ ತೊಂದರೆಗಳಿ೦ದ ಪಾರಾಗಬೇಕೆಂದರೆ, ಉತ್ತಮ ಯೋಜನೆಗಳಲ್ಲಿ ಹೂಡಿಕೆ (Investment) ಮಾಡುಬೇಕು. ಹೆಣ್ಣು ಮಕ್ಕಳ ತಂದೆ ತಾಯಂದಿರಿಗಾಗಿಯೇ ಭಾರತೀಯ ಜೀವ ವಿಮಾ ನಿಗಮವು ‘ಕನ್ಯಾದಾನ’ ಪಾಲಿಸಿ ಹೆಸರಿನಲ್ಲಿ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಈ ಪಾಲಿಸಿ ಕುರಿತು ಸಮಗ್ರ ಮಾಹಿತಿ ಈ ಲೇಖನದಲ್ಲಿದೆ.

ಇದನ್ನೂ ಓದಿ: CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ

ಏನಿದು ಎಲ್‌ಐಸಿ ಕನ್ಯಾದಾನ ಪಾಲಿಸಿ?

ಇದು ಭಾರತೀಯ ಜೀವ ವಿಮಾ ನಿಗಮವು ಹೆಣ್ಣು ಮಕ್ಕಳ ಮದುವೆ ಖರ್ಚಿಗಾಗಿಯೇ ಜಾರಿಗೆ ತಂದ೦ತಹ ವಿಸೇಷ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ನಾವು ಹೂಡಿಕೆ ಮಾಡುವ ಹಣವನ್ನು ನಮ್ಮ ಹೆಣ್ಣು ಮಕ್ಕಳ ಮದುವೆ ಖರ್ಚಿಗಾಗಿ ಮತ್ತು ಶಿಕ್ಷಣದ ಖರ್ಚಿಗಾಗಿ ಬಳಸಿಕೊಳ್ಳಬಹುದಾಗಿದೆ. ಈ ಪಾಲಿಸಿಯಲ್ಲಿ ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಪ್ರಿಮಿಯಂ ಮೊತ್ತವನ್ನು ಪಾವತಿಸಬಹುದು.

ಕನ್ಯಾದಾನ ಸ್ಕೀಮ್ ಆಯ್ಕೆಗಳು ಮತ್ತು ಪ್ರಯೋಜನಗಳು

‘ಎಲ್‌ಐಸಿ ಕನ್ಯಾದಾನ’ ಪಾಲಿಸಿಯು 25 ವರ್ಷಗಳ ಅವಧಿಯದ್ದಾಗಿದ್ದು, ನಿಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಸ್ಕೀಮ್’ಗಳನ್ನು ಸೆಲೆಕ್ಟ್ ಮಾಡಿಕೊಳ್ಳಬಹುದಾಗಿದೆ. ಈ ಸ್ಕೀಮ್’ನ ಅಡಿಯಲ್ಲಿ ಹೂಡಿಕೆ ಮಾಡುವುದರ ಬಹುದೊಡ್ಡ ಪ್ರಯೋಜನವೇನೆಂದರೆ, ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಯಾವುದೇ ರೀತಿಯ ಟ್ಯಾಕ್ಸ್ ಅಪ್ಲೈ ಆಗುವುದಿಲ್ಲ.

ಜೊತೆಗೆ, ಒಂದು ವೇಳೆ ಈ ಪಾಲಿಸಿಯ ಫಲಾನುಭವಿಯು ಯಾವುದೇ ರೀತಿಯ ಅಪಘಾತದಲ್ಲಿ ಮೃತಪಟ್ಟರೆ 10 ಲಕ್ಷ ರೂಪಾಯಿ ವರೆಗಿನ ಪರಿಹಾರ ಕೂಡ ದೊರೆಯಲಿದೆ. ಈ ಪಾಲಿಸಿಯಲ್ಲಿ ಮುಖ್ಯವಾಗಿ ಎರಡು ಆಯ್ಕೆಗಳಿವೆ:

  • ಆಯ್ಕೆ 1: ನೀವು ಪ್ರತಿ ತಿಂಗಳು 4,530 ರೂಪಾಯಿ ಪ್ರೀಮಿಯಂ ಮೊತ್ತವನ್ನು ಪಾವತಿಸಿದರೆ 25 ವರ್ಷಗಳ ನಂತರ ನಿಮಗೆ 31 ಲಕ್ಷ ರೂಪಾಯಿ ಹಣ ದೊರೆಯಲಿದೆ.
  • ಆಯ್ಕೆ 2: ಈ ಆಯ್ಕೆಯಲ್ಲಿ ನೀವು ಪ್ರತಿ ತಿಂಗಳು 3,630 ರೂಪಾಯಿ ಪ್ರೀಮಿಯಂ ಮೊತ್ತವನ್ನು ಪಾವತಿಸಿದರೆ 25 ವರ್ಷಗಳ ನಂತರ ನಿಮಗೆ 27 ಲಕ್ಷ ರೂಪಾಯಿ ಹಣ ದೊರೆಯಲಿದೆ.

ಇದನ್ನೂ ಓದಿ: Online Mobile App Loan : ಆನ್‌ಲೈನ್ ಲೋನ್ ಪಡೆಯುವ ಮುನ್ನ ಈ ವಿಷಯ ತಿಳಿದಿರಿ

ಈ ಯೋಜನೆಗೆ ಪ್ರಮುಖ ಅರ್ಹತೆಗಳು ಮತ್ತು ದಾಖಲಾತಿಗಳು

LIC Kanyadan Policy ಅಡಿಯಲ್ಲಿ ಹೂಡಿಕೆ ಮಾಡಲು ಕೇವಲ ಹೆಣ್ಣು ಮಗುವಿನ ತಂದೆ ಅಥವಾ ತಾಯಿಗೆ ಮಾತ್ರ ಅವಕಾಶವಿದೆ. ಹೆಣ್ಣು ಮಗು ಕನಿಷ್ಠ 1 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ತಂದೆ ಅಥವಾ ತಾಯಿಯ ವಯೋಮಿತಿ 18 ರಿಂದ 50 ವರ್ಷದ ಒಳಗಿರಬೇಕು.

ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬೇಕಾಗುವ ಪ್ರಮುಖ ದಾಖಲಾತಿಗಳೆಂದರೆ, ಪೋಷಕರ ಮತ್ತು ಹೆಣ್ಣು ಮಗುವಿನ ಆಧಾರ್ ಕಾರ್ಡ್ ಪ್ರತಿ, ಆದಾಯ ಮತ್ತು ವಿಳಾಸ ಪ್ರಮಾಣ ಪತ್ರ, ಮಗುವಿನ ಜನ್ಮ ಪ್ರಮಾಣ ಪತ್ರ, ಫೋಟೋ ಮತ್ತು ಇತರೆ ಅಗತ್ಯ ದಾಖಲೆಗಳು. ಹೆಣ್ಣ ಮಗುವಿರುವ ಪಾಲಕರು ಕೂಡಲೇ ನಿಮಗೆ ಗೊತ್ತಿರುವ ಎಲ್‌ಐಸಿ ಏಜಂಟ್ ಭೇಟಿಯಾಗಿ ಪಾಲಿಸಿ ಮಾಡಿಸಬಹುದು.

ಈ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ…

Panchamitra whatsapp chat Service : ವಾಟ್ಸಾಪ್‌ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್‌ಗೆ ‘ಹಾಯ್’ ಅಂತ ಕಳಿಸಿ..

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!