Union Budget 2025 : ಕೇಂದ್ರ ಬಜೆಟ್ನಲ್ಲಿ ರೈತರಿಗೆ ಬಂಪರ್ ಕೊಡುಗೆ
ರೈತ ಸಂಘಟನೆಗಳ ಪ್ರಮುಖ ಬೇಡಿಕೆಗಳ ಪಟ್ಟಿ ಇಲ್ಲಿದೆ...
ಇದೇ ಫೆಬ್ರವರಿ 1ರಂದು ಮಂಡನೆಯಾಗಲಿರುವ 2025-26ನೇ ಸಾಲಿನ ಕೇಂದ್ರ ಬಜೆಟ್ (Union Budget 2025) ಮೇಲೆ ಕೃಷಿ ವಲಯದಲ್ಲಿ ಹಲವು ನಿರೀಕ್ಷೆಗಳು ಗರಿಗೆದರಿವೆ. ಈ ಹಿನ್ನಲೆಯಲ್ಲಿ ಭಾರತ ಕೃಷಿಕ ಸಮಾಜ ಸೇರಿದಂತೆ ವಿವಿಧ ರೈತ ಸಂಘಟನೆಗಳು ಬಜೆಟ್ ಮಂಡನೆಗೂ ಮುನ್ನ ಹಲವು ಬೇಡಿಕೆಗಳನ್ನು ಕೇಂದ್ರ ಸರಕಾರದ ಮುಂದಿರಿಸಿವೆ.
ಕೃಷಿ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುವುದು, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು, ರೈತರ ಆದಾಯ ಹೆಚ್ಚಿಸುವುದು, ಕಿಸಾನ್ ಸಮ್ಮಾನ್ ನಿಧಿಯ ಮೊತ್ತವನ್ನು ದುಪ್ಪಟ್ಟು ಮಾಡುವುದೂ ಸೇರಿ ಹಲವು ಘೋಷಣೆಗಳನ್ನು ಕೇಂದ್ರ ಸರಕಾರ ಮಾಡಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.
ಇದನ್ನೂ ಓದಿ: Gold price Rise : ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ
ಪಿಎಂ-ಕಿಸಾನ್ ಮೊತ್ತ 12,000ಕ್ಕೆ ಏರಿಕೆ
ಪಿ ಎಂ ಕಿಸಾನ್ ಯೋಜನೆ (PM-Kisan) ಅಡಿಯಲ್ಲಿ ಫಲಾನುಭವಿ ರೈತರಿಗೆ 2,000 ರೂ.ನಂತೆ ಒಟ್ಟ ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಮೊತ್ತವನ್ನು 12,000 ಏರಿಕೆ ಮಾಡಬೇಕು.
ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡುವ ಬೆಂಬಲ ಬೆಲೆ (Minimum Support Price -MSP) ರಚನೆಯಲ್ಲಿ ಹಲವು ಬದಲಾವಣೆ ಮಾಡಬೇಕು. ಈಗಿರುವ ಬೆಳೆಗಳ ಹೊರತಾಗಿ ಇನ್ನೂ ಹೆಚ್ಚಿನ ಬೆಳೆಗಳಿಗೆ ಎಂಎಸ್ಪಿ ನೀಡಬೇಕು.
ಇದನ್ನೂ ಓದಿ: RRB Recruitment 2025 : ಹುಬ್ಬಳ್ಳಿ ರೈಲ್ವೇ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೃಷಿ ಸಾಮಗ್ರಿ, ಸಲಕರಣೆ ಮೇಲಿನ ಜಿಎಸ್ಟಿ ಇಳಿಕೆ
ಕೀಟನಾಶಕಗಳ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಬೇಕು. ಅದೇ ರೀತಿ ಅಕ್ರಮವಾಗಿ ಸಾಗಣೆ ಮಾಡಿದ ಹಾಗೂ ನಕಲಿ ರಸಗೊಬ್ಬರಗಳ ತಡೆಗೆ ಕ್ರಮ ತೆಗೆದುಕೊಳ್ಳಬೇಕು.
ಕೃಷಿ ಯಂತ್ರಗಳ ಮಾರಾಟ ಮಾಡುವ ಕಂಪನಿಗಳ ವೆಬ್ಸೈಟ್ನಲ್ಲಿ ಅವುಗಳ ಬೆಲೆಯನ್ನು ಪ್ರಕಟಿಸಬೇಕು. ಬಿತ್ತನೆ ಬೀಜ, ಕೃಷಿ ಯಂತ್ರ, ರಸಗೊಬ್ಬರಗಳಿಗೆ ಜಿಎಸ್ಟಿ ವಿನಾಯಿತಿ ನೀಡಬೇಕು. ಕೃಷಿ ಉತ್ಪಾದನೆ ಹೆಚ್ಚಿಸಲು ವಾರ್ಷಿಕ 1,000 ಕೋಟಿ ರೂ. ಮೀಸಲಿರಿಸಬೇಕು.
ಇದನ್ನೂ ಓದಿ: CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ
ಫಸಲ್ ಬಿಮಾ ಯೋಜನೆಯ ವಿಮೆ ಪ್ರೀಮಿಯಂ ಶೂನ್ಯಕ್ಕೆ
ಇನ್ನು ರೈತರ ಬೆಳೆಗೆ ಬರ-ನೆರೆ, ಪ್ರಕೃತಿ ವಿಕೋಪಗಳಿಂದ ಬಿತ್ತನೆಯಿಂದ ಕಟಾವಿನ ವರೆಗೂ ರಕ್ಷಣೆ ಒದಗಿಸುವ ಸದುದ್ದೇಶದಿಂದ ಜಾರಿಗೊಳಿಸಿರುವ ಫಸಲ್ ಬಿಮಾ ಯೋಜನೆಯ (Pradhan Mantri Fasal Bima Yojana) ವಿಮೆ ಪ್ರೀಮಿಯಂ ಅನ್ನು ಶೂನ್ಯಕ್ಕೆ ಇಳಿಸಬೇಕು. ಹವಾಮಾನ ಆಧಾರಿತ ವಿಮೆಯಲ್ಲಿ ಸುಧಾರಣೆಯಾಗಬೇಕು.
ರೈತರಿಗೆ ಕೃಷಿ, ತೋಟಗಾರಿಕೆ ಹಾಗೂ ಪಶುಪಾಲನೆಗೆ ನೀಡುವ ಸಾಲ ಯೋಜನೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಬೇಕು. ಕೃಷಿ ಚಟುವಟಿಕೆಗಳಿಗೆ ಸುದೀರ್ಘ ಅವಧಿಗೆ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಕೃಷಿ ಸಾಲ (Agricultural loan) ನೀಡಬೇಕು.
One Comment