Nati koli Poultry Farming – ನಾಟಿ ಕೋಳಿ ಸಾಕಣೆಯಲ್ಲಿ ಅಧಿಕ ಲಾಭ ಗಳಿಕೆಯ ಸೂತ್ರಗಳು
ಇಲ್ಲಿವೆ ಯಶಸ್ವೀ ಕ್ರಮಗಳು...
ನಾಟಿ ಕೋಳಿಗಳನ್ನು ಸಾಕಣೆ ಮಾಡಿ ಒಳ್ಳೆಯ ಲಾಭ ಪಡೆಯುವುದು ಹೇಗೆ? ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಗಳಿಸುವುದು ಹೇಗೆ? ಯಶಸ್ವೀ ನಾಟಿ ಕೋಳಿ ಸಾಕಣೆಯ ಗುಟ್ಟುಗಳು ಇಲ್ಲಿವೆ…
ಇತ್ತೀಚೆಗೆ ಕೋಳಿ ಸಾಕಾಣಿಕೆ ಬೃಹತ್ ಉದ್ಯಮವಾಗಿ ಬೆಳೆದಿದೆ. ದೇಶದಲ್ಲಿ ಲಕ್ಷಾಂತರ ಜನ ಕೋಳಿ ಸಾಕಾಣಿಕೆಯನ್ನು ಅವಲಂಬಿಸಿದ್ದಾರೆ. ಭಾರತವು ಮೊಟ್ಟೆ ಉತ್ಪಾದನೆಯಲ್ಲಿ 4ನೇ ಸ್ಥಾನ ಮತ್ತು ಕೋಳಿ ಮಾಂಸ ಉತ್ಪಾದನೆಯಲ್ಲಿ 5ನೇ ಸ್ಥಾನದಲ್ಲಿದೆ. ಈ ಪೈಕಿ ಕರ್ನಾಟಕದ ಕೋಳಿ ಉತ್ಪಾದನಾ ಉದ್ಯಮವು ದೇಶದಲ್ಲಿಯೇ 5ನೇ ಸ್ಥಾನ ಹೊಂದಿದೆ.
ಇದನ್ನೂ ಓದಿ: Union Budget 2025 : ಕೇಂದ್ರ ಬಜೆಟ್ನಲ್ಲಿ ರೈತರಿಗೆ ಬಂಪರ್ ಕೊಡುಗೆ
ಕೋಳಿಗಳು ಕಡಿಮೆ ಆಹಾರ ಹಾಗೂ ವೇಸ್ಟ್ ಪದಾರ್ಥಗಳನ್ನು ತಿಂದು ಉತ್ತಮ ಪ್ರಾಣಿಜನ್ಯ ಪ್ರೋಟಿನ್ ಒದಗಿಸುತ್ತವೆ. ಇವು ತಿನ್ನುವ ಆಹಾರ ಕಡಿಮೆ, ಬೇಕಾದ ಸ್ಥಳಾವಕಾಶವೂ ಕಡಿಮೆಯೇ. ಹೀಗಾಗಿ ಕೋಳಿ ಸಾಕಾಣಿಕೆ ಸುಲಭ, ಶ್ರಮ ಕಡಿಮೆ ಮತ್ತು ಲಾಭ ಹೆಚ್ಚು. ಕೇವಲ ಬೆರಳೆಣಿಕೆ ದಿನಗಳಲ್ಲಿ ಉತ್ತಮ ಆದಾಯ ಪಡೆಯಬಹುದು.
ರೈತರು ಸಣ್ಣ ಪ್ರಮಾಣದಲ್ಲಿ ನಾಟಿ ಕೋಳಿ ಅಥವಾ ಸುಧಾರಿತ ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡಿ ಒಳ್ಳೆಯ ಲಾಭ ಪಡೆಯಬಹುದು. ಆದರೆ ಕೋಳಿ ಸಾಕಾಣಿಕೆಯನ್ನು ಅತ್ಯಂತ ಶಿಸ್ತುಬದ್ಧವಾಗಿ, ವೈಜ್ಞಾನಿಕವಾಗಿ ಮಾಡಿದರೆ ಮಾತ್ರ ಲಾಭ ಸಾಧ್ಯ. ಉತ್ತಮ ತಳಿಯ ಮರಿಗಳ ಆಯ್ಕೆ, ಅವುಗಳ ಆಹಾರ, ಸಾಕಾಣಿಕೆ ಕ್ರಮ, ರೋಗ ನಿರ್ವಹಣೆ, ಮೊಟ್ಟೆ ಮತ್ತು ಮಾಂಸ ಮಾರಾಟ ವ್ಯವಸ್ಥೆಯ ಬಗ್ಗೆ ಒಂದು ವ್ಯವಸ್ಥಿತವಾದ ರೂಪರೇಷೆ ಬೇಕು.
ಕೋಳಿ ಶೆಡ್ ಹೇಗಿರಬೇಕು?
ನಾಟಿ ಕೋಳಿಯನ್ನು ಸಾಕಾಣಿಕೆ ಮಾಡುವ ಮೊದಲು ಒಳ್ಳೆಯ ಶೆಡ್ ನಿರ್ಮಿಸಿಕೊಳ್ಳಬೇಕು. 10ರಿಂದ 12 ಅಡಿ ಎತ್ತರ, 25ರಿಂದ 28 ಅಡಿ ಅಗಲದ ಶೆಡ್ ಉತ್ತಮ. ಈ ವಿನ್ಯಾಸದಲ್ಲಿದ್ದರೆ ಗಾಳಿ-ಬೆಳಕು ಸಮೃದ್ಧವಾಗಿರುತ್ತದೆ. ಸುತ್ತಲೂ ಕಬ್ಬಿಣದ ಮೆಸ್ ಹಾಕಿ ಪ್ರಾಣಿಗಳು ಒಳಬಾರದಂತೆ ಭದ್ರವಾಗಿ ಮುಚ್ಚಿರಬೇಕು. ಕೋಳಿ ಮರಿಗಳು ಶೆಡ್ಗೆ ಬಂದ ಕೂಡಲೇ ಆ ಮರಿಗಳಿಗೆ ಮೊದಲು ಬೆಲ್ಲದ ನೀರನ್ನು ಕೊಡಬೇಕು.
ಏಕೆಂದರೆ ಮರಿಗಳು ಮೊಟ್ಟೆಯಿಂದ ಹೊರ ಬಂದಾಗ ಯಾವುದೇ ರೀತಿಯ ಆಹಾರ ಮತ್ತು ನೀರನ್ನು ಕೊಡುವುದಿಲ್ಲ. ಹೀಗಾಗಿ ಶೆಡ್ಡಿಗೆ ಬಂದಾಗ ತುಂಬಾ ಆಯಾಸಗೊಂಡಿರುತ್ತವೆ. ಆ ದಣಿವನ್ನು ನಿವಾರಿಸಲು ಅವಕ್ಕೆ ಬೆಲ್ಲದ ನೀರು ಕೊಟ್ಟರೆ, ಪೋಷಕಾಂಶವುಳ್ಳ ಸಿಹಿಯಾದ ಬೆಲ್ಲದ ನೀರನ್ನು ಕೋಳಿಗಳು ಜಾಸ್ತಿ ಕುಡಿಯುತ್ತವೆ. ಆಗ ಅವುಗಳ ಆಯಾಸ ನಿವಾರಣೆಯಾಗುತ್ತದೆ.
ಇದನ್ನೂ ಓದಿ: RRB Recruitment 2025 : ಹುಬ್ಬಳ್ಳಿ ರೈಲ್ವೇ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೋಳಿ ಮರಿಗೆ ಒಂದರಿ೦ದ ಎಂಟನೇ ದಿನದ ವರೆಗೂ ಬೆಚ್ಚನೆಯ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರತಿದಿನ ರಾತ್ರಿ ಕಬ್ಬಿಣದ ಪೆಟ್ಟಿಗೆಯನ್ನು ಇಟ್ಟು ಅದಕ್ಕೆ ಇದ್ದಿಲು ಮತ್ತು ಕಟ್ಟಿಗೆಯನ್ನು ಹಾಕಿ ಉತ್ತಮ ತಾಪಮಾನ ಇರುವಂತೆ ಕಾಯ್ದುಕೊಳ್ಳಬೇಕು. ಇದರಿಂದ ಕೋಳಿಗಳು ಸಾವನ್ನಪ್ಪುವುದು ಕಮ್ಮಿಯಾಗುತ್ತದೆ. ನಾಲ್ಕು ಅಥವಾ ಐದು ದಿನಕ್ಕೆ ಎಫ್ಒನ್ ಎಂಬ ವ್ಯಾಕ್ಸಿನ್ ಅನ್ನು ಕೋಳಿ ಮರಿಗಳ ಒಂದು ಕಣ್ಣಿಗೆ ಬಿಡಬೇಕು. ಇದರಿಂದ ಕೋಳಿಗಳಿಗೆ ಕೊಕ್ಕರೆ ಜ್ವರ ಬರುವುದಿಲ್ಲ.
ಅದೇ ರೀತಿ 14ನೇ ದಿನ ಐಬಿಡಿ ಎಂಬ ವ್ಯಾಕ್ಸಿನ್ ಕೊಡಬೇಕು. ಹಾಲು ಮತ್ತು ತಣ್ಣನೆಯ ನೀರಿಗೆ ಈ ಲಸಿಕೆ ಹಾಕಿ ಕೋಳಿಗಳಿಗೆ ಕುಡಿಸಬೇಕು. ಇದನ್ನು ಕುಡಿಸುವುದರಿಂದ ಸಾಂಕ್ರಾಮಿಕ ಬರ್ಸಲ್ ಕಾಯಿಲೆ ಬರುವುದಿಲ್ಲ. ಈ ಕಾಯಿಲೆ ಬಂದರೆ ಕೋಳಿಗಳು ಆಹಾರ ಸೇವನೆ ಮಾಡದೆ ಒಂದೇ ಕಡೆ ಕುಳಿತುಕೊಳ್ಳುತ್ತವೆ.
ಬಿಳಿಯ ಮತ್ತು ತೆಳುವಾದ ಹಿಕ್ಕೆಯನ್ನು ಹಾಕುತ್ತವೆ. ಇದರಿಂದ ಕೋಳಿಗಳ ಬೆಳವಣಿಗೆ ಕುಂಠಿತವಾಗುತ್ತದೆ. 24ನೇ ದಿನ ಕೋಳಿಗೆ ಲಸೋಟಾ ಲಸಿಕೆಯನ್ನು ಯಥಾಪ್ರಕಾರ ತಂಪಾದ ಹಾಲಿಗೆ ಮತ್ತು ತಂಪಾದ ನೀರಿಗೆ ಮಿಶ್ರಣ ಮಾಡಿ ಹಾಕಬೇಕು.
ಇದನ್ನೂ ಓದಿ: ಬ್ಯಾಂಕ್ ಮತ್ತು ಫೈನಾನ್ಸ್’ಗಳಿಂದ ಪಡೆದ ಸಾಲ ಕಟ್ಟದಿದ್ದರೆ ಏನಾಗುತ್ತದೆ?
ಆಹಾರ ಕ್ರಮ ಹೀಗಿರಲಿ…
ಇನ್ನು ಆಹಾರ ಕ್ರಮದ ಬಗ್ಗೆ ನೋಡುವುದಾದರೆ, ಪ್ರತಿದಿನ ಆರರಿಂದ ಎಂಟು ಗಂಟೆಯ ಒಳಗೆ ಕೊಳಿಗಳಿಗೆ ಆಹಾರ ಕೊಡಬೇಕು. ನಂತರ ಶೆಡ್ಡಿನಿಂದ ಹೊರಗಡೆ ಓಡಾಡಲು ಜಾಗ ಮಾಡಿರಬೇಕು. ಆ ಜಾಗದಲ್ಲಿ ರೋಡ್ಸ್ ಹುಲ್ಲು ಬೆಳೆದರೆ ಕೋಳಿಗಳು ಅದನ್ನು ಚೆನ್ನಾಗಿ ತಿನ್ನುತ್ತವೆ. ಇದರಿಂದ ಬಹಳಷ್ಟು ಖರ್ಚು ಕಮ್ಮಿಯಾಗುತ್ತದೆ. ರೋಡ್ಸ್ ಹುಲ್ಲು ತುಂಬಾ ಮೃದುವಾಗಿದ್ದು ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಇದು ರುಚಿಯಾಗಿರುವುದರಿಂದ ಕೋಳಿಗಳಿಗೆ ಅಚ್ಚುಮೆಚ್ಚು.
ಜೊತೆಗೆ ಅಕ್ಕಿ ನುಚ್ಚು, ಅಕ್ಕಿ ತವುಡು ಹಾಗೂ ಜೋಳ ಇತರೆ ಧಾನ್ಯಗಳನ್ನು ಹಾಕಬಹುದು. ಪ್ರತಿದಿನ ತಲಾ ಒಂದು ಕೋಳಿಗೆ ನೂರು ಗ್ರಾಂ ಆಹಾರ ಬೇಕು. ಈ ಆಧಾರದ ಮೇಲೆ ಬೆಳಿಗ್ಗೆ 50 ಗ್ರಾಂ, ಸಂಜೆ 50 ಗ್ರಾಮ್ನಂತೆ ಆಹಾರ ನೀಡಬೇಕು.
ಚಿಕ್ಕ ಚಿಕ್ಕ ತೊಟ್ಟಿಯನ್ನು ಮಾಡಿಕೊಂಡು ಅದಕ್ಕೆ ಪ್ಲಾಸ್ಟಿಕ್ ಟಾರ್ಪಲ್ ಹಾಸಿ ನೀರು ಬಿಟ್ಟು ಸ್ವಲ್ಪ ಹಸುವಿನ ಸಗಣಿಯನ್ನು ಕಲಕಿ ಅಜೋಲಾ ಹಾಕಬೇಕು. ಪಾಚಿ ಜಾತಿಯ ಈ ಸಸ್ಯವು ಪ್ರತಿದಿನ ಬೆಳೆಯುತ್ತಾ ಇರುತ್ತದೆ. ತೊಟ್ಟಿಯಲ್ಲಿ ಅಜೋಲಾ ತುಂಬಿದಾಗ ಅದರಲ್ಲಿ ಮುಕ್ಕಾಲು ಭಾಗ ತೆಗೆದು ಕೋಳಿಗಳಿಗೆ ಆಹಾರವಾಗಿ ನೀಡಬೇಕು. ಇದರಿಂದ ಕೋಳಿಗಳ ಮಾಂಸ ಮತ್ತು ಮೂಳೆ ಬೆಳವಣಿಗೆ ಚನ್ನಾಗಿ ಆಗುತ್ತದೆ ಹಾಗೂ ತೂಕವೂ ಹೆಚ್ಚುತ್ತದೆ.
ಇದನ್ನೂ ಓದಿ: CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ
ಅದೇ ರೀತಿ ಒಂದಷ್ಟು ತೊಟ್ಟಿಗಳನ್ನು ಮಾಡಿಕೊಳ್ಳಬೇಕು. ಪ್ರತಿದಿನವೂ ಒಂದೊAದು ತೊಟ್ಟಿಯಲ್ಲಿ ಮುಕ್ಕಾಲು ಭಾಗ ಅಜೋಲಾ ತೆಗೆದು ಕೋಳಿಗಳಿಗೆ ಆಹಾರವಾಗಿ ನೀಡಬೇಕು. ಇದರಿಂದ ಆಹಾರದ ಖರ್ಚು ಪ್ರತಿದಿನ ಕಡಿಮೆಯಾಗುತ್ತಾ ಹೋಗುತ್ತದೆ. ನಾಟಿ ಕೋಳಿಯು ನಾಲ್ಕರಿಂದ ಐದು ತಿಂಗಳಿನಲ್ಲಿ ಒಂದೂ ಮುಕ್ಕಾಲರಿಂದ ಎರಡು ಕೆಜಿ ತೂಕ ಹೊಂದುತ್ತದೆ. ಐದೂವರೆ ತಿಂಗಳಿನಿAದ ಮೊಟ್ಟೆ ಇಡಲು ಆರಂಭಿಸುತ್ತದೆ.
ವಿಶೇಷವೆAದರೆ ತಿಂಗಳಿಗೊಮ್ಮೆ ಬೆಲ್ಲದ ನೀರಿಗೆ ಸ್ವಲ್ಪ ನಿಂಬೆರಸವನ್ನು ಸೇರಿಸಿ ಕೊಡುವುದರಿಂದ ನಾಟಿ ಕೋಳಿಗಳು ಆರೋಗ್ಯವಾಗಿರುತ್ತವೆ. ಗಂಡು ಮತ್ತು ಹೆಣ್ಣು ಕೋಳಿಗಳನ್ನು ಬೇರೆ ಬೇರೆ ಮಾಡಬೇಕು. ಹೀಗೆ ಮಾಡುವುದರಿಂದ ಹೆಣ್ಣು ಕೋಳಿಗಳಿಗೆ ಗಂಡು ಕೋಳಿಗಳು ಯಾವ ತೊಂದರೆಯನ್ನೂ ಕೊಡುವುದಿಲ್ಲ. ಮೈ ಕಚ್ಚಿಕೊಂಡು ಗಾಯ ಮಾಡಿಕೊಳ್ಳುವುದು, ಪುಕ್ಕ ಉದುರಿಸಿಕೊಳ್ಳುವಂತಹ ಯಾವ ತೊಂದರೆಯೂ ಆಗುವುದಿಲ್ಲ. ಕೋಳಿಗಳು ಚೆನ್ನಾಗಿ ಬೆಳೆಯುತ್ತವೆ.
ಮೊಟ್ಟೆಗಾಗಿ ಸಾಕಾಣಿಕೆ ಮಾಡುತ್ತಿದ್ದರೆ ಕೋಳಿಗಳು ಮೊಟ್ಟೆ ಇಡಲು ಆರಂಭಿಸಿದಾಗ ಗಂಡು ಕೋಳಿಗಳನ್ನು ಬೇರೆ ಮಾಡಬೇಕು. ಹೀಗೆ ಮಾಡುವುದರಿಂದ ಮೊಟ್ಟೆಗಳಿಗೆ ಮತ್ತು ಕೋಳಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಸಾಮಾನ್ಯವಾಗಿ ಹೆಣ್ಣು ಕೋಳಿಗಳು ಬಯಲಿನಲ್ಲಿ ಮೊಟ್ಟೆ ಇಡಲು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಸ್ವಲ್ಪ ಹುಲ್ಲು ಅಥವಾ ಮರದ ಪೆಟ್ಟಿಗೆಯನ್ನು ಇಟ್ಟರೆ ಅದರ ಒಳಗೆ ಸುಲಭವಾಗಿ ಮೊಟ್ಟೆ ಇಡುತ್ತವೆ.
ಉತ್ತಮವಾದ ಕೋಳಿ ಮರಿಗಳನ್ನು ಪಡೆಯಲು ನಿಮ್ಮ ಹತ್ತಿರದ ಪಶು ಇಲಾಖೆಯನ್ನು ಅಥವಾ ಬೆಂಗಳೂರಿನ ಹೆಬ್ಬಾಳ ಮತ್ತು ಹೆಸರಘಟ್ಟದ ಕೋಳಿ ಸಾಕಾಣಿಕಾ ಕೇಂದ್ರವನ್ನು ಸಂಪರ್ಕಿಸಬಹುದು. ಅಲ್ಲಿ ನಿಮಗೆ ಒಂದು ದಿನದ ಕೋಳಿ ಮರಿಗಳು ಸಿಗುತ್ತವೆ.
| ತಾಂತ್ರಿಕ ಮಾಹಿತಿ: ಸಂಜಯ್ ಕುಮಾರ್ ಡಿ., ನಾಟಿಕೋಳಿ ಸಾಕಾಣಿಕೆ ರೈತ, ಶಿವಮೊಗ್ಗ,