Farmers Milk Price Increase : ರೈತರಿಂದ ಖರೀದಿಸುವ ಹಾಲಿನ ದರ ಎರಡು ರೂಪಾಯಿ ಹೆಚ್ಚಳ
ಫೆಬ್ರವರಿ 1ರಿಂದಲೇ ಹೊಸ ಬೆಲೆ ಅನ್ವಯ...
ಕಳೆದ ವರ್ಷ ಬೇಸಿಗೆ ಹೊತ್ತಿಗೆ ರಾಜ್ಯದ ವಿವಿಧ ಹಾಲು ಒಕ್ಕೂಟಗಳು ಏಕಾಏಕಿ ರೈತರಿಂದ ಖರೀದಿಸುವ ಹಾಲಿನ ಬೆಲೆ (Milk Price) ಕಡಿತ ಮಾಡುವ ಮೂಲಕ ರೈತರ ಬೆನ್ನಿಗೆ ಬರೆ ಎಳೆದಿದ್ದವು. ಮೇವಿನ ಕೊರತೆ, ಬೇಸಿಗೆ ವಾತಾವರಣದ ವೈಪರೀತ್ಯದಿಂದಾಗಿ ಹೈನುಗಾರರ ಸ್ಥಿತಿ ಚಿಂತಾಜನಕವಾಗಿದ್ದ ಬೇಸಿಗೆಯಲ್ಲಿಯೇ ಬೆಲೆ ಕಡಿತಗೊಳಿಸಲಾಗಿತ್ತು.
ಈ ಸಂಬ೦ಧ ರಾಜ್ಯಾದ್ಯಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಸರಕಾರದ ಗಮನಕ್ಕೆ ತಾರದೇ ಹಾಲಿನ ದರ ಕಡಿತಗೊಳಿಸಿದರೆ ಅಂತಹ ಒಕ್ಕೂಟವನ್ನು ಸೂಪರ್ ಸೀಡ್ ಮಾಡಲಾಗುವುದು ಎಂದು ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್
ಹಾಲಿನ ಬೆಲೆ ಹೆಚ್ಚಿಸಿದ ಒಕ್ಕೂಟ
ವಿಶೇಷವೆಂದರೆ ಈ ವರ್ಷ ಬೆಲೆ ಕಡಿತದ ಹುಚ್ಚಾಟದ ಬದಲು ಬೆಲೆ ಹೆಚ್ಚಿಸುವ ಮೂಲಕ ರಾಜ್ಯದ ಕೆಲವು ಹಾಲು ಒಕ್ಕೂಟಗಳು ರೈತರ ಬೆಂಬಲಕ್ಕೆ ನಿಂತಿವೆ. ಈ ಪೈಕಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟವು (Shivamogga Co-Op Milk Producers Societies Union Ltd) ಹಾಲು ಬೆಲೆಯನ್ನು ಹೆಚ್ಚಿಸಿ ಗಮನ ಸೆಳೆದಿದೆ.
ಶಿಮೂಲ್ ತನ್ನ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಹಾಲು ಖರೀದಿ ದರವನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿದ್ದು, ಬೇಸಿಗೆ ದಿನಗಳಲ್ಲಿ ಹೈನು ರಾಸುಗಳ ನಿರ್ವಹಣಾ ವೆಚ್ಚ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತವೆ. ಇದರಿಂದ ಲಾಭಾಂಶ ಕಡಿಮೆ ಆಗಿ ಹೈನುಗಾರರು ನಷ್ಟ ಅನುಭವಿಸುವಂತಾಗುತ್ತದೆ.
ಇದನ್ನೂ ಓದಿ: CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ
ಪ್ರತಿ ಕೆಜಿ ಹಾಲಿಗೆ 2 ರೂ. ಹೆಚ್ಚಳ
ಈ ವೈಪರಿತ್ಯವನ್ನು ಗಂಭೀರವಾಗಿ ಗಮನಿಸಿರುವ ಹಾಲು ಒಕ್ಕೂಟವು ರೈತರನ್ನು ಪ್ರೋತ್ಸಾಹಿಸಿ, ಉತ್ತೇಜಿಸಲು ದರ ಪರಿಷ್ಕರಿಸಿದೆ. ಕಳೆದ ಜನವರಿ 31 ರಂದು ನಡೆದ ಒಕ್ಕೂಟದ 453ನೇ ಆಡಳಿತ ಮಂಡಳಿ ಸಭೆಯಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲು ಖರೀದಿ ದರವನ್ನು ಪ್ರತಿ ಕೆ.ಜಿಗೆ ರೂ. 2.00 ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 30.13 ರೂ. ಇದ್ದು, ಪರಿಷ್ಕೃತ ದರ 32.22 ರೂ. ಆಗಲಿದೆ. ಈ ಪರಿಷ್ಕೃತ ದರವು ದಿನಾಂಕ: 01-02-2025 ರಿಂದ ದಿನಾಂಕ: 31-03-2025ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದನ್ನೂ ಓದಿ: Borewell permission : ಇನ್ಮುಂದೆ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಸುವಂತಿಲ್ಲ