AgricultureNews

Geranium Cultivation : ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ

ಒಂದು ಟನ್ ಜಿರೇನಿಯಂ ಎಲೆಗೆ 12,000 ರೂಪಾಯಿ

ಇದೊಂದು ಅಪರೂಪದ ಔಷಧಿ ಬೆಳೆ. ಇದರ ಕೃಷಿ ನಿರ್ವಹಣೆಗೆ ಖರ್ಚು ಬಹಳ ಕಡಿಮೆ; ಲಾಭ ಹೆಚ್ಚು. ಇದರ ಒಂದು ಟನ್ ಎಲೆಗೆ 12,000 ರೂಪಾಯಿ ಬೆಲೆ. ಸಸಿ ಎಲ್ಲಿ ಸಿಗುತ್ತೆ? ಕೃಷಿ ಮಾಡುವ ವಿಧಾನ ಹೇಗೆ? ಯಾವ ಮಣ್ಣು ಸೂಕ್ತ? ಮಾರುಕಟ್ಟೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ…

WhatsApp Group Join Now
Telegram Group Join Now

ಜಿರಾನಿಯಂ ಒಂದು ಸುಗಂಧಯುಕ್ತ ಹಾಗೂ ಔಷಧೀಯ ವನಸ್ಪತಿ. ಭಾರತದಲ್ಲಿ ಈ ವನಸ್ಪತಿಯ ಬೇಡಿಕೆ ವರ್ಷಕ್ಕೆ 200 ರಿಂದ 300 ಟನ್‌ನಷ್ಟಿದೆ. ಆದರೆ ಈಗಿನ ಉತ್ಪಾದನೆ 10 ಟನ್ ಮಾತ್ರ. ಜಿರಾನಿಯಂ ತೈಲಕ್ಕೆ ಭಾರತದಲ್ಲಷ್ಟೆ ಅಲ್ಲದೆ ವಿದೇಶದಲ್ಲಿ ಕೂಡ ಭಾರಿ ಬೇಡಿಕೆಯುಂಟು.

ಈ ಸಸ್ಯದಿಂದ ತೆಗೆದ ಎಣ್ಣೆಯನ್ನು ಔಷಧಿ, ಪರ್ಫ್ಯೂಮ್, ಕಾಸ್ಮೆಟಿಕ್, ಸೋಪುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ಒಂದು ಕೆ.ಜಿ ಎಣ್ಣೆಯ ಬೆಲೆ ಬರೋಬ್ಬರಿ 12,500 ರೂಪಾಯಿ. ಕಬ್ಬಿನ ಬೆಳೆಗಿಂತ ಈ ಬೆಳೆಯು ಸುಲಭವಾಗಿದೆ ಹಾಗೂ ಹೆಚ್ಚಿನ ಪ್ರಮಾಣದ ಇಳುವರಿಯನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Micro Finance Ordinance 2025 : ಅಕ್ರಮವಾಗಿ ನೀಡಿದ ಸಾಲ ಮತ್ತು ಬಡ್ಡಿ ಸಂಪೂರ್ಣ ಮನ್ನಾ

ಕೃಷಿಗೆ ಖರ್ಚು ಕಡಿಮೆ

ಜಿರೇನಿಯಂ ಬೆಳೆಗೆ ಖರ್ಚು ಬಹಳ ಕಡಿಮೆ. ಸಗಣಿ ಗೊಬ್ಬರವನ್ನು ಉಪಯೋಗಿಸಿಕೊಂಡು ಒಮ್ಮೆ ನಾಟಿ ಮಾಡಿದರೆ ಮೂರು ವರ್ಷಗಳ ಕಾಲ ಫಸಲು ಪಡೆಯಬಹುದು. ಈ ಬೆಳೆಯನ್ನು ನಾಲ್ಕು ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ ಮೂರು ಬಾರಿ ಕಟಾವು ಮಾಡಬಹುದು.

ಕಡಿಮೆ ನೀರು ಬಳಸಿಕೊಂಡು ಎಲ್ಲ ರೀತಿಯ ಮಣ್ಣಿನಲ್ಲಿಯೂ ಜಿರೇನಿಯಂ ಬೆಳೆಯಬಹುದು ಕೀಟನಾಶಕ ಹಾಗೂ ಗೊಬ್ಬರದಲ್ಲಿ ಶೇ.75% ರಷ್ಟು ಖರ್ಚು ಕಡಿಮೆ. ವರ್ಷಕ್ಕೆ ಒಂದು ಎಕರೆಗೆ 30 ರಿಂದ 35 ಕಿಲೋ ಎಣ್ಣೆಯನ್ನು ಉತ್ಪಾದಿಸಬಹುದು. ಕಂತು ಕಂತಾಗಿ ರೈತನಿಗೆ ಆದಾಯ ತರುವ ಬೆಳೆ ಇದಾಗಿದೆ.

ಬೇಸಾಯ ಕ್ರಮ

ಜಿರೇನಿಯಂ ಒಂದು ಸಸಿಯ ಬೆಲೆ 8 ರಿಂದ 10 ರೂ. ಆಗಿದ್ದು; ಇದರ ಬೇಸಾಯಕ್ಕೆ ಹನಿ ನೀರಾವರಿ ಸೂಕ್ತವಾಗುತ್ತದೆ. ಎಕರೆಗೆ ಸುಮಾರು 8,000 ರಿಂದ 10,000 ವರೆಗೆ ಸಸಿ ನಾಟಿ ಮಾಡಬಹುದು. ಪ್ರತಿ ಬೆಳೆಯ ಅಂತರ 3.5 ಅಡಿ X 1 ಅಡಿ ಪ್ರಕಾರ ನಾಟಿ ಮಾಡಿಕೊಳ್ಳಬೇಕು.

ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್

WhatsApp Group Join Now
Telegram Group Join Now

Raitapi Jagattu

ಮಾಲತೇಶ ಮಾಳಮ್ಮನವರ್, ಸಂಪಾದಕರು ಮಾಲತೇಶ ಮಾಳಮ್ಮನವರ್ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!