Karnataka SSLC Exam Time Table 2025 : ಫೆಬ್ರವರಿ 25ರಿಂದ ಮಾರ್ಚ್ 4ರ ವರೆಗೆ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ-2025ರ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು (Karnataka SSLC Exam Time Table 2025) ಪ್ರಕಟಿಸಿದೆ. ಪರೀಕ್ಷೆಯು ಇದೇ ಫೆಬ್ರವರಿ 25ರಿಂದ ಮಾರ್ಚ್ 04ರ ವರೆಗೆ ನಡೆಯಲಿದೆ. ಪರೀಕ್ಷೆ ನಡೆಯಲಿರುವ ವಿಷಯವಾರು ಪಟ್ಟಿ ಈ ಕೆಳಗಿನಂತಿದೆ:
- ಫೆಬ್ರವರಿ 25 : ಕನ್ನಡ ಅಥವಾ ಪ್ರಥಮ ಭಾಷೆ
- ಫೆಬ್ರವರಿ 27 : ಗಣಿತ
- ಫೆಬ್ರವರಿ 28 : ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
- ಮಾರ್ಚ್ 01 : ಹಿಂದಿ ಅಥವಾ ತೃತೀಯ ಭಾಷೆ
- ಮಾರ್ಚ್ 03 : ವಿಜ್ಞಾನ
- ಮಾರ್ಚ್ 04 : ಸಮಾಜ ವಿಜ್ಞಾನ
ಇದನ್ನೂ ಓದಿ: Micro Finance Ordinance 2025 : ಅಕ್ರಮವಾಗಿ ನೀಡಿದ ಸಾಲ ಮತ್ತು ಬಡ್ಡಿ ಸಂಪೂರ್ಣ ಮನ್ನಾ
ಪರೀಕ್ಷೆ ನಡೆಯುವ ಸಮಯ
ಎಲ್ಲ ವಿಷಯಗಳ ಪರೀಕ್ಷೆಯು ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ಪ್ರಥಮ ಭಾಷೆ ಮತ್ತು ಕೋರ್ ಸಬ್ಜೆಕ್ಟ್’ಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳು ಮಧ್ಯಾಹ್ನ 1.15ರ ವರೆಗೆ ನಡೆಯಲಿವೆ.
ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ ಪರೀಕ್ಷೆಗಳು ಮಧ್ಯಾಹ್ನ 01 ಗಂಟೆ ವರೆಗೆ ನಡೆಯಲಿವೆ. ಪ್ರಥಮ ಭಾಷೆಯ ಪರೀಕ್ಷೆ ನೂರು ಅಂಕಕ್ಕೆ ನಡೆದರೆ, ಉಳಿದ ವಿಷಯಗಳ ಪರೀಕ್ಷೆ 80 ಅಂಕಗಳಿಗೆ ನಡೆಯಲಿದೆ.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1ರ ವೇಳಾಪಟ್ಟಿ
ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ಮುಗಿದು 18 ದಿನಗಳಿಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ನಡೆಯಲಿದೆ. ಸದರಿ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈಗಾಗಲೇ ಪ್ರಕಟಿಸಿದ್ದು, ಮಾರ್ಚ್ 21 ರಿಂದ ಏಪ್ರಿಲ್ 4ರ ವರೆಗೆ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್