PM-Kisan-ಈ ರೈತರ ಖಾತೆಗೆ ಪಿಎಂ ಕಿಸಾನ್ 19ನೇ ಕಂತಿನ 2,000 ರೂ. ಹಣ ಜಮಾ

ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM-KISAN) 19ನೇ ಕಂತಿನ ಹಣವು ಫೆಬ್ರವರಿ 24ರ ಸೋಮವಾರ ದೇಶದ ಎಲ್ಲಾ ಫಲಾನುಭವಿ ರೈತ ಖಾತೆಗೆ ಜಮಾ ಆಗಲಿದೆ. 9.7 ಕೋಟಿ ರೈತರ ಖಾತೆಗೆ ಈ ಹಣ ಜಮಾ ಆಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 24ರಂದು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. ಭಾಗಲಪುರದಿಂದ ಕೃಷಿ ಸಂಬ೦ಧಿತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ, ಹಲವಾರು ರಾಜ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ರೈತರ ಖಾತೆಗಳಿಗೆ ಪಿಎಂ ಕಿಸಾನ್ ನಿಧಿಯ 2,000 ರೂ. ಹಣವನ್ನು ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್
ಪಿಎಂ ಕಿಸಾನ್ ಯೋಜನೆಯಡಿ ಪ್ರತಿ 4 ತಿಂಗಳಿಗೊಮ್ಮೆ ವಾರ್ಷಿಕ 3 ಕಂತುಗಳಲ್ಲಿ ತಲಾ 2,000 ರೂ. ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಅಂದರೆ ಈ ಯೋಜನೆಯ ಮೂಲಕ ರೈತರಿಗೆ ಪ್ರತಿ ವರ್ಷ 6,000 ರೂ. ನೆರವು ನೀಡಲಾಗುತ್ತದೆ. ಕಳೆದ 2024ರ ಅಕ್ಟೋಬರ್ 15ರಂದು 18ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು.
ಯೋಜನೆಯ ಪ್ರಯೋಜನಗಳನ್ನು ಪಡೆಯಲು ರೈತರು ಇ-ಕೆವೈಸಿಯನ್ನು ಪೂರ್ಣಗೊಳಿಸಿರಬೇಕು. ಒಟಿಪಿ ಆಧಾರದ ಮೇಲೆ ಅಥವಾ ಪಿಎಂ ಕಿಸಾನ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು. ಅಥವಾ ನೀವು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಬಯೋಮೆಟ್ರಿಕ್ ಕೆವೈಸಿ ಅನ್ನು ಪೂರ್ಣಗೊಳಿಸಬಹುದು.
ಕಾರ್ಯಕ್ರಮದ ಲಿಂಕ್ : ಇಲ್ಲಿ ಒತ್ತಿ
ಇದನ್ನೂ ಓದಿ: UPI Payment Advice : ಗೂಗಲ್ ಪೇ, ಫೋನ್ ಪೇ ಬಳಸುವವರಿಗೆ ಸೈಬರ್ ಕ್ರೈಂ ಪೊಲೀಸರಿಂದ ಎಚ್ಚರಿಕೆ