AgricultureNews

Azolla- ಹಸು, ಎಮ್ಮೆಗಳ ಹಾಲು ಹೆಚ್ಚಿಸುವ ಅಜೋಲ್ಲಾ

ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

ಹಸು, ಎಮ್ಮೆಗಳ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಅಜೋಲ್ಲಾ (Azolla) ಎಂಬ ಪಾಚಿ ಥರದ ತೇಲುವ ಜರಿಗಿಡವನ್ನು ಬೆಳೆಯುವುದು ಹೇಗೆ? ಹಸು, ಎಮ್ಮೆ, ಕೋಳಿ, ಕುರಿ, ಮೇಕೆಗಳಿಗೆ ಅದನ್ನು ಹೇಗೆ ತಿನ್ನಿಸಬೇಕು? ಅಜೋಲ್ಲಾದಲ್ಲಿರುವ ಪೋಷಕಾಂಶಗಳು ಯಾವವು? ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಅಂರ್ತಜಲ ಕುಸಿತದಿಂದಾಗಿ ಮೇವು ಬೆಳೆಯುವುದು ಹರಸಾಹಸವಾಗುತ್ತಿದೆ. ಹೀಗಾಗಿ ರೈತರು ಜಾನುವಾರುಗಳಿಗೆ ಮೇವಿನ ಪರ್ಯಾಯ ಮೂಲವನ್ನು ಹುಡುಕುವುದು ಅನಿವಾರ್ಯವಾಗಿದೆ. ಇಂತಹ ಪರ್ಯಾಯ ಮೇವಿನ ಮೂಲಗಳಲ್ಲಿ ಅಜೋಲ್ಲಾ ಹೆಚ್ಚು ಹೆಚ್ಚು ರೈತರನ್ನು ಆಕರ್ಷಿಸುತ್ತಿದೆ. ನೀಲಿ ಹಸಿರು ಪಾಚಿ ಥರದ ತೇಲುವ ಈ ಜರಿಗಿಡವು ವಾತಾವರಣದ ಸಾರಜನಕದ ಸ್ಥಿರೀಕರಣ ಮತ್ತು ಸಂಯೋಜನೆಗೆ ಕಾರಣವಾಗಿದೆ.

ಪೋಷಕಾಂಶಗಳ ಆಗರ

ಯಾವುದೇ ರೀತಿಯ ವಾತಾವರಣದಲ್ಲಿ ಬೆಳೆಯಬಹುದಾದ ಅಜೊಲ್ಲಾದಲ್ಲಿ ಎಂಟು ಪ್ರಭೇದಗಳಿವೆ. ಅದರಲ್ಲಿ ಅಜೋಲ್ಲಾ ಪಿನ್ನಾತಾ ಎಂಬ ಪ್ರಭೇದ ಪ್ರಮುಖವಾಗಿದೆ. ಬಹುಬೇಗ ಬೆಳೆಯುವ ಈ ಜಲಸಸ್ಯವನ್ನು ಆಳವಲ್ಲದ ಹೊಂಡಗಳಲ್ಲಿ ಬೆಳೆಸುತ್ತಾರೆ. ಅಮಿನೊ ಆಮ್ಲಗಳು, ವಿಟಿಮಿನ್‌ಗಳು, ಪ್ರೋಟಿನ್‌ಗಳು, ಬೆಳೆವಣಿಗೆ ಪ್ರಚೋದಿಸುವ ಜೀವಸತ್ವಗಳು, ಕ್ಯಾಲ್ಯಿಯಂ, ರಂಜಕ, ಪೊಟ್ಯಾಷ್, ಕಬ್ಬಿಣ, ತಾಮ್ರ ಮುಂತಾದ ಪೋಷಕಾಂಶಗಳನ್ನು ಅಜೋಲ್ಲಾ ಹೊಂದಿದೆ.

ಹೆಚ್ಚಿನ ಪ್ರೋಟಿನ್‌ಗಳು ಮತ್ತು ಕಡಿಮೆ ನಾರಿನಾಂಶ ಹೊಂದಿರುವುದರಿAದ ಜಾನುವಾರುಗಳಿಗೆ ಜೀರ್ಣಿಸಲು ಸುಲಭವಾಗುತ್ತದೆ. ಒಣಗಿರುವ ಅಜೋಲ್ಲಾ ಶೇಕಡಾ 25-28ರಷ್ಟು ಪ್ರೋಟಿನ್, 10-15ರಷ್ಟು ಲವಣ ಮತ್ತು 7-10 ಅಮಿನೊ ಆಮ್ಲಗಳನ್ನು ಹೊಂದಿದೆ.

ಇದನ್ನೂ ಓದಿ: PM Kisan 19th installment : ಫೆಬ್ರವರಿ 25ಕ್ಕೆ ರೈತರ ಖಾತೆಗೆ ಪಿಎಂ ಕಿಸಾನ್ 19ನೇ ಕಂತಿನ ಹಣ ಜಮಾ

ಅಜೋಲ್ಲಾ ಉತ್ಪಾದನೆ ಹೇಗೆ?

ಇದನ್ನು ಮನೆ ಅಥವಾ ಡೈರಿ ಶೆಡ್/ ಕೋಳಿ ಶೆಡ್‌ನ ಹಿತ್ತಲಿನಲ್ಲಿ ಬೆಳೆಸಬಹುದು. ಅಜೋಲ್ಲಾ ಬೆಳೆಸಬೇಕಾದ ಭೂಮಿಯನ್ನು ಹದಗೊಳಿಸಿ ಸಮತಟ್ಟು ಮಾಡಿಕೊಂಡು 6X4 ಅಡಿ ವಿಸ್ತೀರ್ಣದಲ್ಲಿ ಸುಮಾರು 15ರಿಂದ 20 ಸೆಂ.ಮೀ ಗುಂಡಿ ಮಾಡಬೇಕು. ಪ್ಲಾಸ್ಟಿಕ್ ಹಾಳೆಯನ್ನು ನೆಲದ ಮೇಲೆ ಸಮನಾಗಿ ಹಾಸಿ ಸುತ್ತಲೂ ಇಟ್ಟಗೆಗಳನ್ನು ಇಟ್ಟು ನೀರು ಸಂಗ್ರಹವಾಗುವAತೆ ಮಾಡಬೇಕು.

6X4 ಅಡಿ ವಿಸ್ತೀರ್ಣದ ಗುಂಡಿಯಲ್ಲಿ ದಿನಕ್ಕೆ 1 ಕೆಜಿ ಅಜೋಲ್ಲಾ ಉತ್ಪಾದನೆ ಮಾಡಬಹುದು. ಎರಡು ಕೆಜಿ ಸಗಣಿ ಮತ್ತು 30-40 ಗ್ರಾಂ ಸೂಪರ್ ಫಾಸ್ಫೇಟ್ ರಸಗೊಬ್ಬರದೊಂದಿಗೆ 10 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿದ ಬಗ್ಗಡವನ್ನು ಗುಂಡಿಯಲ್ಲಿ ಸುರಿಯಬೇಕು.

ಮಣ್ಣು ಹಾಗೂ ನೀರು ಮಿಶ್ರಣದ ನಂತರ 0.5-1 ಕೆಜಿ ಅಜೋಲ್ಲಾ ಸೊಪ್ಪನ್ನು ಹರಡಿ, ಆಗಾಗ ನೀರನ್ನು ಸಿಂಪಡಿಸಬೇಕು. ಒಂದು ವಾರದೊಳಗೆ ಅಜೋಲ್ಲಾ ಸುತ್ತಲೂ ಹರಡಿ ಬೆಳೆಯುತ್ತದೆ. ಪ್ರತಿವಾರ ಸುಮಾರು 1 ಕೆಜಿ ಸಗಣಿ ಮತ್ತು 20 ಗ್ರಾಂ ಸೂಪತ್ ಫಾಸ್ಫೇಟ್ ರಸಗೊಬ್ಬರ ಹಾಕುವುದರಿಂದ ಇಳುವರಿ ಚೆನ್ನಾಗಿ ಬರುತ್ತದೆ.

ಇದನ್ನೂ ಓದಿ: Pouti Khata : ಮನೆ ಬಾಗಿಲಲ್ಲೇ ಪೌತಿ ಖಾತೆ

ಪ್ರತಿದಿನ 900 ಗ್ರಾಂ ನಿಂದ 1 ಕೆಜಿ ವರೆಗೆ ಅಜೋಲ್ಲಾ ಪಡೆಯಬಹುದು. ವಾರಕ್ಕೊಮ್ಮೆ ಒಂದು ಲೀಟರ್ ನೀರಿನಲ್ಲಿ 100 ಗ್ರಾಂ ಮೈಲುತುತ್ತವನ್ನು ಮಿಶ್ರಣ ಮಾಡಿ ಅಜೋಲ್ಲಾ ಗುಂಡಿಗೆ ಹಾಕುವುದರಿಂದ ರೋಗ ನಿಯಂತ್ರಣ ಮಾಡಬಹುದು.

ಪ್ರತಿ ತಿಂಗಳು ಗುಂಡಿಯಲ್ಲಿ 5 ಕೆಜಿಯಷ್ಟು ಮಣ್ಣು ಮಿಶ್ರಿತ ಗೊಬ್ಬರ ಹೊರತೆಗೆದು ಅಷ್ಟೇ ಪ್ರಮಾಣದ ಮಣ್ಣನ್ನು ಬೆರೆಸುವುದರಿಂದ ಸಾರಜನಕದ ಸಾಂಧ್ರತೆಯನ್ನು ತಡೆಗಟ್ಟಬಹುದು. ಗುಂಡಿಯಲ್ಲಿರುವ ತೇವಾಂಶ ಆವಿಯಾಗುವುದರಿಂದ ದಿನಕ್ಕೊಮ್ಮೆ 25-30 ಪ್ರತಿಶತದಷ್ಟು ನೀರನ್ನು ಗುಂಡಿಗೆ ಹಾಕಬೇಕು. ಆರು ತಿಂಗಳಿಗೊಮ್ಮೆ ಎಲ್ಲವನ್ನು ಬದಲಿಸಬೇಕು.

ರೋಗಗಳು ಕಂಡು ಬಂದಲ್ಲಿ ಹಳೆಯದು ತೆಗೆದು ಹೊಸ ಮಡಿಯನ್ನು ಮಾಡಬೇಕು. ಅಜೋಲ್ಲಾ ಗುಂಡಿಯಲ್ಲಿ ಉಷ್ಣಾಂಶವು 250 ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಕೃಷಿ ಹೊಂಡಗಳಲ್ಲಿ, ಬಾವಿಗಳಲ್ಲಿ, ಭsತ್ತದ ಗದ್ದೆಗಳಲ್ಲಿಯೂ ಸಹ ಅಜೋಲ್ಲಾ ಬೆಳೆಯಬಹುದಾಗಿದೆ.

ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್

ಅಜೋಲ್ಲಾ ತಿನ್ನಿಸುವ ವಿಧಾನ

ಮಡಿಯಿಂದ ತೆಗೆದ ನಂತರ ಸ್ವಚ್ಚವಾದ ನೀರಿನಿಂದ ಅಜೋಲ್ಲಾವನ್ನು ತೊಳೆಯಬೇಕು. ಆರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ನೀಡಿ ನಂತರ ಕ್ರಮೇಣ ಹೆಚ್ಚಿಸುತ್ತಾ ಹೋಗಬೇಕು. ಹಾಗಂತ ಅತಿ ಹೆಚ್ಚಿಗೆ ಅಜೋಲವನ್ನು ತಿನ್ನಿಸಬಾರದು. ಒಂದು ಸಾಮಾನ್ಯ ಹಸುವಿಗೆ ಎರಡು ಬೊಗಸೆಯಷ್ಟು ಅಜೋಲವನ್ನು ಪಶು ಆಹಾರದ ಜೊತೆಗೆ ತಿನ್ನಿಸಬೇಕು. ಕುರಿ-ಆಡುಗಳಲ್ಲಿ ಚಿನ್ನಿ ಮಿಶ್ರಣದ ಅರ್ಧದಷ್ಟು ಅಜೋಲಾದೊಂದಿಗೆ ಸೇರಿಸಿ ನೀಡಬೇಕು.

ಜಾನುವಾರುಗಳಿಗೆ ಅಜೋಲ್ಲಾ ನೇರವಾಗಿ ಅಥವಾ ಹಿಂಡಿ ಜೊತೆಗೆ ನೀಡಬಹುದು. ಕೋಳಿಗಳಿಗೆ ಮತ್ತು ಮೀನುಗಳಿಗೆ ನೇರವಾಗಿ ನೀಡಬಹುದು. ಅಜೋಲ್ಲಾ ಹಾಲು, ಮಾಂಸದ ಉತ್ಪಾದನೆ ಹೆಚ್ಚಿಸುವುದರೊಂದಿಗೆ ಜಾನುವಾರುಗಳ ಆರೋಗ್ಯವನ್ನೂ ಸುಧಾರಿಸುತ್ತದೆ.

ಲಾಭದಾಯಕ ಅಂಶಗಳು

ಯಾವುದೇ ಋತುವಿನಲ್ಲಿಯೂ ಬೆಳೆಯಬಹುದಾದ ಅಜೋಲ್ಲಾ ಪೋಷಕಾಂಶಗಳ ಆಗರವಾಗಿದ್ದು; ಹಸುಗಳಲ್ಲಿ ಶೇಕಡಾ 10-15 ಪ್ರತಿಶತದಷ್ಟು ಹಾಲು ಉತ್ಪಾದನೆ ಹೆಚ್ಚಿಸುತ್ತದೆ. ಕ್ಯಾಲ್ಯಿಯಂ, ರಂಜಕ, ಪೊಟ್ಯಾಷ್, ಕಬ್ಬಿಣ, ತಾಮ್ರ ಮುಂತಾದ ಖನಿಜಗಳನ್ನು ಅಜೋಲ್ಲಾ ಹೊಂದಿದೆ. ವಿಟಾಮಿನ ಎ, ಬಿಟಾಕೆರೊಟಿನ್, ಬಿ-12 ಮುತಾಂದ ಜೀವಸತ್ವಗಳನ್ನು ಹೊಂದಿರುವುದರಿ೦ದ ಇದನ್ನು ‘ಹಸಿರು ಚಿನ್ನ’ ಎಂದು ಕರೆಯುತ್ತಾರೆ.

ಕೋಳಿಗಳಿಗೆ ಅಜೋಲ್ಲಾವನ್ನು ಮೇವಾಗಿ ನೀಡುವುದರಿಂದ ಮೊಟ್ಟೆಗಳ ಉತ್ಪಾದನೆಯನ್ನು, ಮಾಂಸದ ಕೋಳಿಗಳಲ್ಲಿ ತೂಕವನ್ನು ಹೆಚ್ಚಿಸಬಹುದು. ಅಟ್ಟಣಿಗೆ ಪದ್ದತಿಯ ಕುರಿ ಹಾಗೂ ಹಂದಿಯ ಪಾಲನೆಯಲ್ಲಿ ಹಿಂಡಿ ಮಿಶ್ರಣದೊಂದಿಗೆ ಅಜೋಲ್ಲಾ ನೀಡಿದರೆ ಕೊಬ್ಬಿನಾಂಶ ಹೆಚ್ಚಿಸಲು ಸಹಾಯ ಮಾಡುತ್ತದೆ. ಕರುಗಳ ಬೆಳವಣಿಗೆ ಹೆಚ್ಚಿಸಲು ಸಹಾಯ ಮಾಡುವ ಅಜೋಲ್ಲಾ ಬರಗಾಲದ ಸಮಯದಲ್ಲಿ ಮೇವಿನ ಕೊರತೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಜೈವಿಕ ಗೊಬ್ಬರವಾಗಿಯೂ ಉಪಯೋಗಿಸುತ್ತಾರೆ. ಭತ್ತ, ಅಜೋಲ್ಲಾ ಹಾಗೂ ಮೀನುಗಳ ಮಿಶ್ರ ಬೇಸಾಯ ಬಹು ಲಾಭದಾಯಕವಾಗಿದೆ.

| ಡಾ. ತೃಪ್ತಿ ಸೂರ್ಯಕಾಂತ ಕಟ್ಟೀಮನಿ, ಪಶುವೈದ್ಯರು

ಇದನ್ನೂ ಓದಿ: Nati koli Poultry Farming – ನಾಟಿ ಕೋಳಿ ಸಾಕಣೆಯಲ್ಲಿ ಅಧಿಕ ಲಾಭ ಗಳಿಕೆಯ ಸೂತ್ರಗಳು

WhatsApp Group Join Now
Telegram Group Join Now

Raitapi Jagattu

ಮಾಲತೇಶ ಮಾಳಮ್ಮನವರ್, ಸಂಪಾದಕರು ಮಾಲತೇಶ ಮಾಳಮ್ಮನವರ್ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!