Bapuji Seva Kendra Services : ಗ್ರಾಮ ಪಂಚಾಯತಿಯಲ್ಲೇ ಸಿಗಲಿವೆ ಎಲ್ಲ ಸರಕಾರಿ ಸೇವೆಗಳು
ಯಾವೆಲ್ಲ ಸರ್ಕಾರಿ ಸೇವೆಗಳು ಸಿಗಲಿವೆ ಇಲ್ಲಿದೆ ಮಾಹಿತಿ...

ಸರಕಾರಿ ಸೇವೆಗಳು ಗ್ರಾಮೀಣ ಭಾಗದ ಜನರ ಕೈಗೆ ಸುಲಭದಲ್ಲಿ ಸಿಗುವಂತೆ ಮಾಡಲು ರಾಜ್ಯ ಸರಕಾರ (Karnataka Government) ಮಹತ್ವದ ಹೆಜ್ಜೆ ಇಟ್ಟಿದೆ. ಕಂದಾಯ, ಕಾರ್ಮಿಕ, ಆರೋಗ್ಯ, ಇಂಧನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳೆಲ್ಲ ಗ್ರಾಮ ಪಂಚಾಯತಿಗಳಲ್ಲೇ (gram panchayat karnataka) ಸಿಗಲಿವೆ. ಯಾವೆಲ್ಲ ಸೇವೆಗಳು ಸಿಗಲಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ…
ನಾಡಕಚೇರಿಯಲ್ಲಿ (Nadakacheri) ಪಡೆಯಬೇಕಾಗಿದ್ದ ಸೇವೆಗಳನ್ನು ನಿಮ್ಮೂರಿನ ಗ್ರಾಮ ಪಂಚಾಯ್ತಿಯಲ್ಲೇ ಅರ್ಜಿ ಸಲ್ಲಿಸಿ ತೀರಾ ಸುಲಭವಾಗಿ ಪಡೆಯಬಹುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈಚೆಗಷ್ಟೇ ಭೂಮಾಪನ, ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯ ಮೋಜಿಣಿ ಸೇವೆಗಳನ್ನು ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಗಳಿಗೆ (Bapuji Seva Kendra) ವರ್ಗಾಯಿಸಿತ್ತು.
ಆನಂತರ ಕಳೆದ ವರ್ಷ ಅಕ್ಟೋಬರ್’ನಲ್ಲಿ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅಟಲ್‌ಜಿ ಸ್ನೇಹಿ ಕೇಂದ್ರಗಳ (ನಾಡ ಕಛೇರಿ) 44 ಸೇವೆಗಳನ್ನು ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕಲ್ಪಿಸುವ ವಿಶೇಷ ಯೋಜನೆಗೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: Crop Insurance Karnataka : ರೈತರೇ ನಿಮಗೆ ಗ್ಯಾರಂಟೀ ಬೆಳೆ ವಿಮೆ ಹಣ ಸಿಗಬೇಕೆಂದರೆ ತಪ್ಪದೇ ಈ ಕ್ರಮ ಅನುಸರಿಸಿ…
ನಾಡಕಚೇರಿ ಸೇವೆಗಳು ಗ್ರಾಮ ಪಂಚಾಯತಿಯಲ್ಲಿ…
ರಾಜ್ಯದಲ್ಲಿ 6ರಿಂದ 7 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದೊ೦ದು ಹೋಬಳಿ ಕೇಂದ್ರಗಳಿವೆ. ಪ್ರತಿ ಹೋಬಳಿ ಕೇಂದ್ರಗಳಲ್ಲಿ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ವ್ಯಾಪ್ತಿಯ ನಾಡಕಛೇರಿಗಳಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಭೂಮಿ ಸೇವೆಗಳು, ಮೋಜಣಿ ಸೇರಿದಂತೆ ಸುಮಾರು 44 ವಿವಿಧ ಸೇವೆಗಳನ್ನು ಗ್ರಾಮೀಣ ಜನರಿಗೆ ಒದಗಿಸಲಾಗುತ್ತಿತ್ತು.
ಹೋಬಳಿ ವ್ಯಾಪ್ತಿಯ 20-50 ಸಾವಿರ ಜನರು ಸರ್ಕಾರಿ ಸೇವೆಗಳನ್ನು ಪಡೆಯಲು ಹೋಬಳಿ ಕೇಂದ್ರದ ನಾಡಕಚೇರಿಗೆ ಹೋಗಬೇಕಾಗಿತ್ತು. ಇದರಿಂದ ರೈತರಿಗೆ, ವೃದ್ಧರಿಗೆ, ಮಹಿಳೆಯರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂಬ ಆಗ್ರಹ ಕೇಳಿ ಬರುತ್ತಿತ್ತು. ಇದನ್ನು ತಪ್ಪಿಸುವ ಹಿನ್ನಲೆಯಲ್ಲಿ ಇದೀಗ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ನಾಡಕಚೇರಿಯ ಎಲ್ಲ ಸರಕಾರಿ ಸೇವೆಗಳು ಲಭ್ಯವಾಗುವಂತೆ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಯಿತಿ ರಾಜ್ ಇಲಾಖೆಯ ಸೇವೆಗಳ ಜೊತೆಯಲ್ಲಿ ಇನ್ನು ಮುಂದೆ ಸಾರ್ವಜನಿಕರಿಗೆ ಕಂದಾಯ, ಕಾರ್ಮಿಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಇಂಧನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸೇವೆಗಳನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್
ಯಾವೆಲ್ಲ ಸೇವೆಗಳು ಸಿಗಲಿವೆ?
- ಜನಸಂಖ್ಯಾ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ (ಪ್ರವರ್ಗ-ಎ)
- ಜಾತಿ ಪ್ರಮಾಣ ಪತ್ರ (ಅ.ಜಾ/ಅ.ಪಂ)
- ಹಿಂದುಳಿದ ವರ್ಗ ಪ್ರ.ಪತ್ರ (ಕೇ.ಸ)
- ವಾಸಸ್ಥಳ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಗೇಣಿ ರಹಿತ ದೃಢೀಕರಣ ಪತ್ರ
- ವಿಧವಾ ದೃಢೀಕರಣ ಪತ್ರ
- ಜೀವಂತ ದೃಢೀಕರಣ ಪತ್ರ
- ವ್ಯವಸಾಯಗಾರರ ಕುಟುಂಬದ ದೃಢೀಕರಣ ಪತ್ರ
- ಮರುವಿವಾಹವಾಗದಿರುವ ಬಗ್ಗೆ ದೃಢೀಕರಣ ಪತ್ರ
- ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರ
- ಮೃತರ ಕುಟುಂಬ ಸದಸ್ಯರ ದೃಢೀಕರಣ ಪತ್ರ
- ನಿರುದ್ಯೋಗಿ ದೃಢೀಕರಣ ಪತ್ರ
- ಸರ್ಕಾರಿ ನೌಕರಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ
- ವ್ಯವಸಾಯಗಾರ ದೃಢೀಕರಣ ಪತ್ರ
- ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ
- ಕೃಷಿ ಕಾರ್ಮಿಕ ಪ್ರಮಾಣ ಪತ್ರ
- ಮೇಲುಸ್ತರಕ್ಕೆ ಸೇರಿಲ್ಲವೆಂದು ದೃಢೀಕರಣ ಪತ್ರ
- ಭೂ ಹಿಡುವಳಿ ಪ್ರಮಾಣ ಪತ್ರ
- ಬೋನಫೈಡ್ ದೃಢೀಕರಣ ಪತ್ರ
- ಸಾಲ ತೀರಿಸುವ ಶಕ್ತಿ ಪ್ರಮಾಣ ಪತ್ರ
- ನಿವಾಸಿ ಪ್ರಮಾಣ ಪತ್ರ
- ಆದಾಯ ದೃಢೀಕರಣ ಪತ್ರ (ಉದ್ಯೋಗದ ಸಲುವಾಗಿ ಮಾತ್ರ)
- ಆದಾಯ ದೃಢೀಕರಣ ಪತ್ರ (ಅನುಕಂಪದ ಆಧಾರದ ನೇಮಕಾತಿಗೆ
- ಕುಟುಂಬ ವಂಶವೃಕ್ಷ ದೃಢೀಕರಣ ಪತ್ರ
- ಕಲ್ಯಾಣ ಕರ್ನಾಟಕ ವಿಭಾಗದ ವಲಯ ವಾಸಸ್ಥಳ ದೃಢೀಕರಣ ಪತ್ರ
- ಬೆಳೆ ದೃಢೀಕರಣ ಪತ್ರ
- ಅಲ್ಪಸಂಖ್ಯಾತ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ (ಆರ್ಯ ವೈಶ್ಯ)
- ಆದಾಯ ಹಾಗೂ ಆಸ್ತಿ ಪ್ರಮಾಣಪತ್ರ (EWS)
- ಜಾತಿ ಪ್ರಮಾಣಪತ್ರ (SC/ST-Migrant)
- ಅಂಗವಿಕಲ ಪೋಷಣಾ ವೇತನ
- ನಿರ್ಗತಿಕ ವಿಧವಾ ವೇತನ
- ಸಂಧ್ಯಾ ಸುರಕ್ಷಾ ಯೋಜನೆ
- ರಾಷ್ಟ್ರೀಯ ಕುಟುಂಬ ಕ್ಷೇಮ ಯೋಜನೆ
- ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ
- ಮೈತ್ರಿ ಮಾಶಾಸನ
- ಮನಸ್ವಿನಿ ಮಶಾಸ
- ಅಂತ್ಯ ಸಂಸ್ಕಾರ ಯೋಜನೆ
- ಆಸಿಡ್ ದಾಳಿಗೊಳಗಾದ ಮಹಿಳೆಯ ವೇತನ
- ರೈತರ ವಿಧವಾ ವೇತನ
- ಎಂಡೋಸಲ್ಫಾನ್ ಸಂತ್ರಸ್ತರ ಪಿಂಚಣಿ ವಿತರಣೆ…
ಹೆಚ್ಚಿನ ಮಾಹಿತಿಗೆ ಬಾಪೂಜಿ ಸೇವಾ ಕೇಂದ್ರ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ…
ಇದನ್ನೂ ಓದಿ: CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ