Rover survey-ಇನ್ಮುಂದೆ ಕೇವಲ ಹತ್ತು ನಿಮಿಷದಲ್ಲೇ ಭೂಮಿ ಸರ್ವೇ
ಕಂದಾಯ ಇಲಾಖೆಯಿಂದ ರೋವರ್ ಸರ್ವೇಗೆ ಚಾಲನೆ...

ರಾಜ್ಯ ಸರ್ಕಾರ ಅತ್ಯಂತ ಮುಂದುವರೆದ ಭೂಮಾಪನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ‘ರೋವರ್’ ಎಂಬ ಆಧುನಿಕ ತಂತ್ರಜ್ಞಾನವುಳ್ಳ ಉಪಕರಣವನ್ನು ಭೂಮಾಪನ ಮಾಡಲು ಬಳಸಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದ್ದು; ಇನ್ಮುಂದೆ ಕೇವಲ 10 ನಿಮಿಷಗಳಲ್ಲೇ ಆಧುನಿಕ ತಂತ್ರಜ್ಞಾನದ ಮೂಲಕ ಜಮೀನು ಸರ್ವೆ ಮಾಡಬಹುದು.
ಈಚೆಗೆ ಸರ್ವೇ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ 465 ಭೂ ಮಾಪಕರಿಗೆ ಆಧುನಿಕ ತಂತ್ರಜ್ಞಾನವುಳ್ಳ ‘ರೋವರ್’ ಅನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ವಿತರಿಸಿದ್ದಾರೆ. ಈ ಮೂಲಕ ಕಂದಾಯ ಇಲಾಖೆಯು ಜಮೀನು ಸರ್ವೇ ವಿಧಾನದಲ್ಲಿ ಐತಿಹಾಸಿಕ ಬದಲಾವಣೆ ತಂದಿದ್ದು, ಚೈನ್ ಬದಲಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ‘ರೋವರ್’ ಉಪಕರಣದ ಮೂಲಕ ಸರ್ವೆ ಕಾರ್ಯ ನಡೆಸಲಿದೆ.
ಇದನ್ನೂ ಓದಿ: Old Pension Scheme Relaunch-ಸರ್ಕಾರಿ ನೌಕರರಿಗೆ ಮತ್ತೆ ಹಳೇ ಪಿಂಚಣಿ ಗಿಫ್ಟ್ | ಒಪಿಎಸ್ ಮರುಜಾರಿಗೆ ಸಿದ್ಧತೆ
ಏನಿದು ರೋವರ್ ಸರ್ವೇ?
ಭೂಮಿ ಅಳತೆಗಾಗಿ ಮೊದಲು ಹಗ್ಗ ಕೋಲುಗಳನ್ನು ಬಳಸುತ್ತಿದ್ದರು. ರೋಮನ್ನರ ಕಾಲದಲ್ಲಿ ಓಡೋಮೀಟರ್ ಎಂಬ ಸಾಧನವನ್ನು ಬಳಸಿ ಅಳತೆ ಮಾಡುತ್ತಿದ್ದರು. ಅದೇ ಮಾದರಿಯಲ್ಲಿ ಮೌರ್ಯರು ರಜ್ಜಕ ಎಂಬ ಹಗ್ಗವನ್ನು ಭೂಮಾಪನ ಮಾಡಲು ಬಳಸಿದರು. ಮೊಟ್ಟ ಮೊದಲ ಬಾರಿಗೆ ಭಾರತವನ್ನು ವೈಜ್ಞಾನಿಕ ಆಧಾರದಲ್ಲಿ ನಿಖರವಾಗಿ ಅಳತೆ ಮಾಡಿ ಕಂದಾಯ ನಿಗದಿಪಡಿಸಿದವರು ಬ್ರಿಟಿಷರು.
ಬ್ರಿಟಷರ ಕಾಲದಿಂದಲೂ ಹಂತ ಹಂತವಾಗಿ ಭೂಮಿ ಅಳತೆ ಮಾಡುವ ವಿಧಾನದಲ್ಲಿ ಹಲವು ಬದಲಾವಣೆಗಳಾದವು. ಕ್ರಮೇಣ ಸರಪಳಿಯ ಕಾರ್ಯ ಕಡಿಮೆಗೊಳಿಸಲು ಸಮತಲ ಮೋಜು ಮೋಜಿಣಿ ಎಂಬ ಅಳತೆಯ ಸಾಧನ ಬಳಸಲಾಯಿತು. ಈ ಸಮತಲ ಮೇಜು ಮೋಜಣಿ ವಿಧಾನದ ಮಾದರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೋವರ್ ತಂತ್ರಜ್ಞಾನ ಬೆಳಕಿಗೆ ಬಂತು.
ಇದನ್ನೂ ಓದಿ: 500 ರೂಪಾಯಿಗೆ 10 ಲಕ್ಷ ವಿಮೆ ಪರಿಹಾರ | ಅಂಚೆ ಇಲಾಖೆಯ ಈ ಅವಕಾಶ ಮಿಸ್ ಮಾಡದೇ ಬಳಸಿಕೊಳ್ಳಿ…
ಸಮಯ, ಶ್ರಮ ಉಳಿತಾಯ
ಈ ರೋವರ್ ತಂತ್ರಜ್ಞಾನವನ್ನು ಇದೀಗ ಕರ್ನಾಟಕ ಸರ್ಕಾರವು ಅಧಿಕೃತವಾಗಿ ಭೂಮಾಪನ ಇಲಾಖೆಯಲ್ಲಿ ಅಳವಡಿಸಿಕೊಂಡಿದೆ. ಇನ್ಮುಂದೆ ಆಧುನಿಕ ರೋವರ್ ತಂತ್ರಜ್ಞಾನ ಬಳಕೆಯಿಂದ ಭೂ ಸರ್ವೆ ಕಾರ್ಯವು ವೇಗ ಪಡೆದುಕೊಂಡು, ಭೂಮಾಪಕರ ಮೇಲಿರುವ ಹೊರೆ ಕಡಿಮೆಯಾಗಿದೆ.
ಈ ಹಿಂದೆ ಮಾಡುತ್ತಿದ್ದ ಚೈನು ಆಧಾರಿತ ಸರ್ವೆಗೆ ಕನಿಷ್ಠ ಮೂರು ಜನ ಸಿಬ್ಬಂದಿ ಒಳಗೊಂಡ೦ತೆ ಕನಿಷ್ಠ 50 ರಿಂದ 180 ನಿಮಿಷಗಳು ಬೇಕಾಗುತ್ತಿತ್ತು. ನಂತರ ಸರ್ವೆ ಪೂರ್ಣಗೊಂಡು ಆ ದಾಖಲೆಗಳನ್ನು ಬಳಸಿಕೊಂಡು ನಕ್ಷೆ ತಯಾರಿಸಲು ಮೂರರಿಂದ ಐದು ಗಂಟೆ ಕಾಲಾವಧಿ ತೆಗೆದುಕೊಳ್ಳುತ್ತಿತ್ತು. ಇದೀಗ ‘ರೋವರ್’ ಈ ಕೆಲಸವನ್ನು ಕೇವಲ 10 ನಿಮಿಷಕ್ಕೆ ಮುಗಿಸಲಿದೆ.
ಇದನ್ನೂ ಓದಿ: Karnataka Arogya Sanjeevini Scheme-ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ
ಅಕ್ರಮಗಳಿಗೆ ಆಸ್ಪದವಿಲ್ಲ…
ರೋವರ್ ಉಪಕರಣವು ಕೇವಲ 800 ಗ್ರಾಂ ತೂಕವಿದ್ದು, ಆಧುನಿಕ ತಂತ್ರಜ್ಞಾನ ಉಪಕರಣವಾಗಿದೆ. ಸರ್ವೇ ಆಫ್ ಇಂಡಿಯಾ ರಾಜ್ಯದಲ್ಲಿ 49 ಕಂಟಿನ್ಯೂಸ್ಲಿ ಆಪರೇಟಿಂಗ್ ರೆಫರೆನ್ಸ್ ಸ್ಟೇಷನ್ (Continuously Operating Reference Station- CORS) ಸ್ಥಾಪನೆ ಮಾಡಿದೆ. ಇದರೊಂದಿಗೆ ರೋವರ್ ಸಂಪರ್ಕ ಕಲ್ಪಿಸಿ ಜಮೀನು ಸರ್ವೇ ನಡೆಸಿದಾಗ ಸ್ವಯಂ ಚಾಲಿತವಾಗಿ ಗಡಿ ಗುರುತು ಮಾಡಿ ಟ್ಯಾಬ್‌ಗೆ ಸಂಪರ್ಕ ನೀಡಿ, ಕೇವಲ ಹತ್ತು ನಿಮಿಷದಲ್ಲೇ ನಕ್ಷೆ ಕೊಡಲಿದೆ.
ರೋವರ್ ಸರ್ವೇಯಲ್ಲಿ ಅಕ್ರಮಗಳಿಗೆ ಆಸ್ಪದ ಇರುವುದಿಲ್ಲ. ಹೀಗಾಗಿ ಇಲಾಖೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರಿಗೆ ತ್ವರಿತ ಸರ್ವೇ ಮಾಡಿಕೊಡುವುದು ಹಾಗೂ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್