
ಇದೇ ಮೇ 1ನೇ ತಾರೀಖಿನಿಂದ ದೇಶಾದ್ಯಂತ ಎಲ್ಲಾ ಬ್ಯಾಂಕುಗಳ ಎಟಿಎಂಗಳಿಂದ (ATM) ಹಣ ಪಡೆಯಲು ಗ್ರಾಹಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ‘ಮಿತಿ’ ಮೀರಿದ ಹಣ ಬಿಡುಗಡೆಗೆ ಶುಲ್ಕ ದರ ಹೆಚ್ಚಳ ಮಾಡಲಾಗಿದೆ.
ಇದಕ್ಕೆ ಕಾರಣ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂಟರ್‌ಚೇಂಜ್ ಶುಲ್ಕವನ್ನು (Interchange fees) ಹೆಚ್ಚಿಸಿರುವುದು. ಹೆಚ್ಚುತ್ತಿರುವ ನಿರ್ವಹಣೆ ವೆಚ್ಚದಿಂದ ತಮ್ಮ ಲಾಭ ಕುಗ್ಗಿತ್ತಿದೆ ಎಂದು ವೈಟ್-ಲೇಬಲ್ ಎಟಿಎಂ ನಿರ್ವಾಹಕರು ಹಲವಾರು ಬಾರಿ ಮನವಿ ಮಾಡಿದ ಪರಿಣಾಮವಾಗಿ ಇದೀಗ ಆರ್‌ಬಿಐ ಇಂಟರ್‌ಚೇಂಜ್ ಶುಲ್ಕಗಳನ್ನು ಪರಿಷ್ಕರಿಸಿದೆ. ಇದರಿಂದಾಗಿ ಮೇ 1 ರಿಂದ ಭಾರತದಲ್ಲಿ ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದು ದುಬಾರಿಯಾಗಲಿದೆ.
ಇದನ್ನೂ ಓದಿ: PMAY Gramin- ಪಿಎಂ ಆವಾಸ್ ಯೋಜನೆಯಡಿ ಉಚಿತ ಮನೆಗಾಗಿ ಅರ್ಜಿ ಆಹ್ವಾನ
ಏನಿದು ಇಂಟರ್‌ಚೇಂಜ್ ಶುಲ್ಕ?
ಗ್ರಾಹಕರು ತಮ್ಮ ಬ್ಯಾಂಕಿನ ಎಟಿಎಂ ಹೊರತುಪಡಿಸಿ ಬೇರೆ ಬ್ಯಾಂಕ್ ಮಾಲೀಕತ್ವದ ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡಿದಾಗ ಆ ಬ್ಯಾಂಕ್ ಮತ್ತೊಂದು ಬ್ಯಾಂಕ್ ಅಥವಾ ಎಟಿಎಂ ಸೇವಾ ಪೂರೈಕೆದಾರರಿಗೆ ಪಾವತಿಸುವ ಮೊತ್ತವನ್ನು ಇಂಟರ್‌ಚೇಂಜ್ ಶುಲ್ಕ ಎಂದು ಕರೆಯಲಾಗುತ್ತದೆ.
ಇಂಟರ್‌ಚೇಂಜ್ ಶುಲ್ಕ ಪರಿಷ್ಕರಣೆಯಿಂದಾಗಿ ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂಗಳನ್ನು ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿಯನ್ನು ಮೀರಿದಾಗ ಮೇ 1ರಿಂದ ಪ್ರತಿ ಹಣಕಾಸು ವಹಿವಾಟಿಗೆ ಹೆಚ್ಚುವರಿಯಾಗಿ 2 ರು. ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: Homeloan Tips- ಹೋಮ್ ಲೋನ್ ಪಡೆಯುವ ಮೊದಲು ಈ ನಿಯಮಗಳನ್ನು ತಿಳಿದಿರಿ

ಪ್ರತಿ ವಹಿವಾಟಿಗೆ 19 ರೂ. ಶುಲ್ಕ
ಈ ಹಿಂದೆ ಪ್ರತಿ ಹಣಕಾಸು ವಹಿವಾಟಿಗೆ 17 ರೂ. ಶುಲ್ಕವಿತ್ತು. ಇದೀಗ ಇಂಟರ್‌ಚೇಂಜ್ ಶುಲ್ಕ ಹೆಚ್ಚಳವಾಗಿದ್ದರಿಂದ ಈ ಹಿಂದೆ ಇದ್ದ 17 ರೂ.ಗೆ 2 ರೂ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಅಂದರೆ ಎಟಿಎಂನಿಂದ ಹಣವನ್ನು ಹಿಂಪಡೆಯಲು ಪ್ರತಿ ವಹಿವಾಟಿಗೆ 19 ರು. ವೆಚ್ಚವಾಗಲಿದೆ.
ಅದೇ ರೀತಿ ಬ್ಯಾಲೆನ್ಸ್ ಚೆಕ್, ಮಿನಿ ಸ್ಟೇಟ್‌ಮೆಂಟ್ ಥರದ ಹಣಕಾಸೇತರ ವಹಿವಾಟುಳಿಗೆ 1 ರೂ. ಶುಲ್ಕ ಹೆಚ್ಚಳವಾಗುತ್ತಿದ್ದು; ಪ್ರತಿ ವಹಿವಾಟಿಗೆ 7 ರೂ. ಗಳಷ್ಟು ವೆಚ್ಚವಾಗಲಿದೆ.
ಇದನ್ನೂ ಓದಿ: Zero Interest Crop Loan- ರೈತರಿಗೆ ₹5 ಲಕ್ಷ ಬಡ್ಡಿ ಇಲ್ಲದ ಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ…
ಸಣ್ಣ ಬ್ಯಾಂಕುಗಳ ಗ್ರಾಹಕರ ಮೇಲೆ ಹೊರೆ
ಒಂದು ಕಾಲದಲ್ಲಿ ಎಟಿಎಂಗಳು ಹಣಕಾಸು ವಹಿವಾಟಿನ ತುರ್ತು ಸಾಧನವಾಗಿದ್ದವು. ಆರಂಭದಲ್ಲಿ ಇವುಗಳು ಬ್ಯಾಂಕುಗಳಿಗೆ ಹೋಗಿ ಚಲನ್ ತುಂಬಿ ಸರದಿ ಸಾಲಿನಲ್ಲಿ ನಿಂತು ಹಣ ಹಿಂಪಡೆಯುವ ಶ್ರಮವನ್ನು ಕಡಿಮೆ ಮಾಡಿದ್ದವು. ಕ್ರಮೇಣ ಡಿಜಿಟಲ್ ವಹಿವಾಟುಗಳ ಏರಿಕೆಯಾಗುತ್ತಿದ್ದ ಹಾಗೆ ಇವುಗಳ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ.
ಅದರಲ್ಲೂ ಯುಪಿಐ ವಹಿವಾಟು ಶುರುವಾದ ಬಳಿಕ ಎಟಿಎಂ ಬಳಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮೊಬೈಲ್ ವ್ಯಾಲೆಟ್‌ಗಳು ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಬಳಕೆಯಿಂದಾಗಿ ಎಟಿಎಂ ಬಳಕೆ ಕುಸಿದಿದೆ. ಆದರೂ, ಗ್ರಾಮಾಂತ ಪ್ರದೇಶದ ಬಹುತೇಕ ಗ್ರಾಹಕರು ಹಣ ಹಿಂಪಡೆಯಲು ಎಟಿಎಂಗಳನ್ನೇ ಅವಲಂಬಿಸಿದ್ದಾರೆ. ಆದರೆ ಇದೀಗ ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳವಾಗಿದ್ದು; ಸಣ್ಣ ಬ್ಯಾಂಕುಗಳ ಗ್ರಾಹಕರ ಮೇಲೆ ಇದರ ಹೊರೆ ಬೀಳಲಿದೆ.
ಇದನ್ನೂ ಓದಿ: Loan Information : ಸಾಲ ಪಡೆಯುವ ಮುನ್ನ ಈ ಮಾಹಿತಿ ತಿಳಿದಿರಿ