Ugadi Milk Price Hike- ಹಾಲಿನ ದರ 4 ರೂ. ಹೆಚ್ಚಳ
ರೈತರಿಗೆ ಯುಗಾದಿ ಬಂಪರ್ ಕೊಡುಗೆ ನೀಡಿದ ರಾಜ್ಯ ಸರ್ಕಾರ...

ರಾಜ್ಯ ಸರ್ಕಾರ ರೈತರಿಗೆ ಯುಗಾದಿ ಬಂಪರ್ ಕೊಡುಗೆ (Ugadi Bumper Offer) ನೀಡಿದೆ. ಹೈನು ರೈತರ ಹಿತದೃಷ್ಟಿಯಿಂದ ಏಪ್ರಿಲ್ 1ರಿಂದ ಪ್ರತಿ ಲೀಟರ್ ಹಾಲಿನ ಬೆಲೆ 4 ರೂ. (Milk Price Hike) ಹೆಚ್ಚಳವಾಗಲಿದೆ…
ಕಡೆಗೂ ಹಾಲಿನ ದರ ಏರಿಸಲು (Milk Price Hike) ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರತಿ ಲೀಟರ್ ಹಾಲಿಗೆ 4 ರೂಪಾಯಿ ದರ ಏರಿಸುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದೇ ಏಪ್ರಿಲ್ 1ರಿಂದಲೇ ಈ ಪರಿಷ್ಕೃತ ದರ ಜಾರಿಗೆ ಬರಲಿದೆ. ಏರಿಕೆಯಾದ ಅಷ್ಟೂ ಹಣ ರೈತರಿಗೆ ಸಂದಾಯವಾಗಲಿದೆ ಎಂದು ಸರ್ಕಾರ ಹೇಳಿದೆ.
ಹಾಲಿನ ದರ ಏರಿಕೆ ಕುರಿತು ಮಾಹಿತಿ ನೀಡಿರುವ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ‘ಹಾಲು ಒಕ್ಕೂಟಗಳು ಹಾಗೂ ರೈತರು ಪ್ರತಿ ಲೀಟರ್ ಹಾಲಿನ ದರ 5 ರೂ. ಹೆಚ್ಚಳ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಈ ಬೇಡಿಕೆಯ ಹಿನ್ನೆಲೆಯಲ್ಲಿ ಗುರುವಾರ (ಮಾರ್ಚ್ 27) ನಡೆದ ಸಚಿವ ಸಂಪುಟ ಸಭೆಯಲ್ಲಿ 4 ರೂ. ಏರಿಕೆಗೆ ಒಪ್ಪಿಗೆ ನೀಡಿದ್ದು, ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿ ಬರಲಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Surya Ghar Rooftop Scheme-10 ಲಕ್ಷ ಮನೆಗಳಿಗೆ ಸೋಲಾರ್ ಕರೆಂಟ್
ಹೆಚ್ಚಿದ ಬೆಲೆ ಸಂಪೂರ್ಣ ರೈತರಿಗೆ
ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲೇ ಹಾಲಿನ ಬೆಲೆ ಕಡಿಮೆಯಿದೆ. ನಮ್ಮಲ್ಲಿ ನಂದಿನಿ ಲೀಟರ್ಗೆ 42 ರು. ಇದೆ. ಅಸ್ಸಾಂನಲ್ಲಿ ಕೊಳ್ಳುವ ಹಾಗೂ ಮಾರುವ ದರದಲ್ಲಿ 27 ರು. ವ್ಯತ್ಯಾಸ ಇದೆ. ಕೇರಳ, ಗುಜರಾತ್, ದೆಹಲಿ, ತೆಲಂಗಾಣದಲ್ಲಿ ಹೆಚ್ಚು ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ.
ಹಸುಗಳ ನಿರ್ವಹಣಾ ವೆಚ್ಚ ದುಬಾರಿಯಾದ ಕಾರಣದಿಂದ ರೈತರ ಒತ್ತಾಯದ ಮೇರೆಗೆ ಹಾಲಿನ ದರ ಏರಿಕೆ ಮಾಡಲಾಗಿದ್ದು, ಹಾಲಿನ ಬೆಲೆ ಹೆಚ್ಚಳಕ್ಕೆ ರೈತ ಸಂಘವೂ ಒತ್ತಡ ಹೇರಿತ್ತು. ಒಂದು ಲೀಟರ್ ಹಾಲಿಗೆ 4 ರೂ. ಏರಿಕೆ ಮಾಡಲಾಗಿದ್ದು, ಈ ದರವನ್ನು ಪೂರ್ಣ ರೈತರಿಗೆ ಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರೊಸೆಸಿಂಗ್ ಶುಲ್ಕವಿಲ್ಲದೇ ₹30 ಲಕ್ಷದ ವರೆಗೆ ಲೋನ್ Zero Processing Fee Home Loan
680 ಕೋಟಿ ರೂ ಪ್ರೋತ್ಸಾಹಧನ ಬಿಡುಗಡೆ
ಇದೇ ಸಂದರ್ಭದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ‘ಹಾಲಿನ ದರ ಏರಿಕೆಯಿಂದ ಗ್ರಾಹಕರಿಗೆ ಹೊರ ಆಗುತ್ತಿರುವುದು ನಿಜ. ರೈತರಿಗೆ ನೇರವಾಗಿ ಹಣ ಹೋಗುವ ಹಿನ್ನೆಲೆಯಲ್ಲಿ ಜನ ಇದಕ್ಕೆ ಸಹಕಾರ ಮಾಡುತ್ತಾರೆ ಎನ್ನುವ ಭರವಸೆ ಇದೆ. ಇದು ರೈತರ ಅಭಿವೃದ್ಧಿಗೆ ತೆಗೆದುಕೊಂಡ ನಿರ್ಧಾರ’ ಎಂದು ಹೇಳಿದರು.
ರೈತರಿಗೆ ಕೊಡಬೇಕಾಗಿದ್ದ 680 ಕೋಟಿ ರೂ. ಹಾಲಿನ ಪ್ರೋತ್ಸಾಹಧನವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ. ಹಾಲಿನ ಜತೆ ಹಾಲಿನ ಉತ್ಪನ್ನಗಳ ದರವೂ ಏರಿಕೆ ಆಗಲಿದೆ. ಅದು ಏಪ್ರಿಲ್ 1ರಿಂದ ಇವುಗಳೂ ಹೆಚ್ಚಳವಾಗಿದೆ ಎಂದು ಸಹಕಾರ ಸಚಿವ ರಾಜಣ್ಣ ತಿಳಿಸಿದ್ದಾರೆ.
ಇದನ್ನೂ ಓದಿ: Gruhalakshmi Scheme- ಯುಗಾದಿ ನಂತರ ಮಹಿಳೆಯರಿಗೆ ₹4,000 ಗೃಹಲಕ್ಷ್ಮಿಹಣ ಜಮಾ
ಯಾವ ಹಾಲಿನ ಬೆಲೆ ಎಷ್ಟೆಷ್ಟು ಹೆಚ್ಚಳ?
- ಟೋನ್ ಹಾಲು (ನೀಲಿ ಪ್ಯಾಕೆಟ್): ಪ್ರಸ್ತುತ ದರ 42 ರೂ. ಇದ್ದು, ಪರಿಷ್ಕೃತ ದರ 46 ರೂ. ಆಗಲಿದೆ.
- ಹೋಮೋಜಿನೆಸ್ಟ್ ಟೋನ್ ಹಾಲು: ಪ್ರಸ್ತುತ 43 ರೂ. ಇದ್ದು, ಪರಿಷ್ಕೃತ ದರ 47 ರೂ. ಆಗಲಿದೆ.
- ಸಮೃದ್ಧಿ ಹಾಲಿನ ಪ್ಯಾಕೆಟ್: 56 ರೂ. ಗಳಿಂದ 60 ರೂ. ಗೆ ಹೆಚ್ಚಳವಾಗಲಿದೆ.
- ಆರೆಂಜ್ ಪ್ಯಾಕೆಟ್ ಹಾಲು: 54 ರೂ. ಗಳಿಂದ 58 ರೂ. ಗೆ ಏರಿಕೆಯಾಗಲಿದೆ.
- ಗ್ರೀನ್ ಸ್ಪೆಷಲ್ ಹಾಲು: 54 ರೂ. ಗಳಿಂದ 58 ರೂ. ಗೆ ಹೆಚ್ಚಳವಾಗಲಿದೆ.
- ನಾರ್ಮಲ್ ಗ್ರೀನ್ ಹಾಲು: 52 ರೂ. ಗಳಿಂದ 56 ರೂ. ಗೆ ಏರಿಕೆ.
- ಮೊಸರು ಪ್ರತಿ ಕೆಜಿಗೆ: 50 ರೂ. ಗಳಿಂದ 54 ರೂ. ಗೆ ಹೆಚ್ಚಳವಾಗಲಿದೆ.
ಇದನ್ನೂ ಓದಿ: Farmer Zero interest loan- ಇನ್ಮುಂದೆ ಪಿಎಲ್ಡಿ ಬ್ಯಾಂಕುಗಳಿಂದಲ್ಲೂ ರೈತರಿಗೆ ಬಡ್ಡಿ ಇಲ್ಲದ ಸಾಲ ಸೌಲಭ್ಯ