Jobs
    January 13, 2025

    Supreme Court Recruitment 2025 : ಸುಪ್ರೀಂ ಕೋರ್ಟ್ 90 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸುಪ್ರೀಂ ಕೋರ್ಟ್ (Supreme Court of India) ಲಾ ಕ್ಲರ್ಕ್ ಕಮ್ ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ…
    Govt Schemes
    January 13, 2025

    Borewell permission : ಇನ್ಮುಂದೆ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಸುವಂತಿಲ್ಲ

    ಇನ್ಮುಂದೆ ಬೇಕೆಂದಾಗ, ಬೇಕಾದಲ್ಲಿ ಬೋರ್‌ವೆಲ್ (Borewell) ಕೊರೆಸುವಂತಿಲ್ಲ. ಕೊಳವೆಬಾವಿ ಕೊರೆಸಲು ಸ್ಥಳೀಯ ಪ್ರಾಧಿಕಾರಗಳ ಅನುಮತಿ ಪಡೆಯಲೇ ಬೇಕು. ಹಾಗೊಂದು ವೇಳೆ…
    Govt Schemes
    January 13, 2025

    PM-Kisan FID : ಪಿಎಂ ಕಿಸಾನ್ ಯೋಜನೆ ಕೇಂದ್ರ ಕೃಷಿ ಇಲಾಖೆ ಹೊಸ ನಿಯಮ

    ಇನ್ಮುಂದೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಗೆ ಹೊಸದಾಗಿ ಸೇರುವವರು, ಫಲಾನುಭವಿಯಾಗಲು ಬಯಸುವವರು ಎಫ್‌ಐಡಿ ಅರ್ಥಾತ್ ಫಾರ್ಮರ್ಸ್ ಐಡೆಂಟಿಟಿ…
    Finance
    January 12, 2025

    Multiple Bank Accounts : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ ದಂಡ ಬೀಳುತ್ತಾ?

    ಆರ್‌ಬಿಐ (Reserve Bank of India) ಹೊಸ ನಿಯಮ ರೂಪಿಸಿದೆ; ಅದರ ಪ್ರಕಾರ, ‘ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ನೀವು ಅಕೌಂಟ್…
    Weather
    January 12, 2025

    First rain in 2025 : ಸಂಕ್ರಾಂತಿಗೆ ವರ್ಷದ ಮೊದಲ ಮಳೆ

    ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮದಿಂದ ಚಂಡಮಾರುತ (Cyclone) ಪರಿಚಲನೆ ಏರ್ಪಟ್ಟಿದ್ದು, ಕರ್ನಾಟಕದಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ…
    Jobs
    January 12, 2025

    AIIMS Recruitment 2025 : ಏಮ್ಸ್’ನಲ್ಲಿ 4,597 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ರಾಜ್ಯದ ಇಎಸ್‌ಐ ಆಸ್ಪತ್ರೆ (ಕರ್ನಾಟಕದ ಕಾರ್ಮಿಕ ರಾಜ್ಯ ವಿಮಾ ಸಂಸ್ಥೆಯ ಆಸ್ಪತ್ರೆ) ಸೇರಿದಂತೆ ದೇಶಾದ್ಯಂತ 21 ಭಾರತ ವೈದ್ಯಕೀಯ ವಿಜ್ಞಾನಗಳ…
    Finance
    January 11, 2025

    PKCC Loan : ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿ ಲೋನ್

    ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card-KCC) ಯೋಜನೆಯನ್ನು ದೇಶದ ರೈತ ಬಾಂಧವರ ಹಿತದೃಷ್ಠಿಯಿಂದ ಕೇಂದ್ರ ಸರಕಾರ ಜಾರಿಗೆ ತಂದಿದ್ದು;…
    Jobs
    January 10, 2025

    LIC BIMA SAKHI Scheme : SSLC ಪಾಸಾದ ಮಹಿಳೆಯರಿಗೆ LIC ಬಿಮಾ ಸಖಿ ಉದ್ಯೋಗ

    ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದ LICಯ ‘ಬಿಮಾ ಸಖಿ ಯೋಜನೆ’ಗೆ (LIC BIMA SAKHI) ಒಂದೇ ತಿಂಗಳಲ್ಲಿ ಬರೋಬ್ಬರಿ…
    Govt Schemes
    January 10, 2025

    Sheep-Goat Farming Schemes : ಕುರಿ-ಮೇಕೆ ಸಾಕಾಣಿಕೆ ಸಬ್ಸಿಡಿ ಯೋಜನೆಗಳು

    ಕುರಿ ಸಾಕಣೆಗಾಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ಸಿಗುವ ಸಬ್ಸಿಡಿ ಸೌಲಭ್ಯಗಳೇನು? ಅವುಗಳನ್ನು ಪಡೆಯುವುದ ಹೇಗೆ? ಯಾರೆಲ್ಲ…
    Govt Schemes
    January 9, 2025

    Crop Insurance : ಬೆಳೆ ವಿಮೆ ಹಣ ಜಮಾ ವಿವರ

    ರೈತರು ತಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್ ಅಥವಾ ಜಮೀನು ಸರ್ವೇ ನಂಬರ್‌ಗಳನ್ನು ಹಾಕಿ ಬೆಳೆ ವಿಮೆ ಪರಿಹಾರದ ಹಣ…

    Bloc Title

    • Supreme Court Recruitment 2025 : ಸುಪ್ರೀಂ ಕೋರ್ಟ್ 90 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

      ಸುಪ್ರೀಂ ಕೋರ್ಟ್ (Supreme Court of India) ಲಾ ಕ್ಲರ್ಕ್ ಕಮ್ ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 90 ಹುದ್ದೆಗಳ ನೇಮಕಾತಿ ನಡೆಯಲಿದ್ದು; ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. ಫೆಬ್ರವರಿ 7ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

      ವಿದ್ಯಾರ್ಹತೆ ಮತ್ತು ವಯೋಮಿತಿ

      WhatsApp Group Join Now
      Telegram Group Join Now

      ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕಾನೂನು ಪದವೀಧರರಾಗಿರಬೇಕು. ಬಾರ್ ಕೌನ್ಸಿಲ್ ಆಫ್ ಇಂಡಿಯಾದಿAದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿAದ ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಒಂದು ವೇಳೆ ಅಭ್ಯರ್ಥಿಗಳು ಲಾ ಕೋರ್ಸ್ನ ಐದನೇ ವರ್ಷದಲ್ಲಿದ್ದರೆ ಅಥವಾ ಕಾನೂನು ಪದವಿಯ ಮೂರನೇ ವರ್ಷದಲ್ಲಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ನೇಮಕಾತಿಗೆ ಮೊದಲು ಇದಕ್ಕೆ ಸಂಬAಧಿಸಿದ ನಿಗದಿತ ವಿದ್ಯಾರ್ಹತೆಯ ಪ್ರಮಾಣ ಪತ್ರ ಸಲ್ಲಿಸಿರಬೇಕು.

      ಅಭ್ಯರ್ಥಿಗಳು ರಿಸರ್ಚ್, ಅನಾಲಿಟಿಕಲ್ ಸ್ಕಿಲ್, ಕಂಪ್ಯೂಟರ್ ಜ್ಞಾನ ಸೇರಿದಂತೆ ತಮ್ಮ ಹುದ್ದೆಗೆ ಅಗತ್ಯವಾದ ಕೌಶಲ್ಯಗಳನ್ನು ಹೊಂದಿರಬೇಕು. ಇನ್ನು ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

      ಇದನ್ನೂ ಓದಿ: Canara Bank Recruitment 2025 : ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ

      ಅರ್ಜಿ ಶುಲ್ಕವೆಷ್ಟು?

      ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಜತೆಗೆ ಬ್ಯಾಂಕ್ ಶುಲ್ಕ ಕೂಡ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಯುಕೋ ಬ್ಯಾಂಕ್ ಲಿಂಕ್ ಬಳಸಿಕೊಂಡು ಆನ್‌ಲೈನ್’ನಲ್ಲಿ ಪಾವತಿಸಬೇಕು.

      ಆಯ್ಕೆ ಪ್ರಕ್ರಿಯರ ಹೇಗೆ?

      ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮಾರ್ಚ್ 9ರಂದು ಪರೀಕ್ಷೆ ನಿಗದಿಯಾಗಿದೆ. ಮೊದಲನೆ ಹಂತದ ಪರೀಕ್ಷೆಯು ಆನ್‌ಲೈನ್ ಮಾದರಿಯಲ್ಲಿ ನಡೆಯಲಿದ್ದು, ಬಹು ಆಯ್ಕೆ ಮಾದರಿ ಪ್ರಶ್ನೆಗಳಿರುತ್ತವೆ. ಆಫ್‌ಲೈನ್’ನಲ್ಲಿ 2ನೇ ಹಂತದ ಪರೀಕ್ಷೆ ನಡೆಯಲಿದೆ.

      ಇದರಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಗಳ ಕೀ ಉತ್ತರಗಳನ್ನು ಮಾರ್ಚ್ 10ರಂದು ಪ್ರಕಟಿಸಿ, ಆಕ್ಷೇಪಣೆಗೆ ಒಂದು ದಿನ ಸಮಯ ನೀಡಲಾಗುತ್ತದೆ. ಅಭ್ಯರ್ಥಿಗಳು ಪ್ರತಿ ಆಕ್ಷೇಪಣೆಗೆ 100 ರೂ. ಶುಲ್ಕ ಪಾವತಿಸಿ ಮಾರ್ಚ್ 11ರ ರಾತ್ರಿ 11.59ರೊಳಗೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರ ಇರಲಿದೆ.

      ಇದನ್ನೂ ಓದಿ: LIC BIMA SAKHI Scheme : SSLC ಪಾಸಾದ ಮಹಿಳೆಯರಿಗೆ LIC ಬಿಮಾ ಸಖಿ ಉದ್ಯೋಗ

      ಪ್ರಮುಖ ದಿನಾಂಕಗಳು

      • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 14-01-2025
      • ಅರ್ಜಿ ಸಲ್ಲಿಕೆ ಕೊನೇ ದಿನಾಂಕ : 07-02-2025
      • ಪರೀಕ್ಷೆ ನಡೆಯುವ ದಿನಾಂಕ : 09-03-2025

      ಅಧಿಸೂಚನೆ : Download
      ಅರ್ಜಿ ಲಿಂಕ್ : Apply Now

      ಇದನ್ನೂ ಓದಿ: Loan Information : ಸಾಲ ಪಡೆಯುವ ಮುನ್ನ ಈ ಮಾಹಿತಿ ತಿಳಿದಿರಿ

    • Borewell permission : ಇನ್ಮುಂದೆ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಸುವಂತಿಲ್ಲ

      ಇನ್ಮುಂದೆ ಬೇಕೆಂದಾಗ, ಬೇಕಾದಲ್ಲಿ ಬೋರ್‌ವೆಲ್ (Borewell) ಕೊರೆಸುವಂತಿಲ್ಲ. ಕೊಳವೆಬಾವಿ ಕೊರೆಸಲು ಸ್ಥಳೀಯ ಪ್ರಾಧಿಕಾರಗಳ ಅನುಮತಿ ಪಡೆಯಲೇ ಬೇಕು. ಹಾಗೊಂದು ವೇಳೆ ಅನುಮತಿ ಇಲ್ಲದೇ ಕೊಳವೆ ಬಾವಿ ಕೊರೆಸಿದರೆ ಜೈಲುವಾಸ ಮತ್ತು ದಂಡ ತೆರಬೇಕಾಗುತ್ತದೆ.

      WhatsApp Group Join Now
      Telegram Group Join Now

      ಹೌದು, ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ-2024ಕ್ಕೆ ಕಳೆದ ಜನವರಿ 09ರಂದು ರಾಜ್ಯಪಾಲರ ಒಪ್ಪಿಗೆ (Governor’s consent) ದೊರೆತಿದ್ದು, ಸರ್ಕಾರ ಅಧಿಕೃತ ಮುದ್ರೆ ಒತ್ತಿ ರಾಜ್ಯಪತ್ರ ಪ್ರಕಟಿಸಿದೆ.

      ಇದನ್ನೂ ಓದಿ: PM-Kisan FID : ಪಿಎಂ ಕಿಸಾನ್ ಯೋಜನೆ ಕೇಂದ್ರ ಕೃಷಿ ಇಲಾಖೆ ಹೊಸ ನಿಯಮ

      ಹೊಸ ನಿಯಮಗಳೇನು?

      ರೈತರನ್ನು ಹೊರತುಪಡಿಸಿ ಭೂಮಿ ಅಥವಾ ಆವರಣಗಳ ಮಾಲೀಕ ಅಥವಾ ಅನುಷ್ಠಾನ ಏಜೆನ್ಸಿಯು ಕೊರೆಬಾವಿ ಅಥವಾ ಕೊಳವೆಬಾವಿ ತೋಡುವ ಮೊದಲು ಕನಿಷ್ಠ 15 ದಿನ ಮುಂಚೆ ಸ್ಥಳೀಯ ಪ್ರಾಧಿಕಾರದ ಅಧಿಕಾರಿ ಅಥವಾ ನಗರ ಸ್ಥಳೀಯ ಸಂಸ್ಥೆಗೆ ಲಿಖಿತ ರೂಪದಲ್ಲಿ ತಿಳಿಸಬೇಕು.

      ವಿಫಲಗೊಂಡ ಅಥವಾ ಅಪೂರ್ಣವಾಗಿ ಕೊರೆಸಲಾದ ಕೊಳವೆ ಬಾವಿಗಳನ್ನು 24 ಗಂಟೆಯೊಳಗೆ ಮುಚ್ಚಬೇಕು. ಮುಚ್ಚಿರುವ ಕುರಿತು ಛಾಯಾಚಿತ್ರದೊಂದಿಗೆ ಪ್ರಾಧಿಕಾರಕ್ಕೆ ತಿಳಿಸಬೇಕು.

      ವಿಫಲವಾದ ಕೊಳವೆಬಾವಿ ತಪಾಸಣೆ ಹಾಗೂ ಮೇಲ್ವಿಚಾರಣೆಗಾಗಿ ಪ್ರತಿಯೊಂದು ಸ್ಥಳೀಯ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಅಥವಾ ಮಂಡಳಿಗಳ ಒಬ್ಬ ಅಧಿಕಾರಿಯನ್ನು ಗೊತ್ತುಪಡಿಸಲು ಕಾಯ್ದೆಯಲ್ಲಿ ಸೂಚಿಸಲಾಗಿದೆ.

      ಇದನ್ನೂ ಓದಿ: Multiple Bank Accounts : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ ದಂಡ ಬೀಳುತ್ತಾ?

      ನಿಯಮ ಉಲ್ಲಂಘಿಸಿದರೆ ಶಿಕ್ಷೆ ಏನು?

      ಸ್ಥಳೀಯ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆಗಳ ಅನುಮತಿ ಪಡೆಯದೆ ಬೋರ್‌ವೆಲ್ ಕೊರೆಸಿದರೆ ಹಾಗೂ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ ಮೂರು ತಿಂಗಳ ಕಾರಾಗೃಹ ವಾಸ ಹಾಗೂ ದಂಡ ಬೀಳಲಿದೆ.

      ಭೂ ಮಾಲೀಕ ಮಾತ್ರವಲ್ಲದೆ, ಅನುಷ್ಠಾನ ಏಜೆನ್ಸಿಗಳೂ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಭೂ ಮಾಲೀಕರು, ಏಜೆನ್ಸಿಗಳಿಗೆ ಅಲ್ಲದೆ, ಕೊಳವೆಬಾವಿ ಕೊರೆಸುವಲ್ಲಿ ಮತ್ತು ನಿಷ್ಕ್ರಿಯ ಕೊಳವೆಬಾವಿ ನಿರ್ವಹಣೆ ಮಾಡುವ ವಿಚಾರದಲ್ಲಿ ಸ್ಥಳೀಯ ಪ್ರಾಧಿಕಾರಗಳಿಗೂ ಕರ್ತವ್ಯ ನಿಗದಿಪಡಿಸಲಾಗಿದೆ.

      ಕರ್ನಾಟಕ ಅಂತರ್ಜಲ ಅಧಿನಿಯಮ ತಿದ್ದುಪಡಿ ಮಸೂದೆಯ ಹೊಸ ನಿಯಮಗಳ ಕುರಿತು ಸರ್ಕಾರ ಪ್ರಕಟಿಸಿರುವ ರಾಜ್ಯಪತ್ರ ಓದಲು ಇಲ್ಲಿ ಕ್ಲಿಕ್ ಮಾಡಿ…

      ಇದನ್ನೂ ಓದಿ: PKCC Loan : ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿ ಲೋನ್

    • PM-Kisan FID : ಪಿಎಂ ಕಿಸಾನ್ ಯೋಜನೆ ಕೇಂದ್ರ ಕೃಷಿ ಇಲಾಖೆ ಹೊಸ ನಿಯಮ

      ಇನ್ಮುಂದೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಗೆ ಹೊಸದಾಗಿ ಸೇರುವವರು, ಫಲಾನುಭವಿಯಾಗಲು ಬಯಸುವವರು ಎಫ್‌ಐಡಿ ಅರ್ಥಾತ್ ಫಾರ್ಮರ್ಸ್ ಐಡೆಂಟಿಟಿ ಡೀಟೈಲ್ಸ್ ಹೊಂದುವುದು ಕಡ್ಡಾಯವಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.

      WhatsApp Group Join Now
      Telegram Group Join Now

      ಅರ್ಜಿದಾರರು ಕೃಷಿ ಭೂಮಿ ಹೊಂದಿದ್ದಾರೆ ಎಂಬುದನ್ನು ರೈತರ ಗುರುತಿನ ಚೀಟಿ ದೃಢಪಡಿಸುತ್ತದೆ. ಹೀಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು ಕೃಷಿಕರ ಗುರುತಿನ ಚೀಟಿ ಹೊಂದಬೇಕಿದೆ. ಗುರುತಿನ ಚೀಟಿ ಇದ್ದಲ್ಲಿ ನೋಂದಣಿ ಪ್ರಕ್ರಿಯೆ ಸುಲಭವಾಗುವುದರಿಂದ ಫ್ರೂಟ್ಸ್ ತಂತ್ರಾ೦ಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು.

      ಸೇರಿದಂತೆ ದೇಶದ 10 ರಾಜ್ಯಗಳಲ್ಲಿ ಈ ವ್ಯವಸ್ಥೆ ಕಳೆದ ಜನವರಿ 1ರಿಂದಲೇ ಜಾರಿಗೆ ಬಂದಿದೆ. ಮುಂಬರುವ ದಿನಗಳಲ್ಲಿ ಉಳಿದ ರಾಜ್ಯಗಳಿಗೂ ಇದು ವಿಸ್ತರಣೆಯಾಗಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ಹೇಳಲಾಗಿದೆ.

      ಇದನ್ನೂ ಓದಿ: Multiple Bank Accounts : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ ದಂಡ ಬೀಳುತ್ತಾ?

      ಏನಿದು ಎಫ್‌ಐಡಿ?

      ಎಫ್‌ಐಡಿ ಎಂದರೆ ಫಾರ್ಮರ್ಸ್ ಐಡೆಂಟಿಟಿ ಡೀಟೈಲ್ಸ್ ಎಂದರ್ಥ. ಇದೊಂದು ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ. ಸರಕಾರ ಇದಕ್ಕಾಗಿಯೇ FRUITS ಎಂದು ಕರೆಯಲ್ಪಡುವ ಸಾಫ್ಟ್ವೇರ್ ಅಪ್ಲಿಕೇಶನ್ ಸಿದ್ಧಪಡಿಸಿದೆ. (Farmers Registration and Unified Beneficiary Information System -FRUITS) ಎಂಬುವುದು ಇದರ ಪೂರ್ಣಾರ್ಥ.

      FRUITS ವೆಬ್‌ಸೈಟ್‌ನಲ್ಲಿ ರೈತರು ಒಮ್ಮೆ ತಮ್ಮ ವಿವರ ನೋಂದಾಯಿಸಿದರೆ ಕೇವಲ ಪಿಎಂ ಕಿಸಾನ್ ಯೋಜನೆ ಮಾತ್ರವಲ್ಲ, ಎಲ್ಲ ರೀತಿಯ ಸರ್ಕಾರಿ ಯೋಜನೆಗಳ ಪ್ರಯೋಜನ ಸಿಗಲಿದೆ. ಜೊತೆಗೆ ಸರ್ಕಾರಿ ಯೋಜನೆಯ ಲಾಭ ಪಡೆಯಲು ವಿವಿಧ ಇಲಾಖೆಗಳಿಗೆ ಅಲೆಯುವ ಪಾಡು ಕೂಡ ತಪ್ಪುತ್ತದೆ.

      ಇದನ್ನೂ ಓದಿ: First rain in 2025 : ಸಂಕ್ರಾಂತಿಗೆ ವರ್ಷದ ಮೊದಲ ಮಳೆ

      ಎಫ್‌ಐಡಿ ನೋಂದಣಿ ಹೇಗೆ?

      ಎಫ್‌ಐಡಿ ಇಲ್ಲದೆ ಇರುವ ರೈತರು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಝರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್, ಸಿಎಸ್‌ಸಿ ಕೆಂದ್ರಗಳಲ್ಲಿ ಎಫ್‌ಐಡಿ ಮಾಡಿಸಿಕೊಳ್ಳಬಹುದು.

      ನಿಮ್ಮ ಎಫ್‌ಐಡಿ ಚೆಕ್ ಮಾಡಿ

      ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಫ್ರೂಟ್ಸ್ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮರ್ ಡಿಟೇಲ್ಸ್ ಪೇಜ್ ತೆರೆದುಕೊಳ್ಳುತ್ತದೆ.

      ಅಲ್ಲಿ Fruits ID ರೈತರ ಐಡಿ ನಂಬರ್ ಇರುತ್ತದೆ. ಇದು ಎಫ್‌ಐಡಿ ಯಿಂದ ಆರಂಭವಾಗುತ್ತದೆ. ಇದು ರೈತರಿಗೆ ಅತ್ಯಂತ ಮಹತ್ವದ್ದಾಗಿದೆ. ಇದರ ಮುಂದುಗಡೆ PMKID ಇರುತ್ತದೆ. ಇದು ಪಿಎಂ ಕಿಸಾನ್ ಐಡಿಯಾಗಿರುತ್ತದೆ. ಅದರ ಕೆಳಗಡೆ ರೈತರ ಹೆಸರು ಇರುತ್ತದೆ.

      ಎಫ್‌ಐಡಿ ಲಿಂಕ್ : ಇಲ್ಲಿ ಒತ್ತಿ…

      ಇದನ್ನೂ ಓದಿ: Sheep-Goat Farming Schemes : ಕುರಿ-ಮೇಕೆ ಸಾಕಾಣಿಕೆ ಸಬ್ಸಿಡಿ ಯೋಜನೆಗಳು

    Back to top button
    error: Content is protected !!