ಕೃಷಿಹವಾಮಾನ

Again and again drought forecast ಮತ್ತೆ ಮತ್ತೆ ಬರಗಾಲದ ಮುನ್ಸೂಚನೆ | ಹವಾಮಾನ ಇಲಾಖೆ ಹೊರಹಾಕಿದ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Again and again drought forecast

ಬರಗಾಲಕ್ಕೆ ಮಳೆ ಕೊರತೆಯೇ ಕಾರಣವಾದರೂ, ಈ ಮಳೆ ಕೊರತೆಗೆ ಕಾರಣವೇನು? ಎಂಬ ಪ್ರಶ್ನೆಗೆ ಹವಾಮಾನ ಇಲಾಖೆ ನೀಡಿದ ಆತಂಕದ ಮಾಹಿತಿ ಇಲ್ಲಿದೆ…

ದೇಶದ 14 ರಾಜ್ಯಗಳು ಈ ವರ್ಷ (2023) ಬರಗಾಲದ ಬವಣೆಯಲ್ಲಿ ಪರಿತಪಿಸುತ್ತಿವೆ. ಈ ಹದಿನಾಲ್ಕು ರಾಜ್ಯಗಳ ಪೈಕಿ ಕರ್ನಾಟಕ ಹೆಚ್ಚು ಬಾಧಿತವಾದ ರಾಜ್ಯವಾಗಿದ್ದು; ಕೆಲವೇ ಕೆಲವು ತಾಲ್ಲೂಕುಗಳನ್ನು ಹೊರತುಪಡಿಸಿ ಬಹುತೇಕ ಇಡೀ ರಾಜ್ಯವೇ ‘ಬರಪೀಡಿತ’ (drought) ಹಣೆಪಟ್ಟಿ ಪಡೆದುಕೊಂಡಿದೆ. ನಾಡಿನ ಅನ್ನದಾತರು ಬರ ಪರಿಹಾರಕ್ಕಾಗಿ ಹಂಬಲಿಸುತ್ತಿರುವ ಸಮಯದಲ್ಲಿಯೇ ಭಾರತೀಯ ಹವಾಮಾನ ಇಲಾಖೆ (Indian Meteorological Department) ಈ ‘ಬರ’ ಪರಿಸ್ಥಿತಿಗೆ ನಿಖರ ಕಾರಣವನ್ನು ಹೊರಹಾಕಿದೆ.

ಇದನ್ನೂ ಓದಿ: ರೈತರಿಗೆ ಉಚಿತ ಆಡು ಕುರಿ, ಹೈನುಗಾರಿಕೆ ತರಬೇತಿ | ಊಟ ವಸತಿ ಕೂಡ ಪ್ರೀ | ಮೊಬೈಲ್‌ನಲ್ಲೇ ಹೆಸರು ನೋಂದಾಯಿಸಿ Sheep-Goat & Dairy Farminf Free training

ವಾಯುಭಾರ ಕುಸಿತದ ಕಂಟಕ!

ಹೌದು, ಬರಕ್ಕೆ ಮಳೆ ಕೊತೆಯೇ ಕಾರಣವಾದರೂ, ಈ ಮಳೆ ಕೊರತೆಗೆ ಕಾರಣವೇನು? ಎಂಬ ಪ್ರಶ್ನೆಗೆ ಹವಾಮಾನ ಇಲಾಖೆ ಸ್ಪಷ್ಟ ಉತ್ತರ ಹೊರ ಹಾಕಿದೆ. 2023ನೇ ಇಸ್ವಿಯನ್ನು ಹವಾಮಾನ ಇಲಾಖೆಯು ‘ವಾಯುಭಾರ ಕುಸಿತ’ಗಳ (Atmospheric collapse) ದುರಂತಮಯ ವರ್ಷವೆಂದು ವ್ಯಾಖ್ಯಾನಿಸುತ್ತದೆ. ದಕ್ಷಿಣ ಭಾರತದಲ್ಲಿನ ‘ಎಲ್ ನಿನೋ’ (El Nino) ಪರಿಣಾಮದಿಂದಾಗಿ ಮಳೆ ವ್ಯವಸ್ಥೆ ಸ್ವರೂಪವೇ ಬದಲಾವಣೆ ಆಗಿದೆ ಎನ್ನುತ್ತದೆ ಹವಾಮಾನ ಇಲಾಖೆ.

ಕಳೆದ ವರ್ಷ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಬರೋಬ್ಬರಿ 12 ವಾಯುಭಾರ ಕುಸಿತ ಪರಿಸ್ಥಿತಿಗಳು ಉಂಟಾಗಿದ್ದು, ಕರ್ನಾಟಕವು ಸೇರಿದಂತೆ ದೇಶದ ಬಹುಪಾಲು ರಾಜ್ಯಗಳು ಮಳೆ ಕೊರತೆಯನ್ನು ಕಂಡಿವೆ. ಮುಂಬರುವ ವರ್ಷಗಳಲ್ಲಿ ಹವಾಮಾನ ಪರಿಸ್ಥಿತಿಗಳಿಂದಾಗಿ ಅರಬ್ಬಿ ಸಮುದ್ರದಲ್ಲಿ ಹೆಚ್ಚಿನ ಪ್ರತಿಕೂಲ ವ್ಯವಸ್ಥೆಗಳು ರೂಪುಗೊಳ್ಳುತ್ತವೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: NLM Scheme Loan : ಕುರಿ-ಮೇಕೆ, ಕೋಳಿ, ಹಂದಿ ಸಾಕಾಣೆಗೆ ₹20 ಲಕ್ಷದಿಂದ ₹1 ಕೋಟಿ ಸಾಲ ಸೌಲಭ್ಯ | ಸಾಲದ ಅರ್ಧ ಭಾಗ ಸಬ್ಸಿಡಿ

ಚಂಡಮಾರುಗಳ ಮರ್ಮರ

ಭಾರತೀಯ ಹವಾಮಾನ ಇಲಾಖೆಯ (IMD) ಮಾಹಿತಿಯ ಪ್ರಕಾರ, 2023ರಲ್ಲಿ 12 ಬಾರಿ ವಿವಿಧ ಹಂತದ ವಾಯುಭಾರ ಕುಸಿತಗಳನ್ನು ಕಂಡಿದೆ. ಇದರಲ್ಲಿ 3 ಸಾಮಾನ್ಯ ವಾಯುಭಾರ ಕುಸಿತ ಮತ್ತು 3 ಪ್ರಬಲ ವಾಯುಭಾರ ಕುಸಿತ ಕಂಡಿದೆ. ಚಂಡಮಾರುತಗಳ ಪೈಕಿ ಒಂದು ತೀವ್ರ ಚಂಡಮಾರುತ, ಒಂದು ಪ್ರಬಲ ಚಂಡಮಾರುತ ಮತ್ತು 3 ವಿಪರೀತ ಚಂಡಮಾರುಗಳು ಉಂಟಾಗಿವೆ.

ಕಳೆದ ವರ್ಷ ಹೀಗೆ ಸಾಲು ಸಾಲಾಗಿ ರೂಪುಗೊಂಡ ಒಟ್ಟು ಆರು ಚಂಡಮಾರುತಗಳ ಪೈಕಿ ಎರಡು ಚಂಡಮಾರುತಗಳು ಅರಬ್ಬಿ ಸಮುದ್ರದಲ್ಲಿ ಮತ್ತು ಉಳಿದ ನಾಲ್ಕು ಚಂಡಮಾರುತಗಳು ಬಂಗಾಳ ಕೊಲ್ಲಿಯಲ್ಲಿ ರಚನೆಯಾಗಿವೆ. ಈ ಚಂಡಮಾರುತಗಳ (Cyclone) ಆರ್ಭಟವೇ ಮಳೆಯ ಬಿರುಸನ್ನು ಕಡಿಮೆ ಮಾಡಿದೆ ಎಂಬುದನ್ನು ಹವಾಮಾನ ಇಲಾಖೆ ಗಮನಿಸಿದೆ.

ಇದನ್ನೂ ಓದಿ: krushi bhagya scheme 2023 : ಮಳೆಯಾಶ್ರಿತ ರೈತರಿಗೆ ನೀರಾವರಿ ಭಾಗ್ಯ | ಅರ್ಹ ರೈತರ ತಾಲ್ಲೂಕುವಾರು ಪಟ್ಟಿ ಇಲ್ಲಿದೆ… | ಕೂಡಲೇ ಅರ್ಜಿ ಸಲ್ಲಿಸಿ…

ಚಂಡಮಾರುತಕ್ಕೆ ಕಾರಣವೇನು?

ಸಮುದ್ರದ ಮೇಲ್ಮೈ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚಿನ ಏರಿಕೆಯಾದರೆ ಇದು ಚಂಡಮಾರುತದ ಸೃಷ್ಟಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಅರೇಬಿಯನ್ ಸಮುದ್ರಕ್ಕಿಂತ ಹೆಚ್ಚು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳು ರೂಪುಗೊಳ್ಳುತ್ತವೆ. ಏಕೆಂದರೆ ಇಲ್ಲಿನ ಸಣ್ಣ ಪ್ರದೇಶವು ಸೂರ್ಯನ ಶಾಖಕ್ಕೆ ಬಹುಬೇಗ ಬಿಸಿಯಾಗುತ್ತದೆ ಎನ್ನುತ್ತಾರೆ ತಜ್ಞರು.

ತಾಪಮಾನ ಏರಿಕೆಯಿಂದ ಕೇವಲ ಚಂಡಮಾರುತ ಮಾತ್ರ ಸೃಷ್ಟಿಯಾಗುವುದಿಲ್ಲ, ಮಳೆ ವ್ಯವಸ್ಥೆ ಕೂಡ ಬದಲಾಗುತ್ತದೆ. ಮುಂಬರುವ ದಿನಗಳಲ್ಲಿ ಅರಬ್ಬಿ ಸಮುದ್ರದಲ್ಲಿ ರಚನೆಯಾಗುವ ಚಂಡಮಾರುತಗಳ ಸಂಖ್ಯೆಯು ಹೆಚ್ಚಾಗಲಿದ್ದು; ಇದು ಮಳೆ ವ್ಯವಸ್ಥೆಯನ್ನೇ ಬದಲಿಸಬಹುದು ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಗಳು ವಿವರಿಸುತ್ತಾರೆ.

ಇದನ್ನೂ ಓದಿ: Nati koli Poultry Farming : ನಾಟಿ ಕೋಳಿ ಸಾಕಾಣಿಕೆಯಲ್ಲಿ ಅಧಿಕ ಲಾಭ ಗಳಿಕೆಯ ಸೂತ್ರಗಳು | ಇಲ್ಲಿವೆ ಯಶಸ್ವೀ ಕ್ರಮಗಳು…

ಮತ್ತೆ ಮತ್ತೆ ಬರಗಾಲ?

ಬರಗಾಲದ ಛಾಯೆ ಈ ವರ್ಷಕ್ಕೇ ಕೊನೆಗೊಳ್ಳುವುದಿಲ್ಲ. ಈಚೆಗೆ ಸಮುದ್ರದ ಮೇಲ್ಮೈ ಹೆಚ್ಚಿನ ವೇಗದಲ್ಲಿ ಬೆಚ್ಚಗಾಗುತ್ತಿದ್ದು; ಅರಬ್ಬಿ ಸಮುದ್ರದಲ್ಲಿ (arabian sea) ಚಂಡಮಾರುತಗಳ ಆವರ್ತನವೂ ಹೆಚ್ಚಾಗಿದೆ. ಅಲೆಗಳ ಎತ್ತರವೂ ಹೆಚ್ಚುತ್ತಿದೆ. ಕರಾವಳಿ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪದಿಂದ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

ಈ ಚಂಡಮಾರುತಗಳ ಆರ್ಭಟವು ಕರ್ನಾಟಕದ ಕರಾವಳಿ (Coast of Karnataka) ಭಾಗ ಮತ್ತು ನೆರೆ ರಾಜ್ಯಗಳಾದ ತಮಿಳುನಾಡು, ಕೇರಳದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಇಂತಹ ಯಥೇಚ್ಛ ಚಂಡಮಾರುತಗಳ ರಚನೆಯಿಂದಾಗಿ ಮಾನ್ಸೂನ್ (Monsoon) ಆರಂಭವು ವಿಳಂಬವಾಗಲಿದೆ. ಇದು ಮರುಕಳಿಸುವ ಸಾಧ್ಯತೆ ಹೆಚ್ಚಿದ್ದು; ಮತ್ತೆ ಮತ್ತೆ ಬರಗಾಲದ ಅಪಾಯವಿದೆ ಎಂದು IMD ಅಧಿಕಾರಿಗಳು ಎಚ್ಚರಿಸಿದ್ದಾರೆ.

Again and again drought forecast

ಇದನ್ನೂ ಓದಿ: Mgnrega Personal Work Subsidy : ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ಸಹಾಯಧನ | ₹5 ಲಕ್ಷದ ವರೆಗೆ ನೆರವು

WhatsApp Group Join Now
Telegram Group Join Now

Related Posts

error: Content is protected !!