JobsNews

Agniveer Recruitment 2025- ಭಾರತೀಯ ಸೇನೆಯಲ್ಲಿ ಅಗ್ನಿವೀರ್ ಹುದ್ದೆಗಳು

8th, 10th, 12th ಪಾಸಾಗಿದ್ರೆ ಈಗಲೇ ಅರ್ಜಿ ಸಲ್ಲಿಸಿ...

ಭಾರತೀಯ ಸೇನಾಪಡೆಯು ಅಗ್ನಿಪಥ್ ಯೋಜನೆ (Agnipath Scheme – Indian Army) ಅಡಿಯಲ್ಲಿ 8, 10, 12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅಗ್ನಿವೀರರಾಗಿ (Agniveer Recruitment 2025) ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದೆ…

WhatsApp Group Join Now
Telegram Group Join Now

ಭಾರತೀಯ ರಕ್ಷಣಾ ಪಡೆಯಲ್ಲಿ ಅಗ್ನಿವೀರ್’ಗಳಾಗಿ ನಾಲ್ಕು ವರ್ಷ ಸೇವೆ ಮಾಡುವ ಜತೆಗೆ ತಮ್ಮ ಮುಂದಿನ ಶಿಕ್ಷಣವನ್ನು ಪೂರ್ಣಗೊಳಿಸಬಹುದಾಗಿದೆ. ಎನ್‌ಸಿ, ಕ್ರೀಡಾ ಕೋಟಾದ ಅಡಿಯಲ್ಲಿಯೂ ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ಜನರಲ್ ಡ್ಯೂಟಿ, ಟೆಕ್ನಿಷಿಯನ್, ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಟ್ರೇಡ್ಸ್ಮನ್, ಸೇನಾ ಪೊಲೀಸ್ ಪಡೆ ಹೀಗೆ ವಿವಿಧ ಕೆಟಗರಿ ಅಡಿಯಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಕನಿಷ್ಠ 17ರಿಂದ ಗರಿಷ್ಠ 25 ವರ್ಷ ಒಳಗಿನವರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Male nakshatragalu 2025- 2025ರ ಮಳೆ ನಕ್ಷತ್ರಗಳು | ಹೇಗಿದೆ ಈ ವರ್ಷದ ಮಳೆಗಾಲ?

ಅಗ್ನಿವೀರರಾಗಲು ಶೈಕ್ಷಣಿಕ ಅರ್ಹತೆ ಏನಿರಬೇಕು?

  • ಅಗ್ನಿವೀರ್ ಜನರಲ್ ಡ್ಯೂಟಿ ಹುದ್ದೆಗೆ 10ನೇ ತರಗತಿಯನ್ನು ಕನಿಷ್ಠ 45 ಅಂಕಗಳೊ೦ದಿಗೆ ಪೂರ್ಣಗೊಳಿಸಿರಬೇಕು. ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಆದ್ಯತೆ ನೀಡಲಾಗುವುದು.
  • ಅಗ್ನಿವೀರ್ ‘ಟೆಕ್’ ಹುದ್ದೆಗೆ ಭೌತಶಾಸ್ತ್ರ/ರಸಾಯನಶಾಸ್ತ್ರ /ಗಣಿತ/ಇಂಗ್ಲಿಷ್ ವಿಷಯಗಳಲ್ಲಿ 12ನೇ ತರಗತಿ ಪೂರ್ಣಗೊಳಿಸಿರಬೇಕು.
  • ‘ಸೋಲ್ಸರ್ ಟೆಕ್ನಿಕಲ್’ (ನರ್ಸಿಂಗ್ ಅಸಿಸ್ಟೆಂಟ್/ಪಶುವೈದ್ಯ) ಹುದ್ದೆಗೆ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
  • ಸಿಪಾಯಿ ಫಾರ್ಮಾ ಹುದ್ದೆಗೆ 12ನೇ ತರಗತಿ, ಡಿ.ಫಾರ್ಮಾ, ಬಿ ಫಾರ್ಮಾ ಪೂರ್ಣಗೊಳಿಸಿರಬೇಕು.
  • ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ ಯಾವುದೇ ವಿಷಯ ಅಭ್ಯಸಿಸಿ ಶೇಕಡ.60 ಅಂಕಗಳೊ೦ದಿಗೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು.
  • ಅಗ್ನಿವೀರ್ ಟ್ರೇಡ್‌ಮನ್ ಹುದ್ದೆಗೆ 8 ಮತ್ತು 10ನೇ ತರಗತಿಯಲ್ಲಿನ ಪ್ರತಿ ವಿಷಯಗಳಲ್ಲಿ ಶೇಕಡ 33 ಅಂಕ ಪಡೆದಿರಬೇಕು.

ಅಗ್ನಿವೀರ್ ಜನರಲ್ ಡ್ಯೂಟಿ ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳಾ ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಶೇಕಡ 45 ಅಂಕಗಳೊAದಿಗೆ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾಗಿರಬೇಕು. ಲೈಟ್ ಮೋಟಾರ್ ವೆಹಿಕಲ್ ವಾಹನ ಚಾಲನ ಪರವಾನಗಿ (ಡಿಎಲ್) ಇರುವವರಿಗೆ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: Zero Interest Crop Loan- ರೈತರಿಗೆ ₹5 ಲಕ್ಷ ಬಡ್ಡಿ ಇಲ್ಲದ ಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ…

ದೈಹಿಕ ಅರ್ಹತೆಗಳೇನು?

ಜನರಲ್ ಡ್ಯೂಟಿ ಮತ್ತು ಟ್ರೇಡ್‌ಮನ್ ವಿಭಾಗದಲ್ಲಿನ ಹುದ್ದೆಗಳಿಗೆ ನೋಂದಾಯಿಸುವ ಅಭ್ಯರ್ಥಿಗಳು 166 ಸೆಂ. ಮೀ. ಎತ್ತರ, ಟೆಕ್ನಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು 165 ಸೆಂ.ಮೀ ಹಾಗೂ ಕ್ಲರ್ಕ್/ಸ್ಟೋರ್ ಕೀಪರ್/ ಟೆಕ್ನಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು 162 ಸೆಂ. ಮೀ. ಎತ್ತರ ಹೊಂದಿರಬೇಕು. ಈ ಹುದ್ದೆಗಳಿಗೆ ಅಭ್ಯರ್ಥಿಗಳ ಎದೆಯ ಸುತ್ತಳತೆ 77 ಸೆಂ.ಮೀ. ಇರಬೇಕು.

Agniveer Recruitment 2025
Agniveer Recruitment 2025

ಅಗ್ನಿವೀರರಿಗೆ ವೇತನವೆಷ್ಟು?

ಅಗ್ನಿವೀರ್ ಸೇನಾ ಸಿಬ್ಬಂದಿಗೆ 30,000 ರೂ. ಮಾಸಿಕ ವೇತನ ನಿಗದಿ ಮಾಡಲಾಗಿದೆ. ನಾಲ್ಕನೇ ವರ್ಷಕ್ಕೆ ಈ ಮೊತ್ತ 40,000ಕ್ಕೆ ಏರಿಕೆಯಾಗಲಿದೆ. ಇದರಲ್ಲಿ 21,000 ರೂ. ಮಾತ್ರ ದೊರೆಯಲಿದ್ದು, ಇನ್ನು 9,000 ರೂ.ಗಳನ್ನು ಸೇವಾ ನಿಧಿಗೆ ಜಮೆ ಮಾಡಲಾಗುತ್ತದೆ. 4ನೇ ವರ್ಷ ಕೈಗೆ ಸಿಗುವ ಮೊತ್ತ 28 ಸಾವಿರವಾಗಿದ್ದು, 12,000 ರೂ. ಸೇವಾ ನಿಧಿಗೆ ಸೇರಲಿದೆ.

ಪ್ರತಿ ತಿಂಗಳು ಸರ್ಕಾರ ಕೂಡ ಸೇವಾ ನಿಧಿಗೆ ಉದ್ಯೋಗಿಯಷ್ಟೇ ಮೊತ್ತ ಭರಿಸಲಿದ್ದು, 4 ವರ್ಷಗಳ ಬಳಿಕ ಎರಡೂ ಸೇರಿ 10.04 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಇದರ ಹೊರತಾಗಿ ಸಮವಸ್ತ್ರ, ಪ್ರಯಾಣ ಸೇರಿ ಇತರ ಭತ್ಯೆಗಳನ್ನು ನೀಡಲಾಗುತ್ತದೆ. ಇದಲ್ಲದೆ, 48 ಲಕ್ಷ ರೂ.ಗಳ ಜೀವವಿಮೆಯೂ ಇದ್ದು, ಅಪಘಾತ ಹಾಗೂ ಅಂಗವಿಕಲರಾದಲ್ಲಿ ಪರಿಹಾರ ಸಿಗಲಿದೆ.

ಇದನ್ನೂ ಓದಿ: Central Govt Jobs for SSLC Passed- SSLC ಪಾಸಾದವರಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳು | ವಿವಿಧ ಹುದ್ದೆಗಳ ಪಟ್ಟಿ ಇಲ್ಲಿದೆ…

ಆಯ್ಕೆ ಪ್ರಕ್ರಿಯೆ ಹೇಗೆ?

ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ಟೈಪಿಂಗ್ ಪರೀಕ್ಷೆ (ಗುಮಾಸ್ತ ಹುದ್ದೆ), ಹೊಂದಾಣಿಕೆ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ವರ್ಷ ಸೇವಾವಧಿ ಇರಲಿದ್ದು, ಅದಕ್ಕೂ ಮುನ್ನ ಕೆಲಸ ತೊರೆಯಲು ಅವಕಾಶವಿರುವುದಿಲ್ಲ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಅಭ್ಯರ್ಥಿಗಳು ಭಾರತೀಯ ಸೇನೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿಯನ್ನು ಏಪ್ರಿಲ್ 10ರೊಳಗೆ ಸಲ್ಲಿಸಬೇಕು. ಎಲ್ಲ ವರ್ಗದ ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 01-04-2025

ಅರ್ಜಿ ಲಿಂಕ್: Apply Now
ಅಧಿಸೂಚನೆ: Clikc Here

ಇದನ್ನೂ ಓದಿ: SSLC ಪಾಸಾದವರಿಗಾಗಿಯೆ ಇವೆ ರಾಜ್ಯ ಸರ್ಕಾರದ ಈ ಹುದ್ದೆಗಳು Karnataka State GOVT Jobs for SSLC Passers

WhatsApp Group Join Now
Telegram Group Join Now

Raitapi Jagattu

ಮಾಲತೇಶ ಮಾಳಮ್ಮನವರ್, ಸಂಪಾದಕರು ಮಾಲತೇಶ ಮಾಳಮ್ಮನವರ್ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!