Agriculture Land Way Revenue Maps Online : ನಿಮ್ಮ ಜಮೀನು ಕಾಲುದಾರಿ ನಕ್ಷೆಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ…
ರೈತರ ಜಮೀನು ಕಾಲುದಾರಿ, ಬಂಡಿದಾರಿ ಕುರಿತು ಸರಕಾರ ಹೊಸ ಆದೇಶ
ರಾಜ್ಯ ಸರಕಾರ ಈಚೆಗೆ ರೈತರು ಜಮೀನಿಗೆ ಹೋಗುವ ಕಾಲುದಾರಿ, ಬಂಡಿದಾರಿ ಕುರಿತು ಮಹತ್ವದ ಆದೇಶ ಹೊರಡಿಸಿದೆ. ಈ ಆದೇಶ ಹೊರಬಿದ್ದ ಬಳಿಕ ಕೆಲವು ರೈತರು ನಮ್ಮ ಹೊಲ, ತೋಟ ಪಟ್ಟಿಗಳಿಗೆಲ್ಲ ಸರಕಾರ ಕಾಲುದಾರಿ, ಬಂಡಿದಾರಿ ವ್ಯವಸ್ಥೆ ಮಾಡಿಕೊಡಲಿದೆ ಎಂದೇ ಭಾವಿಸಿಕೊಂಡಿದ್ದಾರೆ. ಇದು ಅಸಾಧ್ಯ.
ಸರಕಾರ ಆದೇಶಿಸಿದ್ದು ರೈತರು ತಮ್ಮ ಜಮೀನಿಗೆ ತೆರಳುವ ಕಾಲುದಾರಿ, ಬಂಡಿದಾರಿಗಳು ಗ್ರಾಮ ನಕ್ಷೆಯಲ್ಲಿದ್ದು; ಅವುಗಳನ್ನು ಮುಚ್ಚಿದ್ದರೆ ಅಥವಾ ಬಲವಂತದಿ೦ದ ಬಂದ್ ಮಾಡಿದ್ದರೆ ಅಂತಹ ದಾರಿಗಳನ್ನು ಸ್ಥಳೀಯ ತಹಸೀಲ್ದಾರರು ಬಿಡಿಸಿ ಕೊಡಬೇಕು ಎಂಬ ಹುಕುಂ ಸರಕಾರ ಹೊರಡಿಸಿದೆ. ಅಂದರೆ ಈ ಮೊದಲೇ ಕಾಲುದಾರಿ, ಬಂಡಿದಾರಿ ನಕ್ಷೆಯಲ್ಲಿದ್ದರೆ ಮಾತ್ರ ದಾರಿ ಸೌಲಭ್ಯ ಸಿಗಲಿದೆ. ಇಲ್ಲದ ದಾರಿಯನ್ನು ಸೃಷ್ಟಿಸುವುದು ಕಷ್ಟಸಾಧ್ಯ!
ಮೊಬೈಲ್’ನಲ್ಲೇ ಚೆಕ್ ಮಾಡಿ
ಹಾಗಿದ್ದರೆ ರೈತರು ತಮ್ಮ ಜಮೀನು, ತೋಟಗಳಿಗೆ ತೆರಳಲು ಗ್ರಾಮನಕ್ಷೆಯಲ್ಲಿ ಕಾಲುದಾರಿ, ಬಂಡಿದಾರಿ ಇದೆ ಎಂಬುವುದನ್ನು ಕಂಡು ಹಿಡಿಯುವುದು ಹೇಗೆ? ಆ ನಕ್ಷೆಯಲ್ಲಿ ಗುರುತಿಸುವುದು ಹೇಗೆ? ಎಂಬ ಪ್ರಶ್ನೆ ಸಹಜ. ಇದಕ್ಕೆ ಪರಿಹಾರ ಕಂಡುಕೊಳ್ಳಲು ರೈತರು ಸರಕಾರಿ ಕಚೇರಿಗಳಿಗೆ ಅಲೆದಾಡಬೇಕಿಲ್ಲ.
ಮನೆಯಲ್ಲಿ ಕುಳಿತು ಮೊಬೈಲ್‌ನಲ್ಲಿಯೇ ತಮ್ಮ ಜಮೀನಿನ ಸುತ್ತಮುತ್ತಲಿನ ಸರ್ವೆ ನಂಬರ್’ಗಳು, ಜಮೀನಿಗೆ ಹೋಗಲು ಬಂಡಿದಾರಿ, ಕಾಲುದಾರಿ ಇದೆಯೋ? ಇಲ್ಲವೋ? ಎಂಬುದನ್ನು ಸುಲಭವಾಗಿ ಚೆಕ್ ಮಾಡಬಹುದು.
ಇದನ್ನೂ ಓದಿ: Murraya exotica : ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ ತರುವ ಬೆಳೆ
ನಕ್ಷೆಯಲ್ಲಿ ಏನೆಲ್ಲ ಇರಲಿದೆ?
ರೈತರು ತಮ್ಮ ಊರಿನ ನಕ್ಷೆಯನ್ನು ಮೊಬೈಲ್‌ನಲ್ಲಿಯೇ ವೀಕ್ಷಿಸಲು ಹಾಗೂ ಡೌನ್‌ಲೋಡ್ ಮಾಡಿಕೊಳ್ಳಲು ಕಂದಾಯ ಇಲಾಖೆ ವ್ಯವಸ್ಥೆ ಕಲ್ಪಿಸಿದೆ. ಬರೀ ಜಮೀನು ಕಾಲುದಾರಿ, ಬಂಡಿದಾರಿ ಮಾತ್ರವಲ್ಲದೇ, ತಮ್ಮ ಊರಿನ ಸುತ್ತಮುತ್ತ ಹರಿಯುವ ಹಳ್ಳಕೊಳ್ಳಗಳು, ಕಾಲುವೆಗಳು, ನದಿಗಳು ಹರಿಯುತ್ತಿದ್ದರೆ ಯಾವ ದಿಕ್ಕಿನಲ್ಲಿ ಹರಿಯುತ್ತಿದೆ.
ಯಾವ ಸರ್ವೆ ನಂಬರ್ ಪಕ್ಕದಲ್ಲಿ ನದಿ, ಹಳ್ಳಕೊಳ್ಳಗಳು ಹರಿಯುತ್ತಿವೆ ಎಂಬ ಮಾಹಿತಿ ಕೂಡ ರೈತರಿಗೆ ಸಿಗಲಿದೆ. ಜಮೀನು ಸರ್ವೆ ನಂಬರ್ ಗೊತ್ತಿದ್ದರೆ ಸಾಕು, ಅದರ ಅಕ್ಕಪಕ್ಕದಲ್ಲಿ ರಸ್ತೆ ಯಾವ ಮಾರ್ಗದಿಂದ ಯಾವ ಮಾರ್ಗದ ಕಡೆ ಹೋಗುತ್ತಿದೆ ಎಂಬುದನ್ನು ಚೆಕ್ ಮಾಡಬಹುದು.
ಗ್ರಾಮ ನಕ್ಷೆಯಲ್ಲಿ ಎಡಗಡೆ ಇನ್ನೊಂದು ಕಾಲಂ ಕಾಣುತ್ತದೆ. ಅಲ್ಲಿ ಗ್ರಾಮದ ಗಡಿ ರೇಖೆ, ಸರ್ವೇ ನಂಬರ್ ಗಡಿ, ಹಿಸ್ಸಾ ನಂಬರ್’ಗಳು, ಸರ್ವೆ ನಂಬರ್’ಗಳು, ಕಾಲುದಾರಿ, ಬಂಡಿ ದಾರಿ, ಡಾಂಬರು ರಸ್ತೆ, ಹಳ್ಳ, ಬೆಟ್ಟ, ಕೆರೆ, ನೀರು ಹರಿಯುವ ದಿಕ್ಕು, ಹಾಳಾದ ಬಾವಿ, ದೇವಸ್ಥಾನ ಸೇರಿದಂತೆ ಇನ್ನಿತರ ಮಾಹಿತಿಯ ಕಾಲಂ ಇರುತ್ತದೆ. ಅದರ ಮುಂದುಗಡೆ ಗುರುತಿಸುವ ಚಿಹ್ನೆಗಳಿರುತ್ತವೆ. ಅಷ್ಟೇ ಅಲ್ಲ, ಅಕ್ಕಪಕ್ಕದ ಊರಿನಿಂದ ತಮ್ಮೂರಿಗೆ ಹಾದು ಹೋಗುವ ಕಾಲುದಾರಿ, ಬಂಡಿದಾರಿಗಳ ಮಾಹಿತಿ ಸಹ ಕಾಣಿಸುತ್ತದೆ.
ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು
ಗ್ರಾಮನಕ್ಷೆ ನೋಡುವುದು ಹೇಗೆ?
ನಕ್ಷೆಯಲ್ಲಿರುವ ಸಂಪೂರ್ಣ ಮಾಹಿತಿ ತಿಳಿಯಲು ರೈತರು ಮೊದಲಿಗೆ ತಮ್ಮ ಊರಿನ ಗ್ರಾಮನಕ್ಷೆ ವೀಕ್ಷಿಸಲು ಅಥವಾ ಡೌಪ್ಲೋಡ್ ಮಾಡಿಕೊಳ್ಳಲು ಕಂದಾಯ ಇಲಾಖೆಯ ಜಾಲತಾಣದ Revenue Maps Online ಪುಟಕ್ಕೆ ಭೇಟಿ ಕೊಡಬೇಕು. ಅದರ ಡೈರೆಕ್ಟ್ ಲಿಂಕ್ ಕೆಳಗೆ ನೀಡಲಾಗಿದೆ.
ಆಗ ನಿಮ್ಮ ಮೊಬೈಲ್‌ನಲ್ಲಿ ರಾಜ್ಯದ ಎಲ್ಲಾ ಗ್ರಾಮಗಳ ಮ್ಯಾಪ್ ಅಪ್ಲೋಡ್ ಮಾಡಲಾಗಿದ Revenue Maps Online ಪುಟ ಈ ಕೆಳಗಿನಂತೆ ತೆರೆದುಕೊಳ್ಳುತ್ತದೆ.
ನಿಮ್ಮ ಊರಿನ ಮ್ಯಾಪ್ ನೋಡಲು ಮೊದಲು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ತದನಂತರ ನೀವು ಆಯ್ಕೆ ಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಟ್ಟಿ ಕಾಣಿಸುತ್ತದೆ.
ಅಲ್ಲಿ ಕಾಣುವ ಪಿಡಿಎಫ್ ಪೇಜ್ ಮೇಲೆ ಕ್ಲಿಕ್ ಮಾಡಿದರೆ ಪಿಡಿಎಫ್ ಪೇಜ್ ಓಪನ್ ಆಗುತ್ತದೆ. ಮೊಬೈಲ್‌ನಲ್ಲೇ ಡೌನ್‌ಲೋಡ್ ಆದ ಗ್ರಾಮನಕ್ಷೆಯಲ್ಲಿ ನಮ್ಮ ಜಮೀನು ದಾರಿ, ನಿಮ್ಮೂರಿನ ಸುತ್ತಮುತ್ತಲು ಇರುವ ದಾರಿ, ಹಳ್ಳಕೊಳ್ಳಗಳು ಹರಿದು ಹೋಗುವ ಮಾರ್ಗಗಳು ಸಹ ಕಾಣಿಸುತ್ತವೆ.
- ನಿಮ್ಮೂರ ಗ್ರಾಮನಕ್ಷೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ : Click Here
- ಜಮೀನು ದಾರಿ ಕುರಿತು ಸರಕಾರ ಹೊಸ ಸುತ್ತೋಲೆ : Download
ಇದನ್ನೂ ಓದಿ: ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ
One Comment