ಸರಕಾರಿ ಯೋಜನೆಸುದ್ದಿಗಳು

Akrama Sakrama : ಸರಕಾರಿ ಜಾಗದಲ್ಲಿ ಕಟ್ಟಿದ ಅನಧಿಕೃತ ಮನೆಗಳು ಸಕ್ರಮ? ಕಂದಾಯ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Akrama Sakrama : ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮನೆಗಳ ಸಕ್ರಮಕ್ಕೆ ಸರಕಾರ ಅರ್ಜಿ ಆಹ್ವಾನಿಸಿದ್ದು; ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಮನೆಗಳು ಸಕ್ರಮವಾಗಲಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕಳೆದ ಫೆಬ್ರವರಿ 19ರಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Village accountant recruitment 2024 : ಪಿಯುಸಿ ಪಾಸಾದವರಿಂದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅಧಿಕೃತ ಅಧಿಸೂಚನೆ ಬಿಡುಗಡೆ | 1000 ಹುದ್ದೆಗಳು

ರೈತರಿಗೆ ಬಗರ್ ಹುಕುಂ ಜಮೀನು ಹಕ್ಕುಪತ್ರ

ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕೃಷಿ ಮಾಡಿಕೊಂಡಿರುವ ಅರ್ಹ ರೈತರ ಬಗರ್ ಹುಕುಂ ಜಮೀನು ಹಾಗೂ ಸರಕಾರಿ ಜಾಗದಲ್ಲಿ ಕಟ್ಟಿಕೊಂಡಿರುವ ಅರ್ಹ ಫಲಾನುಭವಿಗಳ ಮನೆ ಸಕ್ರಮೀಕರಣ ಕೋರಿ ರಾಜ್ಯಾದ್ಯಂತ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗಿವೆ. 1991ರಿಂದ 2023ರ ಏಪ್ರಿಲ್ ವರೆಗೂ ನಮೂನೆ 50, 53 ಹಾಗೂ 57ರ ಅಡಿಯಲ್ಲಿ ಬಗರ್ ಹುಕುಂ ಅರ್ಜಿ ಸಲ್ಲಿಕೆಯಾಗಿವೆ.

ಬಗರ್ ಹುಕುಂ ಜಮೀನು ಸಕ್ರಮೀಕರಣ ಕೋರಿ ಈತನಕ ಒಟ್ಟು 9,56,512 ಅರ್ಜಿ ಸಲ್ಲಿಕೆಯಾಗಿದ್ದು; 54 ಲಕ್ಷ ಎಕರೆ ಭೂಮಿ ಮಂಜೂರಾತಿಗೆ ಕೋರಿಕೆ ಸಲ್ಲಿಕೆಯಾಗಿವೆ. ಹೀಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಡಿಜಿಟಲ್ ಹಕ್ಕುಪತ್ರ ಸಿಗಲಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: FDA SDA Recruitment 2024 : ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ | ಖಾಲಿ ಇರುವ 300 ಹುದ್ದೆಗಳ ನೇಮಕಾತಿಗೆ ಜಿಲ್ಲಾವಾರು ಪಟ್ಟಿ ಬಿಡುಗಡೆ

ಅನಧಿಕೃತ ಮನೆಗಳು ಸಕ್ರಮ

ಇನ್ನು ಸರಕಾರದ ನಿಯಮಾವಳಿಯಂತೆ 2015ರ ಜನವರಿ 1ಕ್ಕಿಂತಲೂ ಮೊದಲು ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡು ವಾಸವಿರುವ ಅರ್ಹ ಫಲಾನುಭವಿಗಳು ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅನಧಿಕೃತ ವಾಸದ ಮನೆಗಳ ಸಕ್ರಮಕ್ಕೆ ಕರ್ನಾಟಕ ಭೂಕಂದಾಯ ಕಾಯಿದೆಯ 1964ರ ಕಲಂ 94ಸಿ, 94ಸಿಸಿ ಅಡಿ ಅರ್ಜಿ ಸ್ವೀಕೃತಿಗೆ ಈವರೆಗೆ 4-5 ಬಾರಿ ಅವಧಿ ವಿಸ್ತರಿಸಲಾಗಿದೆ.

ವಿಧಾನಸಭೆಯಲ್ಲಿ ಬಿಜೆಪಿಯ ಯಶ್‌ಪಾಲ್ ಸುವರ್ಣ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು ‘2016ರಲ್ಲಿ ಮೊದಲ ಬಾರಿಗೆ 94ಸಿ, 94ಸಿಸಿ ಅಡಿ ಅರ್ಜಿ ಸ್ವೀಕೃತಿ ಶುರುವಾಯಿತು. ನಂತರ 2018, 2019, 2021 ಹಾಗೂ ಕೊನೆಗೆ 2022ರ ಮಾರ್ಚ್ 31ರ ವರೆಗೆ ಗಡುವು ವಿಸ್ತರಿಸಲಾಗಿದೆ. ಒಟ್ಟು 5 ಬಾರಿ ಅರ್ಜಿ ಸ್ವೀಕೃತಿಗೆ ಅವಧಿ ವಿಸ್ತರಣೆಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Solar Agriculture Pumpset : ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಭಾಗ್ಯ | ಇಂಧನ ಇಲಾಖೆಗೆ ಬಜೆಟ್ ಕೊಡುಗೆ

ಮನೆ ಸಕ್ರಮಕ್ಕೆ ಮಂಜೂರಾದ ಅರ್ಜಿಗಳೆಷ್ಟು?

ಕಂದಾಯ ಸಚಿವರು ವಿಧಾಸಭೆಯಲ್ಲಿ ನೀಡಿದ ಮಾಹಿತಿ ಪ್ರಕಾರ 94ಸಿ ಅಡಿ 6.26 ಲಕ್ಷ ಅರ್ಜಿ ಸ್ವೀಕೃತವಾಗಿವೆ. ಈ ಪೈಕಿ 1.63 ಲಕ್ಷ ಅರ್ಜಿ ಮಂಜೂರಾಗಿದ್ದು; 4.12 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ. ಇನ್ನು 94ಸಿಸಿ ಅಡಿ 2.12 ಲಕ್ಷ ಅರ್ಜಿಗಳು ಸ್ವೀಕೃತಿಯಾಗಿವೆ. ಅದರಲ್ಲಿ 69,236 ಅರ್ಜಿ ಮಂಜೂರಾಗಿದ್ದರೆ, 1.28 ಲಕ್ಷ ಅರ್ಜಿಗಳು ಅನರ್ಹಗೊಂಡಿದೆ.

94ಸಿ ಹಾಗೂ 94ಸಿಸಿ ಅಡಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ತಿರಸ್ಕೃತವಾಗಿರುವ ಬಹುತೇಕ ಅರ್ಜಿಗಳು ಬಡವರ ಹೆಸರಿನಲ್ಲಿ ಸಲ್ಲಿಕೆಯಾದ ಅನರ್ಹರ ಅರ್ಜಿಗಳಾಗಿವೆ. ಇಂತಹ ಅನರ್ಹರೇ ಸಾಕಷ್ಟು ಅರ್ಜಿ ಸಲ್ಲಿಸುತ್ತಿದ್ದು; ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತೆ ವಿಸ್ತರಣೆ ಮಾಡುವುದು ಕಷ್ಟಕರ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bagar Hukum land : ಈ ರೈತರ ಬಗರ್ ಹುಕುಂ ಜಮೀನು ಸರಕಾರದ ಸ್ವಾಧೀನ | ಸುತ್ತೋಲೆ ಹೊರಡಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ

ಯಾವೆಲ್ಲ ಮನೆಗಳು ಸಕ್ರಮವಾಗಲಿವೆ?

ಸರಕಾರದ ನಿಯಮಾವಳಿ ಪ್ರಕಾರ 2015ರ ಜನವರಿ 1ಕ್ಕಿಂತಲೂ ಮೊದಲು ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡು ವಾಸವಿರುವ ಅರ್ಹ ಫಲಾನುಭವಿಗಳ ಮನೆಗಳು ಸಕ್ರಮಗೊಳ್ಳಲಿವೆ. ಈ ಫಲಾನುಭವಿಗಳು ಈಗಾಗಲೇ ಕರ್ನಾಟಕ ಭೂಕಂದಾಯ ಕಾಯಿದೆಯ 1964ರ ಕಲಂ 94ಸಿ, 94ಸಿಸಿ ಅಡಿ ಅರ್ಜಿ ಸಲ್ಲಿಸಿದ್ದು; ಆ ಅರ್ಜಿ ಸ್ವೀಕೃತವಾಗಿದ್ದರೆ, ಅಂತಹ ಫಲಾನುಭವಿಗಳ ಮನೆಗಳು ಸಕ್ರಮಗೊಳ್ಳುವ ಸಾಧ್ಯತೆ ಹೆಚ್ಚಿದೆ.

WhatsApp Group Join Now
Telegram Group Join Now

Related Posts

error: Content is protected !!