ಉದ್ಯೋಗಸುದ್ದಿಗಳು

WCD Karnataka Anganwadi Recruitment 2024 : ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. SSLC, PUC ಪಾಸಾದ ಅರ್ಹ ಮಹಿಳೆಯರು ಈ ಅವಕಾಶ ಬಳಸಿಕೊಳ್ಳಬಹುದು…

Anganwadi Teachers Recruitment 2024 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಗಳ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆ, ಮಿನಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು; ಆಸಕ್ತರು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗಾವಕಾಶ ಪಡೆಯಬಹುದಾಗಿದೆ.

ಯಾವೆಲ್ಲ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ?

 • ಬೆಂಗಳೂರು ನಗರ
 • ಬೆಂಗಳೂರು ಗ್ರಾಮಾಂತರ
 • ಬೀದರ್
 • ಬೆಳಗಾವಿ
 • ಹಾವೇರಿ
 • ತುಮಕೂರು

ವಿದ್ಯಾರ್ಹತೆ ಎಷ್ಟರಬೇಕು?

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ PUC ತೇರ್ಗಡೆ ಹೊಂದಿರಬೇಕು. SSLCಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಇನ್ನು ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಕನಿಷ್ಟ ವಿದ್ಯಾರ್ಹತೆ SSLC ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು.

ವಯೋಮಿತಿ ಎಷ್ಟಿರಬೇಕು?

ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಲು 19 ರಿಂದ 35 ವರ್ಷ ವಯೋಮಿತಿಯೊಳಗಿನ ಹೆಣ್ಣು ಮಕ್ಕಳು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು. ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಇವರಿಗೆ ವಿಶೇಷ ಆದ್ಯತೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಧಾರಣಾ ಸಂಸ್ಥೆ / ರಾಜ್ಯ ಮಹಿಳಾ ನಿಲಯಗಳ ನಿವಾಸಿಗಳು, ಆಸಿಡ್ ದಾಳಿಗೆ ತುತ್ತಾದ ಮಹಿಳೆಯರು, ವಿಧವೆಯರು, ಶೇ.40ಕ್ಕಿಂತ ಕಡಿಮೆ ದೈಹಿಕ ಅಂಗವಿಕಲತೆ ಹೊಂದಿದವರಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳಿಗೆ +5 ಬೋನಸ್ ಅಂಕಗಳನ್ನು ನೀಡಲಾಗುತ್ತದೆ.

ಸರ್ಕಾರದ ಅಂಗೀಕೃತ ಸಂಸ್ಥೆಗಳಿಂದ ಡಿಎಸ್‌ಇಆರ್‌ಟಿಯಿಂದ ಇಸಿಸಿಇ ಡಿಪ್ಲೊಮಾ ಕೋರ್ಸ್, ಜೆಒಸಿ ಕೋರ್ಸ್, ಎನ್‌ಟಿಟಿ ಕೋರ್ಸ್’ಗಳನ್ನು ಹಾಗೂ ಅಂಗನವಾಡಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಡಿಪ್ಲೊಮಾ ನ್ಯೂಟ್ರಿಷಿಯನ್, ಹೋಂ ಸೈನ್ಸ್ ಸರ್ಟಿಫಿಕೇಟ್ ಕೋರ್ಸ್, ಒಂದು ವರ್ಷದ ನರ್ಸರಿ ಅಥವಾ ಪೂರ್ವ ಪ್ರಾಥಮಿಕ ತರಬೇತಿ ಪಡೆದು ಪ್ರಮಾಣ ಪತ್ರ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ದಿನಾಂಕ

 • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 10-01-2024
 • ಅರ್ಜಿ ಸಲ್ಲಿಸಲು ಕೊನೆ ದಿನಾಂಕಗಳು
  ತುಮಕೂರು ಮತ್ತು ಬೀದರ್ ಜಿಲ್ಲೆ : 05-02-2024
  ಹಾವೇರಿ ಜಿಲ್ಲೆ: 15-02-2024
  ಬೆಳಗಾವಿ, ಬೆಂಗಳೂರು ಗ್ರಾಮೀಣ ಮತ್ತು ನಗರ ಜಿಲ್ಲೆ : 29-02-2024

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು

 • ಜನನ ಪ್ರಮಾಣ ಪತ್ರ
 • ಜನ್ಮ ದಿನಾಂಕ ಇರುವ SSLC ಅಂಕಪಟ್ಟಿ
 • ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ
 • ವಾಸಸ್ಥಳ ದೃಢೀಕರಣ ಪತ್ರ
 • ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ
 • ಪತಿಯ ಮರಣ ಪ್ರಮಾಣ ಪತ್ರ ಹಾಗೂ ವಿಧವಾ ಪ್ರಮಾಣ ಪತ್ರ (ವಧವೆಯರಾಗಿದ್ದರೆ)
 • ಅಂಗವಿಕಲತೆ ಪ್ರಮಾಣಪತ್ರ (ಅಂಗವಿಕಲರಾಗಿದ್ದರೆ)
 • ನ್ಯಾಯಾಲಯದಿಂದ ಪಡೆದ ವಿಚ್ಛೇದನ ಪ್ರಮಾಣ ಪತ್ರ (ವಿಚ್ಛೇದಿತೆಯರಾಗಿದ್ದರೆ)
 • ಇಲಾಖೆಯ ಸುಧಾರಣಾ ಸಂಸ್ಥೆ /ರಾಜ್ಯ ಮಹಿಳಾ ನಿಲಯಗಳ ನಿವಾಸಿಗಳು ನಿವಾಸಿ ಪ್ರಮಾಣ ಪತ್ರ
 • ಯೋಜನಾ ನಿರಾಶ್ರಿತರ ಬಗ್ಗೆ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ
 • ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು; ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 👉 ಇಲ್ಲಿ ಕ್ಲಿಕ್ ಮಾಡಿ…

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆ/ ಮಿನಿ ಅಂಗನವಾಡಿ ಕಾರ್ಯಕರ್ತೆಯರು/ ಅಂಗನವಾಡಿ ಸಹಾಯಕಿಯರ ಹುದ್ದೆಗಳ ಆಯ್ಕೆಗೆ ಅರ್ಜಿ ಪುಟ ತೆರೆದುಕೊಳ್ಳುತ್ತದೆ.

ಅಲ್ಲಿ ಕೇಳಲಾದ ಜಿಲ್ಲೆ, ತಾಲ್ಲೂಕು, ಅಧಿಸೂಚನೆ ಸಂಖ್ಯೆ, ಹುದ್ದೆಗಳ ಆಯ್ಕೆ, ಜಾತಿ ಕಾಲಂ ಗಳನ್ನು ಆಯ್ಕೆ ಮಾಡಿ Submit ಕ್ಲಿಕ್ ಮಾಡಿದರೆ ಅಪ್ಲಿಕೇಶನ್ ಫಾರ್ಮ್ ತೆರೆಯುತ್ತದೆ. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಪ್ರಮಾಣ ಪತ್ರಗಳನ್ನು ಆಯಾ ಹೆಸರಿನ ಮುಂದೆ ಇರುವ ಆಯ್ಕೆ ಬಟನ್ ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಬೇಕು.

ಅಂಗನವಾಡಿ ನೇಮಕ ಕುರಿತ ಸಂಪೂರ್ಣ ಗೈಡ್‌ಲೈನ್ ಓದಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!