ಸರಕಾರಿ ಯೋಜನೆ

Ayushman card application in mobile : ಮೊಬೈಲ್‌ನಲ್ಲೇ ಪಡೆಯಿರಿ ₹5 ಲಕ್ಷ ಉಚಿತ ಚಿಕಿತ್ಸಾ ವೆಚ್ಚದ ಆಯುಷ್ಮಾನ್ ಆರೋಗ್ಯ ಕಾರ್ಡ್

WhatsApp Group Join Now
Telegram Group Join Now

Ayushman card application in mobile

5 ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆಗೆ ಸಹಕಾರಿಯಾದ ಆಯುಷ್ಮಾನ್ ಕಾರ್ಡ್’ಗೆ ಮೊಬೈಲ್‌ನಲ್ಲೇ ಅರ್ಜಿ ಹಾಕಿ, ಸುಲಭವಾಗಿ ಪಡೆಯುವುದು ಹೇಗೆ? ಯೋಜನೆಯ ಸೌಲಭ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯ (Pradhan Mantri Jan Arogya Yojana : PM-JAY) ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್’ (ABHA – ID / Ayushman Card) ಹೆಸರನ್ನು ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ’ ಎಂದು ಬದಲಿಸಲಾಗಿದೆ.

ಮರು ನಾಮಕರಣಗೊಂಡ ಹೊಸ ಆರೋಗ್ಯ ಕಾರ್ಡುಗಳನ್ನು ಕಳೆದ ಡಿಸೆಂಬರ್ 7, 2023ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 5.9 ಕೋಟಿ ಕನ್ನಡಿಗರಿಗೆ ಹೆಲ್ತ್ ಕಾರ್ಡುಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಇದನ್ನೂ ಓದಿ: Again and again drought forecast ಮತ್ತೆ ಮತ್ತೆ ಬರಗಾಲದ ಮುನ್ಸೂಚನೆ | ಹವಾಮಾನ ಇಲಾಖೆ ಹೊರಹಾಕಿದ ಮಾಹಿತಿ ಇಲ್ಲಿದೆ…

ಏನಿದು ಪಿಎಂ ಜನಾರೋಗ್ಯ ಯೋಜನೆ (PMJAY)?

ದೇಶದ ಜನಸಾಮಾನ್ಯರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ಸದುದ್ದೇಶದಿಂದ ಅನುಷ್ಠಾನಗೊಳಿಸಲಾದ ಪಿಎಂ ಜನಾರೋಗ್ಯ ಯೋಜನೆಯಡಿ (PM-JAY) ಆಯುಷ್ಮಾನ್ ಕಾರ್ಡ್’ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಈ ಯೋಜನೆಯ ಒಟ್ಟು ಅನುದಾನದಲ್ಲಿ ಕರ್ನಾಟಕ ರಾಜ್ಯ ಸರ್ಕಾರ 66% ಒದಗಿಸುತ್ತಿದ್ದು, ಉಳಿಕೆ 34% ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಮುಂದಿನ ಆರು ತಿಂಗಳ ಒಳಗಾಗಿ ರಾಜ್ಯದ 5.9 ಕೋಟಿ ಜನರಿಗೆ ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ’ ಪರಿಷ್ಕೃತ ಕಾರ್ಡುಗಳನ್ನು ವಿತರಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.

 

ಎಪಿಎಲ್ ಕಾರ್ಡ್’ದಾರರಿಗೂ ಸೌಲಭ್ಯ ವಿಸ್ತರಣೆ

ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬ ಸದಸ್ಯರು ಈ ಹೆಲ್ತ್ ಕಾರ್ಡ್’ನ್ನು ತೋರಿಸಿ ಬೇರೆ ರಾಜ್ಯದಲ್ಲಿಯೂ ಕೂಡ ಇದರ ಲಾಭವನ್ನು ಪಡೆಯಬಹುದು. ವಿಶೇಷವೆಂದರೆ ಎಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೂ ಕೂಡ ಈ ಯೋಜನೆಯ ಲಾಭ ಪಡೆಯಲು ಅವಕಾಶ ಮಾಡಿಕೊಟ್ಟ ಪ್ರಥಮ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಬಿಪಿಎಲ್ ಕಾರ್ಡ್’ದಾರರಿಗೆ ಚಿಕಿತ್ಸೆಗೆ 5 ಲಕ್ಷ ರೂಪಾಯಿ ಸಹಾಯಧನವನ್ನು ಸಂಪೂರ್ಣ ಉಚಿತವಾಗಿ ಒದಗಿಸಿದರೆ, ಎಪಿಎಲ್ ಕಾರ್ಡ್’ದಾರರಿಗೆ 5 ಲಕ್ಷ ರೂಪಾಯಿ ಉಚಿತ ಚಿಕಿತ್ಸಾ ವೆಚ್ಚದಲ್ಲಿ ಶೇ.30ರಷ್ಟು, ಅಂದರೆ 1.5 ಲಕ್ಷ ಮೊತ್ತವನ್ನು ರಾಜ್ಯ ಸರ್ಕಾರ ನೀಡಲಿದೆ.

ಇದನ್ನೂ ಓದಿ: PMFME – PM Micro Food Processing Scheme : ಸಣ್ಣ ಉದ್ಯಮ ಸ್ಥಾಪನೆಗೆ ₹15 ಲಕ್ಷ ರೂಪಾಯಿ ಸಹಾಯಧನ : ರೈತರು, ಮಹಿಳೆಯರಿಗೆ ಸುವರ್ಣಾವಕಾಶ

ಆರೋಗ್ಯ ಕಾರ್ಡ್ ಸೌಲಭ್ಯಗಳು (Benefits Of PMJAY)

ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ 3,400ಕ್ಕೂ ಹೆಚ್ಚು ಆರೋಗ್ಯ ಸಂಸ್ಥೆಗಳು ಈ ಯೋಜನೆಯ ಅಡಿಯಲ್ಲಿ ಸೇವೆಯನ್ನು ಒದಗಿಸಲು ಈಗಾಗಲೇ ನೋಂದಾಯಿಸಿಕೊAಡಿವೆ. ಈ ಯೋಜನೆಯು ತುರ್ತು ಚಿಕಿತ್ಸೆ ಮತ್ತು ಜೀವ ಉಳಿಸುವ 171 ಪ್ಯಾಕೇಜ್‌ಗಳನ್ನು ಒಳಗೊಂಡಿದೆ. ಆಯುಷ್ಮಾನ್ ಕಾರ್ಡುಗಳನ್ನು ರಾಷ್ಟ್ರೀಯ ಆರೋಗ್ಯ ಐಡಿಯೊಂದಿಗೆ (ABHA – ID) ಜೋಡಿಸಲಾಗಿದ್ದು, ಇದು ಫಲಾನುಭವಿಗಳ ದಾಖಲೆಗಳನ್ನು ಸಂರಕ್ಷಿಸಲು ಮತ್ತು ಚಿಕಿತ್ಸೆ ನೀಡಲು ಪ್ರಯೋಜನಕಾರಿಯಾಗಿದೆ. ಯೋಜನೆಯಡಿಯಲ್ಲಿ ಅರ್ಹರಿರುವ ಎಲ್ಲರಿಗೂ ಈ ಕೆಳಗಿನ ಸೌಲಭ್ಯಗಳು ಸಿಗಲಿವೆ.

  • ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಅಡಿಯಲ್ಲಿ ನೋಂದಾಯಿತ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯೂ ಬಿಪಿಎಲ್ ಕಾರ್ಡ್’ದಾರರಿಗೆ 5 ಲಕ್ಷ ರೂಪಾಯಿ ಮೌಲ್ಯದ ಉಚಿತ ಚಿಕಿತ್ಸೆ ಸಿಗುತ್ತದೆ. ಎಪಿಎಲ್ ಕಾರ್ಡ್’ದಾರರಿಗೆ 1.5 ರೂಪಾಯಿ ಚಿಕಿತ್ಸಾವೆಚ್ಚ ಲಭ್ಯ.
  • ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಚಿಕಿತ್ಸೆಯ ಜತೆಗೆ ಉಚಿತ ವಸತಿ ಮತ್ತು ಆಹಾರದ ಸೌಲಭ್ಯವೂ ಸಿಗಲಿದೆ. ಆಸ್ಪತ್ರೆಗೆ ಸೇರಿಕೊಳ್ಳುವುದಕ್ಕಿಂತ 3 ದಿನ ಮುಂಚೆ ಮತ್ತು ಸೇರಿಕೊಂಡ 15 ದಿನಗಳ ವರೆಗೆ ಡಯಾಗ್ನೋಸ್ಟಿಕ್ ತಪಾಸಣೆ ಮತ್ತು ಔಷದಿಗಳು ಉಚಿತ.

ಇದನ್ನೂ ಓದಿ: Mgnrega Personal Work Subsidy : ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ಸಹಾಯಧನ | ₹5 ಲಕ್ಷದ ವರೆಗೆ ನೆರವು

ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ

5 ಲಕ್ಷ ರೂಪಾಯಿ ಉಚಿತ ಚಿಕಿತ್ಸಾ ವೆಚ್ಚಕ್ಕೆ ಸಹಕಾರಿಯಾಗಿರುವ ಆಯುಷ್ಮಾನ್ ಕಾರ್ಡ್ ಅನ್ನು ಅರ್ಹರಿರುವವರು ನಿಮ್ಮೂರಿನ ಗ್ರಾಮ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಅರ್ಜಿ ಹಾಕಿ ಸುಲಭವಾಗಿ ಪಡೆಯಬಹುದು. ಇಲ್ಲವೇ, ನಿಮ್ಮ ಮೊಬೈಲ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿಯೂ ಕಾರ್ಡ್ ಪಡೆಯಬಹುದು. ಇದಕ್ಕಾಗಿ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್’ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಇದ್ದರೆ ಸಾಕು. ಮೊಬೈಲ್‌ನಲ್ಲಿಯೇ ಸುಲಭವಾಗಿ ಈ ಕೆಳಗಿನಂತೆ ಅರ್ಜಿ ಹಾಕಬಹುದು.

  • ನಿಮ್ಮ ಮೊಬೈಲ್‌ನಲ್ಲಿರುವ ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡಿ ಆಯುಷ್ಮಾನ್ ಭಾರತ್ ಆ್ಯಪ್ (Ayushman App) ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಡೈರೆಕ್ಟ್ ಲಿಂಕ್ ಅನ್ನು ಲೇಖನದ ಕೊನೆಯ ಭಾಗದಲ್ಲಿ ನೀಡಲಾಗಿದೆ ಗಮನಿಸಿ.
  • ನಂತರ ಮೆನುವಿಗೆ ಹೋಗಿ, ನೀವು ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಅಲ್ಲಿ ಕಾಣುವ ‘ಹೊಸ ಸದಸ್ಯರನ್ನು ಸೇರಿಸಿ’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮುಂದೆ ಅಲ್ಲಿ ಕೇಳುವ ಆಧಾರ್ ಸಂಖ್ಯೆಯನ್ನು ನಮೂದಿಸಿ, ‘OTP ಕಳುಹಿಸಿ’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್’ಗೆ ಬರುವ ಒಟಿಪಿಯನ್ನು ನಮೂದಿಸಿ ಮುಂದುವರೆಯಿರಿ.
    ಅಲ್ಲಿ ಕೇಳಲಾಗುವ ನಿಮ್ಮ ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ ಮತ್ತು ಇತರೆ ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ಸೇರಿಸುವುದಾದರೆ, ಅಲ್ಲಿ ನಿಮ್ಮ ಕುಟುಂಬದವರ ನಿಖರ ಮಾಹಿತಿಯನ್ನು ಭರ್ತಿ ಮಾಡಿ.
  • ನಿಮ್ಮ ಆಧಾರ್ ಕಾರ್ಡ್’ನ ಹಿಂದಿನ ಮತ್ತು ಮುಂದಿನ ಭಾಗದ ಫೋಟೋವನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಪೂರ್ಣಗೊಳಿಸಿ. ಕಡೆಯಲ್ಲಿ ನಿಮ್ಮ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ, ಧೃಡೀಕರಿಸಿ.
  • ಧೃಢೀಕರಿಸಿದ ನಂತರ ನಿಮಗೆ ರೆಫರೆನ್ಸ್ ಐಡಿ (Reference ID) ಬರುತ್ತದೆ. ಅರ್ಜಿ ಹಾಕಿದ ಕೆಲವು ದಿನಗಳ ಬಳಿಕ ನಿಮ್ಮ ರೆಫರೆನ್ಸ್ ಐಡಿ ಮುಖಾಂತರ ಆಯುಷ್ಮಾನ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

ಆಯುಷ್ಮಾನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಅಯುಷ್ಮಾನ್ ಆ್ಯಪ್ ಡೈರೆಕ್ಟ್ ಲಿಂಕ್ : ಡೌನ್‌ಲೋಡ್
ತಾಂತ್ರಿಕ ಸಮಸ್ಯೆಯಾದರೆ ಕರೆ ಮಾಡಿ ಪರಿಹಾರ ಪಡೆದುಕೊಳ್ಳಲು ಸಹಾಯವಾಣಿ ಸಂಖ್ಯೆ : 14555

Ayushman card application in mobile

WhatsApp Group Join Now
Telegram Group Join Now

Related Posts

error: Content is protected !!