ಕೃಷಿಸರಕಾರಿ ಯೋಜನೆ

Bagar Hukum land : ಈ ರೈತರ ಬಗರ್ ಹುಕುಂ ಜಮೀನು ಸರಕಾರದ ಸ್ವಾಧೀನ | ಸುತ್ತೋಲೆ ಹೊರಡಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ

WhatsApp Group Join Now
Telegram Group Join Now

Bagar Hukum land : Revenue Department Circular

ಅನರ್ಹರು ಸಾಗುವಳಿ ಮಾಡಿಕೊಂಡಿರುವ ಬಗರ್ ಹುಕುಂ ಜಮೀನು ಸ್ವಾಧೀನಪಡಿಸಿಕೊಳ್ಳುವ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ…

ಬಗರ್ ಹುಕುಂ ಅಕ್ರಮ ಸಕ್ರಮ ಅರ್ಜಿಗಳ ತ್ವರಿತ ವಿಲೇವಾರಿಗೆ ಕಂದಾಯ ಇಲಾಖೆ (Revenue Department) ಗಡುವು ವಿಧಿಸಿದ್ದು; ಅನರ್ಹರಾಗಿದ್ದರೂ ಕೂಡ ಸಕ್ರಮೀಕರಣ ಕೋರಿ ಅರ್ಜಿ ಸಲ್ಲಿಸಿದ ಹಲವರ ಜಮೀನು ವಶಕ್ಕೆ ಸರಕಾರ ಮುಂದಾಗಿದೆ. ಈ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಸುತ್ತೋಲೆ (Circular) ಹೊರಡಿಸಿದ್ದಾರೆ.

ಇದನ್ನೂ ಓದಿ: Village Administrative Officer Recruitment 2024 : ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಗೆಜೆಟ್ ಅಧಿಸೂಚನೆ ಬಿಡುಗಡೆ | ನೇಮಕ ಬದಲಾವಣೆ ಕುರಿತ ಕರ್ನಾಟಕ ರಾಜ್ಯಪತ್ರ ರಿಲೀಸ್

ಸಲ್ಲಿಕೆಯಾದ ಅರ್ಜಿಗಳೆಷ್ಟು?

ಬಗರ್ ಹುಕುಂ ಸರಕಾರಿ ಜಮೀನು (Bagar Hukum  Govt land) ಹಕ್ಕುದಾರಿಕೆ ನೀಡುವ ಸಲುವಾಗಿಯೇ ಕರ್ನಾಟಕ ಭೂ ಕಂದಾಯ ಕಾಯಿದೆ 1964 ಅನ್ವಯ ನಮೂನೆ 50, ನಮೂನೆ 53 ಹಾಗೂ ನಮೂನೆ 57ರಲ್ಲಿ ಅರ್ಜಿ ಸ್ವೀಕರಿಸಲಾಗಿದೆ. 1991ರಿಂದ ಶುರುವಾದ ಅರ್ಜಿ ಸ್ವೀಕಾರ ಕಳೆದ 2023ರ ಏಪ್ರಿಲ್‌ಗೆ ಅಂತ್ಯವಾಗಿದೆ. ನಮೂನೆ 57ರ ಅಡಿಯಲ್ಲಿ ಅರ್ಜಿ ಸ್ವೀಕರಿಸುವ ಅವಧಿಯನ್ನು ಏಪ್ರಿಲ್‌ಗೆ ಮುಕ್ತಾಯಗೊಳಿಸಲಾಗಿದೆ.

ರಾಜ್ಯದಲ್ಲಿ ಈ ಎಲ್ಲ ನಮೂನೆಗಳಲ್ಲಿ ಬಗರ್ ಹುಕುಂ ಜಮೀನು ಸಕ್ರಮೀಕರಣ ಕೋರಿ ಒಟ್ಟು 9,56,512 ಅರ್ಜಿ ಸಲ್ಲಿಕೆಯಾಗಿವೆ. ಬರೋಬ್ಬರಿ 54 ಲಕ್ಷ ಎಕರೆ ಭೂಮಿ ಮಂಜೂರಾತಿಗೆ ಕೋರಿಕೆ ಸಲ್ಲಿಕೆಯಾಗಿವೆ. ಹೀಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಇದೀಗ ಡಿಜಿಟಲ್ ಹಕ್ಕುಪತ್ರ (Digital Rights Deed) ಸಿಗಲಿದೆ. ಆದರೆ ಅನರ್ಹ ರೈತರ ಜಮೀನನನ್ನು ಸರಕಾರ ಮುಲಾಜಿಲ್ಲದೇ ವಶಪಡಿಸಿಕೊಳ್ಳಲು ಮುಂದಾಗಿದೆ.

ಇದನ್ನೂ ಓದಿ: Home Guards jobs : ಹೋಮ್‌ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ ತರಗತಿ ಪಾಸಾದವರಿಗೆ ಅವಕಾಶ

ಅನರ್ಹರ ಜಮೀನು ಸರಕಾರದ ವಶ

1991ರಿಂದ 2023ರ ಏಪ್ರಿಲ್ ವರೆಗೂ ನಮೂನೆ 50, 53 ಹಾಗೂ 57ರ ಅಡಿಯಲ್ಲಿ ಅರ್ಜಿ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (Principal Secretary, Revenue Department) ರಾಜೇಂದರ್ ಕುಮಾರ್ ಕಟಾರಿಯಾ ಸುತ್ತೋಲೆ ಹೊರಡಿಸಿದ್ದಾರೆ. ಬಗರ್ ಹುಕುಂ ಮೊಬೈಲ್ ಆ್ಯಪ್ (Bagar Hukum Mobile App)  ಮೂಲಕ ಅನಧಿಕೃತ ರೈತರ ಆಧಾರ್ ಇ-ಕೆವೈಸಿ ಮತ್ತು ಸಾಗುವಳಿ ಜಮೀನಿನ ವಿಸ್ತೀರ್ಣ ಮತ್ತು ಗಡಿಯನ್ನು ಬಳಸಿ ಜಿಯೋ ಫೆನ್ಸಿಂಗ್ ಮಾಡುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಬಗರ್ ಹುಕುಂ ಸಮಿತಿಯು ಗುರುತಿಸಿದ ಅನರ್ಹ ಅರ್ಜಿಯನ್ನು ಆಯಾ ಜಿಲ್ಲೆಗಳ ಡಿ.ಸಿಗಳು (District Collectors) ಒಂದು ತಿಂಗಳೊಳಗೆ ತಿರಸ್ಕರಿಸಬೇಕು. ಅಂತಹ ಅರ್ಜಿದಾರರ ವಶದಲ್ಲಿರುವ ಜಮೀನುಗಳನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಸುತ್ತೋಲೆಯಲ್ಲಿ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: RDPR Recruitment 2024 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ | ಸಂಬಳ : ₹61,500 | Panchayat Raj fellowship recruitment

ಯಾವೆಲ್ಲ ಜಮೀನು ಸರಕಾರದ ವಶವಾಗಲಿವೆ?

ಸರಕಾರಿ ಜಮೀನನ್ನು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದವರು 2004ರ ಹೊತ್ತಿಗೆ 18 ತುಂಬಿದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಆದರೆ 18 ವರ್ಷ ತುಂಬದವರು, ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿರುವವರು ಸೇರಿದಂತೆ ಅನೇಕ ನಮೂನೆಯ ಅನರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಇಂತಹ ಅನರ್ಹರನ್ನು ಹೊರಗಿಡುವ ಕಾರಣಕ್ಕಾಗಿಯೇ ಬಗರ್ ಹುಕುಂ ಆ್ಯಪ್ ಸಿದ್ಧಪಡಿಸಲಾಗಿದೆ. ಕಳೆದ 2023ರ ಡಿಸೆಂಬರ್ 18ರಂದು ಸಚಿವ ಕೃಷ್ಣ ಬೈರೇಗೌಡ (Krishna Byregowda) ಅವರು ಸದರಿ ಆ್ಯಪ್ ಬಿಡುಗಡೆ ಮಾಡಿದ್ದಾರೆ.

ಜತೆಗೆ ಗೋಮಾಳ, ಮೀಸಲು ಅರಣ್ಯ, ದೇವರ ಕಾಡು, ಗುಂಡು ತೋಪು, ಕೆರೆಯ ಅಂಗಳ, ಫೂಟ್ ಖರಾಬು, ಸ್ಮಶಾನ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ಸಿಗುವುದು ಕಷ್ಟಕರ. ಅಂತಹ ಅರ್ಜಿಗಳನ್ನು ತಿರಸ್ಕರಿಸಿ, ಆ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದ್ದು; ಶಿಘ್ರದಲ್ಲಿಯೇ ಮೇಲಾಣ್ಕಿಸಿದ ರೈತರ ಜಮೀನು ಸರಕಾರದ ವಶವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

WhatsApp Group Join Now
Telegram Group Join Now

Related Posts

error: Content is protected !!