ಕೃಷಿಸರಕಾರಿ ಯೋಜನೆ

Bara Parihara 2024 : ರೈತರ ಖಾತೆಗೆ ಬರ ಪರಿಹಾರದ ಹಣ ಜಮಾ ಆಗದೇ ಇರುವುದಕ್ಕೆ ಕಾರಣಗಳು ಇಲ್ಲಿವೆ…

WhatsApp Group Join Now
Telegram Group Join Now

Bara Parihara 2024 : ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ’ಯಿಂದ (ಎನ್‌ಡಿಆರ್‌ಎಫ್) ಈಚೆಗೆ ಕೇಂದ್ರ ಸರ್ಕಾರವು ನೀಡಿದ 3,454 ಕೋಟಿ ರೂಪಾಯಿ ಬರ ಪರಿಹಾರ ಹಣವನ್ನು ಫಲಾನುಭವಿ ರೈತರ ಖಾತೆಗೆ ನೇರ ವರ್ಗಾವಣೆ ( DBT Karnataka) ಮೂಲಕ ಜಮಾ ಮಾಡಲಾಗಿದೆ. ಇದುವರೆಗೆ ಒಟ್ಟು 32.12 ಲಕ್ಷ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾg ಮೊತ್ತವನ್ನು ಸಂಪೂರ್ಣವಾಗಿ ಜಮಾ ಮಾಡಲಾಗಿದೆ.

ಆದರೆ, ರಾಜ್ಯದ ಸುಮಾರು 1.5 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ 2ನೇ ಕಂತಿನ ಪರಿಹಾರದ ಹಣ ಜಮೆ ಆಗಿಲ್ಲ. ಶೀಘ್ರದಲ್ಲಿ ಈ ರೈತರಿಗೂ ಹಣ ಸಂದಾಯವಾಗಲಿದ್ದು; ತಾಂತ್ರಿಕ ಸಮಸ್ಯೆ ಪರಿಹಾರವಾದ ಕೂಡಲೇ ಎಲ್ಲ ರೈತರಿಗೂ ಪರಿಹಾರ ಜಮಾ ಆಗಲಿದೆ ಎಂದು ದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದ್ದಾರೆ.

ಇದನ್ನೂ ಓದಿ: Agricultural Loans : ಬರಗಾಲದಲ್ಲಿ ರೈತರ ಕೈ ಹಿಡಿಯುತ್ತಾ ಶೂನ್ಯಬಡ್ಡಿ ಕೃಷಿ ಸಾಲ? ನಿರೀಕ್ಷೆ ಹೆಚ್ಚಿಸಿದ ಸೊಸೈಟಿ ಲೋನ್

ತಾಂತ್ರಿಕ ಸಮಸ್ಯೆಗಳ ಪಟ್ಟಿ

ಬಹುಮುಖ್ಯವಾಗಿ ಸರಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆಯಬೇಕೆಂದರೆ ಕಡ್ಡಾಯವಾಗಿ ರೈತರು ಪ್ರೂಟ್ಸ್ ಐಡಿ (FRUITS ID) ಹೊಂದಿರಬೇಕು. ರೈತರ ಗುರುತಿನ ಸಂಖ್ಯೆ (FID) ಆದ ಇದನ್ನು ಹೊಂದಿರದ ರೈತರಿಗೆ ಬರ ಪರಿಹಾರ ಮಾತ್ರವಲ್ಲ, ಸರಕಾರದ ಯಾವ ಯೋಜನೆಯ ಪ್ರಯೋಜನವೂ ಸಿಗುವುದಿಲ್ಲ.

ಹೀಗಾಗಿ ಇದುವರೆಗೂ ಪ್ರೂಟ್ಸ್ ಐಡಿ ಮಾಡಿಸಿಕೊಳ್ಳದೇ ಇರುವ ರೈತರು ತಮ್ಮ ಆಧಾರ್, ಬ್ಯಾಂಕ್ ಖಾತೆಯ ವಿವರ ಹಾಗೂ ಪಹಣಿ ಮಾಹಿತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪ್ರೂಟ್ಸ್ ಐಡಿ ಸೃಜಿಸಿಕೊಳ್ಳಬೇಕು.

ಆಧಾರ್ ಅನ್ನು NPCI (National Payments Corporation of India) ಮ್ಯಾಪ್ ಮಾಡದಿದ್ದರೂ ಪರಿಹಾರ ಹಣ ಖಾತೆಗೆ ಜಮಾ ಆಗುವುದಿಲ್ಲ. ಹೀಗಾಗಿ ಅಂತಹ ರೈತರು ಬ್ಯಾಂಕ್ ಶಾಖೆಗೆ ಭೇಟಿ ನೀಡಿ NPCIಗೆ ಆಧಾರ್ ಮ್ಯಾಪ್ ಕುರಿತು ವಿಚಾರಿಸಿ, ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಇದನ್ನೂ ಓದಿ: ಗ್ರಾಮಠಾಣಾ ನಕ್ಷೆ: ಪ್ರತಿಯೊಬ್ಬರೂ ಅರಿತಿರಬೇಕಾದ ನಿಮ್ಮೂರಿನ ಮಾಹಿತಿ Village Map information

ಒಂದು ವೇಳೆ NPCI ಲಿಂಕ್ ಇದ್ದಲ್ಲಿ ರೈತರ ಗುರುತಿನ ಸಂಖ್ಯೆಯಲ್ಲಿ (FID) ಇರುವ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ NPCI ಲಿಂಕ್ ಇರುವ ಬ್ಯಾಂಕ್ ಖಾತೆ ಸಂಖ್ಯೆಯು ಒಂದೇ ಆಗಿರಬೇಕು. ಒಂದು ವೇಳೆ ಇವೆರಡೂ ಬೇರೆ ಬೇರೆ ಇದ್ದಲ್ಲಿ FIDಯಲ್ಲಿ ಇರುವ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬದಲಾವಣೆ ಮಾಡಿಸಿಕೊಳ್ಳಬೇಕು.

ಇನ್ನು ರೈತರ ಆಧಾರ್ ಕಾರ್ಡ್’ನಲ್ಲಿ ಇರುವ ಹೆಸರು ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಒಂದೇ ಆಗಿರಬೇಕು. ಅದೇ ರೀತಿ ಆಧಾರ್ ಕಾರ್ಡ್’ನಲ್ಲಿ ಇರುವ ಹಾಗೂ ಪಹಣಿಯಲ್ಲಿ (Land RTC) ಇರುವ ಹೆಸರು ಒಂದೇ ಆಗಿರಬೇಕು.

ಕೆಲವೊಮ್ಮೆ ಅಕೌಂಟ್ ಇನ್ ವ್ಯಾಲಿಡ್, ಕ್ಲೋಸ್, ಬ್ಲಾಕ್, ಪ್ರಿಜ್, ಆಧಾರ್ ನಾಟ್ ಸಿಡಿಂಗ್ ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಬ್ಯಾಂಕ್ ಖಾತೆ ಸ್ಥಗಿತಗೊಂಡಿರುವ ಸಾಧ್ಯತೆಗಳಿರುತ್ತವೆ. ರೈತರು ಬ್ಯಾಂಕ್’ಗೆ ಭೇಟಿ ನೀಡಿ ಪರಿಶೀಲಿಸಬೇಕು. ಹಾಗೊಂದು ವೇಳೆ ಅಕೌಂಟ್ ಇನ್ ವ್ಯಾಲಿಡ್, ಕ್ಲೋಸ್, ಬ್ಲಾಕ್, ಪ್ರಿಜ್, ಆಧಾರ ನಾಟ್ ಸಿಡಿಂಗ್’ನ೦ತಹ ಸಮಸ್ಯೆಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಂಡಿ ಚಾಲ್ತಿ ಮಾಡಿಕೊಳ್ಳಬೇಕು.

ಹೀಗೆ ವಿವಿಧ ತಾಂತ್ರಿಕ ಸಮಸ್ಯೆಗಳಿರುವ ರೈತರಿಗೆ ಬರ ಪರಿಹಾರ ಸಂದಾಯವಾಗಿಲ್ಲ. ಮೇಲ್ಕಾಣಿಸಿದ ಸಮಸ್ಯೆ ಪರಿಹಾರವಾಗದ ಹೊರತು ಸರಕಾರದ ಯಾವುದೇ ಯೋಜನೆಯ ಪ್ರಯೋಜನ ಸಿಗುವುದು ಕೂಡ ಕಷ್ಟಕರವಾಗಿದೆ. ಹೀಗಾಗಿ ಈಗಲೂ 1 ಮತ್ತು 2ನೇ ಕಂತಿನ ಬೆಳೆಹಾನಿ ಪರಿಹಾರ ಬಾರದೇ ಇರುವ ರೈತರು ಕೂಡಲೇ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ.

ಬಾಕಿ ಉಳಿದ ಅರ್ಹ ರೈತರಿಗೆ ಹಂತ ಹಂತವಾಗಿ ಪರಿಹಾರ ಪಾವತಿಸುವ ಕಾರ್ಯವು ಪ್ರಗತಿಯ ಹಂತದಲ್ಲಿದ್ದು ತುರ್ತಾಗಿ ಕ್ರಮಕೈಗೊಳ್ಳಲಾಗುತ್ತಿದೆ.ಈಗಾಗಲೇ ಅನುಮೊದನೆ ನೀಡಿರುವ ರೈತರ ಮಾಹಿತಿಯ ಪಟ್ಟಿಯನ್ನು ನಾಡ ಕಚೇರಿಗಳು, ಗ್ರಾಮ ಪಂಚಾಯತಿಗಳು, ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಶೀಲ್ದಾರ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: Male nakshatragalu-2024 : 2024ರ ಮಳೆ ನಕ್ಷತ್ರಗಳು | ಹೇಗಿದೆ ಈ ವರ್ಷದ ಮಳೆಗಾಲ?

WhatsApp Group Join Now
Telegram Group Join Now

Related Posts

error: Content is protected !!