Govt SchemesNews

Bee Farming Subsidy Schemes : ಜೇನು ಸಾಕಾಣಿಕೆ ಸಬ್ಸಿಡಿ ಯೋಜನೆಗಳು

ಸಣ್ಣ ರೈತರಿಗೆ ಶೇ.90ರಷ್ಟು ಸಹಾಯಧನ

ರೈತರಿಗೆ ತೋಟಗಾರಿಕಾ ಇಲಾಖೆಯಿಂದ ಜೇನು ಕೃಷಿ ಮಾಡಲು ಸಿಗುವ ಸಹಾಯಧನ ಎಷ್ಟು? ಜೇನು ಸಾಕಣೆಯಿಂದ ರೈತರಿಗಾಗುವ ಲಾಭವೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

WhatsApp Group Join Now
Telegram Group Join Now

ಜೇನು ಕೃಷಿಗೆ (Bee Farming) ದೊಡ್ಡ ಮಟ್ಟದ ಬಂಡವಾಳ ಬೇಡ. ಕಡಿಮೆ ಬಂಡವಾಳದಲ್ಲಿ ಬಂಪರ್ ಆದಾಯ ಪಡೆಯುವ ವಿಶಿಷ್ಠ ಉಪ ಕಸುಬು ಇದು. ಜೇನು ಪ್ರಕೃತಿದತ್ತವಾಗಿ ಸೃಜಿಸುವ ಉತ್ಪನ್ನವಾದ್ದರಿಂದ ಇದಕ್ಕೆ ಯಾವುದೇ ರೀತಿಯ ನಿರ್ಧಿಷ್ಟ ಸ್ಥಳವೂ ಬೇಡ. ಜೇನಿಗೆ ಮಕರಂದ ಸವಿಯಲು ಪೂರಕವಾದ ಸ್ಥಳವಾದರೆ ಸಾಕು. ರೈತರು ಜಮೀನಿನ ಒಂದು ಭಾಗದಲ್ಲೇ ಇತರ ಕೃಷಿಯ ಜೊತೆಗೆ ಜೇನು ಸಾಕಾಣಿಕೆಯನ್ನು ನಡೆಸಬಹುದು.

ಜೇನು ಸಾಕಾಣಿಕೆಯನ್ನು ಕೃಷಿ ಜತೆಗೆ ಉಪ ಕಸುಬನ್ನಾಗಿ ಮಾಡಿಕೊಂಡಿರುವ ಹಲವರು ವರ್ಷಕ್ಕೆ ಲಕ್ಷ ಲಕ್ಷ ಗಳಿಸುತ್ತಿರುವ ನಿದರ್ಶನಗಳಿವೆ. ತೀರಾ ಸಣ್ಣ ಮಟ್ಟದಲ್ಲಿ ಅಂದರೆ 5ರಿಂದ 10 ಜೇನು ಪೆಟ್ಟಿಗೆ ಇಟ್ಟುಕೊಂಡಿರುವವರು ಕೂಡ ಹೆಚ್ಚು ಪರಿಶ್ರಮವಿಲ್ಲದೆ ತಿಂಗಳಿಗೆ ಐದಾರು ಸಾವಿರ ರೂಪಾಯಿ ಗಳಿಸುವವರಿದ್ದಾರೆ.

ಇದನ್ನೂ ಓದಿ: MGNREGA Karnataka : ಸಣ್ಣ ರೈತರಿಗೆ ₹5 ಲಕ್ಷ ನರೇಗಾ ಸಹಾಯಧನ

ರೈತರಿಗೆ ಬಂಪರ್ ಇಳುವರಿ

ಜೇನು ಸಾಕಣೆಯಿಂದ ನೇರ ಆದಾಯ ಮಾತ್ರವಲ್ಲ, ಜೇನು ಪರಾಗಸ್ಪರ್ಶದಿಂದ ಬೆಳೆಯ ಇಳುವರಿ ಹೆಚ್ಚಿಸಿಕೊಳ್ಳುವ ಮೂಲಕ ಪರೋಕ್ಷ ಆದಾಯವನ್ನೂ ಗಳಿಸಬಹುದು. ಜೇನುನೊಣಗಳು ಪರಾಗಸ್ಪರ್ಶ ಕ್ರಿಯೆಗೆ ಸಹಾಯ ಮಾಡುವುದರಿಂದ ಬೆಳೆ ಇಳುವರಿ ಹೆಚ್ಚಾಗುತ್ತದೆ.

ಜೇನುನೊಣಗಳ ಪರಾಗ ಸ್ಪರ್ಶದಿಂದ ವಿವಿಧ ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ಅಡಿಕೆ ಇಳುವರಿಯಲ್ಲಿ ಶೇ.20, ಟೊಮೆಟೋ ಬೆಳೆಯಲ್ಲಿ ಶೇ.25, ದ್ರಾಕ್ಷಿ ಬೆಳೆಯಲ್ಲಿ ಶೇ.35, ಸೌತೆ, ಕುಂಬಳ, ಸೀಬೆಯಲ್ಲಿ ಶೇ.40 ಹಾಗೂ ಕಲ್ಲಂಗಡಿ ಬೆಳೆಯಲ್ಲಿ ಶೇ.80ರಷ್ಟು ಅಧಿಕ ಇಳುವರಿ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಏಲಕ್ಕಿ, ನಿಂಬೆ, ತರಕಾರಿ, ಹೂವು, ಔಷಧಿ ಹಾಗೂ ಸುಗಂಧ ದ್ರವ್ಯ ಬೆಳೆಗಳೂ ಸಹ ಪರಾಗ ಸ್ಪರ್ಶದಿಂದ ಲಾಭದಾಯಕ ಪ್ರಯೋಜನ ಹೊಂದಲಿವೆ.

ಇದನ್ನೂ ಓದಿ: Free Dairy and Poultry Training : ಹೈನುಗಾರಿಕೆ, ಕೋಳಿ ಸಾಕಾಣಿಕೆ ಉಚಿತ ತರಬೇತಿ

ಸರ್ಕಾರದಿಂದ ಸಿಗುವ ಸವಲತ್ತುಗಳು

ಜೇನು ಸಾಕಾಣಿಕೆಗೆ ಸರ್ಕಾರದಿಂದಲೂ ಬಹಳಷ್ಟು ಸವಲತ್ತುಗಳಿವೆ. ಕೇಂದ್ರ ಸರ್ಕಾರ ಕೆಲವು ವರ್ಷಗಳ ಹಿಂದೆ ಆರಂಭಿಸಿರುವ ಆತ್ಮನಿರ್ಭರ ಯೋಜನೆಯಡಿ ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಇದರಲ್ಲಿ ಜೇನು ಕೃಷಿಗೆ ಅತ್ಯುತ್ತಮ ಉತ್ತೇಜನ ಸಿಗುತ್ತಿದೆ. ರಾಷ್ಟ್ರೀಯ ಜೇನು ಮಂಡಳಿ (National Honey Board) ನಬಾರ್ಡ್ ಸಹಯೋಗದೊಂದಿಗೆ ಭಾರತದಲ್ಲಿ ಜೇನುಸಾಕಣೆಗೆ ಹಣಕಾಸು ಒದಗಿಸುತ್ತಿದೆ.

ಜೇನು ತುಪ್ಪ ಸಂಸ್ಕರಣೆ ಘಟಕ ನಿರ್ಮಾಣಕ್ಕೂ ನೆರವು ಕಲ್ಪಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ಖಾದಿ ಆಯೋಗವೂ ಜೇನು ಕೃಷಿಗೆ ಬಹಳ ದೊಡ್ಡಮಟ್ಟದಲ್ಲಿಯೇ ನೆರವು ನೀಡುತ್ತಿದೆ. ಬೆಳೆಗಳ ಇಳುವರಿ ಹೆಚ್ಚಳಕ್ಕೆ ಜೇನು ಸಾಕಣೆ ಅತ್ಯಮೂಲ್ಯವಾಗಿ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಜೇನು ಕೃಷಿಗೆ ಸಾಕಷ್ಟು ನೆರವು ನೀಡುತ್ತಿದೆ.

ಇದನ್ನೂ ಓದಿ: Borewell permission : ಇನ್ಮುಂದೆ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಸುವಂತಿಲ್ಲ

ತೋಟಗಾರಿಕಾ ಇಲಾಖೆ ನೆರವು

ಜೇನು ಸಾಕಾಣಿಕೆಗೆ ಪೋತ್ಸಾಹ ನೀಡಲು ತೋಟಗಾರಿಕೆ ಇಲಾಖೆ ಕೋಟಿ ಕೋಟಿ ಅನುದಾನ ಮೀಸಲಿಡುತ್ತದೆ. ಮಧುವನ ಹಾಗೂ ಜೇನು ಸಾಕಾಣಿಕೆ ಅಭಿವೃದ್ಧಿ ಯೋಜನೆಯಡಿ ಶೇ.75ರಂತೆ 3,375 ರೂಪಾಯಿಗಳ ಸಹಾಯಧನ ನೀಡಲಾಗುತ್ತಿದೆ.

ಜೇನು ಸಾಕಣೆ ಮಾಡುವ ಸಣ್ಣ ರೈತರಿಗೆ ತೋಟಗಾರಿಕೆ ಇಲಾಖೆ ಶೇ.75 ಸಬ್ಸಿಡಿ ನೀಡುತ್ತಿದೆ. ಎಸ್ಸಿ-ಎಸ್ಟಿ ಸಮುದಾಯದವರಿಗೆ ಶೇ.90 ಸಹಾಯಧನದ ಸೌಲಭ್ಯ ಇದೆ.

ಜಮೀನು ಹೊಂದಿರುವ ರೈತರಿಗೆ ಗರಿಷ್ಟ 10 ಜೇನು ಪೆಟ್ಟಿಗೆ, ಕುಟುಂಬ (ಜೇನುನೊಣಗಳ ಸಮೂಹ) ಹಾಗೂ ಸ್ಟ್ಯಾಂಡ್ ಖರೀದಿಗೆ ಸಹಾಯಧನ ಲಭ್ಯವಿದ್ದರೆ, ಜಮೀನು ರಹಿತ ಕುಟುಂಬಗಳಿಗೆ ಗರಿಷ್ಟ 4 ಜೇನು ಪೆಟ್ಟಿಗೆ, ಕುಟುಂಬ (ಜೇನುನೊಣಗಳ ಸಮೂಹ) ಹಾಗೂ ಸ್ಟ್ಯಾಂಡ್ ಖರೀದಿಸಲು ಇಲಾಖೆ ವತಿಯಿಂದ ಸಹಾಯಧನ ಸಿಗಲಿದೆ.

ಜೇನುಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ರೈತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚು ಲಾಭ ಗಳಿಸಬಹುದಾಗಿದೆ. ಅಲ್ಲದೇ ಕೃಷಿಕರಲ್ಲದವರೂ ಸಹ ಜೇನುಕೃಷಿಯನ್ನು ನಡೆಸಬಹುದು. ತಾಲ್ಲೂಕು ತೋಟಗಾರಿಕೆ ಇಲಾಖೆಯ ಮೂಲಕ ಸರ್ಕಾರದ ಸಹಾಯಧನ ಪಡೆಯಬಹುದಾಗಿದೆ. ಜೇನು ಕೃಷಿ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9620736384, 0816-2211808

ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!