ಕೃಷಿಹಣಕಾಸು

Co-operative Societies Agricultural Loan : 19 ಲಕ್ಷ ರೈತರಿಗೆ ₹15,841.48 ಕೋಟಿ ಬಡ್ಡಿ ಇಲ್ಲದ ಸಾಲ ವಿತರಣೆ | ಕಾಂಗ್ರೆಸ್ ಅವಧಿಯಲ್ಲಿ ವಿತರಣೆಯಾದ ಸಾಲದ ವಿವರ ಇಲ್ಲಿದೆ…

WhatsApp Group Join Now
Telegram Group Join Now

Co-operative Societies Agricultural Loan

ರಾಜ್ಯದಲ್ಲಿ ಬರಗಾಲ ವ್ಯಾಪಿಸಿದ್ದು; ಪ್ರಸಕ್ತ ವರ್ಷದಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ರಾಜ್ಯದ ರೈತರಿಗೆ ವಿತರಣೆಯಾದ ಸಾಲವೆಷ್ಟು? ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಪೈಕಿ ಎಷ್ಟು ರೈತರಿಗೆ ಸಾಲ ವಿತರಣೆಯಾಗಿದೆ? ಒಟ್ಟು ಸಾಲ ವಿತರಣೆಯ ಗುರಿ ಎಷ್ಟು? ಇತ್ಯಾದಿ ಮಾಹಿತಿಯನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ವಿವರಿಸಿದ್ದಾರೆ.

ಇದನ್ನೂ ಓದಿ: PMFME – PM Micro Food Processing Scheme : ಸಣ್ಣ ಉದ್ಯಮ ಸ್ಥಾಪನೆಗೆ ₹15 ಲಕ್ಷ ರೂಪಾಯಿ ಸಹಾಯಧನ : ರೈತರು, ಮಹಿಳೆಯರಿಗೆ ಸುವರ್ಣಾವಕಾಶ

19.97 ಲಕ್ಷ ರೈತರಿಗೆ ಶೂನ್ಯ ಬಡ್ಡಿ ಸಾಲ

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಜುಲೈ 7, 2023ರಂದು 2023-24ನೇ ಸಾಲಿನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ರೈತರ ಶೂನ್ಯ ಬಡ್ಡಿ ಸಾಲ ಪ್ರಮಾಣ ಹೆಚ್ಚಳ ಕೂಡ ಒಂದಾಗಿತ್ತು. 19.97 ಲಕ್ಷ ರೈತರಿಗೆ ಶೂನ್ಯ ಬಡ್ಡಿದರಲ್ಲಿ 15,841.48 ಕೋಟಿ ರೂಪಾಯಿ ಸಾಲ ವಿತರಿಸಿದ್ದು, ಕಳೆದ ಅವಧಿಗಿಂತ ಈ ಬಾರಿ 776.48 ಕೋಟಿ ಹೆಚ್ಚುವರಿ ಸಾಲ ವಿತರಿಸಲಾಗಿದೆ ಎಂದು ಸಾಸಕ ದಿನೇಶ್ ಗೂಳಿಗೌಡ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ 21 ಡಿಸಿಸಿ ಬ್ಯಾಂಕ್ (District Cooperative Central Bank) ಹಾಗೂ 6,040 ಕೃಷಿ ಪತ್ತಿನ ಸಹಕಾರ ಸಂಘಗಳಿಂದ (Co-operative Societies) 24,600 ಕೋಟಿ ರೂಪಾಯಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಅದರಲ್ಲಿ 2024ರ ಜನವರಿ ತನಕ 19.97 ಲಕ್ಷ ರೈತರಿಗೆ 15,841.48 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಪ್ರಸಕ್ತ ಸಾಲಿನ ಉಳಿದ ಗುರಿಯನ್ನು ಶೀಘ್ರದಲ್ಲಿ ಮುಟ್ಟಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

ಕೃಷಿ ಸಾಲದ ಮಾಹಿತಿ

ರಾಜ್ಯದ ರೈತರಿಗೆ ಸರಕಾರವು 2004ರಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ವಿತರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. 2012-13ನೇ ಸಾಲನಲ್ಲಿ 1 ಲಕ್ಷ ರೂಪಾಯಿ ವರೆಗೆ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿತ್ತು. 2013-14ನೇ ಸಾಲಿನಿಂದ ಶೂನ್ಯ ಬಡ್ಡಿ ಸಾಲದ ಮಿತಿಯನ್ನು 2 ಲಕ್ಷ ರೂಪಾಯಿ ವರೆಗೆ ವಿಸ್ತರಿಸಲಾಯಿತು.

ಇನ್ನು ಇದೇ ಶೂನ್ಯ ಬಡ್ಡಿ ಸಾಲವನ್ನು 2014-15ನೇ ಸಾಲಿನಿಂದ 2ರಿಂದ 3 ಲಕ್ಷ ರೂಪಾಯಿ ವರೆಗೆ ವಿತರಿಸುತ್ತ ಬರಲಾಗುತ್ತಿತ್ತು. ಹಿಂದಿನ ಬಿಜೆಪಿ ಸರಕಾರ ಈ ಸಾಲ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸುವ ಪ್ರಯತ್ನ ನಡೆಸಿತ್ತು. ಆದರೆ ಅಷ್ಟರಲ್ಲಿ ಚುನಾವಣೆ ಬಂದು ಹೊಸ ಸರಕಾರ ರಚನೆಯಾಯಿತು. ಈಗಿನ ಕಾಂಗ್ರೆಸ್ ಸರಕಾರ ಶೂನ್ಯಬಡ್ಡಿ ಬೆಳೆಸಾಲ ಮಿತಿಯನ್ನು 3ರಿಂದ 5 ಲಕ್ಷಕ್ಕೆ ಹೆಚ್ಚಿಸಿದೆ.

ಇದನ್ನೂ ಓದಿ: Kisan Credit Card loan : ಪಶುಪಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ನೆರವು | ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಹಾಯಧನ

ಅಲ್ಪಾವಧಿ ಸಾಲವೆಷ್ಟು? : ಸಂಪೂರ್ಣ ಬಡ್ಡಿ ರಹಿತವಾಗಿ ರೈತರಿಗೆ ವಾರ್ಷಿಕ ಅವಧಿಗೆ ನೀಡುವ ಅಲ್ಪಾವಧಿ ಬೆಳೆ ಸಾಲವನ್ನು ನೀಡಲಾಗುತ್ತದೆ. ಈ ಸಾಲದ ಮಿತಿಯನ್ನು ಕಾಂಗ್ರೆಸ್ ಸರಕಾರ 3ರಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. 19.63 ಲಕ್ಷ ರೈತರಿಗೆ ಅಲ್ಪಾವಧಿ ಸಾಲವನ್ನು ವಿತರಿಸಲಾಗಿದ್ದು; ಒಟ್ಟು 15,031.72 ಕೋಟಿ ರೂಪಾಯಿ ವಿತರಣೆಯಾಗಿದೆ.

ಮಧ್ಯಮಾವಧಿ ಸಾಲವೆಷ್ಟು? : ಇನ್ನು 12 ತಿಂಗಳಿನಿಂದ 36 ತಿಂಗಳ ಅವಧಿಗೆ ವಿತರಿಸುವ ಮಧ್ಯಮಾವಧಿ ಸಾಲಕ್ಕೆ ಶೇ.3ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಈ ಸಾಲದ ಮಿತಿಯನ್ನು ಕಾಂಗ್ರೆಸ್ ಸರಕಾರ 10 ಲಕ್ಷಕ್ಕೆ ಏರಿಸಿದೆ. ಈ ಬಾರಿ ಮಧ್ಯಮಾವಧಿ ಸಾಲವನ್ನು 15,771 ರೈತರಿಗೆ ಒಟ್ಟು 536.35 ಕೋಟಿ ರೂಪಾಯಿ ವಿತರಿಸಲಾಗಿದೆ.

ಅದೇ ರೀತಿ ದೀರ್ಘಾವಧಿ ಸಾಲವೆಷ್ಟು? : ಅದೇ ರೀತಿ ಶೇ.3ರ ಬಡ್ಡಿ ದರದಲ್ಲಿ ಸುಮಾರು 10 ವರ್ಷಗಳ ಅವಧಿಗೆ ನೀಡಲಾಗುವ ದೀರ್ಘಾವಧಿ ಸಾಲದ ಮಿತಿಯನ್ನು ಕಾಂಗ್ರೆಸ್ ಸರಕಾರ 10ರಿಂದ 20 ಲಕ್ಷಕ್ಕೆ ಏರಿಸಲಾಗಿದೆ. ಸದರಿ ದೀರ್ಘಾವಧಿ ಸಾಲವನ್ನು 17,873 ರೈತರಿಗೆ 273.41 ಕೋಟಿ ರೂಪಾಯಿ ವಿತರಿಸಲಾಗಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

WhatsApp Group Join Now
Telegram Group Join Now

Related Posts

error: Content is protected !!