ಸರಕಾರಿ ಯೋಜನೆಸುದ್ದಿಗಳು

ಈ ರೈತರ ಖಾತೆಗೆ ₹101.61 ಕೋಟಿ ಬೆಳೆ ವಿಮೆ ಜಮಾ | ನಿಮಗೆ ಹಣ ಬಂತಾ ಈಗಲೇ ಚೆಕ್ ಮಾಡಿ Crop Insurance Bele vime Jama

WhatsApp Group Join Now
Telegram Group Join Now

Crop Insurance Bele vime Jama : ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಈಚೆಗೆ ಬಾಕಿ ಉಳಿದ ಎಲ್ಲ ರೈತರ ಬೆಳೆ ವಿಮೆ ಪರಿಹಾರ ಇತ್ಯರ್ಥಪಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ರೈತರ ಬ್ಯಾಂಕ್ ಖಾತೆಗಳಿಗೆ ಕಳೆದ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಹಣ ಹಂತಹಂತವಾಗಿ ಜಮಾ ಆಗುತ್ತಿದೆ.

ಕಳೆದ ಮುಂಗಾರಿನಲ್ಲಿ ಬೆಳೆ ವಿಮೆ ಮಾಡಿಸಿದ್ದ ರೈತರಿಗೆ ಬೆಳೆ ಕಟಾವು, ಸ್ಥಳೀಯ ಪ್ರಕೃತಿ ವಿಕೋಪ ಹಾಗೂ ಬೆಳೆ ರಾಶಿ ನಂತರ ಹಾನಿ ಪ್ರಕರಣಗಳಲ್ಲಿ ವಿಮಾ ಪರಿಹಾರ ದೊರೆಯುತ್ತದೆ. ಅಂದರೆ ಬಿತ್ತನೆಯಿಂದ ಬೆಳೆ ಕಟಾವು ಹಂತದ ವರೆಗಿನ ಬೆಳೆ ನಷ್ಟ, ನೆರೆ-ಬರದಂತಹ ಪ್ರಕೃತಿ ವಿಕೋಪ ಹಾಗೂ ಕಟಾವು ನಂತರದಲ್ಲಿ ಆದ ಬೆಳೆ ಹಾನಿಗೆ ವಿಮಾ ಪರಿಹಾರ ಸಿಗಲಿದೆ.

ಇದನ್ನೂ ಓದಿ: ರೈತರಿಗೆ ₹5 ಲಕ್ಷದ ವರೆಗೆ ಬಡ್ಡಿ ಇಲ್ಲದ ಬೆಳೆಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ… Zero Interest Crop Loan

ಎಷ್ಟೆಷ್ಟು ಪರಿಹಾರ ಸಿಗಲಿದೆ?

ಕಳೆದ ಮುಂಗಾರಿನಲ್ಲಿ ತಮ್ಮ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಿದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 29,000 ರೂಪಾಯಿಂದ 86,000 ರೂಪಾಯಿ ವರೆಗೂ ಆಯಾ ಬೆಳೆಗೆ ನಿಗದಿಪಡಿಸಲಾದ ಮೊತ್ತದ ಆಧಾರದಲ್ಲಿ ಬೆಳೆಹಾನಿ ಪರಿಹಾರವಾಗಿ ಸಿಗಲಿದೆ. ತೋಟಗಾರಿಕೆ ಬೆಳೆಗಳಿಗೆ ಇನ್ನೂ ಹೆಚ್ಚಿನ ಬೆಳೆ ಹಾನಿ ವಿಮಾ ಪರಿಹಾರ ದೊರೆಯುತ್ತದೆ.

ರಾಜ್ಯದ 19.14 ಲಕ್ಷ ರೈತರು 2023-24ರ ಮುಂಗಾರಿನಲ್ಲಿ 15.10 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಿದ್ದರು. ಈಗಾಲೇ 1,791 ಕೋಟಿ ರೂಪಾಯಿ ಬೆಳೆ ವಿಮೆ ಇತ್ಯರ್ಥವಾಗಿದ್ದು; ಬಾಕಿ ಇರುವ ಪರಿಹಾರವನ್ನು ನಿಯಮಾನುಸಾರ ಪರಿಶೀಲಿಸಿ ಶೀಘ್ರ ವಿತರಣೆ ಮಾಡಲು ಕೃಷಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೀಗ ಹಂತಹಂತವಾಗಿ ವಿಮಾ ಪರಿಹಾರ ಜಮಾ ಆಗುತ್ತಿದೆ.

Crop Insurance

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ 15 ಸಾವಿರ ಮೌಲ್ಯದ ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ PM Vishwakarma Scheme free tool kit

ಈ ರೈತರ ಖಾತೆಗೆ ₹101.61 ಕೋಟಿ ಹಣ ಜಮಾ

ಈ ಪೈಕಿ ಕಲಬುರಗಿ ಜಿಲ್ಲೆಯ ರೈತರ ಬ್ಯಾಂಕ್ ಖಾತೆಗೆ DBT ಮೂಲಕ 101.61 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ. ಒಟ್ಟಾರೆ 88,644 ರೈತರ ಬ್ಯಾಂಕ್ ಖಾತೆಗೆ ಈ ಬೆಳೆ ವಿಮೆ ಪರಿಹಾರ ಜಮಾ ಆಗಿದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.

  • ಬೆಳೆ ಕಟಾವು ಹಂತ ವಿಮೆ : ಬಿತ್ತನೆಯಿಂದ ಬೆಳೆ ಕಟಾವು ಹಂತದ ಬೆಳೆ ಹಾನಿಗೆ ಹೆಸರು, ಉದ್ದು, ಸೋಯಾಬೀನ್ ಹಾಗೂ ತೊಗರಿ ಬೆಳೆದ 69,829 ರೈತರ ಖಾತೆಗೆ 94.558 ಕೋಟಿ ರೂಪಾಯಿ ಜಮಾ ಮಾಡಲಾಗಿದೆ.
  • ಸ್ಥಳೀಯ ಪ್ರಕೃತಿ ವಿಕೋಪದ ಬೆಳೆ ಹಾನಿ : ಇನ್ನು ನೆರೆ-ಬರದಂತಹ ಸ್ಥಳೀಯ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಆದ ಬೆಳೆ ಹಾನಿಗೆ 18,433 ರೈತರ ಖಾತೆಗೆ 6.24 ಕೋಟಿ ರೂಪಾಯಿ ವಿಮಾ ಪರಿಹಾರವನ್ನು ಜಮೆ ಮಾಡಲಾಗಿದೆ.
  • ಬೆಳೆ ರಾಶಿ ಸಂದರ್ಭದ ಹಾನಿ : ಅದೇ ರೀತಿ ಕಟಾವಿನ ನಂತರ ಎರಡು ವಾರಗಳ ಕಾಲ ಜಮೀನಿನಲ್ಲೇ ಫಸಲ ಬಿಟ್ಟ ಸಂದರ್ಭದಲ್ಲಿ ಆದ ಬೆಳೆ ಹಾನಿಗೆ 382 ರೈತರ ಬ್ಯಾಂಕ್ ಖಾತೆಗೆ 81.92 ಲಕ್ಷ ರೂಪಾಯಿ ವಿಮೆ ಮೊತ್ತ ಪಾವತಿಸಲಾಗಿದೆ.

ಹೀಗೆ ಒಟ್ಟು 101.61 ಕೋಟಿ ಬೆಳೆ ವಿಮೆ ಪರಿಹಾರವು ಜಿಲ್ಲೆಯ 88,644 ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಈ ಪೈಕಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರದ 281 ರೈತರ ಖಾತೆಗೆ ಹಣ ವರ್ಗಾವಣೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಈ ರೈತರು ಕೂಡಲೇ ತಮ್ಮ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಮಾಡಿಸಿದಲ್ಲಿ ಇವರಿಗೆ ಸಲ್ಲಬೇಕಾದ 35.95 ಲಕ್ಷ ರೂಪಾಯಿ ವಿಮಾ ಪರಿಹಾರ ಜಮೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರೈತರ ಖಾತೆಗೆ ಮುಂಗಾರು ಬೆಳೆ ವಿಮೆ ಪರಿಹಾರ | ಕೃಷಿ ಸಚಿವರ ಸೂಚನೆ 2023 Khariff Crop Insurance Settlement

ನಿಮಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

ಕಲಬುರಗಿ ಜಿಲ್ಲೆಯ ರೈತರೂ ಸೇರಿದಂತೆ ಉಳಿದ ಜಿಲ್ಲೆಗಳ ರೈತರಿಗೆ ಹಂತಹಂತವಾಗಿ ಬೆಳೆ ವಿಮಾ ಪರಿಹಾರ ಜಮಾ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈತರು ತಮ್ಮ ಪರಿಹಾರ ಜಮಾ ವಿವರವನ್ನು ನಾವು ಕೆಳಗೆ ನೀಡಿರುವ ಕರ್ನಾಟಕ ಸರಕಾರದ ‘ಸಂರಕ್ಷಣೆ’ (samrakshane.karnataka.gov.in) ಜಾಲತಾಣದ ಮೂಲಕ ಮೊಬೈಲ್’ನಲ್ಲಿಯೇ ಚೆಕ್ ಮಾಡಬಹುದು.

ಕರ್ನಾಟಕ ಸರಕಾರದ ‘ಸಂರಕ್ಷಣೆ’ ಜಾಲತಾಣದಲ್ಲಿ ನೀವು 2023-24ರ ಕಾಲಂ ಕೆಳಗಡೆ ‘Kharif /ಖಾರೀಫ್’ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ/ Go ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪುಟ ಓಪನ್ ಆಗುತ್ತದೆ. ಅಲ್ಲಿ ಫಾರ್ಮರ್ಸ್ ಕಾಲಂ ಕೆಳಗಡೆ ಕಾಣುವ Check Status ಮೇಲೆ ಕ್ಲಿಕ್ ಮಾಡಿದರೆ, ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ.

ಪರ್ಸನಲ್, ಮೊಬೈಲ್ ನಂಬರ್ ಮತ್ತು ಆಧಾರ್ ಎಂಬ ಮೂರು ಆಯ್ಕೆಗಳಿರುತ್ತವೆ. ಅದರಲ್ಲಿ ಮಧ್ಯದಲ್ಲಿರುವ ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿ, ನೀವು ಬೆಳೆ ವಿಮೆ ಮಾಡಿಸುವಾಗ ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತೀರೋ ಆ ಮೊಬೈಲ್ ನಂಬರ್ ನಮೂದಿಸಬೇಕು. ಬಳಿಕ ಕೆಳಗಡೆ ಕಾಣುವ ಕ್ಯಾಪ್ಟಾಕೋಡ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಒಂದು ವೇಳೆ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದರೂ ಕೂಡ ಯಾವುದೇ ಮಾಹಿತಿ ಕಾಣದಿದ್ದರೆ ನೀವು ಕ್ಯಾಪ್ಟಾಕೋಡ್ ಸರಿಯಾಗಿ ನಮೂದಿಸಿಲ್ಲ ಎಂದರ್ಥ. ಹೀಗಾಗಿ ಕ್ಯಾಪ್ಟಾಕೋಡ್ ಬಾಕ್ಸ್ ಮುಂದೆ ಕಾಣುವ ಬಾಣದ ಗುರುತುಗಳ ಮೇಲೆ ಒತ್ತಿದರೆ ಹೊಸ ಕ್ಯಾಪ್ಟಾಕೋಡ್ ಬರಲಿದೆ. ಸರಿಯಾದ ಕ್ಯಾಪ್ಟಾಕೋಡ್ ನಮೂದಿಸಿದರೆ ನಿಮಗೆ ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ.

ಬೆಳೆ ವಿಮೆ ಹಣ ಚೆಕ್ ಮಾಡುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರೈತರೇ ನಿಮ್ಮ ಜಮೀನು ಕಾಲುದಾರಿ, ಬಂಡಿದಾರಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… | ಜಮೀನು ದಾರಿ ಸರಕಾರದ ಆದೇಶವೇನು? Agriculture Land Way Revenue Maps Online

WhatsApp Group Join Now
Telegram Group Join Now

Related Posts

error: Content is protected !!