Crop Insurance : ಬೆಳೆ ವಿಮೆ ಹಣ ಜಮಾ ವಿವರ
ಬೆಳೆ ವಿಮೆ ಪರಿಹಾರದ ಹಣ ಜಮಾ ವಿವರನ್ನು ಮೊಬೈಲ್ನಲ್ಲೇ ಚೆಕ್ ಮಾಡಿ
ರೈತರು ತಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್ ಅಥವಾ ಜಮೀನು ಸರ್ವೇ ನಂಬರ್ಗಳನ್ನು ಹಾಕಿ ಬೆಳೆ ವಿಮೆ ಪರಿಹಾರದ ಹಣ ಜಮೆಯ ಸ್ಟೇಟಸ್ ಚೆಕ್ ಮಾಡಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…
86,000 ರೂ. ವರೆಗೂ ಪರಿಹಾರ
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ (Pradhan Mantri Fasal Bima Yojana- PMFBY) ರೈತರು ತಮ್ಮ ಬೆಳೆಗಳಿಗೆ ಬೆಳೆವಿಮೆ ಮಾಡಿಸಿದರೆ ಪ್ರತಿ ಹೆಕ್ಟೇರ್ಗೆ 29,000 ರೂಪಾಯಿಯಿಂದ 86,000 ರೂಪಾಯಿ ವರೆಗೂ ಆಯಾ ಬೆಳೆಗೆ ತಕ್ಕಂತೆ ಬೆಳೆನಷ್ಟ ಪರಿಹಾರ ಪಡೆದುಕೊಳ್ಳಬಹುದು.
ಮುಂಗಾರು ಹಂಗಾಮಿನಲ್ಲಿ ಒಟ್ಟು 36 ಅಧಿಸೂಚಿತ ಬೆಳೆಗಳು ಹಾಗೂ ಹಿಂಗಾರು/ ಬೇಸಿಗೆ ಹಂಗಾಮಿನಲ್ಲಿ ಒಟ್ಟು 22 ಅಧಿಸೂಚಿತ ಬೆಳೆಗಳು ಈ ವಿಮಾ ಯೋಜನೆಯ ವ್ಯಾಪ್ತಿಯಲ್ಲಿವೆ. ರೈತರು ಬೆಳೆಗಳಿಗೆ ಅನುಗುಣವಾಗಿ ನಿಗದಿಪಡಿಸಿದ ವಿಮಾ ಮೊತ್ತದಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.2ರಷ್ಟು (ತೋಟಗಾರಿಕೆ ಬೆಳೆಗಳಿಗೆ ಶೇ.5ರಷ್ಟು) ಮತ್ತು ಹಿಂಗಾರು ಹಂಗಾಮಿನಲ್ಲಿ ಶೇ.1.5ರಷ್ಟು ಮಾತ್ರ ಕಟ್ಟಬೇಕು.
ಇದನ್ನೂ ಓದಿ: MGNREGA Karnataka : ಸಣ್ಣ ರೈತರಿಗೆ ₹5 ಲಕ್ಷ ನರೇಗಾ ಸಹಾಯಧನ
ಬೆಳೆ ವಿಮೆ ಹಣ ಜಮಾ ಹೀಗೆ ಚೆಕ್ ಮಾಡಿ
ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಮೊಬೈಲ್ ನಂಬರ್ ಮೂಲಕ ಬೆಳೆ ವಿಮೆ ಹಣ ಜಮಾ ಚೆಕ್ ಮಾಡಬಹುದು. ಬೆಳೆ ವಿಮೆ ಮಾಡಿಸಿದ ನಂತರ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ? ನೀವು ಎಷ್ಟು ಬೆಳೆ ವಿಮೆ ಹಣ ಪಾವತಿಸಿದ್ದೀರಿ? ಅರ್ಜಿಯ ಸ್ಟೇಟಸ್ ಏನಿದೆ? ಎಂಬುದನ್ನು ತಿಳಿಯಬಹುದು.
ನಾವು ಈ ಲೇಖನದ ಕೊನೆಯಲ್ಲಿ ನೀಡಿರುವ ಬೆಳೆ ವಿಮೆ ಪರಿಹಾರ ಸ್ಟೇಟಸ್ ಚೆಕ್ ಲಿಂಕ್ ಬಳಸಿಕೊಂಡು ಹಣ ಜಮೆ ವಿವರವನ್ನು ಪರೀಶೀಲಿಸಬಹುದಾಗಿದೆ. ಲಿಂಕ್ ಕ್ಲಿಕ್ ಮಾಡಿದರೆ ರಾಜ್ಯ ಸರಕಾರದ ‘samrakshane / ಸಂರಕ್ಷಣೆ’ ವೆಬ್ಪುಟ ತೆರೆದುಕೊಳ್ಳುತ್ತದೆ.
ಅಲ್ಲಿ ಮೊದಲಿಗೆ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂಗಾರು ಬೆಳೆ ವಿಮೆಗೆ ‘ಖಾರೀಪ್’, ಹಿಂಗಾರು ಬೆಳೆ ವಿಮೆಯ ಸ್ಟೇಟಸ್ಗೆ ‘ರಾಬಿ’ ಆಯ್ಕೆ ಮಾಡಿಕೊಂಡು Go/ಮುಂದೆ ಮೇಲೆ ಕ್ಲಿಕ್ ಮಾಡಬೇಕು.
ನಂತರ Farmers / ಪಾರ್ಮಸ್ ಕಾಲಂ ನಲ್ಲಿ 3ನೇ ಆಯ್ಕೆ Status Check / ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್ ಅಥವಾ ಅಪ್ಲಿಕೇಷನ್ ನಂಬರ್’ಗಳಲ್ಲಿ ಯಾವುದಾರೂ ಒಂದನ್ನು ನಮೂದಿಸಿ, ನಂತರ Captcha ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ವಿವರ ಸಂಪೂರ್ಣವಾಗಿ ಲಭ್ಯವಾಗುತ್ತದೆ.
ಬೆಳೆವಿಮೆ ಪರಿಹಾರ ಡೈರೆಕ್ಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ…
ಇದನ್ನೂ ಓದಿ: Agricultural Pumpset : ಈ ರೈತರ ಕೃಷಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ಬಂದ್?