AgricultureNews

Free Training : ಉಚಿತ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ತರಬೇತಿ | ವಸತಿ, ಉಟೋಪಚಾರ ಸಂಪೂರ್ಣ ಉಚಿತ

ಗ್ರಾಮೀಣ ಭಾಗದ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರಿಗೆ 2025ರ ಜನವರಿಯಿಂದ ಮಾರ್ಚ್ 2025ರ ವರೆಗೆ ರುಡ್‌ಸೆಟ್ ಸಂಸ್ಥೆಯಲ್ಲಿ (Rudset Institute) ವಿವಿಧ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದ್ದು; ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now

ಉಚಿತ ಹೈನುಗಾರಿಕೆ (Dairy Training), ಎರೆಹುಳ ಗೊಬ್ಬರ, ಕುರಿ ಮತ್ತು ಮೇಕೆ ಸಾಕಾಣಿಕೆ (Sheep-Goat Farming), ಕಂಪ್ಯೂಟರ್ ಅಕೌಂಟಿ೦ಗ್ ಹಾಗೂ ಮೊಬೈಲ್ ಫೋನ್ ರಿಪೇರಿಯಂತಹ ವಿವಿಧ ಸ್ವಾವಲಂಬಿ ಉದ್ಯೋಗ ತರಬೇತಿಗಳನ್ನು ವಸತಿ, ಊಟೋಪಚಾರ ಸಹಿತ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.

ಉಚಿತ ತರಬೇತಿಗಳ ವಿವರ

ಉಚಿತ ತರಬೇತಿ ಹೆಸರು ತರಬೇತಿ ನಡೆಯುವ ದಿನಾಂಕ
ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತರಬೇತಿ20-01-2025 ರಿಂದ 29-01-2025
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತ06-02-2025 ರಿಂದ 15-02-2025
ಮೊಬೈಲ್ ಫೋನ ರಿಪೇರಿ ತರಬೇ07-01-2025 ರಿಂದ 05-02-2025
ಕಂಪ್ಯೂಟರ್ ಅಕೌಂಟಿ೦ಗ್ (ಟ್ಯಾಲಿ) ತರಬೇತಿ12-02-2025 ರಿಂದ 13-03-2025

ತರಬೇತಿ ಪಡೆಯಲು ಬೇಕಾಗುವ ಅರ್ಹತೆಗಳು

ಮೇಲ್ಕಾಣಿಸಿದ ಉಚಿತ ತರಬೇತಿಗಳನ್ನು ಪಡೆಯಲು ಇಚ್ಛಸುವ ಅಭ್ಯರ್ಥಿಗಳು 19 ರಿಂದ 45 ವರ್ಷ ವಯೋಮಾನದವರು ಆಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ ಅಥವಾ ನರೇಗಾ ಜಾಬ್ ಕಾರ್ಡ ಹೊಂದಿದವರಿಗೆ ಮೊದಲ ಆದ್ಯತೆ ಇದೆ.

ವಿಶೇಷವಾಗಿ ತರಬೇತಿ ಪಡೆಯಲು ಇಚ್ಛಸುವ ಅಭ್ಯರ್ಥಿಗಳು ಸ್ವ ಉದ್ಯೋಗ ಪ್ರಾರಂಭಿಸಲು ಆಸಕ್ತರಿರಬೇಕು. ಕಂಪ್ಯೂಟರ್ ಅಕೌಂಟಿ೦ಗ್ (ಟ್ಯಾಲಿ) ತರಬೇತಿ ಹೊರತುಪಡಿಸಿ ಉಳಿದೆಲ್ಲ ತರಬೇತಿಗಳಿಗೆ ಯಾವುದೇ ವಿದ್ಯಾರ್ಹತೆ ಕಡ್ಡಾಯವಲ್ಲ. ಕನ್ನಡ ಓದು ಬರಹ ಬಲ್ಲವರಾಗಿದ್ದರೆ ಸಾಕು. ಕಂಪ್ಯೂಟರ್ ಅಕೌಂಟಿ೦ಗ್ (ಟ್ಯಾಲಿ) ತರಬೇತಿಗೆ ಯಾವುದೇ ಪದವಿ ಕಡ್ಡಾಯವಾಗಿದೆ.

ರುಡ್‌ಸೆಟ್ ಸಂಸ್ಥೆಯಲ್ಲಿ ದೊರೆಯುವ ಸೌಲಭ್ಯಗಳು

  • ಉಚಿತ ಊಟ ವಸತಿ ಸಹಿತ ತರಬೇತಿ
  • ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ
  • ಕೌಶಲ್ಯ ತರಬೇತಿಯ ಜೊತೆಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ
  • ವ್ಯಕ್ತಿತ್ವ ವಿಕಸನ, ಮಾರುಕಟ್ಟೆ ನಿರ್ವಹಣೆ, ಬ್ಯಾಂಕ್ ವ್ಯವಹಾರ ಹಾಗೂ ವಿವಿಧ ಸಾಲ ಸೌಲಭ್ಯಗಳ ಮಾಹಿತಿ
  • ರುಡ್‌ಸೆಟ್ ಸಂಸ್ಥೆ ಹಾಗೂ ಕೇಂದ್ರ ಸರಕಾರದ ಪ್ರಮಾಣ ಪತ್ರ
  • ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ
WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!