ಪಶುಪಾಲನೆಸರಕಾರಿ ಯೋಜನೆ

Dairy Farming loan Interest subsidy : ಹಸು, ಎಮ್ಮೆ ಖರೀದಿ ಸಾಲಕ್ಕೆ ಬಡ್ಡಿ ಸಬ್ಸಿಡಿ | ಹೈನುಗಾರಿಕೆ ಉತ್ತೇಜನಕ್ಕೆ ಹೊಸ ಯೋಜನೆ

WhatsApp Group Join Now
Telegram Group Join Now

Dairy Farming loan Interest subsidy : ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ (Karnataka State Budget 2024-25) ಕೃಷಿ ಉಪಕಸುಬುಗಳಾದ ಹೈನುಗಾರಿಕೆ, ಕುರಿ-ಮೇಕೆ, ಕೋಳಿ, ಹಂದಿ ಸಾಕಾಣಿಕೆಗೆ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಹೈನುಗಾರಿಕೆ ಉತ್ತೇಜನಕ್ಕೆ ಬಡ್ಡಿ ಸಬ್ಸಿಡಿ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿ-ಮೇಕೆ ಸಾಕಾಣಿಕೆ ಸಾಲ ಮತ್ತು ಸಬ್ಸಿಡಿ, ಕುರಿಗಾರರಿಗೆ ಗುರುತಿನ ಚೀಟಿ ವಿತರಣೆ ಸೇರಿದಂತೆ ವಿವಿಧ ಯೋಜನೆಗಳಿಗೆ ಒತ್ತು ನೀಡಲಾಗಿದೆ.

ಕರ್ನಾಟಕ ರೈತ ಸಮೃದ್ಧಿ ಯೋಜನೆ : ರಾಜ್ಯ ಸರಕಾರದ ರೈತಪರ ವಿವಿಧ ಯೋಜನೆಗಳನ್ನು ಒಗ್ಗೂಡಿಸಿ, ಸಮಗ್ರ ಕೃಷಿಯನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ‘ಕರ್ನಾಟಕ ರೈತ ಸಮೃದ್ಧಿ ಯೋಜನೆ’ಯನ್ನು (Karnataka Raita Samriddhi Yojana) ಜಾರಿಗೊಳಿಸಲಾಗಿದೆ. ಸದರಿ ಯೋಜನೆಯಡಿ ಕೃಷಿ, ತೋಟಗಾರಿಕೆ ಜೊತೆಗೆ ಪಶುಸಂಗೋಪನೆ, ಹೈನುಗಾರಿಕೆಗಳನ್ನು ಒಳಗೊಂಡ ಸಮಗ್ರ ಕೃಷಿಗೆ ಒತ್ತ ನೀಡಲಾಗಿದೆ.

ಇದನ್ನೂ ಓದಿ: Salamanna gift : ರೈತರಿಗೆ ಸಾಲಮನ್ನಾ ಕೊಡುಗೆ | 2024-25ನೇ ಸಾಲಿನ ಕರ್ನಾಟಕ ಬಜೆಟ್’ನಲ್ಲಿ ಸಿಕ್ತು ಬಂಪರ್ ಗಿಫ್ಟ್

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸೊಸೈಟಿ ಸದಸ್ಯರಿಗೆ ಅಮೃತ ಸ್ವಾಭಿಮಾನಿ ಕುರಿಗಾಹಿ (Amruta Swabhimani Kurigahi Yojana) ಯೋಜನೆಯಡಿಯಲ್ಲಿ 20+1 ಕುರಿ-ಮೇಕೆ ಸಾಕಾಣಿಕೆಗಾಗಿ 1,75,000 ರೂಪಾಯಿ ವರೆಗೆ ಸಾಲ ಮತ್ತು ಸಹಾಯಧನ ಒದಗಿಸಲಾಗುತ್ತದೆ. ಹಿಂದಿನ ಸರಕಾರ ಜಾರಿಗೊಳಿಸಿರುವ ಈ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿಯೂ ಮುಂದುವರೆಸಿ 10.000 ಫಲಾನುಭವಿಗಳಿಗೆ ಸಹಾಯಧನ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ.

ದೇಶಿ ತಳಿ ರಾಸುಗಳ ಸಂವರ್ಧನೆ : ಕರ್ನಾಟಕದ ಸುಪ್ರಸಿದ್ಧ ಜಾನುವಾರು ತಳಿಗಳಾದ ಅಮೃತ ಮಹಲ್, ಹಳ್ಳಿಕಾರ್, ಖಿಲಾರಿ ರಾಸುಗಳನ್ನು ಸಂವರ್ಧನೆ ಮಾಡಿ ಉತ್ಕೃಷ್ಟ ಕರುಗಳನ್ನು ಒದಗಿಸುವ ಯೋಜನೆಯನ್ನು 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಇದನ್ನೂ ಓದಿ: bara parihara release : ಈ ರೈತರಿಗೆ ಬರ ಪರಿಹಾರ ಹಣ ಜಮಾ | ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ…

ಹಸು / ಎಮ್ಮೆ ಖರೀದಿಗೆ ಬಡ್ಡಿ ಸಬ್ಸಿಡಿ : ಹೈನುಗಾರಿಕೆಯು ಗ್ರಾಮೀಣ ಮಹಿಳೆಯರ ಜೀವನಾಡಿಯಾಗಿದ್ದು; ಅನೇಕ ಮಹಿಳೆಯರಿಗೆ ಈ ಉಪಕಸುಬು ಬದುಕು ಕಟ್ಟಿಕೊಟ್ಟಿದೆ. ಇಂತಹ ಹೈನುಗಾರಿಕೆಯನ್ನು ಉತ್ತೇಜಿಸುವ ಸದುದ್ದೇಶದಿಂದ ಹಸು ಅಥವಾ ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದಲೇ ಶೇ.6ರ ಬಡ್ಡಿ ಸಹಾಯಧನ (Interest subsidy) ನೀಡುವ ಘೋಷಣೆ ಮಾಡಲಾಗಿದೆ.

 

ಹಂದಿ ಮತ್ತು ಕೋಳಿ ಸಾಕಾಣಿಕೆ ಉಚಿತ ತರಬೇತಿ : ಈಗಾಗಾಲೇ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಸಕ್ತ ರೈತರಿಗೆ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆಯ ತರಬೇತಿಗಳನ್ನು ನೀಡಲಾಗುತ್ತಿದೆ. ಇದೀಗ ಹಂದಿ ಮತ್ತು ಕೋಳಿ ಸಾಕಾಣಿಕೆಯನ್ನು (Poultry Farming) ಪ್ರೋತ್ಸಾಹಿಸಲು ಆಸಕ್ತ ರೈತರಿಗೆ ತರಬೇತಿ ನೀಡುವ ಮೂಲಕ ರೈತರ ಆದಾಯ ಹೆಚ್ಚಿಸಲಾಗುವ ಗುರಿಯನ್ನು ಈ ಬಜೆಟ್‌ನಲ್ಲಿ ಹೊಂದಲಾಗಿದೆ.

ಇದನ್ನೂ ಓದಿ: PM Vishwakarma Scheme free tool kit : ಕೇಂದ್ರ ಸರ್ಕಾರದಿಂದ 15 ಸಾವಿರ ಮೌಲ್ಯದ ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ

ವಲಸೆ ಕುರಿಗಾರರಿಗೆ ಭರ್ಜರಿ ಗಿಫ್ಟ್ : ರಾಜ್ಯದಲ್ಲಿ ಕುರಿ-ಮೇಕೆ ಸಾಕಾಣಿಕೆಯನ್ನು ಊರಿಂದ ಊರಿಗೆ ಸಂಚರಿಸುತ್ತ ವಲಸೆ ಮುಖಾಂತರ ಸಾಕಾಣಿಕೆ ಕೈಗೊಳ್ಳುತ್ತಿರುವ ಕುರಿಗಾರರಿಗೆ (Itinerant Sheep Farmers) ಬಜೆಟ್‌ನಲ್ಲಿ ಈ ಕೆಳಕಂಡ ವಿಶೇಷ ಕೊಡಿಗೆಗಳನ್ನು ಘೋಷಿಸಲಾಗಿದೆ.

  • ವಲಸೆ ಕುರಿಗಾರರು ಮತ್ತು ಸ್ವತ್ತುಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಜಾರಿಗೊಳಿಸಲಾಗುವುದು.
  • ಸಂಚಾರಿ ಕುರಿಗಾರರು ಇರುವ ಜಾಗದಲ್ಲೇ ಅವರ ಕುರಿ, ಮೇಕೆಗಳಿಗೆ ಸರ್ಕಾರಿ ವೈದ್ಯರಿಂದ ಲಸಿಕೆ ಹಾಕಲಾಗುವುದು.
  • ಸಂಚಾರಿ ಕುರಿಗಾರರಿಗೆ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
  • ಸಂಚಾರಿ ಕುರಿಗಾರರ ಮಕ್ಕಳಿಗೆ ಸರ್ಕಾರಿ ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿ ವೇತನ ನೀಡಲಾಗುವುದು.

ಇದನ್ನೂ ಓದಿ: Dairy farming : ಹೈನು ರೈತರ ಚಿತ್ತ ಗಮನ ಖಾಸಗಿ ಹಾಲಿನ ಡೈರಿಗಳತ್ತ | ಕೆಎಂಎಫ್‌ನ ಕನಿಷ್ಠ ಬೆಲೆ, ಗರಿಷ್ಠ ಕ್ವಾಲಿಟಿ ಟಾರ್ಗೆಟ್‌ಗೆ ಬೆಚ್ಚಿದ ರೈತರು

WhatsApp Group Join Now
Telegram Group Join Now

Related Posts

error: Content is protected !!