ಕೃಷಿ

Dragon Fruit agriculture : ಡ್ರ‍್ಯಾಗನ್ ಫ್ರೂಟ್ ಎಕರೆಗೆ 15 ಲಕ್ಷ ರೂಪಾಯಿ ಆದಾಯ | ಇದು ರೈತರ ಬದುಕು ಬದಲಿಸುವ ಭರವಸೆಯ ಬೆಳೆ

WhatsApp Group Join Now
Telegram Group Join Now

Dragon Fruit agriculture : Income Rs 15 lakh per acre

ಈಚೆಗೆ ರೈತರಲ್ಲಿ ಹೊಸ ಭರವಸೆ ಮೂಡಿಸಿರುವ ಡ್ರ‍್ಯಾಗನ್ ಫ್ರೂಟ್ ಕೃಷಿ, ಖರ್ಚುವೆಚ್ಚ, ಮಾರುಕಟ್ಟೆ, ಆದಾಯದ ಕುರಿತ ಸಮಗ್ರ ಮಾಹಿತಿ ಇಲ್ಲಿದೆ…

ಡ್ರ‍್ಯಾಗನ್ ಹಣ್ಣು (Dragon Fruit) ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ರುಚಿಕರ ಮತ್ತು ಆರೋಗ್ಯಕರ ಹಣ್ಣು. ನಮ್ಮಲ್ಲಿ ಬೆಳೆಯುವುದು ಕಡಿಮೆ. ಮರಭೂಮಿಯಂತಹ ಪ್ರದೇಶಗಳಲ್ಲಿ ಬೆಳೆಯುವ ಹಣ್ಣು. ಅಮೇರಿಕಾ, ಮೆಕ್ಸಿಕೋದ ಮರಭೂಮಿಗಳಲ್ಲಿ ಈ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ವಿದೇಶದ ಈ ಹಣ್ಣು ಇತ್ತೀಚೆಗೆ ನಮ್ಮ ಮಾರ್ಕೆಟ್‌ಗಳಲ್ಲಿ ಹೇರಳವಾಗಿ ಲಭ್ಯವಿದೆ.

ಇದನ್ನೂ ಓದಿ: Home Guards jobs : ಹೋಮ್‌ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ ತರಗತಿ ಪಾಸಾದವರಿಗೆ ಅವಕಾಶ

ದಕ್ಷಿಣ ಅಮೆರಿಕಾದಲ್ಲಿ ಈ ಹಣ್ಣನ್ನು ಮೊದಲಿಗೆ ಬೆಳೆಯಲು ಆರಂಭಿಸಿದರು. ನಂತರದಲ್ಲಿ ಪೂರ್ವಏಷ್ಯಾ, ಥೈಲ್ಯಾಂಡ್ ಮತ್ತು ವಿಯಟ್ನಾಂ ಜನರು ಈ ಹಣ್ಣನ್ನು ಬೆಳೆಯಲಾರಂಭಿಸಿದರು. ಇತ್ತೀಚೆಗೆ ಭಾರತದಲ್ಲಿ ಕೂಡ ಈ ಹಣ್ಣನ್ನು ಬೆಳೆಯಲಾಗುತ್ತಿದೆ.

ಈ ಹಣ್ಣನ್ನು ಕನ್ನಡದಲ್ಲಿ ‘ಪಿಟಾಹಾಯ’ ಹಣ್ಣು ಎಂದು ಕರೆಯಲಾಗುತ್ತದೆ. ಇದು ಮಧ್ಯ ಅಮೆರಿಕಾ, ದಕ್ಷಿಣ ಅಮೆರಿಕಾ, ಮತ್ತು ಏಶಿಯಾದ ಹಣ್ಣು. ಇದು ಸಾಮಾನ್ಯವಾಗಿ ಉಷ್ಣವಲಯದ ‘ಸೂಪರ್‌ಫುಡ್’ ಎಂದು ಪರಿಗಣಿಸಲ್ಪಡುತ್ತದೆ. ಇದು ಕ್ಯಾಕ್ಟಸ್/ ಕಳ್ಳಿ ಜಾತಿಯ ಹಣ್ಣು. ದಕ್ಷಿಣ ಅಮೆರಿಕಾ ಮೂಲವನ್ನು ಹೊಂದಿದೆ. ರಾತ್ರಿ ಹಾಗೂ ಮುಂಜಾವಿನ ವೇಳೆಯಲ್ಲಿ ಡ್ರ‍್ರ್ಯಾಗನ್ ಹಣ್ಣಿನ ತೋಟ ಬೆಂಕಿ ಉಂಡೆಯಂತೆ ಭಾಸವಾಗುತ್ತದೆ.

ಇದನ್ನೂ ಓದಿ: Coconut Farming : ಮೂರೇ ವರ್ಷಕ್ಕೆ ಭರ್ಜರಿ ಇಳುವರಿ ಕೊಡುವ ಗಿಡ್ಡ ತಳಿ ತೆಂಗು | Malaysian Green Dwarf High Yielding Coconut

ಡ್ರ‍್ಯಾಗನ್ ಫ್ರೂಟ್ ಕೃಷಿ (Dragon Fruit agriculture)

ಮಣ್ಣು ಮತ್ತು ಮರಳು ಎರಡನ್ನು ಮಿಶ್ರಣ ಮಾಡಿ ಒಂದು ಕೆಜಿ ಪಾಲಿ ಬ್ಯಾಗ್‌ನಲ್ಲಿ ಡ್ರ‍್ಯಾಗನ್ ಫ್ರೂಟ್ (Dragon Fruit) ಗಿಡವನ್ನು ಕತ್ತರಿಸಿ ನೆಡಬೇಕು. 3 ರಿಂದ 4 ತಿಂಗಳಲ್ಲಿ ಚಿಗುರುತ್ತವೆ. ಕವರನಲ್ಲಿ ಚಿಗರಿದ ನಂತರ ನೀವು ನಾಟಿ ಮಾಡಬಹುದು. ನಾಟಿ ಮಾಡುವಾಗ ಪಾಲಿ ಬ್ಯಾಗ್ ಒಡೆಯದಂತೆ ಅಚ್ಚುಕಟ್ಟಾಗಿ ಕವರ್ ತೆಗೆದು ಮಣ್ಣು ಸಮೇತ ನಾಟಿ ಮಾಡಬೇಕು.

ಒಂದು ಎಕರೆಯಲ್ಲಿ 10×10 ಅಡಿ ಸುತ್ತಳತೆಯಲ್ಲಿ ಕಲ್ಲು ಕಂಬವನ್ನು ಅಥವಾ ಸಿಮೆಂಟ್ ಕಂಬವನ್ನು ನೆಟ್ಟು ಒಂದು ಕಂಬಕ್ಕೆ 3 ರಿಂದ 4 ಸಸಿಗಳನ್ನು ನೆಡಬೇಕು, ಹೀಗೆ ಮಾಡಿದರೆ 1 ವರ್ಷ 3 ತಿಂಗಳಿಗೆ ಫಸಲು ಬರುವುದಕ್ಕೆ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: Animal Husbandry Success formulas : ಹೊಸದಾಗಿ ಪಶುಪಾಲನೆ ಮಾಡುವವರಿಗೆ ಕಿವಿಮಾತು | ಪಶುಪಾಲನೆಯಲ್ಲಿ ಹೆಚ್ಚಿನ ಆದಾಯ ಗಳಿಕೆಗೆ ಪಾಲಿಸಬೇಕಾದ ಸೂತ್ರಗಳು…

ಒಂದು ಎಕರೆಯಲ್ಲಿ ಸುಮಾರು 500 ಸಸಿಯನ್ನು ನಾಟಿ ಮಾಡಬಹುದು. ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ 10 ಅಡಿ ಅಂತರವಿರಬೇಕು. ಸಸಿಗಳು ದೊಡ್ಡದಾಗುತ್ತಿದ್ದಂತೆ ಅದರ ಸೈಡ್ ರೆಕ್ಕೆಯನ್ನು ಕಟ್ ಮಾಡಿ ತೆಗೆಯಬೇಕು. ನಂತರ ಹೀಗೆ ತೆಗೆದು ಅವುಗಳನ್ನು ಹ್ಯಾಂಗ್ ಮಾಡ್ತಾ ಇರಬೇಕು.

ಹಣ್ಣಿನ ವಿಧಗಳು

  • ಕೆಂಪು ಹಣ್ಣು – ಬಿಳಿ ತಿರುಳು: ಎಲೆ ದಪ್ಪವಾಗಿದ್ದು, ಕಡಿಮೆ ಮುಳ್ಳು ಹೊಂದಿರುತ್ತದೆ. ಹಳದಿ ವರ್ಣದ ಹೂವು, ಗಾತ್ರದಲ್ಲಿ ಕಾಯಿ ದೊಡ್ಡದಿದ್ದು, ಇಳುವರಿ ಹೆಚ್ಚು.
  • ಕೆಂಪು ಹಣ್ಣು – ಕೆಂಪು ತಿರುಳು: ಎಲೆ ತುಸು ಲೋಳೆ ಹೊಂದಿದ್ದು, ಮುಳ್ಳು ದೂರ ಇದ್ದು ನಂತರ ದಪ್ಪಗಾಗುತ್ತದೆ. ಕೆಂಪು ಬಣ್ಣದ ಹೂವು, ಕಾಯಿ ಇಳುವರಿ ಕಡಿಮೆ. ಒಳ್ಳೆಯ ರುಚಿ, ಆಕರ್ಷಕ ತಿರುಳು ಹಾಗೂ ದರ ಹೆಚ್ಚು.
  • ಹಳದಿ ಹಣ್ಣು – ಬಿಳಿ ತಿರುಳು: ಇದಕ್ಕೆ ಬೇಡಿಕೆ ಕಡಿಮೆ. ಮಧ್ಯಮ ಗಾತ್ರದ ಕಾಯಿ. ಸಾಧಾರಣ ಇಳುವರಿ.

ಇದನ್ನೂ ಓದಿ: Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಮಣ್ಣು ಮತ್ತು ಹವಾಗುಣ

ಈ ಹಣ್ಣನ್ನು ವಿಭಿನ್ನ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಉತ್ತಮ ಸಾವಯವ ಗೊಬ್ಬರ ಹೊಂದಿರುವ ಮರಳು ಮಿಶ್ರಿತ ಮಣ್ಣು ಈ ಹಣ್ಣನ್ನು ಬೆಳೆಯಲು ಸೂಕ್ತ. ಡ್ರ‍್ಯಾಗನ್ ಹಣ್ಣು ಬೆಳೆಯಲು ಮಣ್ಣಿನ ರಸಸಾರ. 5.5-7 ಸೂಕ್ತ. 16-380 ಡಿಗ್ರಿಸೆಲ್ಸಿ ಉಷ್ಣತೆ ಈ ಬೆಳೆಗೆ ಸೂಕ್ತ.

ಸುತ್ತಳತೆಯ 2 ಅಡಿ ತಗ್ಗು ತೆಗೆದು ಪ್ರತಿ ಗುಂಡಿಗೆ 8 ರಿಂದ 10 ಕೆಜಿ ಕೊಟ್ಟಿಗೆ ಗೊಬ್ಬರ, 250 ಗ್ರಾಂ ಬೇವಿನ ಹಿಂಡಿ ಬೆರೆಸಿ, 12×7 ಅಡಿ ಅಂತರದಲ್ಲಿ 5 ಅಡಿ ಎತ್ತರದ ಸಿಮೆಂಟ್ ಕಂಬ ನೆಡಬೇಕು. ನಾಟಿ ಸಮಯ: ಜೂನ್-ಸೆಪ್ಟೆಂಬರ್

ಮೇಲ್ಭಾಗದಲ್ಲಿ ನಾಲ್ಕು ಭಾಗ ಹೊಂದಿರುವ ರಿಂಗ್ ಅಳವಡಿಸಬೇಕು. ಕಂಬಕ್ಕೆ ಆಧಾರವಾಗಿ ಸಸಿ ಬೆಳೆಯುತ್ತ ರಿಂಗ್ ಮೂಲಕ ಹಾಯ್ದು ಮರಳಿ ಕೆಳಕ್ಕೆ ನೇತು ಬೀಳುವುದರಿಂದ ಕಂಬ ನೆಡುವುದು ಅವಶ್ಯ.

ಇದನ್ನೂ ಓದಿ: Nati koli Poultry Farming : ನಾಟಿ ಕೋಳಿ ಸಾಕಾಣಿಕೆಯಲ್ಲಿ ಅಧಿಕ ಲಾಭ ಗಳಿಕೆಯ ಸೂತ್ರಗಳು | ಇಲ್ಲಿವೆ ಯಶಸ್ವೀ ಕ್ರಮಗಳು…

500 ಸಿಮೆಂಟ್ ಕಂಬಗಳಿದ್ದು ಪ್ರತಿ ಕಂಬಕ್ಕೆ ನಾಲ್ಕರಂತೆ 640 ಕೆಂಪು ಹಾಗೂ 1360 ಬಿಳಿ ತಿರುಳಿನ ಒಟ್ಟು 2000 ಸಸಿಗಳನ್ನು ದಕ್ಷಿಣೋತ್ತರ ನಾಟಿ ಮಾಡುವುದು ಸೂಕ್ತ (ಹೀಗೆ ನಾಟಿ ಮಾಡಿದರೆ ಹೆಚ್ಚಿನ ಬಿಸಿಲು ಪಡೆಯಲು ಅನುಕೂಲ) ನಂತರ ಮಣ್ಣೇರಿಸಿ ಹನಿ ನೀರಾವರಿ ಅಳವಡಿಸಬೇಕು.

ಮಾರ್ಚ್ ಕೊನೆಗೆ ಗಿಡಕ್ಕೆ ಶೇ.50 ರಷ್ಟು ನೆರಳು ಅವಶ್ಯ. ಗಿಡಕ್ಕೆ ಬಿಸಿಲಿನಿಂದ ರಕ್ಷಣೆ ಒದಗಿಸಲು ಸಾಲುಗಳ ನಡುವೆ ಚೊಗಚೆ ಸಸಿ ಬೆಳೆಸಬೇಕು. ಆದರೂ, ನೆರಳು ಸಮರ್ಪಕವಾಗದಿದ್ದರೆ ಅಂತರ ಬೆಳೆಯಾಗಿ ನುಗ್ಗೆ ನಾಟಿ ಮಾಡಬಹುದು.

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

ಡ್ರ‍್ಯಾಗನ್ ಹಣ್ಣಿನಲ್ಲಿ ಚಾಟನಿ / ಸವರುವಿಕೆ

ಸಸ್ಯಗಳಿಗೆ ಉತ್ತಮವಾದ ಆಕಾರ ಮತ್ತು ಗಾತ್ರವನ್ನು ನಿರ್ವಹಿಸುವ ಅಗತ್ಯವಿದೆ. ಚಾಟನಿ ಮಾಡುವುದರಿಂದ ಹಣ್ಣುಗಳನ್ನು ಸಲೀಸಾಗಿ ಕೊಯ್ಲು ಮಾಡಲು ಸಹಕಾರಿಯಾಗುತ್ತದೆ. ಕತ್ತರಿಸಿದ ಕಾಂಡಗಳ ಭಾಗವು ಮುಂದೆ ಕಳೆಗಳಾಗುವವು. ಕೀಟ ಮತ್ತು ರೋಗ ಬಾಧೆ ಹೆಚ್ಚುವ ಸಾಧ್ಯತೆ ಇರುವುದರಿಂದ ಕತ್ತರಿಸಿದ ಭಾಗಗಳನ್ನು ಆರಿಸಿ, ತೋಟದ ಹೊರಗಡೆ ವಿಲೆವಾರಿ ಮಾಡಿ ಸುಡುವುದು ಸೂಕ್ತ. ಚಾಟನಿ ಮಾಡುವ ಸಮಯ ಮತ್ತು ವಿಧಾನ ನೋಡುವುದಾರೆ…

  • ಹಂತ-1: ಚಾಟನಿ ಮಾಡಲು ಮೇ-ಜೂನ್‌ನಲ್ಲಿ ಹಣ್ಣು ಕೊಯ್ಲು ಮಾಡಿದ ತಕ್ಷಣ
  • ಹಂತ-2: ಮುಖ್ಯ ಕಾಂಡವನ್ನು ಸವರಿ, ಒತ್ತೊತ್ತಾಗಿ ಬೆಳೆಯುವ ಕಾಂಡಗಳನ್ನು ಕತ್ತರಿಸುವುದು
  • ಹಂತ-3: ಹಳೆಯ ಕಾಂಡಗಳನ್ನು ತೆಗೆದು, ಗಿಡಕ್ಕೆ ಹೊಸ ರೂಪ ನೀಡುವುದು. ಹೊಸ ಕಾಂಡಗಳು ಬೆಳೆಯುವಂತೆ ಮಾಡಬೇಕು.
  • ಹಂತ-4: ಗಿಡದ ಎತ್ತರ/ ಗಾತ್ರವನ್ನು ಇಳಿಸಿ, 50 ಮುಖ್ಯ ಕಾಂಡಗಳನ್ನು ಮತ್ತು ತಲಾ ಮುಖ್ಯ ಕಾಂಡಕ್ಕೆ 2 ಉಪಕಾಂಡಗಳನ್ನು ಬೆಳೆಸುವುದು.

8 ಡಿಗ್ರಿಸೆಲ್ಸ್’ಗಿಂತ ಹೆಚ್ಚು ಉಷ್ಣಾಂಶ ಇರುವ ಪ್ರದೇಶದಲ್ಲಿ ಡ್ರ‍್ಯಾಗನ್ ಫ್ರೂಟ್ ಬೆಳೆಯುವುದು ಸೂಕ್ತವಲ್ಲ. ಉಷ್ಣಾಂಶ ಜಾಸ್ತಿಯಾದರೆ ಗಿಡಗಳು ಸೂರ್ಯನ ಶಾಖಕ್ಕೆ ತುತ್ತಾಗುತ್ತವೆ.

ಇದನ್ನೂ ಓದಿ: WCD Karnataka Anganwadi Recruitment 2024 : ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ನೀರಾವರಿ ಮತ್ತು ಪೋಷಕಾಂಶಗಳ ನಿರ್ವಹಣೆ

ಇದು ಉಷ್ಣವಲಯದ ಬೆಳೆಯಾದ್ದರಿಂದ ನೀರಿನ ಅವಶ್ಯಕತೆ ಕಡಿಮೆ. ಬೇಸಿಗೆ ಸಮಯದಲ್ಲಿ ವಾರಕ್ಕೆ ಒಂದು ದಿನ 2 ರಿಂದ 3 ಲೀಟರ್ ನೀರು ಕೊಡಬೇಕು. ಮೇ ತಿಂಗಳಿನಲ್ಲಿ ಹನಿ ನೀರು ಉಣಿಸುವುದರಿಂದ ಗಿಡದ ಬೆಳವಣಿಗೆ ಉತ್ತಮಗೊಳ್ಳುತ್ತದೆ. ಇದಕ್ಕೆ ಡ್ರಿಪ್ ಪೈಪ್‌ನ ಮೂಲಕ ನೀರನ್ನು ಹಾಯಿಸಿದರೆ ಉತ್ತಮ.

ಡ್ರ‍್ಯಾಗನ್ ಹಣ್ಣಿನಲ್ಲಿ ಸಾವಯವ ವಸ್ತು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ಸಸ್ಯಕ್ಕೆ 10 ರಿಂದ 15 ಕೆ.ಜಿ ಸಾವಯವ ಗೊಬ್ಬರ ನೀಡಬೇಕು. ಗೊಬ್ಬರದ ಪ್ರಮಾಣವನ್ನು ವರ್ಷಕ್ಕೆ 2 ಕೆ.ಜಿಯಂತೆ ಹೆಚ್ಚಿಸಬೇಕು. ರಸಗೊಬ್ಬರ ಅನುಪಾತವು ಈ ಕೆಳಗಿನಂತಿರುತ್ತದೆ. ಪ್ರತಿ ಗಿಡಕ್ಕೂ ಪೊಟ್ಯಾಶ್: ಸೂಪರ್ ಫಾಸ್ಫೇಟ್: ಯೂರಿಯಾ = 40:90:70 ಕೊಡಬೇಕು. ಒಂದು ತಿಂಗಳ ಅಂತರದಲ್ಲಿ ಎರಡು ಬಾರಿ ರಸಾವರಿ ರಸಗೊಬ್ಬರ ಒದಗಿಸಬೇಕು.

ಇದನ್ನೂ ಓದಿ: krushi bhagya scheme 2023 : ಮಳೆಯಾಶ್ರಿತ ರೈತರಿಗೆ ನೀರಾವರಿ ಭಾಗ್ಯ | ಅರ್ಹ ರೈತರ ತಾಲ್ಲೂಕುವಾರು ಪಟ್ಟಿ ಇಲ್ಲಿದೆ… | ಕೂಡಲೇ ಅರ್ಜಿ ಸಲ್ಲಿಸಿ…

ಡ್ರ‍್ಯಾಗನ್ ಹಣ್ಣಿನ ಕೊಯ್ಲು

ಈ ಸಸ್ಯಗಳು ಮೊದಲ ವರ್ಷದಲ್ಲಿಯೇ ಹಣ್ಣುಗಳನ್ನು ಬಿಡಲು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ, ಈ ಸಸ್ಯಗಳು ಮೇ-ಜೂನ್ ತಿಂಗಳುಗಳಲ್ಲಿ ಹೂ ಬಿಡಲು ಪ್ರಾರಂಭಿಸುತ್ತವೆ ಮತ್ತು ಆಗಸ್ಟ್ನಿಂದ ಡಿಸೆಂಬರ್ ತಿಂಗಳವರೆಗೆ ಹಣ್ಣುಗಳನ್ನು ಹೊಂದಿರುತ್ತವೆ. ಹೂ ಬಿಟ್ಟ 45 ದಿನಗಳ ನಂತರ ಕೊಯ್ಲಿಗೆ ಸಿದ್ಧವಾಗುತ್ತವೆ. ಕೊಯ್ಲಿನ ಸಮಯ ಡಿಸೆಂಬರ್ ವರೆಗೂ ಮುಂದುವರಿಯುತ್ತದೆ.

ಅಪಕ್ವವಾದ ಹಣ್ಣಿನ ಬಣ್ಣವು ಹಸಿರು ಬಣ್ಣದಲ್ಲಿರುವುದರಿಂದ ಹಣ್ಣುಗಳ ಕೊಯ್ಲು ಹಂತವನ್ನು ಗುರುತಿಸುವುದು ತುಂಬಾ ಸರಳವಾಗಿದೆ ಮತ್ತು ಅದು ಹಣ್ಣಾದ ನಂತರ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಬಣ್ಣ ಬದಲಾವಣೆಯ 3 ರಿಂದ 4 ದಿನಗಳ ನಂತರ ಕೊಯ್ಲು ಮಾಡಲು ಸರಿಯಾದ ಸಮಯ. ಆದರೆ ರಫ್ತು ಮಾಡುವ ಸಂದರ್ಭದಲ್ಲಿ, ಬಣ್ಣ ಬದಲಾವಣೆಯ 1 ದಿನದ ನಂತರ ಅವುಗಳನ್ನು ಕೊಯ್ಲು ಮಾಡಬೇಕು. ಹಣ್ಣುಗಳನ್ನು ಕೊಯ್ಲು / ಕಟಾವು ಮಾಡಲು ಕುಡಗೋಲು ಅಥವಾ ಚಾಕುವನ್ನು ಬಳಸುವುದು ಸೂಕ್ತ.

ಇದನ್ನೂ ಓದಿ: Ujjwala Scheme Online Application : ಉಜ್ವಲ ಉಚಿತ ಸಿಲಿಂಡರ್ ಅರ್ಜಿ ಆಹ್ವಾನ | ತಕ್ಷಣ ಅರ್ಜಿ ಸಲ್ಲಿಸಿ…

ಹಣ್ಣಿನ ಮಾರುಕಟ್ಟೆ ಹೇಗೆ?

ಸ್ಥಳೀಯ ಮಾರುಕಟ್ಟೆ: ಒಂದು ಕೆಜಿಗೆ 80 ರಿಂದ 150 ರೂಪಾಯಿ ಬೆಲೆ ದೊರಕುತ್ತದೆ. ಸ್ಥಳೀಯ ಮಾರುಕಟ್ಟೆಗಳಾದ ಕೊಲ್ಲಾಪುರ, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಮೈಸೂರು, ಮಂಗಳೂರು ಮತ್ತು ಬೆಂಗಳೂರು ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ.

ರಫ್ತು ಮಾರುಕಟ್ಟೆ: ಥೈಲ್ಯಾಂಡ್, ವಿಯಟ್ನಾಂ, ಮೆಕ್ಸಿಕೋ, ಅಮೆರಿಕಾ, ಮಾಲ್ಡೀವ್ಸ್, ಸೌದಿ ಅರೇಬಿಯಾ, ಯುನಿಟೆಡ್ ಕಿಂಗ್‌ಡಮ್, ಹಾಂಗ್‌ಕಾAಗ್, (ಬೆಂಗಳೂರು, ಅಹ್ಮದಾಬಾದ್ ಮತ್ತು ಮುಂಬೈ ಫರ‍್ಟ್ ನಿಂದ) ಪೆಟ್ಟಿಗೆಗಳು-10 ಕೆಜಿ, 5 ಕೆಜಿ ಪೆಟ್ಟಿಗೆ ಪೊಟ್ಟಣ.

ಡ್ರ‍್ಯಾಗನ್ ಫ್ರೂಟ್ ಕೃಷಿ ಬಂಡವಾಳ ಮತ್ತು ಖರ್ಚು

ಒಂದು ಎಕರೆ ಡ್ರ‍್ಯಾಗನ್ ಫ್ರೂಟ್ ಬೇಸಾಯ ಕೈಗೊಳ್ಳಲು ಆರಂಭಿಕ ಬಂಡವಾಳ 3.5 ರಿಂದ 5 ಲಕ್ಷ ರೂಪಾಯಿ ಬೇಕಾಗುವುದು. ಎಕರೆಗೆ 500 ಕಂಬಗಳನ್ನು ನಿಲ್ಲಿಸಬಹುದು. ಡ್ರ‍್ಯಾಗನ್ ಫ್ರೂಟ್ ಗಿಡ ಬೆಳೆಸಲು ಆಧಾರವಾಗಿ ಕಂಬ ಬೇಕು. ಒಂದು ಕಂಬಕ್ಕೆ 4 ಗಿಡ ನಾಟಿ ಮಾಡಬೇಕು.

ಇದನ್ನೂ ಓದಿ: Again and again drought forecast ಮತ್ತೆ ಮತ್ತೆ ಬರಗಾಲದ ಮುನ್ಸೂಚನೆ | ಹವಾಮಾನ ಇಲಾಖೆ ಹೊರಹಾಕಿದ ಮಾಹಿತಿ ಇಲ್ಲಿದೆ…

ನಾಟಿ ಮಾಡಿದ 15 ತಿಂಗಳಿಂದ ಇಳುವರಿ ಆರಂಭವಾಗುತ್ತದೆ. ಮೊದಲ ಬೆಳೆ ಸರಾಸರಿ 1.5 ಟನ್ ಸಿಗುತ್ತದೆ. 3ನೇ ವರ್ಷದ ನಂತರ 5 ರಿಂದ 6 ಟನ್ ಇಳುವರಿ ನಿರೀಕ್ಷಿತ. ವಾರ್ಷಿಕ ಬೆಳೆ ನಿರ್ವಹಣೆ ವೆಚ್ಚ ಅಂದಾಜು 10 ಸಾವಿರ ರೂಪಾಯಿ ಪ್ರತಿ ಎಕರೆಗೆ.

ಒಂದು ಕೆಜಿ ಹಣ್ಣಿನ ಬೆಲೆ 80 ರಿಂದ 150 ರೂಪಾಯಿ ವರೆಗೆ ಇದೆ. ಹೂವಾದ 40 ರಿಂದ 45 ದಿನಕ್ಕೆ ಹಣ್ಣು ಕಟಾವಿಗೆ ತಯಾರಾಗುತ್ತದೆ. ಹಸಿರು ವರ್ಣದ ಕಾಯಿ ಮಾಗುತ್ತಿದ್ದಂತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ನಂತರ 3 ರಿಂದ 4 ದಿನಗಳಲ್ಲಿ ಕಟಾವು ಮಾಡಬಹುದು.

ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆಯ ಸಬ್ಸಿಡಿ ಯೋಜನೆಗಳು | ರೈತರಿಗಾಗಿಯೇ ಇವೆ ಈ ಹಣಕಾಸು ನೆರವಿನ ಯೋಜನೆಗಳು

ಕಾಯಿ ತೂಕ ಸರಾಸರಿ 350 ರಿಂದ 500 ಗ್ರಾಂ. 400 ಗ್ರಾಂ ಮೇಲ್ಪಟ್ಟು ತೂಗುವ ಕಾಯಿಗಳು ಮೊದಲ ದರ್ಜೆ ದರ ಪಡೆದರೆ ಉಳಿದವು ಕಡಿಮೆ ದರ ಪಡೆಯುತ್ತವೆ. ಡ್ರ‍್ಯಾಗನ್ ಹಣ್ಣಿನ ತಳಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಸಿದ್ಧವಾಗಿದೆ.

ಒಂದು ಕೆಜಿಗೆ ರೂ.150 ರಂತೆ (3 ಹಣ್ಣು) ಮಾರಾಟ ಮಾಡಲು ಸಿದ್ಧಗೊಂಡಿರುತ್ತದೆ. ಆದಾಯ ಒಂದು ಗಿಡದಿಂದ 5 ಕೆಜಿ, 2000 ಗಿಡದಿಂದ ಒಂದು ಎಕೆರೆಗೆ 10 ಟನ್, ರೂ. 150/ ಕೆಜಿಯಂತೆ ಒಂದು ಎಕರೆಗೆ ರೂ. 15 ಲಕ್ಷ ಆದಾಯ ಪಡೆಯಬಹುದು.

  • ಡಾ. ಶಶಿಕುಮಾರ್ ಎಸ್., ಡಾ. ನಮಿತಾ ರಾವುತ, ಡಾ. ವಸೀಮ್ ಎಮ್. ಎ, (ಲೇಖಕರು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಸಂವಹನ ಕೇಂದ್ರದ ಸಂಪಾದಕರು ಹಾಗೂ ಸಹಾಯಕ ಸಂಪಾದಕರು)

PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

WhatsApp Group Join Now
Telegram Group Join Now

Related Posts

error: Content is protected !!