ಸರಕಾರಿ ಯೋಜನೆಹಣಕಾಸು

ರೈತರ ಬರ ಪರಿಹಾರದ ಹಣ ಸಾಲಕ್ಕೆ ಕಡಿತ ಮಾಡುವಂತಿಲ್ಲ | ಬ್ಯಾಂಕುಗಳಿಗೆ ಸರಕಾರದ ಕಟ್ಟೆಚ್ಚರ Drought relief money cannot be deducted for loans

WhatsApp Group Join Now
Telegram Group Join Now

Drought relief money cannot be deducted for loans : ರಾಜ್ಯದಲ್ಲಿ ಬರಪೀಡಿತ ತಾಲ್ಲೂಕುಗಳ ರೈತರಿಗೆ ಪರಿಹಾರ ವಿತರಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈಗಾಗಲೇ ಒಟ್ಟು 32.12 ಲಕ್ಷ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಮೊತ್ತವನ್ನು ಜಮಾ ಮಾಡಲಾಗಿದೆ. ಕೆಲವು ತಾಂತ್ರಿಕ ದೋಷದಿಂದಾಗಿ ಸುಮಾರು 1.5 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣ ಜಮೆ ಆಗಿಲ್ಲ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಈ ನಡುವೆ ರೈತರ ಬ್ಯಾಂಕ್ ಖಾತೆಗೆ ಜಮೆಯಾದ ಬರ ಪರಿಹಾರ (Drought relief ) ಮೊತ್ತವನ್ನು ಕೆಲವು ಬ್ಯಾಂಕ್’ಗಳು ರೈತರ ಹಳೆಯ ಸಾಲಕ್ಕೆ ವಜಾ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಬಹಳಷ್ಟು ರೈತರ ಖಾತೆಗೆ ಪರಿಹಾರದ ಹಣ ಜಮೆಯಾಗಿದ್ದರೂ; ಅದು ರೈತರ ಕೈ ಸೇರಿಲ್ಲ. ಬರಗಾಲದಲ್ಲಿ ಆಪತ್ತಿಗಾಗಬಹುದಾದ ಹಣ ಸಾಲಕ್ಕೆ ಕಡಿತವಾಗಿರುವುದು ರೈತರನ್ನು ಕಂಗಾಲು ಮಾಡಿದೆ.

ಇದನ್ನೂ ಓದಿ: Bara Parihara 2024 : ರೈತರ ಖಾತೆಗೆ ಬರ ಪರಿಹಾರದ ಹಣ ಜಮಾ ಆಗದೇ ಇರುವುದಕ್ಕೆ ಕಾರಣಗಳು ಇಲ್ಲಿವೆ…

ಬಂದ ಹಣ ಸಾಲಕ್ಕೆ ಜಮೆ

ಇತ್ತೀಚೆಗೆ ಕೇಂದ್ರ ಸರಕಾರ ಸುಪ್ರಿಂ ಕೋರ್ಟ್ ಸೂಚನೆಯ ಮೇರೆಗೆ ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ’ಯಿಂದ (NDRF) 3,454 ಕೋಟಿ ರೂಪಾಯಿ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿತ್ತು. ರಾಜ್ಯ ಸರಕಾರವು ಈ ಮೊತ್ತವನ್ನು ಸಂಪೂರ್ಣವಾಗಿ ಫಲಾನುಭವಿ ರೈತರ ಖಾತೆಗೆ ಹಂತ ಹಂತವಾಗಿ ಜಮೆ ಮಾಡುತ್ತಿದೆ.

ಹೀಗೆ ರೈತರ ಖಾತೆಗೆ ಹಣ ಜಮೆಯಾದರೂ ಬಹಳಷ್ಟು ರೈತರಿಂದ ತಮಗೆ 2ನೇ ಕಂತಿನ ಬರ ಪರಿಹಾರ ಹಣ ಬಂದಿಲ್ಲ ಎಂಬ ತಕರಾರು ವ್ಯಕ್ತವಾಗಿದ್ದವು. ಈ ಸಂಬAಧ ಬ್ಯಾಂಕುಗಳಲ್ಲಿ ವಿಚಾರಿಸಲಾಗಿ ಖಾತೆಗೆ ಜಮೆಯಾದ ಪರಿಹಾರದ ಹಣ ಹಳೆಯ ಸಾಲಕ್ಕೆ ವಜಾ ಆಗಿರುವ ವಿಚಾರ ಗೊತ್ತಾಗಿದೆ. ಬ್ಯಾಂಕುಗಳ ಈ ಕ್ರಮದಿಂದಾಗಿ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸರಕಾರದ ನಿಯಮವೇನಿದೆ?

ಅಸಲಿಗೆ ಬರ, ನೆರೆ-ಪ್ರವಾಹ ಸೇರಿದಂತೆ ಯಾವುದೇ ಪ್ರಕೃತಿ ವಿಕೋಪದಡಿ ಸರಕಾರದಿಂದ ಸಂದಾಯವಾಗುವ ಪರಿಹಾರ ಹಣವನ್ನು ಬ್ಯಾಂಕುಗಳು ಯಾವುದೇ ಕಾರಣಕ್ಕೂ ರೈತರ ಸಾಲದ ಖಾತೆಗೆ ಜಮಾ ಮಾಡುವಂತಿಲ್ಲ ಎಂದು ಸರ್ಕಾರದ ಸ್ಪಷ್ಟ ನಿರ್ದೇಶನವಿದೆ. ಆದರೆ ಇದೀಗ ಕೆಲವು ಬ್ಯಾಂಕುಗಳು ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸುತ್ತಿವೆ.

ರಾಜ್ಯ ಸರಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು; ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ತಪ್ಪು ಮಾಡುವ ಬ್ಯಾಂಕ್‌ಗಳ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಆಯಾ ಜಿಲ್ಲಾಧಿಕಾರಿಗಳು ಪತ್ರದ ಮೂಲಕ ಎಚ್ಚರಿಸಿದ್ದಾರೆ.

 

ಇದನ್ನೂ ಓದಿ: Agricultural Loans : ಬರಗಾಲದಲ್ಲಿ ರೈತರ ಕೈ ಹಿಡಿಯುತ್ತಾ ಶೂನ್ಯಬಡ್ಡಿ ಕೃಷಿ ಸಾಲ? ನಿರೀಕ್ಷೆ ಹೆಚ್ಚಿಸಿದ ಸೊಸೈಟಿ ಲೋನ್

ಎಲ್ಲೆಲ್ಲಿ ಪರಿಹಾರ ಹಣ ಸಾಲಕ್ಕೆ ವಜಾ ಆಗಿದೆ?

ಹೀಗೆ ರೈತರ ಖಾತೆಗೆ ಬಂದ ಬರ ಪರಿಹಾರದ ಹಣವನ್ನು ಸಾಲಕ್ಕೆ ವಜಾ ಮಾಡಿದ ಪ್ರಕರಣಗಳು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕು ಹಾಗೂ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಬರ ಪರಿಹಾರವನ್ನು ಬೆಳೆಸಾಲಕ್ಕೆ ಕಡಿತ ಮಾಡಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ರೈತರ ಉಳಿತಾಯ ಖಾತೆಯನ್ನು ಪ್ರಿಜ್ ಮಾಡಿ, ಪರಿಹಾರದ ಹಣವನ್ನು ಬ್ಯಾಂಕಿನ ಅಧಿಕಾರಿಗಳು ಸಾಲದ ಖಾತೆಗೆ ಜಮೆ ಮಾಡಿಕೊಳ್ಳಲಾಗಿದೆ. ಈ ಕುರಿತು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣ ಸ್ಪಂದಿಸಿರುವ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಯಾದಗಿರಿ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಈ ಸಂಬAಧ ಬ್ಯಾಂಕುಗಳಿಗೆ  ಪ್ರಕಟಣೆ ಹೊರಡಿಸಿ ಎಚ್ಚರಿಸಿದ್ದಾರೆ.

WhatsApp Group Join Now
Telegram Group Join Now

Related Posts

error: Content is protected !!