ಕೃಷಿಸರಕಾರಿ ಯೋಜನೆಸುದ್ದಿಗಳು

Drought relief Release : 25 ಲಕ್ಷ ರೈತರ ಖಾತೆಗೆ ಬರ ಪರಿಹಾರ ಹಣ ಜಮಾ | ಕಂದಾಯ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Drought relief Release : ಕಡೆಗೂ ರಾಜ್ಯ ಸರಕಾರ ಬರ ಪರಿಹಾರದ ಮೊದಲನೇ ಕಂತಿನ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ಅಧಿಕೃತ ತಯಾರಿ ನಡೆಸಿದೆ. ದುರ್ಬಳಕೆ ಆಗುವುದನ್ನು ತಡೆಯುವ ಉದ್ದೇಶದಿಂದ ಈ ವರ್ಷ ಪರಿಹಾರದ ಹಣವನ್ನು ‘ಫ್ರೂಟ್ಸ್’ ತಂತ್ರಾಂಶದ ಮೂಲಕ ನೇರವಾಗಿ ರೈತರಿಗೆ ತಲುಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಜನವರಿ 16ರಂದು ರಾಯಚೂರಿನಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಸಚಿವರು, ಪರಿಹಾರ ಹಣ ವಿತರಣೆಯಲ್ಲಿ ಆದ ವಿಳಂಬಕ್ಕೆ ಕಾರಣವನ್ನು ವಿವರಿಸಿದರು. ಈ ಹಿಂದೆ ರೈತರ ಬರ ಪರಿಹಾರ ಹಣವನ್ನು ಅಧಿಕಾರಿಗಳ ಮೂಲಕ ತಲುಪಿಸಲಾಗುತ್ತಿತ್ತು. ಇದರಿಂದ ಸಾಕಷ್ಟು ಹಣ ದುರ್ಬಳಕೆಯಾಗಿ, ಹಲವು ನಿಜವಾದ ರೈತರಿಗೆ ಪರಿಹಾರ ಸಿಗದೇ ಅನ್ಯಾಯವಾಗುತ್ತಿತ್ತು. ಈ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ‘ಫ್ರೂಟ್ಸ್’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಇದನ್ನೂ ಓದಿ: ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ… WCD Karnataka Anganwadi Recruitment 2024

25 ಲಕ್ಷ ರೈತರು ಪರಿಹಾರ ಹಣ

ಈಗ ರಾಜ್ಯಾದ್ಯಂತ ರೈತರ ಒಟ್ಟು ಜಮೀನಿನ ವಿಸ್ತೀರ್ಣ ಹಾಗೂ ಬೆಳೆಹಾನಿ ಕುರಿತ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಯಾವುದೇ ತಾಂತ್ರಿಕ ದೋಷವಿಲ್ಲದೆ, ಮೊದಲ ಕಂತಿನ ಪರಿಹಾರವನ್ನು ನೇರವಾಗಿ ರೈತರಿಗೆ ತಲುಪಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಒಂದು ವಾರದೊಳಗೆ ರಾಜ್ಯದ 25 ಲಕ್ಷ ರೈತರು ಪರಿಹಾರ ಹಣ ಪಡೆಯಲಿದ್ದಾರೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಅಂಕಿ-ಅಂಶದ ಪ್ರಕಾರ ಕೇವಲ ಶೇ.44ರಷ್ಟು ಮಾತ್ರ ರಾಜ್ಯದಲ್ಲಿ ಸಣ್ಣ ರೈತರಿದ್ದಾರೆ. ಅಸಲಿಗೆ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಕನಿಷ್ಠ ಶೇ.77 ರಷ್ಟಿದೆ. ಇದರಿಂದಾಗಿ ಕೇಂದ್ರದ ಮಾನದಂಡದ ಪ್ರಕಾರ ರಾಜ್ಯಕ್ಕೆ ಕನಿಷ್ಠ ಮೊತ್ತದ ಬರ ಪರಿಹಾರ ಸಿಗುತ್ತಿದೆ. ಹೀಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿ ನಮೂದಿಸುವಾಗ ಅವರ ಆರ್‌ಟಿಸಿ (ಉತಾರ) ಜೊತೆಗೆ ಆಧಾರ್ ಲಿಂಕ್ ಮಾಡಬೇಕು. ಇದರಿಂದ ರಾಜ್ಯದ ರೈತರ ನಿಖರ ಅಂಕಿ-ಅಂಶದ ಜತೆಗೆ ನಿಜವಾದ ರೈತರಿಗೆ ನ್ಯಾಯಯುತವಾಗಿ ಪರಿಹಾರದ ಹಣ ತಲುಪಿಸಬಹುದು ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

ಯಾರಿಗೆಲ್ಲ ಸಿಗಲಿದೆ ಪರಿಹಾರ?

2023-24ನೇ ಸಾಲಿನಲ್ಲಿ ಶೇಕಡ 33ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾಗಿರುವ ರೈತರಿಗೆ ಮಾತ್ರ ಈ ಪರಿಹಾರ. ಒಬ್ಬ ರೈತರಿಗೆ ಎರಡು ಹೆಕ್ಟೇರ್ ಜಮೀನಿಗೆ ಸೀಮಿತವಾಗಿ, ಅರ್ಹತೆಗೆ ಅನುಗುಣವಾಗಿ ತಲಾ ಗರಿಷ್ಠ ಎರಡು ಸಾವಿರ ರೂಪಾಯಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ.
ಫಾರ್ಮರ್ ಐಡಿ (FID) ಹೊಂದಿರುವ ಮತ್ತು ಬರ ಘೋಷಣೆಯಾಗಿರುವ ತಾಲೂಕುಗಳಲ್ಲಿ ಕೇಂದ್ರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಯಲ್ಲಿ ನಮೂದಾಗಿರುವ ಬೆಳೆ ಹಾನಿಗೆ ಒಳಪಟ್ಟಿರುವ ಬೆಳೆಗಳಿಗೆ ಪರಿಹಾರ ಸಿಗಲಿದೆ. ಜಮೀನಿಗೆ ಸಂಬಂಧಿಸಿದ RTC ಮತ್ತಿತರ ಅಗತ್ಯ ದಾಖಲೆಗಳನ್ನು ಹೊಂದಿರುವ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗಿರುವ ಅರ್ಹ ರೈತರಿಗೆ ಪರಿಹಾರ ಸಿಗಲಿದೆ.
ಜಂಟಿ ಖಾತೆದಾರರಾಗಿದ್ದಲ್ಲಿ ಫ್ರೂಟ್ ತಂತ್ರಾಂಶದಲ್ಲಿ ನೋಂದಾಯಿಸಿದ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರ ಪಾವತಿಯಾಗುತ್ತದೆ. ಒಂದೇ ಜಮೀನಿಗೆ ಬಹು ಮಾಲೀಕರಿದ್ದಲ್ಲಿ ಒಂದೇ ವಿಸ್ತೀರ್ಣದ ಕ್ಷೇತ್ರಕ್ಕೆ ಎರಡು ಸಲ ಬೆಳೆಹಾನಿ ಪರಿಹಾರ ಸಿಗುವುದಿಲ್ಲ. ಫ್ರೂಟ್ ಅಡಿ ನೋಂದಣಿಯಾದ ಒಬ್ಬರಿಗೆ ಮಾತ್ರ ಪರಿಹಾರ.
ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆಯ ಸಬ್ಸಿಡಿ ಯೋಜನೆಗಳು | ರೈತರಿಗಾಗಿಯೇ ಇವೆ ಈ ಹಣಕಾಸು ನೆರವಿನ ಯೋಜನೆಗಳು

ಎಷ್ಟು ಪರಿಹಾರ ಸಿಗಲಿದೆ?

ಸದ್ಯಕ್ಕೆ ರಾಜ್ಯ ಸರ್ಕಾರ ಮೊದಲ ಕಂತಿನ ಪರಿಹಾರವಾಗಿ ನೇರ ನಗದು ವರ್ಗಾವಣೆ (DBT) ಮೂಲಕ ಗರಿಷ್ಠ 2,000 ರೂಪಾಯಿ ವರೆಗೆ ಸಂದಾಯ ಮಾಡಲಿದೆ. ಕೇಂದ್ರ ಸರಕಾರ ಬರ ಪರಿಹಾರ ಬಿಡುಗಡೆಯ ಬಳಿಕ ಬಾಕಿ ಪರಿಹಾರ ಹಣ ಜಮಾ ಮಾಡುವ ಸಾಧ್ಯತೆ ಇದೆ.
ಈಗಾಗಲೇ ನಿಗದಿಪಡಿಸಿದಂತೆ ಮಳೆಯಾಶ್ರಿತ ಪ್ರತಿ ಹೆಕ್ಟೇರ್ ಜಮೀನಿಗೆ 8,500 ರೂಪಾಯಿ, ನೀರಾವರಿ ಜಮೀನಿಗೆ 17,000 ರೂಪಾಯಿ, ಬಹುವಾರ್ಷಿಕ ಬೆಳೆಯಾದ ತೋಟಗಾರಿಕೆ ಬೆಳೆಗಳಿಗೆ 22,500 ರೂಪಾಯಿ ಪರಿಹಾರವನ್ನು ನೀಡಲಾಗಿದೆ. ಇದರಲ್ಲಿ ಗರಿಷ್ಠ ಐದು ಎಕರೆಗೆ ಮಾತ್ರ ಪರಿಹಾರ ಪಾವತಿಸಲಾಗುತ್ತದೆ.

ಬರ ಪರಿಹಾರ ಆದೇಶ ಪ್ರತಿ ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Kisan Credit Card loan : ಪಶುಪಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ನೆರವು | ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಹಾಯಧನ
WhatsApp Group Join Now
Telegram Group Join Now

Related Posts

error: Content is protected !!