ಸರಕಾರಿ ಯೋಜನೆ

E-Swathu Registration : ಇಲ್ಲಿದೆ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ನೋಂದಣಿಯ ಸರಳ ವಿಧಾನ

WhatsApp Group Join Now
Telegram Group Join Now

E-Swathu Registration

ಇ-ಸ್ವತ್ತು ನೋಂದಣಿ ನಿಯಮವಾದರೂ ಏನಿದೆ? ಅಧಿಕಾರಿಗಳಿಗೆ ಯಾವುದೇ ಲಂಚ ನೀಡದೇ, ನಿಯಮಬದ್ಧವಾಗಿ ಕೇವಲ 45 ದಿನಗಳಲ್ಲಿ ಇ-ಸ್ವತ್ತು ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ನಿವೇಶನ, ಮನೆಯ ಇ-ಸ್ವತ್ತು ಮಾಡಿಕೊಡಲು ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ಹಣ ಕೇಳುವ ದೂರುಗಳು ವ್ಯಾಪಕವಾಗುತ್ತಿವೆ. ಹಣ ಕೊಡದೇ ಹೋದರೆ ಜನರಿಗೆ ಸೇರಿದ ಆಸ್ತಿ ದಾಖಲೆಗಳನ್ನು ನೀಡಲು ಅನೇಕ ಕಡೆ ವರ್ಷಗಟ್ಟಲೇ ಸತಾಯಿಸುತ್ತಿರುವ ಬಗ್ಗೆ ರಾಜ್ಯಮಟ್ಟದ ಸಭೆಗಳಲ್ಲಿ ದೂರುಗಳು ಕೇಳಿಬರುತ್ತಿವೆ. ಅಧಿಕಾರಿಗಳ ಲಂಚ ದಾಹದಿಂದಾಗಿ ಗ್ರಾಮೀಣ ಪ್ರದೇಶದ ರೈತಾಪಿ ಜನ ತಮ್ಮ ಪಿತ್ರಾರ್ಜಿತ ಸ್ವತ್ತುಗಳಿಗೂ ಇ-ಖಾತಾ ಪಡೆಯಲಾಗುತ್ತಿಲ್ಲ.

ಗ್ರಾಮ ಠಾಣಾ ಮತ್ತು ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದಿಸಿ ಅಭಿವೃದ್ಧಿಪಡಿಸಿರುವ ಹೊಸ ಬಡಾವಣೆಗಳ ನಿವೇಶನಗಳಿಗೆ ಪಂಚತAತ್ರ ತಂತ್ರಾ೦ಶಯದಲ್ಲಿ ಇ-ಸ್ವತ್ತು ಅನ್ವಯ ಪ್ರತಿ ಪಂಚಾಯಿತಿ 9 ಮತ್ತು 11ಂ ಖಾತಾ ನೀಡಬೇಕು. 2013ರ ಒಳಗೆ ಅಭಿವೃದ್ಧಿಯಾಗಿರುವ ಲೇಔಟ್‌ಗಳು ಅಥವಾ ಮನೆಗಳಿಗೆ ವಿದ್ಯುತ್ ಬಿಲ್ ಅಥವಾ ಸೇಲ್ ಡೀಡ್ ಸ್ವೀಕರಿಸಿ 11ಬಿ ಖಾತಾ ವಿತರಿಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ.

ಇದನ್ನೂ ಓದಿPMFME – PM Micro Food Processing Scheme : ಸಣ್ಣ ಉದ್ಯಮ ಸ್ಥಾಪನೆಗೆ ₹15 ಲಕ್ಷ ರೂಪಾಯಿ ಸಹಾಯಧನ : ರೈತರು, ಮಹಿಳೆಯರಿಗೆ ಸುವರ್ಣಾವಕಾಶ

ಏನಿದು ಇ-ಸ್ವತ್ತು?

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ನೋಂದಣಿ ವೇಳೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ‘ಇ-ಸ್ವತ್ತು ಎಂಬ ತಂತ್ರಾ೦ಶವನ್ನು ರೂಪಿಸಿದೆ. ಗ್ರಾಮಾಂತರ ಪ್ರದೇಶದ ಆಸ್ತಿ ನೋಂದಣಿಗೆ ಗ್ರಾಮ ಪಂಚಾಯಿತಿಯಿ೦ದ ಪಡೆದ ನಮೂನೆ- 9 ಅಂದರೆ ತೆರಿಗೆ ನಿರ್ಧರಣಾ ಪಟ್ಟಿ ರಿಜಿಸ್ಟರ್ ಹಾಗೂ ನಮೂನೆ-11 ಅಂದರೆ ತೆರಿಗೆಗಳ ಬೇಡಿಕೆ ಮತ್ತು ವಸೂಲಿ ರಿಜಿಸ್ಟರ್ ಅನ್ನು ನೋಂದಣಾಧಿಕಾರಿ ಕಚೇರಿಗೆ ಒಪ್ಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ನಮೂನೆ-9 ಮತ್ತು ನಮೂನೆ-11ನ್ನು ಪರಿಷ್ಕರಿಸುವ ಸಲುವಾಗಿ ಕರ್ನಾಟಕ ಪಂಚಾಯಿತಿ ರಾಜ್ (ಗ್ರಾಮ ಪಂಚಾಯಿತಿಗಳ ಆಯವ್ಯಯ ಮತ್ತು ಲೆಕ್ಕಪತ್ರ) ನಿಯಮಗಳಿಗೆ ಸರ್ಕಾರ ತಿದ್ದುಪಡಿ ಮಾಡಿದ್ದು, 2013 ಜೂನ್ 14ರಂದು ಈ ಬಗ್ಗೆ ರಾಜ್ಯಪತ್ರದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಈ ನಿಯಮದ ಪ್ರಕಾರ ‘ಇ-ಸ್ವತ್ತು ತಂತ್ರಾ೦ಶ ಬಳಸಿ ಆನ್‌ಲೈನ್ ಮೂಲಕ ವಿತರಿಸಿದ ನಮೂನೆ-9 ಮತ್ತು ನಮೂನೆ 11ನ್ನು ಮಾತ್ರ ಆಸ್ತಿ ನೋಂದಣಿಗೆ ಬಳಸಬಹುದು. ಕೈಬರಹದ ಮೂಲಕ ನೀಡುವ ಹಾಗೂ ಹಳೆ ಮಾದರಿಯ ನಮೂನೆ 9 ಹಾಗೂ ನಮೂನೆ 11ಇ ಅನ್ನು ರದ್ದುಗೊಳ್ಳಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ.

ಇದನ್ನೂ ಓದಿ:  Horticulture Subsidy Schemes : ತೋಟಗಾರಿಕೆ ಇಲಾಖೆಯ ಸಬ್ಸಿಡಿ ಯೋಜನೆಗಳು | ರೈತರಿಗಾಗಿಯೇ ಇವೆ ಈ ಹಣಕಾಸು ನೆರವಿನ ಯೋಜನೆಗಳು

ಏನಿದು ನಮೂನೆ-9 ಮತ್ತು ನಮೂನೆ-11?

ಪ್ರತಿ ಗ್ರಾಮ ಪಂಚಾಯಿತಿಯೂ 2006ರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಕೃಷಿಯೇತರ ಭೂಮಿ ಮತ್ತು ಕಟ್ಟಡಕ್ಕೆ ತೆರಿಗೆ ನಿರ್ಧರಿಸಲು ಒಂದು ಪಟ್ಟಿಯನ್ನು ಸಿದ್ಧಗೊಳಿಸಿರುತ್ತದೆ. ಅದರ ಆಧಾರದಲ್ಲಿ ನಮೂನೆ 9ನ್ನು ಪಿಡಿಒ ನೀಡಬೇಕಾಗುತ್ತದೆ. ಅದರಲ್ಲಿ ಮಾಲೀಕನ ಹೆಸರು, ಭಾವಚಿತ್ರ, ಜಾಗದ ಸರ್ವೇ ನಂಬರ್, ಆಸ್ತಿಯ ವಿಸ್ತೀರ್ಣ ಮತ್ತಿತರ ವಿವರಗಳು, ಆಸ್ತಿಯ ಚಿತ್ರ, ಯಾವ ವಿಧದ ಆಸ್ತಿ, ಅದರ ಛಾಯಾಚಿತ್ರ, ಮತ್ತಿತರ ವಿವರಗಳನ್ನು ಪಿಡಿಒ ಭರ್ತಿ ಮಾಡಬೇಕಾಗುತ್ತದೆ. ನಮೂನೆ 11ರಲ್ಲಿ ಕಟ್ಟಡ ತೆರಿಗೆಗಳ ಬೇಡಿಕೆ, ತೆರಿಗೆ ಪಾವತಿಯ ವಿವರ, ಆಸ್ತಿಯ ವಿವರ, ಆಸ್ತಿಯ ಛಾಯಾಚಿತ್ರ, ಮಾಲೀಕರ ಭಾವಚಿತ್ರ ಮತ್ತಿತರ ವಿವರಗಳನ್ನು ಪಿಡಿಒ ಭರ್ತಿ ಮಾಡಿ ಡಿಜಿಟಲ್ ಸಹಿ ನಮೂದಿಸಬೇಕಾಗುತ್ತದೆ.

ಇ-ಸ್ವತ್ತು ಏಕೆ ಬೇಕು?

ಹಳ್ಳಿಗಳಲ್ಲಿ ಇರುವ ಸೈಟ್, ಮನೆ, ಕಟ್ಟಡಗಳಿಗೆ ಇ-ಖಾತಾ ಬಹಳ ಮುಖ್ಯವಾಗಿದೆ. ಇಲ್ಲವಾದರೆ ಕಾನೂನಿನಡಿ ಮಾನ್ಯತೆ ಇರುವುದಿಲ್ಲ. ಇ-ಖಾತಾ ಹೊಂದಿರುವ ಸ್ವತ್ತುಗಳನ್ನು ಉಪ ನೋಂದಣಿ ಕಚೇರಿಯಲ್ಲಿ ಸುಲಭವಾಗಿ ನೋಂದಾಯಿಸಬಹುದು. ಇ-ಸ್ವತ್ತು ಇಲ್ಲವಾದರೆ ದಾನಪತ್ರ, ಸೇಲ್‌ಡೀಡ್, ಬ್ಯಾಂಕ್ ಸಾಲ, ಹಕ್ಕು ಬಿಡುಗಡೆ ಪತ್ರ ಇನ್ನಿತರ ಕರಾರುಗಳನ್ನು ಉಪ ನೋಂದಣಿ ಕಚೇರಿಯಲ್ಲಿ ಮಾಡಲು ಸಾಧ್ಯವಿಲ್ಲ.

ಅದಕ್ಕಾಗಿ ಇ-ಸ್ವತ್ತು ಕಡ್ಡಾಯ ಮಾಡಲಾಗಿದೆ. ಆದರೆ, ಅನೇಕ ಗ್ರಾಮ ಪಂಚಾಯ್ತಿಗಳಲ್ಲಿ ಇ-ಸ್ವತ್ತು ಕೊಡಲು ಹಣದ ಬೇಡಿಕೆ ಇಡುತ್ತಿದ್ದಾರೆ. ಹಣ ಕೊಟ್ಟರೆ ಸೂಕ್ತ ದಾಖಲೆ ಇಲ್ಲದಿದ್ದರೂ ಇ-ಸ್ವತ್ತು ಮಾಡಿಕೊಡುತ್ತಾರೆ. ಲಂಚ ಕೊಡದಿದ್ದರೆ 45 ದಿನಗಳಲ್ಲಿ ಆಗಬೇಕಿದ್ದ ಕೆಲಸಕ್ಕೆ ವರ್ಷಗಟ್ಟಲೇ ಸಮಯ ತೆಗೆದುಕೊಂಡು ಆಸ್ತಿ ಮಾಲೀಕರನ್ನು ಅಲೆದಾಡಿಸುತ್ತಾರೆ.

ಗ್ರಾಮ ಪಂಚಾಯ್ತಿಗಳಲ್ಲಿ ಪ್ರತಿ ಮನೆ ಮತ್ತು ನಿವೇಶನ ಮಾಲೀಕರಿಂದ ತೆರಿಗೆ ಸಂಗ್ರಹಿಸುವ ಜವಾಬ್ದಾರಿ ಹೊಂದಿರುವ ಕರ ವಸೂಲಿಗಾರರು ಇ-ಸ್ವತ್ತು ಖಾತಾ ಮಾಡಿಸಿಕೊಡುವ ಅಕ್ರಮ ಗುತ್ತಿಗೆ ಪಡೆದಿದ್ದಾರೆ. ಆಸ್ತಿ ಮಾಲೀಕರಿಂದ ಇಂತಿಷ್ಟು ಹಣ ಫಿಕ್ಸ್ ಮಾಡುತ್ತಾರೆ. ಒಂದು ವೇಳೆ ಕೇಳಿದಷ್ಟು ಹಣ ಕೊಡದಿದ್ದರೆ ಅರ್ಜಿ ಮುಂದೆ ಸಾಗುವುದಿಲ್ಲ. ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಗ್ರಾಮ ಪಂಚಾಯ್ತಿ ಪಿಡಿಒ ಇ-ಸ್ವತ್ತು ಹೆಸರಿನಲ್ಲಿ ಭರ್ಜರಿ ಲೂಟಿ ಶುರುವಿಟ್ಟುಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳಿವೆ.

ಇದನ್ನೂ ಓದಿ: ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆಗೆ ಯಾವೆಲ್ಲ ರೈತರು ಅರ್ಹರು? | ಬೇಕಾಗುವ ದಾಖಲೆಗಳೇನು? ಫಲಾನುಭವಿಗಳ ಆಯ್ಕೆ ಹೇಗೆ? | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

ನಿಯಮ ಏನಿದೆ?

ಇ-ಸ್ವತ್ತು ಕೊಡುವ ಜವಾಬ್ದಾರಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ (PDO) ವಹಿಸಲಾಗಿದೆ. ಮಾಲೀಕನ ಫೋಟೊ, ಐಡಿ ಕಾರ್ಡ್, ಪಹಣಿ, ತೆರಿಗೆ ರಸೀದಿ, ಕಟ್ಟಡ ಅಥವಾ ನಿವೇಶನ ಫೋಟೋ ಕೊಟ್ಟು ಚಕ್ಕಬಂದಿ ಪಡೆಯಬೇಕು. ದ್ವಿತೀಯ ದರ್ಜೆ ಸಹಾಯಕ ಅಥವಾ ಕಾರ್ಯದರ್ಶಿ ಅರ್ಜಿ ಪಡೆದು ಇ-ಸ್ವತ್ತು ತಂತ್ರಾ೦ಶದಲ್ಲಿ ಅರ್ಜಿ ಅಪ್‌ಲೋಡ್ ಮಾಡಿ ಶುಲ್ಕ 50 ರೂಪಾಯಿ ಪಡೆಯಬೇಕು. ಅರ್ಜಿ ಪಡೆದು 45 ದಿನಗಳಲ್ಲಿ ಇ-ಖಾತಾ ಪೂರ್ಣಗೊಳಿಸಬೇಕು.

ಒಂದು ವೇಳೆ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಮನೆ ಅಥವಾ ನಿವೇಶನವಿದ್ದರೆ ಮೋಜಣಿಯಲ್ಲಿ ನಕ್ಷೆಗೆ ಅರ್ಜಿ ಸಲ್ಲಿಸಿ ಆಸ್ತಿ ಮಾಲೀಕರಿಗೆ ಶುಲ್ಕ ಪಾವತಿಗೆ ಸೂಚಿಸಬೇಕು. ನಾಡ ಕಚೇರಿಯಲ್ಲಿ ಮೋಜಣಿಗೆ 800 ರೂಪಾಯಿ ಶುಲ್ಕ ಪಾವತಿಸಿದರೆ ತಾಲ್ಲೂಕು ಸರ್ವೇ ಅಧಿಕಾರಿ ಖುದ್ದು ಸ್ಥಳಕ್ಕೆ ಬಂದು ಅಳತೆ ಮಾಡಿ ನಕ್ಷೆ ಸಿದ್ಧಪಡಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ.

ಅನಂತರ 21 ದಿನಗಳ ಒಳಗೆ ಇ-ಸ್ವತ್ತು ಖಾತಾ ಕೊಡಬೇಕೆಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚಿಸಿದೆ. ಈ ಸರಳ ನಿಯಮಬದ್ಧ ಕ್ರಮವನ್ನು ಅನುಸರಿಸಿ ಸುಲಭವಾಗಿ ಗ್ರಾಮ ಮಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ನೋಂದಣಿ ಮಾಡಿಸಬಹುದಾಗಿದೆ.

ಇದನ್ನೂ ಓದಿHDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

ಇ-ಸ್ವತ್ತು ನೋಂದಣಿಯಾದ ಆಸ್ತಿ ಚೆಕ್ ಮಾಡಿ…

ಈ ಎಲ್ಲ ಪ್ರಕ್ರಿಯ ನಂತರ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಯಾಗಿರುವುದನ್ನು ಮೊಬೈಲ್‌ನಲ್ಲಿಯೇ ಚೆಕ್ ಮಾಡಬಹುದು. ಅಥವಾ ನೀವು ಖರೀದಿಸಬಯಸುವ ನಿಮ್ಮ ಗ್ರಾಮದ ಆಸ್ತಿ ಇ-ಸ್ವತ್ತು ವಿವರವನ್ನು ಮೊಬೈಲ್‌ನಲ್ಲಿ ಪರಿಶೀಲಿಸಬಹುದು. ಇದನ್ನು ಮಾಡಲು ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತು ಜಾಲತಾಣದ ಆಸ್ತಿಗಳ ಶೋಧನೆ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ Form 11B ಆಯ್ಕೆ ಮಾಡಿಕೊಳ್ಳಬೇಕು. ನಂತರ ಒಂದೊ೦ದಾಗಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಹಾಗೂ ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ All ಆಯ್ಕೆ ಮಾಡಿಕೊಂಡು Searc ಮೇಲೆ ಕ್ಲಿಕ್ ಮಾಡಬೇಕು.

ಆಗ ಆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇ-ಸ್ವತ್ತಿನಡಿ ನೋಂದಣಿ ಮಾಡಿಸಿಕೊಂಡ ಎಲ್ಲಾ ಸಾರ್ವಜನಿಕರ ಆಸ್ತಿ ಐಡಿ, ಆಸ್ತಿ ಮಾಲೀಕರ ಹೆಸರು, ಸರ್ವೆ ನಂಬರ್ ಹಾಗೂ ಫಾರಂ ನಂಬರ್ 11ಬಿ ಆಸ್ತಿಗಳ ಪಟ್ಟಿ ಕಾಣುತ್ತದೆ. ಅಲ್ಲಿ ನಿಮ್ಮ ಹೆಸರಿರುವುದನ್ನು ಅಥವಾ ನೀವು ಖರೀದಿಸ ಬಯಸುವ ಆಸ್ತಿ ಮಾಲೀಕರ ಹೆಸರಿರುವುದನ್ನು ಪರಿಶೀಲಿಸಬಹುದು.

ಇದನ್ನೂ ಓದಿKisan Credit Card loan : ಪಶುಪಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ನೆರವು | ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಹಾಯಧನ

WhatsApp Group Join Now
Telegram Group Join Now

Related Posts

error: Content is protected !!