FinanceGovt Schemes

Farmer Zero interest loan- ಇನ್ಮುಂದೆ ಪಿಎಲ್‌ಡಿ ಬ್ಯಾಂಕುಗಳಿಂದಲ್ಲೂ ರೈತರಿಗೆ ಬಡ್ಡಿ ಇಲ್ಲದ ಸಾಲ ಸೌಲಭ್ಯ

ರೈತರಿಗೆ 5 ಲಕ್ಷ ರೂ. ಅಲ್ಪಾವಧಿ ಬೆಳೆ ಸಾಲ...

ರೈತರಿಗೆ ಸೊಸೈಟಿಯಲ್ಲಿ ಮಾತ್ರ ಸಿಗುತ್ತಿದ್ದ ಶೂನ್ಯ ಬಡ್ಡಿ ಸಾಲ ಇನ್ನು ಮುಂದೆ ಪಿಎಲ್‌ಡಿ ಬ್ಯಾಂಕುಗಳಲ್ಲೂ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ….

WhatsApp Group Join Now
Telegram Group Join Now

ಇಷ್ಟು ದಿನ ಕೇವಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ (Primary Agricultural Credit Cooperative Society) ಸೀಮಿತವಾಗಿದ್ದ ರಾಜ್ಯ ಸರ್ಕಾರ ರೈತರಿಗೆ ನೀಡುವ ಬಡ್ಡಿ ಇಲ್ಲದ ಸಾಲ ಸೌಲಭ್ಯ ಇನ್ಮುಂದೆ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳಲ್ಲೂ ಸಿಗಲಿದೆ. ಈ ಮಹತ್ವದ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದ್ದು; ಪಿಎಲ್‌ಡಿ ಬ್ಯಾಂಕುಗಳಲ್ಲಿ ಶೂನ್ಯ ಸಾಲ ಸೌಲಭ್ಯ ದೊರೆಯಲಿದೆ.

ಹೌದು, ಸಿಎಂ ಸಿದ್ದರಾಮಯ್ಯ ಅವರು ಕಳೆದ ಮಾರ್ಚ್ 21ರಂದು ಮಾಡಿದ ಬಜೆಟ್ ಮೇಲಿನ ಭಾಷಣದಲ್ಲಿ 5 ಲಕ್ಷ ರೂ.ವರೆಗಿನ ಶೂನ್ಯ ಬಡ್ಡಿ ದರದ ಬೆಳೆ ಸಾಲವನ್ನು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಿಗೂ (Primary Cooperative Agriculture and Rural Development Bank-PICARD) ವಿಸ್ತರಿಸಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ. 2025-26ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ, ‘ಈ ತೀರ್ಮಾನದಂತೆ 38 ಕೋಟಿ ರೂ. ಹೆಚ್ಚುವರಿ ಹೊರೆಯನ್ನು ಭರಿಸಲಾಗುವುದು’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉಚಿತ ಮನೆ, ಎಲೆಕ್ಟ್ರಿಕ್ ಬೈಕ್, ಲ್ಯಾಪ್‌ಟಾಪ್, ಆಟೋ, ಕಾರು ಖರೀದಿ ಸಬ್ಸಿಡಿಗೆ ಅರ್ಜಿ ಆಹ್ವಾನ

ಏನಿದು ಶೂನ್ಯ ಬಡ್ಡಿ ಸಾಲ?

ರೈತರಿಗೆ ರಾಜ್ಯ ಸರ್ಕಾರವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲಗಳನ್ನು ವಿತರಿಸುವ ಯೋಜನೆಯನ್ನು 2004ರಲ್ಲಿ ಅನುಷ್ಠಾನಗೊಳಿಸಿದೆ. ಈ ಸಾಲ ಮಿತಿಯು ಈ ಕೆಳಗಿನಂತೆ ಹಂತ ಹಂತವಾಗಿ ಹೆಚ್ಚಾಗುತ್ತ ಬಂದಿದೆ:

  • 2012-13ರಲ್ಲಿ 1 ಲಕ್ಷ ರೂಪಾಯಿ
  • 2013-14ರಲ್ಲಿ 2 ಲಕ್ಷ ರೂಪಾಯಿ
  • 2014-15ರಲ್ಲಿ 3 ಲಕ್ಷ ರೂಪಾಯಿ
  • 2023-24ರಲ್ಲಿ 5 ಲಕ್ಷ ರೂಪಾಯಿ

ರಾಜ್ಯ ಸಹಕಾರ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 1,73,449 ರೈತರು 3 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಬೆಳೆ ಸಾಲಕ್ಕೆ ಅರ್ಹರಾಗಿದ್ದಾರೆ. 2023-24ನೇ ಸಾಲಿನಲ್ಲಿ 6,744 ರೈತರು ಸಾಲ ಪಡೆದಿದ್ದು; 2024-25ನೇ ಸಾಲಿನಲ್ಲಿ ಕಳೆದ ಫೆಬ್ರವರಿ ವರೆಗೆ 13,689 ರೈತರಿಗೆ ಸಾಲ ವಿತರಿಸಲಾಗಿದೆ.

ಇದನ್ನೂ ಓದಿ: Zero Interest Crop Loan- ರೈತರಿಗೆ ₹5 ಲಕ್ಷ ಬಡ್ಡಿ ಇಲ್ಲದ ಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ…

Farmer Zero interest loan
Farmer Zero interest loan

ಶೂನ್ಯ ಬಡ್ಡಿ ಸಾಲಕ್ಕಾಗಿ ರೈತರ ಪರದಾಟ

ಹೌದು, ಸರ್ಕಾರವೇನೋ ಶೂನ್ಯ ಬಡ್ಡಿ ಸಾಲ ಮಿತಿಯನ್ನು 3 ಲಕ್ಷ ರೂ.ದಿಂದ 5 ಲಕ್ಷ ರೂ.ಗೆ ಹೆಚ್ಚಿಸಿದೆ. ಇದೀಗ ಈ ಸಾಲ ಸೌಲಭ್ಯವನ್ನು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಿಗೂ (PICARD) ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ರೈತರಿಗೆ 5 ಲಕ್ಷ ರೂ. ಸಾಲದ ಮಾತು ಹಾಗಿರಲಿ 50,000, 1 ಲಕ್ಷ ರೂ. ಸಾಲ ಪಡೆಎಯಲೂ ಕೂಡ ಹರ ಸಾಹಸ ಪಡುವಂತಹ ಪರಿಸ್ಥಿತಿ ಇದೆ.

ಸಹಕಾರ ಸಂಘಗಳಿಗೆ ರಾಜ್ಯ ಸರ್ಕಾರ ಬಡ್ಡಿ ಸಹಾಯಧನ ಕೊಟ್ಟರೂ ರೈತರು ಕೇಳಿದಷ್ಟು ಸಾಲ ಕೊಡುವಷ್ಟು ಸಾಮರ್ಥ್ಯ ಇಲ್ಲವಾಗಿದೆ. ರಾಜ್ಯಮಟ್ಟದ ತಾಂತ್ರಿಕ ತಜ್ಞರ ಸಮಿತಿಯ ಸ್ಕೇಲ್ ಆಫ್ ಫೈನಾನ್ಸ್ ಮಿತಿ ಪ್ರಕಾರ ರೈತರು ಹೊಂದಿರುವ ಭೂ ಹಿಡುವಳಿ ಮತ್ತು ಅವರ ಬೆಳೆಯನ್ನು ಆಧರಿಸಿ ಗರಿಷ್ಠ ಸಾಲದ ಮಿತಿಯನ್ನು ನಿಗದಿಪಡಿಸಲಾಗುತ್ತದೆ. ಹೀಗಾಗಿ 5 ಲಕ್ಷ ರೂ. ಸಾಲ ದೊಡ್ಡ ಹಿಡುವಳಿದಾರರಿಗೆ ಮಾತ್ರ ಅನ್ವಯವಾಗುತ್ತಿದೆ.

ಇದನ್ನೂ ಓದಿ: Homeloan Tips- ಹೋಮ್ ಲೋನ್ ಪಡೆಯುವ ಮೊದಲು ಈ ನಿಯಮಗಳನ್ನು ತಿಳಿದಿರಿ

ಪಿಎಲ್‌ಡಿ ಬ್ಯಾಂಕುಗಳಿಂದ ಸಿಗುತ್ತಾ 5 ಲಕ್ಷ ರೂ. ಸಾಲ?

ತುಮಕೂರು, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್, ಬಾಗಲಕೋಟ, ದಾವಣಗೆರೆ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಇದೂ ವರೆಗೆ ಒಬ್ಬೇ ಒಬ್ಬ ರೈತನೂ ಕೂಡ 3 ಲಕ್ಷ ರೂ.ಗಳಿಗಿಂತ ಅಧಿಕ ಸಾಲ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಕೊಡಗು ಜಿಲ್ಲೆಯ ರೈತರು ಮಾತ್ರ ಅದೃಷ್ಟವಂತರು. ಇಲ್ಲಿ ಕಳೆದ ಎರಡು ವರ್ಷದಲ್ಲಿ 11,583 ರೈತರು 3ರಿಂದ 5 ಲಕ್ಷ ರೂ. ಬೆಳೆ ಸಾಲ ಪಡೆದಿದ್ದಾರೆ.

ಇದೀಗ ಸರ್ಕಾರ 5 ಲಕ್ಷ ರೂ. ಸಾಲ ಸೌಲಭ್ಯವನ್ನು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಿಗೂ (ಪಿಕಾರ್ಡ್) ವಿಸ್ತರಿಸುತ್ತಿದೆ. ಆದರೆ, ರೈತರ ಹಿಡುವಳಿ ಮತ್ತು ಬೆಳೆ ಆಧರಿಸಿ ಈ ಸಾಲ ಸೌಲಭ್ಯ ಸಿಗುವುದರಿಂದ ಪಿಎಲ್‌ಡಿ ಬ್ಯಾಂಕುಗಳಿಂದಲೂ 5 ಲಕ್ಷ ರೂ. ಶೂನ್ಯ ಬಡ್ಡಿ ಸಾಲ ಪಡೆಯುವುದು ಕಷ್ಟಕರ.!

ಇದನ್ನೂ ಓದಿ: Karnataka Arogya Sanjeevini Scheme-ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ

WhatsApp Group Join Now
Telegram Group Join Now

Raitapi Jagattu

#ಮಾಲತೇಶ_ಮಾಳಮ್ಮನವರ್, ಸಂಪಾದಕರು ಮಾಲತೇಶ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!