ಸಾಲ ಯೋಜನೆಹಣಕಾಸು

Farmers Loan Waiver : ರಾಜ್ಯ ಬಜೆಟ್‌ನಲ್ಲಿ ಸಿಗುತ್ತಾ ರೈತರಿಗೆ ಸಾಲಮನ್ನಾ ಭಾಗ್ಯ? | ರೈತರ ಬೇಡಿಕೆಗಳೇನು?

WhatsApp Group Join Now
Telegram Group Join Now

Farmers Loan Waiver

2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಸಾಲಮನ್ನಾ ಭಾಗ್ಯ ಸಿಗುತ್ತಾ? ಸರಕಾರದ ನಿಲುವೇನು? ರೈತರ ಬೇಡಿಕೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

ಇದೇ ಫೆಬ್ರವರಿ 16ರಂದು ಮಂಡನೆಯಾಗಲಿರುವ 2024-25ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಈ ವರ್ಷ ಬರಗಾಲ ಘೋಷಣೆ ಆಗಿರುವುದರಿಂದ ರಾಜ್ಯದ ರೈತರ ನಿರೀಕ್ಷೆಗಳು, ಬೇಡಿಕೆಗಳು ತೀವ್ರವಾಗಿವೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್’ನಲ್ಲಿ ಕೃಷಿ ವಲಯಕ್ಕೆ ಏನೆಲ್ಲ ಸಿಗಲಿದೆ? ಮುಖ್ಯವಾಗಿ ರೈತರ ಬೇಡಿಕೆಗಳಿಗೆ ಸರಕಾರ ಸ್ಪಂದಿಸುತ್ತದಾ? ಈ ವರ್ಷದ ಬಹುದೊಡ್ಡ ನಿರೀಕ್ಷೆಯಾಗಿರುವ ಸಾಲಮನ್ನಾ ಭಾಗ್ಯ ಸಿಗಲಿದೆಯಾ? ಹೀಗೆ ಹಲವು ಚರ್ಚೆಗಳು ಶುರುವಾಗಿವೆ.

ಇದನ್ನೂ ಓದಿ: Bagar Hukum land : ಈ ರೈತರ ಬಗರ್ ಹುಕುಂ ಜಮೀನು ಸರಕಾರದ ಸ್ವಾಧೀನ | ಸುತ್ತೋಲೆ ಹೊರಡಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ

ಬಜೆಟ್ ಮೇಲೆ ಯಾಕಿಷ್ಟು ನಿರೀಕ್ಷೆ?

2024-25ನೇ ಸಾಲಿನ ಬಜೆಟ್ ಮೇಲೆ ರೈತರ ನಿರೀಕ್ಷೆ ಹೆಚ್ಚಾಗಲು ಪ್ರಮುಖ ಕಾರಣ ಈ ವರ್ಷ ಘೋಷಣೆಯಾದ ಬರಗಾಲ! ಹೌದು, ರಾಜ್ಯದ 223 ತಾಲ್ಲೂಕುಗಳು ಬರಗಾಲದಿಂದ ತತ್ತರಿಸಿ ಹೋಗಿವೆ. ಇದರಿಂದಾಗಿ ರಾಜ್ಯದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರ ಪರಿಹಾರ ಕೂಡ ಸಕಾಲಕ್ಕೆ ಸಿಗದೇ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಇದು ಈ ವರ್ಷದ ಸಂಕಷ್ಟದ ವ್ಯಥೆ ಮಾತ್ರವಲ್ಲ; ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಮಳೆಹಾನಿ, ಪ್ರವಾಹ, ಬರ ಮುಂತಾದ ಕಾರಣಗಳಿಂದ ಬೆಳೆಗಳು ಹಾಳಾಗಿವೆ. ಕೃಷಿ ಸಾಲ ಪಡೆದ ರೈತರಿಗೆ ಸಾಲದ ಹಣ ಭರಿಸುವ ಸಾಮರ್ಥ್ಯವಿಲ್ಲ. ಬೆಳೆಗೆ ಹಾಕಿದ ಹಣ ಕೂಡ ಮರಳಿಲ್ಲ. ಆದ್ದರಿಂದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂಬುವುದು ರೈತರ ಆಗ್ರಹವಾಗಿದೆ.

ಇದನ್ನೂ ಓದಿ: RDPR Recruitment 2024 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ | ಸಂಬಳ : ₹61,500 | Panchayat Raj fellowship recruitment

ರೈತರ ಬೇಡಿಕೆಗಳೇನು?

ರಾಜ್ಯ ಬಜೆಟ್ ಮಂಡನೆಯಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು. ರೈತರ ಅಭಿವೃದ್ಧಿಗೆ ಪೂರ್ವಕವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ. ಈಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿಯೇ ವಿವಿಧ ರೈತ ಮುಖಂಡರು ಹಲವು ಬೇಡಿಕೆಗಳನ್ನು ಮಂಡಿಸಿದ್ದರು.

ಇದೀಗ ಬಜೆಟ್ ಮಂಡನೆ ಹಿನ್ನಲೆಯಲ್ಲಿ ಮತ್ತಷ್ಟು ಸಂಘಟಿತರಾಗಿರುವ ರೈತರು ಕಳೆದ ಫೆಬ್ರವರಿ 6ರಂದು ಕುರುಬೂರ್ ಶಾಂತಕುಮಾರ್ ನೇತೃತ್ವದಲ್ಲಿ ‘ಬೆಂಗಳೂರು ಚಲೋ’ ನಡೆಸಿ ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ರೈತರ ಬೇಡಿಕೆಗಳನ್ನು ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: Dairy farming : ಹೈನು ರೈತರ ಚಿತ್ತ ಗಮನ ಖಾಸಗಿ ಹಾಲಿನ ಡೈರಿಗಳತ್ತ | ಕೆಎಂಎಫ್‌ನ ಕನಿಷ್ಠ ಬೆಲೆ, ಗರಿಷ್ಠ ಕ್ವಾಲಿಟಿ ಟಾರ್ಗೆಟ್‌ಗೆ ಬೆಚ್ಚಿದ ರೈತರು

ರೈತರ ಸಾಲಮನ್ನಾ ಯಾಕಿಲ್ಲ?

ತೆಲಂಗಾಣದಲ್ಲಿರುವ ಕಾಂಗ್ರೆಸ್ ಸರ್ಕಾರವೇ ರೈತರ ಸಾಲ ಮನ್ನಾ ಮಾಡಿದೆ. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವಿದೆ. ಇಲ್ಲಿಯೂ ಕೂಡ ತೆಲಂಗಾಣ ಮಾದರಿಯಲ್ಲಿ ರೈತರ ಸಾಲ ಮನ್ನಾ ಆಗಬೇಕು. ಕೈಗಾರಿಕೆ, ಉದ್ಯಮಿಗಳಿಗೆ ಸಾಲ ಮನ್ನಾ, ತೆರಿಗೆ ಮನ್ನಾ ಮಾಡಲಾಗಿದೆ. ಅದೇ ಮಾದರಿಯಲ್ಲಿ ರೈತರ ಎಲ್ಲ ಬ್ಯಾಂಕು ಹಾಗೂ ಸಹಕಾರ ಸಂಘಗಳ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಲೇಬೇಕು.

ಬಹುಮುಖ್ಯವಾಗಿ ಕೃಷಿ ಸಾಲ ನೀತಿ ಬದಲಾಗಬೇಕು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲ ನೀಡುವಂತೆ ಆಗಬೇಕು. ಎಲ್ಲಾ ರೈತರಿಗೂ ಕೇವಲ ಪಹಣಿ ಪತ್ರ ಆಧರಿಸಿ ಕನಿಷ್ಠ 5 ಲಕ್ಷ ಆಧಾರ ರಹಿತ ಬಡ್ಡಿ ರಹಿತ ಸಾಲ ಕೊಡಿಸುವ ಯೋಜನೆ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜಾರಿಯಾಗಬೇಕು ಎಂಬುವುದು ರೈತರ ಪ್ರಮುಖ ಬೇಡಿಕೆಯಾಗಿದೆ.

ಇದನ್ನೂ ಓದಿ: Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಸಹಕಾರ ಸಚಿವರ ನಿಲುವೇನು?

ಕಳೆದ ಡಿಸೆಂಬರ್’ನಲ್ಲಿ ಐದು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಜಾರಿಗೊಳಿಸಲಾದ ಒಂದು ಲಕ್ಷ ರೂಪಾಯಿಗಳ ರೈತರ ಸಾಲಮನ್ನಾ ಯೋಜನೆಯ ಸೌಲಭ್ಯವನ್ನು ರಾಜ್ಯದ 17.35 ಲಕ್ಷ ರೈತರು ಪಡೆದುಕೊಂಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದರು.

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ ಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಲಿಖಿತ ಮಾಹಿತಿ ನೀಡಿದ್ದ ಅವರು, 2018ರಲ್ಲಿ ಒಂದು ಲಕ್ಷ ರೂಪಾಯಿ ವರೆಗೆ ಬೆಳೆಸಾಲವನ್ನು ಮನ್ನಾ ಮಾಡಲು ನಿರ್ಧರಿಸಲಾಯಿತು. ಆ ಬಳಿಕ ಈವರೆಗೂ ಬೇರೆ ಯಾವ ಸಾಲಮನ್ನಾ ಯೋಜನೆಗಳೂ ಜಾರಿಯಾಗಿಲ್ಲ. ಈ ಬಾರಿ ಸಾಲಮನ್ನಾ ಕುರಿತ ಆಲೋಚನೆ ಸರಕಾರಕ್ಕೆ ಇಲ್ಲ ಎಂಬ ನಿಲುವು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

ಬಜೆಟ್’ನಲ್ಲಿ ಸಾಲಮನ್ನಾ ಭಾಗ್ಯ ಸಿಗುತ್ತಾ?

ರಾಜ್ಯ ಸರಕಾರ ಬಹುಶಃ ಗ್ಯಾರಂಟಿ ಯೋಜನೆಗಳ ಒತ್ತಡಕ್ಕೆ ಸಿಲುಕದೇ ಇದ್ದಿದ್ದರೇ ರೈತರ ಸಾಲಮನ್ನಾ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿತ್ತೇನೋ? ಆದರೆ ಗ್ಯಾರಂಟಿ ಯೋಜನೆಗಳಿಂದಾಗಿ ವಿಪರೀತ ಆರ್ಥಿಕ ಒತ್ತಡಕ್ಕೆ ಸಿಲುಕಿದೆ. ರೈತರ ಸಾಲಮನ್ನಾ ಮಾಡುವುದು ಹಾಗಿರಲಿ, ಹೈನು ರೈತರ ಹಾಲಿನ ಪ್ರೋತ್ಸಾಹಧನವನ್ನೇ ಬಾಕಿ ಉಳಿಸಿಕೊಳ್ಳಲಾಗಿದೆ.

ಗಮನಾರ್ಹವೆಂದರೆ, ‘ಈ ಬಾರಿ ರೈತರ ಸಾಲ ಮನ್ನಾ ಸಾಧ್ಯವಿಲ್ಲ!’ ಎಂಬ ಮುನ್ಸೂಚನೆಯಾಗಿಯೇ ಈಚೆಗೆ ರೈತರ ಸಾಲದ ಬಡ್ಡಿ ಮನ್ನಾ ಮಾಡಲಾಗಿದೆ. ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ಪಡೆದ ರೈತರು ಸಕಾಲಕ್ಕೆ ಅಸಲು ಪಾವತಿಸಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡುವ ಆದೇಶ ಹೊರಡಿಸಿದೆ. ಹೀಗಾಗಿ ಈ ಬಾರಿ ಬಜೆಟ್’ನಲ್ಲಿ ಸಾಲಮನ್ನಾ ನಿರೀಕ್ಷೆ ಹುಸಿಯಾಗುವ ಸಾಧ್ಯತೆಯೇ ಹೆಚ್ಚಿದೆ!

ಇದನ್ನೂ ಓದಿ: NLM Scheme Loan : ಕುರಿ-ಮೇಕೆ, ಕೋಳಿ, ಹಂದಿ ಸಾಕಾಣೆಗೆ ₹20 ಲಕ್ಷದಿಂದ ₹1 ಕೋಟಿ ಸಾಲ ಸೌಲಭ್ಯ | ಸಾಲದ ಅರ್ಧ ಭಾಗ ಸಬ್ಸಿಡಿ

WhatsApp Group Join Now
Telegram Group Join Now

Related Posts

error: Content is protected !!