ಪಶುಪಾಲನೆಸರಕಾರಿ ಯೋಜನೆ

Farmers milk price reduction : ಮತ್ತೆ ರೈತರ ಹಾಲಿನ ಬೆಲೆ ಕಡಿತ | ₹1.5 ರಿಂದ ₹3.60 ಬೆಲೆ ಕಟ್

WhatsApp Group Join Now
Telegram Group Join Now

Farmers milk price reduction

ನಷ್ಟದ ಕಾರಣದಿಂದ ಹಾಲು ಒಕ್ಕೂಟಗಳು ರೈತರ ಹಾಲಿನ ಬೆಲೆ ಕಡಿತ ಮಾಡುತ್ತಿವೆ. ಬರದಿಂದ ಬಸವಳಿದಿರುವ ರೈತರಿಗೆ ಇದು ದೊಡ್ಡ ಹೊಡೆತವಾಗಿ ಪರಿಣಮಿಸಿದೆ…

ಮತ್ತೆ ರೈತರ ಹಾಲಿನ ಬೆಲೆ ಕಡಿತ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಒಕ್ಕೂಟಗಳು ನಷ್ಟದ ಕಾರಣ ಒಡ್ಡಿ ರೈತರಿಗೆ ನೀಡುತ್ತಿದ್ದ ವಿಶೇಷ ಪ್ರೋತ್ಸಾಹಧನಕ್ಕೆ ಕತ್ತರಿ ಹಾಕುತ್ತಿದ್ದು; ಬರಗಾಲದಲ್ಲಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ.

ಯಾವೆಲ್ಲ ಒಕ್ಕೂಟಗಳು ನಷ್ಟದಲ್ಲಿವೆ?

ರಾಜ್ಯದಲ್ಲಿ ಒಟ್ಟು 15 ಹಾಲು ಒಕ್ಕೂಟಗಳಿವೆ. ಈ ಪೈಕಿ ದಕ್ಷಿಣ ಕನ್ನಡ, ಧಾರವಾಡ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲಾ ಹಾಲು ಒಕ್ಕೂಟಗಳು ಲಾಭವೂ ಇಲ್ಲದೇ, ನಷ್ಟವೂ ಇಲ್ಲದೆ ಸರಿದೂಗಿಸಿಕೊಂಡು ಹೋಗುತ್ತಿವೆ. ಬೆಂಗಳೂರು, ಹಾಸನ, ಕೋಲಾರ, ಮಂಡ್ಯ, ತುಮಕೂರು, ಮೈಸೂರು, ಶಿವಮೊಗ್ಗ, ಚಾಮರಾಜನಗರ, ವಿಜಯಪುರ ಮತ್ತು ಹಾವೇರಿ ಹಾಲು ಒಕ್ಕೂಟಗಳು ಕಳೆದ 5 ತಿಂಗಳಿ೦ದ ನಿರಂತರವಾಗಿ ನಷ್ಟಕ್ಕೆ ಸಿಲುಕಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: PMFME – PM Micro Food Processing Scheme : ಸಣ್ಣ ಉದ್ಯಮ ಸ್ಥಾಪನೆಗೆ ₹15 ಲಕ್ಷ ರೂಪಾಯಿ ಸಹಾಯಧನ : ರೈತರು, ಮಹಿಳೆಯರಿಗೆ ಸುವರ್ಣಾವಕಾಶ

ಒಕ್ಕೂಟಗಳ ನಷ್ಟಕ್ಕೆ ಕಾರಣವೇನು?

ಹಾಲು ಒಕ್ಕೂಟಗಳ ನಷ್ಟಕ್ಕೆ ಕಳೆದ ಆಗಸ್ಟ್’ನಲ್ಲಿ ಸರಕಾರ ಮಾಡಿದ ಹಾಲಿನ ದರ ಪರಿಷ್ಕರಣೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಗ್ರಾಹಕರ ಹಾಲಿನ ದರವನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲು ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿತ್ತು. ಈ ಹೆಚ್ಚುವರಿ 3 ರೂಪಾಯಿಯನ್ನು ಪೂರ್ತಿ ಹಾಲು ಉತ್ಪಾದಕ ರೈತರಿಗೆ ನೀಡಲು ಆದೇಶಿಸಲಾಗಿತ್ತು. ಹೀಗಾಗಿ ಹಲವು ಹಾಲು ಒಕ್ಕೂಟಗಳು ನಷ್ಟಕ್ಕೆ ತುತ್ತಾಗಬೇಕಾಯಿತು ಎಂಬುವುದು ಒಕ್ಕೂಟಗಳ ಅಂಬೋಣ.

ಇನ್ನು ಅಪೌಷ್ಟಿಕತೆ ನಿವಾರಣೆಗಾಗಿ ಶಾಲಾ ಮಕ್ಕಳಿಗೆ ಆಯೋಜಿಸಲಾದ ‘ಕ್ಷೀರಭಾಗ್ಯ ಯೋಜನೆ’ ಕೂಡ ನಷ್ಟಕ್ಕೆ ಮತ್ತೊಂದು ಕಾರಣ ಎನ್ನಲಾಗುತ್ತಿದೆ. ಸದರಿ ಯೋಜನೆಯಡಿ ವಿತರಿಸಲಾಗುವ ಒಂದು ಕೆ.ಜಿ ಹಾಲಿನ ಪುಡಿ ಉತ್ಪಾದಿಸಲು ಒಕ್ಕೂಟಗಳಿಗೆ 361 ರೂಪಾಯಿ ವೆಚ್ಚವಾಗುತ್ತ್ತದೆ. ಆದರೆ, ಸರಕಾರ ಕೆ.ಜಿಗೆ 283 ರೂಪಾಯಿ ಮಾತ್ರ ನೀಡುತ್ತಿದೆ. ಇದರಿಂದ ಒಕ್ಕೂಟಗಳಿಗೆ ಪ್ರತಿ ಕೆ.ಜಿ ಹಾಲಿನ ಪುಡಿಗೆ 78 ರೂಪಾಯಿ ನಷ್ಟವಾಗುತ್ತಿದೆ. ಇದರಿಂದ ಕೆಲವು ಒಕ್ಕೂಟಗಳು ಕ್ಷೀರಭಾಗ್ಯ ಯೋಜನೆಗೆ ಹಾಲಿನಪುಡಿ ಪೂರೈಕೆಯನ್ನೇ ನಿಲ್ಲಿಸಿವೆ.

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

ರೈತರ ಹಾಲಿನ ಬೆಲೆಯಲ್ಲಿ ಎಷ್ಟು ಕಡಿತ?

ನಷ್ಟದ ಕಾರಣದಿಂದ ರಾಜ್ಯದ ಕೆಲವು ಹಾಲು ಒಕ್ಕೂಟಗಳು ರೈತರ ಹಾಲಿನ ಬೆಲೆಯನ್ನು ಕಡಿತ ಮಾಡುತ್ತಿವೆ. ರೈತರು ನೀಡುವ ಪ್ರತಿ ಲೀಟರ್‌ಗೆ ಒಂದೂವರೆ ರೂಪಾಯಿಂದ ಮೂರುವರೆ ರೂಪಾಯಿ ವರೆಗೂ ವರೆಗೂ ಕಡಿತ ಮಾಡಿವೆ. ಬರಗಾಲದಿಂದ ಬಸವಳಿದಿರುವ ರೈತರಿಗೆ ಇದು ದೊಡ್ಡ ಹೊಡೆತವಾಗಿ ಪರಿಣಮಿಸಿದೆ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಹಾಲು ಒಕ್ಕೂಟಗಳು ರೈತರ ಹಾಲಿನ ದರವನ್ನು ಅಕ್ಟೋಬರ್ 1 ರಿಂದ 1.65 ರೂಪಾಯಿ ಮತ್ತು ಡಿಸೆಂಬರ್ 21 ರಿಂದ 2 ರೂಪಾಯಿ ಕಡಿತ ಮಾಡಿವೆ. 3 ತಿಂಗಳ ಅವಧಿಯಲ್ಲಿ ರೈತರ ಹಾಲಿನ ದರವನ್ನು ಲೀಟರ್‌ಗೆ 3.65 ರೂಪಾಯಿ ಕಡಿಮೆ ಮಾಡಿದಂತಾಗಿದೆ.

ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

ಪಶು ಆಹಾರ ಬೆಲೆಯೂ ಏರಿಕೆ!

ರೈತರ ಹಾಲಿನ ಬೆಲೆ ಕಡಿತ ಮಾಡುತ್ತಿರುವುದು ಮಾತ್ರವಲ್ಲದೇ, ಇದೇ ಸಮಯಕ್ಕೆ ಪಶು ಆಹಾರ ಬೆಲೆಯನ್ನು ಕೂಡ ಒಕ್ಕೂಟಗಳು ಏರಿಕೆ ಮಾಡಿವೆ. 51 ಕೆ.ಜಿ ತೂಕದ ಪಶು ಆಹಾರದ ಒಂದು ಚೀಲ ಈ ಮೊದಲು 1,180 ರೂಪಾಯಿಗೆ ಸಿಗುತ್ತಿತ್ತು. ಇದೀಗ ಅದೇ ಚೀಲದ ಬೆಲೆ 1,231 ರೂಪಾಯಿಗೆ ಏರಿಕೆಯಾಗಿದೆ.

ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ರಾಜ್ಯದಲ್ಲಿ ಬೆಳೆಯುತ್ತಿದ್ದ ಮೆಕ್ಕೆಜೋಳದ ಉತ್ಪಾದನೆ ಕುಸಿದಿದೆ. ಉತ್ಪಾದನೆ ಕಮ್ಮಿಯಾಗಿದ್ದರಿಂದ ಮೆಕ್ಕೆಜೋಳಕ್ಕೆ ಸಹಜವಾಗಿಯೇ ಭಾರೀ ಬೆಲೆ ಕುದುರಿದೆ. ಪಶು ಆಹಾರ ತಯಾರಿಕೆಯ ಮೂಲ ಕಚ್ಚಾ ವಸ್ತುವೇ ಮೆಕ್ಕೆಜೋಳವಾಗಿದ್ದು; ಅದರ ಬೆಲೆ ಏರಿಕೆಯು ಪಶು ಆಹಾರದ ಬೆಲೆ ಏರಿಕೆಗೂ ಕಾರಣವಾಗಿದೆ ಎನ್ನುತ್ತವೆ ಹಾಲು ಒಕ್ಕೂಟಗಳು.

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

WhatsApp Group Join Now
Telegram Group Join Now

Related Posts

error: Content is protected !!