ಉದ್ಯೋಗ

FDA SDA Recruitment 2024 : ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ | ಖಾಲಿ ಇರುವ 300 ಹುದ್ದೆಗಳ ನೇಮಕಾತಿಗೆ ಜಿಲ್ಲಾವಾರು ಪಟ್ಟಿ ಬಿಡುಗಡೆ

WhatsApp Group Join Now
Telegram Group Join Now

FDA SDA Recruitment 2024 : ರಾಜ್ಯದ ವಿವಿಧ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ನೇಮಕಾತಿ ಆರಂಭ ಮಾಡಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ…

ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ವಿವಿಧ ಕೋಟಾದಡಿ ಖಾಲಿ ಇರುವಂತಹ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿಗಾಗಿ ಆರ್ಥಿಕ ಇಲಾಖೆಯ ಸಮ್ಮತಿ ನೀಡಿದೆ. ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು (Karnataka Panchayat Raj Commission –KPRC) ನೇರ ನೇಮಕಾತಿ ಮುಖಾಂತರ ರಾಜ್ಯದ 24 ಜಿಲ್ಲೆಗಳಿಗೆ ಖಾಲಿ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಈ ನೇಮಕಾತಿ ಕುರಿತು ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪಂಚಾಯತ್ ರಾಜ್ ಆಯುಕ್ತಾಲಯವು ಪತ್ರದ ಮುಖಾಂತರ ಸೂಚನೆ ನೀಡಿದೆ.

ಇದನ್ನೂ ಓದಿ: Village accountant recruitment 2024 :1000 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಪ್ರಕಟಣೆ | ಕಂದಾಯ ಸಚಿವರಿಂದ ಅಧಿಕೃತ ಮಾಹಿತಿ

2019ರಲ್ಲಿ ರಾಜ್ಯದಲ್ಲಿ ಒಟ್ಟು 1050 ಪ್ರಥಮ ದರ್ಜೆ ಸಹಾಯಕ (FDA) ಮತ್ತು ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆನಂತರ ನಾಲ್ಕು ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದೇ ಇರುವುದರಿಂದ ಬಹಳ ಕಾತುರದಿಂದ ಕಾಯುತ್ತಿದ್ದ ಸ್ಪರ್ಧಾರ್ಥಿಗಳು ಇದೀಗ ನಿಟ್ಟುಸಿರು ಬಿಟ್ಟಂತಾಗಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಖಾಲಿ ಇರುವ ಈ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ ಹೊರಡಿಸಲಿದೆ.

FDA, SDA Recruitment ಖಾಲಿ ಹುದ್ದೆಗಳ ಸಂಕ್ಷಿಪ್ತ ವಿವರ

  • ನೇಮಕಾತಿ ಇಲಾಖೆ : ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ (KPRC)
  • ಹುದ್ದೆಗಳ ಹೆಸರು : ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು
  • ಪ್ರಥಮ ದರ್ಜೆ ಸಹಾಯಕರು : 100 ಹುದ್ದೆಗಳು
  • ದ್ವಿತೀಯ ದರ್ಜೆ ಸಹಾಯಕರು : 200 ಹುದ್ದೆಗಳು
  • ಒಟ್ಟು ಹುದ್ದೆಗಳ ಸಂಖ್ಯೆ : 300 ಹುದ್ದೆಗಳು
  • ಉದ್ಯೋಗ ಸ್ಥಳ : ಕರ್ನಾಟಕ ರಾಜ್ಯಾದ್ಯಂತ

ಇದನ್ನೂ ಓದಿ: Salamanna gift : ರೈತರಿಗೆ ಸಾಲಮನ್ನಾ ಕೊಡುಗೆ | 2024-25ನೇ ಸಾಲಿನ ಕರ್ನಾಟಕ ಬಜೆಟ್’ನಲ್ಲಿ ಸಿಕ್ತು ಬಂಪರ್ ಗಿಫ್ಟ್

ಪಿಯುಸಿ ಮತ್ತು ಪದವಿಧರರಿಗೆ ಅವಕಾಶ

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಅಡಿಯಲ್ಲಿ ಖಾಲಿ ಇರುವಂತಹ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕು.

  • ಪ್ರಥಮ ದರ್ಜೆ ಸಹಾಯಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಮುಗಿಸಿದ ಅಭ್ಯರ್ಥಿಗಳ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
  • ದ್ವಿತೀಯ ದರ್ಜೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿ೦ದ PUC ಅಥವಾ 12ನೇ ತರಗತಿಯಲ್ಲಿ ಪಾಸ್ ಆಗಿರಬೇಕು.

ಇದನ್ನೂ ಓದಿ: Udyoga Mela Govt of Karnataka 2024 : ಸರಕಾರಿ ಉದ್ಯೋಗ ಮೇಳದಲ್ಲಿ ಭರ್ಜರಿ ಉದ್ಯೋಗಾವಕಾಶ | ಎಲ್ಲಾ ರೀತಿ ವಿದ್ಯಾರ್ಹತೆಯ ಉದ್ಯೋಗಾಕಾಂಕ್ಷಿಗಳಿಗೂ ಅವಕಾಶ

ವಯೋಮಿತಿ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು ಮತ್ತು ವಿವಿಧ ವರ್ಗಗಳಿಗೆ ಅನುಗುಣವಾಗಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಇಲಾಖೆಯು ಅಧಿಕೃತ ಅಧಿಸೂಚನೆ ಹೊರಡಿಸಿದ ನಂತರ ತಿಳಿಸಲಾಗುವುದು.

ಆಯ್ಕೆ ಪ್ರಕ್ರಿಯೆ

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯ ಜವಾಬ್ದಾರಿಯನ್ನು ಕರ್ನಾಟಕ ಲೋಕಸೇವಾ ಆಯೋಗವು (KPSC) ತೆಗೆದುಕೊಂಡಿದ್ದು, ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದರ ಮುಖಾಂತರ ಖಾಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು.

ಇನ್ನೇನು ಕೆಲವೇ ದಿನಗಳಲ್ಲಿ 300 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕ ಸೇವಾ ಆಯೋಗವು (Karnataka Public Service Commission- KPSC) ಶೀಘ್ರ ಅಧಿಸೂಚನೆ ಹೊರಡಿಸಲಿದ್ದು, ಪರೀಕ್ಷಾ ತಯಾರಿಯನ್ನು ಆರಂಭಿಸಿ, ಈ ಅವಕಾಶದಿಂದ ವಂಚಿತರಾಗದಿರಿ.

ಇದನ್ನೂ ಓದಿ: Village Administrative Officer Recruitment 2024 : ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಗೆಜೆಟ್ ಅಧಿಸೂಚನೆ ಬಿಡುಗಡೆ | ನೇಮಕ ಬದಲಾವಣೆ ಕುರಿತ ಕರ್ನಾಟಕ ರಾಜ್ಯಪತ್ರ ರಿಲೀಸ್


Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಪ್ರತಿಷ್ಟಿತ ಗೂಗಲ್ ಸಹಭಾಗಿತ್ವದ ‘ಗೂಗಲ್ ಪೇ’ (Google Pay) ತನ್ನ ಗ್ರಾಹಕರಿಗೆ ಸಾಲ ಸೌಲಭ್ಯವನ್ನು ಕಲ್ಪಿಸಿದೆ. ಗ್ರಾಹಕರ ಅರ್ಹತೆಗೆ ಅನುಗುಣವಾಗಿ ಯಾವುದೇ ಹೆಚ್ಚಿನ ದಾಖಲೆಗಳಿಲ್ಲದೆ (Physical documents) ಸಾಲವನ್ನು ನೀಡುತ್ತ್ತದೆ. ಗೂಗಲ್ ಪೇ ಬ್ಯುಸಿನೆಸ್ ಆ್ಯಪ್ ಮೂಲಕ ಬರೋಬ್ಬರಿ 8 ಲಕ್ಷ ರೂಪಾಯಿ ವರೆಗೂ ಸರಳ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ.

ಗೂಗಲ್ ಪೇ DMI FINANCE, Axis bank, IDFC ಬ್ಯಾಂಕ್ ಮತ್ತು ಇತರೆ ಬೇರೆ ಬೇರೆ ಸಾಲದಾಯಿ ಹಣಕಾಸು ಕಂಪನಿಗಳ ಮೂಲಕ (Money lenders) ಈ ಸಾಲ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಒದಗಿಸುತ್ತದೆ. ಹಾಗಂತ ಈ ಸಾಲ ಪಡೆಯಲು ಮೇಲ್ಕಾಣಿಸಿದ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರಬೇಕಿಲ್ಲ.

ಗರಿಷ್ಟ ಎಷ್ಟು ಸಾಲ ಪಡೆಯಬಹುದು? (What is the maximum loan amount?)

‘ಗೂಗಲ್ ಪೇ’ ಅರ್ಹ ಗ್ರಾಹಕರಿಗೆ 10,000 ದಿಂದ ಬರೋಬ್ಬರಿ 8 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯವನ್ನು ನೀಡುತ್ತದೆ. ಈ ಸಾಲದ ಪ್ರಯೋಜನ ಪಡೆಯಲು, ಆನ್‌ಲೈನ್ ನಗದು ವರ್ಗಾವಣೆಗಾಗಿ (Online transaction) ಗೂಗಲ್ ಪೇ ಅಪ್ಲಿಕೇಶನ್ ಉಪಯೋಗಿಸುತ್ತಿರುವ ಯಾರೂ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ.

ಸಾಲ ಮರುಪಾವತಿ ಹೇಗೆ? (Loan repayment details)

ಸುಲಭ ಮಾಸಿಕ ಕಂತುಗಳಲ್ಲಿ (EMI) ಪಡೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ಅವಕಾಶವಿದೆ. ಪಡೆದ ಸಾಲವನ್ನು 6 ತಿಂಗಳಿನಿಂದ 4 ವರ್ಷಗಳ ವರೆಗೆ ಮರುಪಾವತಿಗೆ ಅವಕಾಶವಿದೆ. ಪಡೆದ ಸಾಲ ಮೊತ್ತದ ಮೇಲೆ ಅದರ ಮಿತಿಯು ಅನ್ವಯವಾಗಿರುತ್ತದೆ. ಈ ಮಿತಿಯು ತಿಂಗಳಿಗೆ 1,000 ರೂಪಾಯಿಯಿಂದ ಆರಂಭವಾಗುತ್ತದೆ.

ಸಾಲಕ್ಕೆ ಬಡ್ಡಿದರ ಎಷ್ಟು? (Interests rate on loan)

ಸಾಲದ ಬಡ್ಡಿ ದರವು ಗ್ರಾಹಕರ ಸಿಬಿಲ್ ಸ್ಕೋರ್ (CIBIL SCORE or CREDIT SCORE) ಮೇಲೆ ಅನ್ವಯವಾಗುತ್ತದೆ. ಸಾಮಾನ್ಯವಾಗಿ ಗೂಗಲ್ ಪೇಯಿಂದ ನೀವು ಪಡೆಯುವ ಸಾಲಕ್ಕೆ ಬಡ್ಡಿದರವು ವಾರ್ಷಿಕ 13.99% ನಿಂದ ಆರಂಭವಾಗುತ್ತದೆ. ಉದಾಹರಣೆಗೆ: 1 ಲಕ್ಷ ರೂಪಾಯಿ ಸಾಲಕ್ಕೆ ವಾರ್ಷಿಕ 13,900 ರೂಪಾಯಿ ಬಡ್ಡಿ ಪಾವತಿಸಬೇಕು.

ಸಿಬಿಲ್ ಸ್ಕೋರ್ ಕುರಿತ ಮಾಹಿತಿ ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಶ್ರೇಣಿ ತಿಳಿಯಲು 👉 ಇಲ್ಲಿ ಕ್ಲಿಕ್ ಮಾಡಿ.

ಸಾಲವನ್ನು ಪಡೆಯುವುದು ಹೇಗೆ? (How to get loan)

ಗೂಗಲ್ ಪೇ ಮೂಲಕ ಸಾಲ ಪಡೆಯಲು ಮೊದಲನೆಯದಾಗಿ ನಿಮ್ಮ ಮೊಬೈಲ್‌ನಲ್ಲಿ Google pay for business app ಅನ್ನು ಹೊಂದಿರಬೇಕು ಮತ್ತು ಈ ಆ್ಯಪ್’ನ ಡೈರೆಕ್ಟ್ ಲಿಂಕ್ ಈ ಲೇಖನದ ಕೊನೆಯಲ್ಲಿದೆ. ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡ ನಂತರ ಅಲ್ಲಿ ಕೊನೆಗೆ ಕಾಣುವ Manage your money ಎಂಬ ವಿಭಾಗದಲ್ಲಿ ಎರಡನೇ ಆಯ್ಕೆಯಾದ LOANS ಮೇಲೆ ಕ್ಲಿಕ್ ಮಾಡಿ.

ಆನಂತರ APPLY NOW ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ಅಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ತೋರಿಸುತ್ತದೆ. ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಸರಿಯಾಗಿದ್ದರೆ CONTINUE  ಎಂಬ ಆಯ್ಕೆಯ ಮೇಲೆ ಒತ್ತಿ. ಬಳಿಕ ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಸಾಲ ಪಡೆಯಬಹುದು. ನೀವು ಸಾಲ ಪಡೆಯಲು ಅರ್ಹರಿದ್ದರೆ ಅರ್ಜಿ ಸಲ್ಲಿಸಿದ ನಂತರ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.

ಬರೀ ಗೂಗಲ್ ಪೇ ಆ್ಯಪ್’ನಲ್ಲಿ ಸಾಲ ಸೌಲಭ್ಯವಿಲ್ಲ. Google pay business app ಮೂಲಕ ಮಾತ್ರ ಸಾಲ ಲಭ್ಯವಿದೆ. Google pay business app ಡೌನ್‌ಲೋಡ್ ಡೈರೆಕ್ಟ್ ಲಿಂಕ್ ಇಲ್ಲಿದೆ : ಡೌನ್‌ಲೋಡ್

ಸೂಚನೆ: ಯಾವುದೇ ಸಾಲ ಸೌಲಭ್ಯ ಪಡೆಯುವಾಗ ಎಚ್ಚರಿಕೆ ಇರಲಿ. ಸಾಲ ನೀಡುವ ಸಂಸ್ಥೆಯ ಬಗ್ಗೆ ಸಂಪೂರ್ಣ ತಿಳಿದುಕೊಂಡು ಅರ್ಜಿ ಸಲ್ಲಿಕೆಗೆ ಮುಂದುವರೆಯಿರಿ. ಸಾಲ ಮರುಪಾವತಿಯ ಅರ್ಹತೆಗೆ ಆಧಾರವಾಗಿ ಸಾಲ ಪಡೆಯಿರಿ.

WhatsApp Group Join Now
Telegram Group Join Now

Related Posts

error: Content is protected !!