ಪಶುಪಾಲನೆಸರಕಾರಿ ಯೋಜನೆ

Free fodder distribution to dairy farmers : ಹೈನು ರೈತರಿಗೆ ಉಚಿತ ಮೇವು ಕಿಟ್ ವಿತರಣೆ | ಯಾವೆಲ್ಲ ರೈತರಿಗೆ ಸಿಗಲಿದೆ?

WhatsApp Group Join Now
Telegram Group Join Now

Free fodder distribution to dairy farmers : ರಾಜ್ಯದಲ್ಲಿ ಬರಗಾಲ ದಿನೆ ದಿನೇ ಬರ್ಬರತೆ ಸೃಷ್ಟಿಸುತ್ತಿದೆ. ಒಂದೆಡೆ ನೀರಿನ ಹಾಹಾಕಾರ ಭುಗಿಲೆದ್ದರೆ, ಮತ್ತೊಂದು ಕಡೆಗೆ ಜಾನುವಾರುಗಳ ಮೇವಿನ ಅಭಾವ ತಲೆದೋರಿದೆ. ಹೈನುಗಾರಿಕೆಯನ್ನೇ ಜೀವನಾಧಾರ ಮಾಡಿಕೊಂಡಿರುವ ರೈತರು, ಗ್ರಾಮೀಣ ಮಹಿಳೆಯರಿಗೆ ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ಇದನ್ನು ಅರಿತಿರುವ ರಾಜ್ಯ ಸರಕಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮೂಲಕ ಮೇವಿನ ವಿತರಣೆಗೆ ಮುಂದಾಗಿದೆ.

ಕಳೆದ ವರ್ಷ ಮುಂಗಾರು ಮಳೆ ಮತ್ತು ಹಿಂಗಾರು ಮಳೆ ಎರಡೂ ಕೈಕೊಟ್ಟು ರಾಜ್ಯದಲ್ಲಿ ಬರದ ಪರಿಸ್ಥಿತಿ ಉಂಟಾಗಿರುವುದರಿAದ ರೈತರ ಜಾನುವಾರಗಳಿಗೆ ಮೇವಿನ ಕೊರತೆ ಪೂರೈಸಲು ಉಚಿತ ಮೇವು ವಿತರಣೆಗೆ ಸರಕಾರ ಮುಂದಾಗಿದೆ. ಇದಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದು; ಉಚಿತ ಮಿನಿ ಮೇವಿನ ಕಿಟ್ ಯಾವೆಲ್ಲ ರೈತರಿಗೆ ಸಿಗಲಿದೆ? ಅದನ್ನು ಹೇಗೆ ಪಡೆಯುವುದು? ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Kisan Vikas Patra – KVP : ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ

ರಾಜ್ಯ ವಿಪತ್ತು ನಿರ್ವಹಣಾ ನಿಧಿ ಬಿಡುಗಡೆ

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ರೈತರ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿದ್ದು ಮಾತ್ರವಲ್ಲದೆ ಜಾನುವಾರುಗಳು ಕೂಡ ಆಹಾರಕ್ಕಾಗಿ ಅಲೆದಾಡುವಂತಾಗಿದೆ. ರಾಜ್ಯ ಸರ್ಕಾರವು ಈಗಾಗಲೇ 2023ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ರಾಜ್ಯದ 223 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದೆ.

ಬರ ಪೀಡಿತ ತಾಲ್ಲೂಕಿನ ರೈತರ ಜಾನುವಾರುಗಳ ಮೇವಿನ ಸಮಸ್ಯೆಗೆ ಪರಿಹಾರ ನೀಡಲು ಮೇವಿನ ಮಿನಿ ಕಿಟ್‌ಗಳನ್ನು ಖರೀದಿಸಿ, ಅದನ್ನು ರಾಜ್ಯದ ರೈತರಿಗೆ ವಿತರಿಸಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (SDRF) 20 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಕಳೆದ ಫೆಬ್ರವರಿ 29ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಿ ಸರಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: Free Horticulture training with stipend : ರೈತರಿಗೆ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | ತರಬೇತಿ ಜೊತೆಗೆ ₹17,500 ಶಿಷ್ಯವೇತನ

ಸಂಪುಟ ಸಭೆಯಲ್ಲಿ ಅನುದಾನ ಬಿಡುಗಡೆಗೆ ಅನುಮೋದನೆ

ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು (Department of Animal Husbandry and Veterinary Services) ಈ ಯೋಜನೆಯನ್ನು ಜಾರಿಗೆ ತರುತ್ತಿದೆ. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ 06-01-2024 ರಂದು ರೈತರ ಅವಶ್ಯಕತೆಗೆ ಅನುಗುಣವಾಗಿ ಮತ್ತು ಬೇಡಿಕೆಗೆ ಅನುಗುಣವಾಗಿ ರೈತರಿಗೆ ಮೇವಿನ ಮಿನಿ ಕಿಟ್‌ಗಳನ್ನು ಆದ್ಯತೆಯ ಮೇರೆಗೆ ವಿತರಿಸಲು 20 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲು ತೀರ್ಮಾನಿಸಿತ್ತು.

ಇದರ ಅನ್ವಯ 29ನೇ ಫೆಬ್ರವರಿ 2024ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 20 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಇದಕ್ಕೂ ಮೊದಲು ನೀರಾವರಿ ವ್ಯವಸ್ಥೆ ಹೊಂದಿರುವ ರೈತರಿಗೆ ಮೇವಿನ ಬೀಜಗಳ ಮಿನಿ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗಿತ್ತು. ಇದೀಗ ಬರಪೀಡಿತ ತಾಲ್ಲೂಕುಗಳ ರೈತರಿಗೆ ಮೇವಿನ ವಿತರಣೆಗೆ ಸರಕಾರ ಕ್ರಮ ಕೈಗೊಂಡಿದೆ.

ಉಚಿತ ಮೇವು ವಿತರಣೆಗೆ ಅನುದಾನ ಬಿಡುಗಡೆ ಕುರಿತು ಸರಕಾರದ ಆದೇಶ ಪ್ರತಿ

ಇದನ್ನೂ ಓದಿ: Panchamitra whatsapp Chat Service : ವಾಟ್ಸಾಪ್‌ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್‌ಗೆ ‘ಹಾಯ್’ ಅಂತ ಕಳಿಸಿ..

ಯಾವೆಲ್ಲ ರೈತರಿಗೆ ಉಚಿತ ಮೇವಿನ ಕಿಟ್ ವಿತರಣೆ?

ಉಚಿತ ಮಿನಿ ಕಿಟ್’ಗಳನ್ನು ಪಡೆಯಲು ರೈತರು ಕಡ್ಡಾಯವಾಗಿ FRUITS ID ಹೊಂದಿರಬೇಕು. ಉಚಿತ ಮಿನಿ ಕಿಟ್’ಗಳನ್ನು ಪ್ರಮುಖವಾಗಿ ಹಾಲು ನೀಡುವ ರಾಸುಗಳನ್ನು ಹೊಂದಿರುವ ರೈತರಿಗೆ ನೀಡಲು ತೀರ್ಮಾನಿಸಲಾಗಿದೆ. ಅದೇ ರೀತಿ ನೀರಾವರಿ ಜಮೀನು ಹೊಂದಿರುವ ಅರ್ಹ ರೈತರಿಗೂ ಕೂಡ ಮೇವಿನ ಕಿಟ್ ನೀಡಲು ತೀರ್ಮಾನಿಸಲಾಗಿದೆ.

ಉಚಿತ ಮೇವಿನ ಕಿಟ್’ಗಳನ್ನು ಪ್ರಮುಖವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳು (MPCS) ಮತ್ತು ಗ್ರಾಮ ಪಂಚಾಯಿತಿಗಳ ಮುಖಾಂತರ ನಿಯಮಗಳ ಅನುಸಾರ ಉಚಿತವಾಗಿ ವಿತರಿಸಲು ಸರ್ಕಾರವು ಆದೇಶ ನೀಡಿದೆ. ಉಚಿತ ಮೇವಿನ ಕಿಟ್ ಪಡೆಯಲು ಅರ್ಹ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಉಚಿತ ಮೇವು ವಿತರಣೆಗೆ ಅನುದಾನ ಬಿಡುಗಡೆ ಕುರಿತು ಸರಕಾರದ ಆದೇಶ ಪ್ರತಿ ಓದಲು 👉 ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: PM Surya Ghar Muft Bijli Jojana 2024 : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

WhatsApp Group Join Now
Telegram Group Join Now

Related Posts

error: Content is protected !!